ಇನ್‌ಸ್ಟಾಗ್ರಾಮ್‌ನಲ್ಲಿ ಆಟೋ ರಿಫ್ರೆಶ್‌ ಫೀಚರ್ಸ್‌ ಸ್ಟಾಪ್‌ ಮಾಡುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಒಂದಾಗಿದೆ. ಬಳಕೆದಾರರ ನೆಚ್ಚಿನ ಫೋಟೋ-ಶೇರಿಂಗ್‌ ಅಪ್ಲಿಕೇಶನ್ ಎನಿಸಿಕೊಂಡಿದೆ. ಇನ್ನು ಇನ್‌ಸ್ಟಾಗ್ರಾಮ್‌ ಆಟೋ-ರಿಫ್ರೆಶ್ ಫೀಚರ್ಸ್‌ ಒಳಗೊಂಡಿರೋದು ನಿಮಗೆಲ್ಲಾ ತಿಳಿದೆ ಇದೆ. ಈ ಫೀಚರ್ಸ್‌ ಕಾರಣದಿಂದಾಗಿ ನಿಮ್ಮ ಫೀಡ್‌ನಲ್ಲಿನ ಪೋಸ್ಟ್‌ಗಳು ಸ್ವಯಂಚಾಲಿತವಾಗಿ ರಿಫ್ರೆಶ್ ಆಗುತ್ತವೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಬರುವ ಹೊಸ ಪೋಸ್ಟ್‌ಗಳಿಗೆ ನಿಮ್ಮನ್ನು ಕರೆದೊಯ್ಯಲಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಆಟೋ ರಿಫ್ರೆಶ್‌ ಫೀಚರ್ಸ್‌ ನಿಮ್ಮ ಫೀಡ್‌ನಲ್ಲಿರುವ ಹೊಸ ಪೋಸ್ಟ್‌ಗಳನ್ನು ರಿಪ್ರೆಶ್‌ ಮಾಡುತ್ತಲೇ ಇರುತ್ತದೆ. ಇದರಿಂದ ನೀವು ಬಯಸಿದ ಫೀಡ್‌ ಅನ್ನು ನೋಡುವ ಮೊದಲೇ ಹೊಸ ಪೋಸ್ಟ್‌ಗಳು ಮೇಲ್ಬಾಗದಲ್ಲಿ ಕಾಣಿಸಲಿವೆ. ಇದರಿಂದ ನಿಮಗೆ ಕೆಲವು ಪೋಸ್ಟ್‌ಗಳನ್ನು ನೋಡಲು ಸಾಧ್ಯವಾಗದ ಕಾರಣ ಈ ಫೀಚರ್ಸ್‌ ಕೆಲವೊಮ್ಮೆ ಕಿರಿಕಿರಿ ಎನಿಸಲಿದೆ. ನೀವು ಮೊದಲು ಇದ್ದ ಸ್ಥಳಕ್ಕೆ ಹೋಗಲು ಸ್ಕ್ರಾಲ್ ಮಾಡಬೇಕು. ಇದೇ ಕಾರಣಕ್ಕೆ ಕೆಲವು ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡಲು ಬಯಸುತ್ತಾರೆ. ಹಾಗಾದ್ರೆ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಇನ್ಸ್ಟಾಗ್ರಾಮ್ ಆಟೋ-ರಿಫ್ರೆಶ್ ಆಗುವುದನ್ನು ಸ್ಟಾಪ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ಈ ಫೀಚರ್ಸ್‌ ಅನ್ನು ಆಫ್ ಮಾಡುವ ಸರಳ ಟ್ರಿಕ್ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಎಲ್ಲಿಯೂ ಇಲ್ಲ. ಆದರೆ ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ಬ್ಲಾಕ್‌ ಮೂಲಕ ಇದನ್ನು ನೀವು ಸ್ಟಾಪ್‌ ಮಾಡಬಹುದು. ಇದನ್ನು ನೀವು ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳ ಮೂಲಕ ಇದನ್ನು ಮಾಡಬಹುದು. ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಆಂಡ್ರಾಯ್ಡ್‌ ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್‌ ಫೀಚರ್ಸ್‌ ಸ್ಟಾಪ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್‌ ಫೀಚರ್ಸ್‌ ಸ್ಟಾಪ್‌ ಮಾಡುವುದು ಹೇಗೆ?

