ನಿಮ್ಮ WhatsAppಗೆ ಜಾಹೀರಾತು ಮೆಸೇಜ್‌ಗಳು ಬರುತ್ತಿವೆಯೇ? ಒಂದೇ ಕ್ಲಿಕ್‌ನಲ್ಲಿ ನಿಲ್ಲಿಸಿ
ನಮ್ಮ ಮೊಬೈಲ್‌ನಲ್ಲಿನ ದೊಡ್ಡ ಸಮಸ್ಯೆ ಎಂದರೆ ಅನಗತ್ಯ ಮೆಸೇಜ್‌ಗಳು. ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಅಥವಾ ಮೊಬೈಲ್‌ನಲ್ಲಿ ಮುಖ್ಯವಾದ ಕೆಲಸ ಮಾಡುವಾಗ Whatsapp Business ಅಕೌಂಟ್‌ಗೆ ಮೆಸೇಜ್ ನೋಟಿಫಿಕೇಶನ್‌ಗಳು ಬರುತ್ತವೆ. ಆಗ ನಿಮಗೆ ಕೆಟ್ಟ ಕೋಪ ಬರುತ್ತದೆ. ಇದಕ್ಕೆ ಕಾರಣ ನಿಮಗೆ ತಿಳಿಯದಂತೆ, ವಾಟ್ಸಪ್‌ನಲ್ಲಿ ನೀಡಿರುವ ಕೆಲವೊಂದು ಬಟನ್‌ಗಳು ಆನ್ ಆಗಿರುತ್ತವೆ. ಹೀಗಾಗಿ, ನಿಮಗೆ ಅನಗತ್ಯ ಸಂದೇಶಗಳು ತೊಂದರೆ ಕೊಡುತ್ತವೆ. ಬಹುತೇಕರ ಮೊಬೈಲ್‌ನಲ್ಲಿ ಯಾವುದೇ ಬಟನ್ ಆನ್ ಮಾಡದಿದ್ರೂ ಈ ಅನಗತ್ಯ ಜಾಹೀರಾತುಗಳು ಸಂದೇಶಗಳು ಕಾಟ ಕೊಡುತ್ತವೆ.
ಹೌದು, ಇಂದು ಎಲ್ಲರೂ Android ಮೊಬೈಲ್ ಬಳಸುತ್ತಾರೆ. ಆದ್ರೆ, ಈ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ, ಯಾವುದೇ ಕಾರಣವಿಲ್ಲದೆ ಬರುವ ಜಾಹೀರಾತು ಮೆಸೇಜ್‌ಗಳು. ಇವು ನಮ್ಮ ಕೆಲಸವನ್ನು ನಿಲ್ಲಿಸುವುದಲ್ಲದೆ, ಕಿರಿಕಿರಿ ಉಂಟುಮಾಡುತ್ತವೆ. ಸಾಮಾನ್ಯವಾಗಿ ನೀವು Whatsapp Business ಬಳಸುವಾಗ ಈ ಸಮಸ್ಯೆ ಎದುರಾಗಿರುತ್ತದೆ. ದಿನದಿಂದ ದಿನಕ್ಕೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ನೀವು ಈ ಸಮಸ್ಯೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ನಿವಾರಿಸಬಹುದು. ಅದು ಹೇಗೆ ಎಂದು ತಿಳಿಯಲು ಈ ಸ್ಟೋರಿ ಸಂಪೂರ್ಣವಾಗಿ ಓದಿ.

ಬ್ಯುಸಿನೆಸ್ ಕಂಪನಿಗಳು Whatsapp Business ಮೂಲಕ ಜಾಹೀರಾತು ಮೆಸೇಜ್‌ಗಳನ್ನು ಕಳುಹಿಸುವ ಅಭ್ಯಾಸವನ್ನು ಪ್ರಾರಂಭಿಸಿವೆ. ಇದರಿಂದ ನಿಮ್ಮ ಇನ್‌ಬಾಕ್ಸ್‌ಗಳಲ್ಲಿ ಮೆಸೇಜ್‌ಗಳ ದೊಟ್ಟ ಪಟ್ಟಿಯೇ ತೆರೆದುಕೊಳ್ಳುತ್ತದೆ. ಟಿಕೆಟ್ ಖಚಿತಪಡಿಸುವಿಕೆ, ವ್ಯವಹಾರ ನವೀಕರಣಗಳು, ಕ್ಯಾಂಪೇನ್ ಅಭಿಯಾನ ಇತ್ಯಾದಿಗಳನ್ನು ತಲುಪಿಸಲು ವ್ಯಾಪಾರ ಕಂಪನಿಗಳಿಗೆ Whatsapp Business ವೇದಿಕೆಯಾಗಿದೆ. ಹೆಚ್ಚು ಕಂಪನಿಗಳು ಮೆಸೇಜ್ ಮೂಲಕವೇ ಪ್ರಚಾರ ಮಾಡುತ್ತಿವೆ. ಈ ಸಮಸ್ಯೆಗೆ ತಪ್ಪಿಸಲು, ವಂಚನೆಗೆ ಕಡಿವಾಣ ಹಾಕುಲು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. Whatsapp Business ಸಹ ಬಳಕೆದಾರರಿಗೆ ವೇದಿಕೆ ಕಲ್ಪಿಸಿದೆ.