ಆಂಡ್ರಾಯ್ಡ್‌ ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡಲು, ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಂದ ನೀವು ಅದರ ಬ್ಯಾಕ್‌ಗ್ರೌಂಡ್‌ ಡೇಟಾ ಬಳಕೆಯನ್ನು ಆಫ್ ಮಾಡಬೇಕಾಗುತ್ತದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ:
ಹಂತ: 1 ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಮತ್ತು ಇಂಟರ್ನೆಟ್ ಆಯ್ಕೆಮಾಡಿ.
ಹಂತ: 2 ಮೊಬೈಲ್ ನೆಟ್‌ವರ್ಕ್‌ನಲ್ಲಿ ಟ್ಯಾಪ್ ಮಾಡಿ ಮತ್ತು ಅಪ್ಲಿಕೇಶನ್ ಡೇಟಾ ಬಳಕೆಯನ್ನು ಆರಿಸಿ.
ಹಂತ: 3 ಇಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ನೋಡಿ, ಅದರ ಮೇಲೆ ಟ್ಯಾಪ್ ಮಾಡಿ ಹಿನ್ನೆಲೆ ಡೇಟಾಕ್ಕಾಗಿ ಟಾಗಲ್ ಅನ್ನು ನಿಷ್ಕ್ರಿಯಗೊಳಿಸಿ.
ಹಂತ: 4 ಈ ರೀತಿಯಾಗಿ ಅಪ್ಲಿಕೇಶನ್ ಮೊಬೈಲ್ ಡೇಟಾವನ್ನು ಹಿನ್ನೆಲೆಯಲ್ಲಿ ಬಳಸುವುದಿಲ್ಲ ಮತ್ತು ಸ್ವಯಂಚಾಲಿತವಾಗಿ ರಿಫ್ರೆಶ್ ಆಗುವುದಿಲ್ಲ. ಇದು ನಿಮ್ಮ ಮೊಬೈಲ್ ಡೇಟಾವನ್ನು ಸಹ ಉಳಿಸುತ್ತದೆ.

ಐಒಎಸ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ಐಒಎಸ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದು ಹೇಗೆ?

ಹಂತ: 1 ನಿಮ್ಮ ಹೋಮ್‌ಸ್ಕ್ರೀನ್‌ ನಿಂದ ಸೆಟ್ಟಿಂಗ್ಸ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಜನರಲ್‌ ಅನ್ನು ಟ್ಯಾಪ್ ಮಾಡಿ.
ಹಂತ: 2 ಇಲ್ಲಿ, ಬ್ಯಾಕ್‌ಗ್ರೌಂಡ್‌ ಅಪ್ಲಿಕೇಶನ್ ರಿಫ್ರೆಶ್‌ಗಾಗಿ ನೋಡಿ.
ಹಂತ: 3 ಈಗ, ನೀವು ಅದನ್ನು ನಿಷ್ಕ್ರಿಯಗೊಳಿಸಲು ಬಯಸುವ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನ ಪಕ್ಕದಲ್ಲಿರುವ ಸ್ವಿಚ್ ಅನ್ನು ಟಾಗಲ್ ಮಾಡಿ. ಟಾಗಲ್ ಅನ್ನು ನಿಷ್ಕ್ರಿಯಗೊಳಿಸಿದಾಗ ಅದನ್ನು ಗ್ರೇಡ್‌ ಮಾಡಲಾಗುತ್ತದೆ.

ನಿಮ್ಮ ಐಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ನಿಷ್ಕ್ರಿಯಗೊಳಿಸಿದ ಹಿನ್ನೆಲೆ ಅಪ್ಲಿಕೇಶನ್ ರಿಫ್ರೆಶ್ ಫೀಚರ್ಸ್‌ ಈಗ ಅದನ್ನು ಸ್ವಯಂಚಾಲಿತವಾಗಿ ರಿಫ್ರೆಶ್ ಮಾಡುವುದಿಲ್ಲ. ನೀವು ಅದನ್ನು ಮತ್ತೆ ಆನ್ ಮಾಡಲು ಬಯಸಿದರೆ, ಹಿಂತಿರುಗಿ ಮತ್ತು ಅದನ್ನು ಆನ್ ಮಾಡಿ. ಈ ರೀತಿಯಾಗಿ ನೀವು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಇನ್‌ಸ್ಟಾಗ್ರಾಮ್‌ ಆಟೋ ರಿಫ್ರೆಶ್ ಫೀಚರ್ಸ್‌ ಅನ್ನು ನಿಲ್ಲಿಸಬಹುದು.

Best Mobiles in India

Read more about:
English summary
To disable this feature for Instagram on Android, you need to turn off its background data usage from your phone’s settings.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X