ನೀವು Whatsapp Businessನಲ್ಲಿ ಚಾಟ್ ಮಾಡುವಾಗ ಈ ರೀತಿ ಅನಗತ್ಯ ಮೆಸೇಜ್ ಬರುತ್ತದೆ. ಆಗ ಅದಕ್ಕೆ ಪ್ರತಿಕ್ರಿಯಿಸದೇ ಇದ್ದರೆ ಚಾಟ್ ಮುಂದುವರಿಸಲು ಸಾಧ್ಯವಿಲ್ಲ. ಹೀಗೆ ತೊಂದರೆ ಕೊಡುವುದೇ ವ್ಯಾಪಾರ ಕಂಪನಿಗಳ ಕೆಲಸವಾಗಿದೆ. ಈ ಮೆಸೇಜ್‌ಗಳನ್ನು ಶಾಶ್ವತವಾಗಿ ನಿಲ್ಲಿಸಬಹುದಾಗಿದೆ. ಅದಕ್ಕಾಗಿಯೇ ವಾಟ್ಸಪ್ ನಿಮಗೆ ಅವಕಾಶ ನೀಡಿದೆ. ಬ್ಯುಸಿನೆಸ್ ಕಂಪನಿಗಳು ಕಳುಹಿಸುವ ಪ್ರಾರಂಭಿಕ ಮೆಸೇಜ್ ಅನ್ನು ಸ್ವೀಕರಿಸಿದ ನಂತರ, ನಿಮಗೆ ಮೂರು ಆಯ್ಕೆಗಳು ಕಾಣುತ್ತವೆ. ಆಗ ನೀವು ಏನು ಮಾಡಬೇಕು? ಮುಂದೆ ಓದಿ.
Block: ನಿಮ್ಮ Whatsapp Businessಗೆ ಮೊದಲ ಮೆಸೇಜ್ ಬಂದ ಕೂಡಲೇ ನೀವು ಅದನ್ನು Block ಲೀಸ್ಟ್‌ಗೆ ಸೇರಿಸಿ. ಒಮ್ಮೆ ಈ ಮೆಸೇಜ್ ನಿರ್ಬಂಧಿಸಿದರೆ, ಆ ಕಂಪನಿಗಳು ನಿಮಗೆ ಪುನಃ ಡೈರೆಕ್ಟ್ ಆಗಿ ಸಂದೇಶ ಕಳುಹಿಸಲು ಸಾಧ್ಯವಿಲ್ಲ. ಆದರೂ, ಕಂಪನಿಗಳು ತಮ್ಮ ವ್ಯಾಪಾರದ ಪ್ರೊಫೈಲ್ ಮತ್ತು ಕ್ಯಾಟಲಾಗ್ ಪ್ರವೇಶವನ್ನು ಉಳಿಸಿಕೊಂಡಿರುತ್ತವೆ. ಇದರಿಂದ ನಿಮಗೆ ಸಮಸ್ಯೆ ಆಗುವುದಿಲ್ಲ.
Report: WhatsApp ಬ್ಯುಸಿನೆಸ್ ಮೆಸೇಜ್ ನೀತಿಯನ್ನು ಉಲ್ಲಂಘಿಸುತ್ತಿದೆ ಎಂದು ಕಂಡುಬಂದರೆ ಈ ಬಗ್ಗೆ ನೀವು ವರದಿ ಮಾಡುವ ಅವಕಾಶ(ಆಯ್ಕೆ) ಇರುತ್ತದೆ. ಇದಕ್ಕೆ Report ಬಟನ್ ಆಯ್ಕೆ ಮಾಡಬೇಕು.
Continue: ನೀವು ಇಚ್ಛಿಸಿದರೆ ಕಂಪನಿಯು ನಿಮ್ಮ Whatsapp Businessಗೆ ಕಳುಹಿಸುವ ಬ್ಯುಸೆನೆಸ್ ಮೆಸೇಜ್‌ಗಳನ್ನು ಮುಂದುವರಿಸುವ ಅವಕಾಶ ಇರುತ್ತದೆ. ಅದಕ್ಕೆ ನೀವು Continue ಬಟನ್ ಆಯ್ಕೆ ಮಾಡಬಹುದು.
WhatsAppಗೆ ಬರುವ ಅನಗತ್ಯ ಮೆಸೇಜ್‌ಗಳನ್ನು ನಿಲ್ಲಿಸುವುದು ಹೇಗೆ?
ಚಾಟ್ ಇಂಟರ್ಫೇಸ್‌ನಲ್ಲಿ 'Opt out of marketing messages' ಬಟನ್ ಅನ್ನು ಆಯ್ಕೆ ಮಾಡಬಹುದು. ಈ ಮೂಲಕ ನೀವು Whatsapp Businessಗೆ ಬರುವ ಮಾರ್ಕೆಟಿಂಗ್ ಮೆಸೇಜ್‌ಗಳನ್ನು ರಿಸೀವ್ ಮಾಡುವುದನ್ನು ನಿರಾಕರಿಸಬಹುದು. ಈ ಆಯ್ಕೆಯನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಅವರ ಮಾರ್ಕೆಟಿಂಗ್ ವಿತರಣಾ ಪಟ್ಟಿಗಳಿಂದ ತೆಗೆದುಹಾಕಲಾಗುತ್ತದೆ. ಈ ಫೀಚರ್ಸ್ ಲಭ್ಯವಿಲ್ಲದಿದ್ದರೆ ನೀವು ಬ್ಯುಸಿನೆಸ್ ನಿರ್ಬಂಧಿಸುವ ಆಯ್ಕೆಯನ್ನು ಉಳಿಸಿಕೊಳ್ಳಬಹುದು. ಆದರೂ, ನಿಮ್ಮ Whatsapp Businessಗೆ ಮೆಸೇಜ್ ಸೆಂಡ್ ಮಾಡಿದರೆ, ಆ ಬ್ಯುಸಿನೆಸ್ ಸಂದೇಶ ಕಳುಹಿಸುವುದನ್ನು ಇದು ತಡೆಯುತ್ತದೆ.
ಅನಗತ್ಯ ಮೆಸೇಜ್ ಬಂದರೆ Block ಮಾಡಿ
ಇದಲ್ಲದೆ, Whatsappಗೆ ಬರುವ ಇನ್ನಿತರ ಅನಗತ್ಯ ಜಾಹೀರಾತುಗಳನ್ನು ಸುಲಭವಾಗಿ ನಿರ್ಬಂಧಿಸಬಹುದು. ಆದರೆ, ಇದಕ್ಕಾಗಿ ಜಾಹೀರಾತುಗಳು ಎಲ್ಲಿಂದ ಬರುತ್ತವೆ ಎಂಬುದನ್ನು ನೀವು ಮೊದಲು ತಿಳಿದಿರಬೇಕು. ನೀವು ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಿದ್ದರೆ, ನೀವು ವೆಬ್‌ಸೈಟ್ ಅನ್ನು ತೆರೆದಿರಬಹುದು. ಅಲ್ಲಿ ಪಾಪ್-ಅಪ್ ಅನ್ನು ಆನ್ ಮಾಡಿರಬಹುದು. ಹೆಚ್ಚಿನ ಮೊಬೈಲ್‌ಗಳಲ್ಲಿ ಗೂಗಲ್ ಕ್ರೋಮ್ ಡೀಫಾಲ್ಟ್ ಬ್ರೌಸರ್ ಆಗಿದೆ. ಅಲ್ಲಿಂದ ಜಾಹೀರಾತುಗಳನ್ನು ನಿರ್ಬಂಧಿಸಬಹುದು.
- ನಿಮ್ಮ ಮೊಬೈಲ್‌ನಲ್ಲಿ ಕ್ರೋಮ್(Chrome) ಬ್ರೌಸರ್ ಓಪನ್ ಮಾಡಿ.
- ಅಲ್ಲಿ ನಿಮಗೆ ಕಾಣುವ(ನೀಡಿರುವ) ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ನಿಮಗೆ ಸೈಟ್ ಸೆಟ್ಟಿಂಗ್‌ಗಳ ಆಯ್ಕೆ ಕಾಣಿಸುತ್ತದೆ.
- ಆಗ ನೀವು ಜಾಹೀರಾತುಗಳು, ಪಾಪ್-ಅಪ್ ಮೆಸೇಜ್‌ಗಳನ್ನು ರಿಸೆಟ್ಟಿಂಗ್ ಮಾಡುವ ಆಯ್ಕೆ ಪಡೆಯುತ್ತೀರಿ.
- ನೀವು ಎರಡೂ ಆಯ್ಕೆಗಳನ್ನು ಸಕ್ರಿಯಗೊಳಿಸಬೇಕು. ಬಳಿಕ, ಜಾಹೀರಾತುಗಳು ಮೆಸೇಜ್‌ಗಳು ಬರುವುದು ನಿಲ್ಲುತ್ತವೆ.
ಗಿಜ್‌ಬಾಟ್ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








