ನೆಟ್‌ಫ್ಲಿಕ್ಸ್‌ನಲ್ಲಿ ಆಟೋಮ್ಯಾಟಿಕ್‌ ಸ್ಟ್ರೀಮ್‌ ಆಗುವುದನ್ನು ನಿಲ್ಲಿಸುವುದು ಹೇಗೆ?

|

ಪ್ರಸ್ತುತ ವೀಡಿಯೊ ಸ್ಟ್ರೀಮಿಂಗ್ ದೈತ್ಯ ಎನಿಸಿಕೊಂಡಿರುವ ನೆಟ್‌ಫ್ಲಿಕ್ಸ್ ತನ್ನ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳಿಂದಲೇ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಟಿವಿ ಕಾರ್ಯಕ್ರಮಗಳು ಮತ್ತು ವೆಬ್‌ ಸೀರಿಸ್‌‌ಗಳನ್ನು ನೋಡುವುದರಲ್ಲಿ ಹೆಚ್ಚಿನ ಜನರು ಕಾಲ ಕಳೆಯುತ್ತಾರೆ. ಇನ್ನು ನೆಟ್‌ಫ್ಲಿಕ್ಸ್‌ ಕೂಡ ಬಳಕೆದಾರರಿಗೆ ತಕ್ಕಂತೆ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದ ಕೊರೊನಾ ಕಾರಣದಿಂದ ಮನೆಯಿಂದಲೇ ಕಾರ್ಯನಿರ್ವಹಿಸುವ ಮಂದಿಯನ್ನು ನೆಟ್‌ಪ್ಲಿಕ್ಸ್‌ ತನ್ನತ್ತ ಸೆಳೆದಿದೆ.

ವೀಡಿಯೊ

ಹೌದು, ವೀಡಿಯೊ ಸ್ಟ್ರೀಮಿಂಗ್‌ ದೈತ್ಯ ನೆಟ್‌ಫ್ಲಿಕ್ಸ್‌ ಚಲನಚಿತ್ರಗಳನ್ನು ತನ್ನ ವೇದಿಕೆಯಲ್ಲಿ ವೀಕ್ಷಿಸುವಂತೆ ಮಾಡಿದೆ. ಇನ್ನು ನೆಟ್‌ಫ್ಲಿಕ್ಸ್ ಒಂದೇ ಸಮಯದಲ್ಲಿ ಒಂದು ಸ್ಕ್ರೀನ್‌ನಲ್ಲಿ ಹೈ ಡೆಫಿನಿಷನ್ (ಹೆಚ್‌ಡಿ) ಯಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಚಂದಾದಾರರಿಗೆ ಅನುಮತಿಸುತ್ತದೆ. ಆದರೂ ನೆಟ್‌ಫ್ಲಿಕ್ಸ್‌ನಲ್ಲಿ ಬ್ರೌಸ್‌ ಮಾಡುವಾಗ ಆಟೋಮ್ಯಾಟಿಕ್‌ ಸಿನಿಮಾ, ಟ್ರೇಲರ್‌ಗಳು ಸ್ಟ್ರೀಮ್‌ ಆಗುತ್ತಿರುತ್ತದೆ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನೆಟ್‌ಫ್ಲಿಕ್ಸ್‌ನಲ್ಲಿ ಆಟೋಮ್ಯಾಟಿಕ್‌ ಸ್ಟ್ರೀಮ್‌ ಆಗುವುದನ್ನು ತಡೆಯಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಮನರಂಜನೆ ನೀಡುತ್ತದೆಯಾದರೂ, ಹೊಸ ಚಲನಚಿತ್ರಗಳು ಮತ್ತು ಪ್ರದರ್ಶನಗಳಿಗಾಗಿ ನಾವು ಬ್ರೌಸ್ ಮಾಡುವಾಗ ಟ್ರೇಲರ್‌ಗಳ ಎಂದಿಗೂ ಮುಗಿಯದ ರೀತಿಯಲ್ಲಿ ಸ್ಟ್ರೀಮ್ ಆಗುತ್ತಿರುತ್ತದೆ. ಇದನ್ನು ಬಳಸಿಕೊಂಡು ನೀವು ಟ್ರೇಲರ್‌ಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಉತ್ತಮವಾಗಿ ಪ್ಲೇ ಆಗುವುದನ್ನು ನಿಲ್ಲಿಸಬಹುದು. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸಿದರೆ, ಇನ್ನೂ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೇಲರ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಆದರೆ ನೀವು ಪ್ರದರ್ಶನ ಅಥವಾ ಚಲನಚಿತ್ರದ ಮೇಲೆ ಸುಳಿದಾಡಿದಾಗ ಅವು ಆಟೋಮ್ಯಾಟಿಕ್‌ ಆಗಿ ಪ್ಲೇ ಆಗುವುದನ್ನು ತಡೆಯಬಹುದಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಆಟೋಮ್ಯಾಟಿಕ್‌ ಸ್ಟ್ರೀಮ್‌ ಆಗುವುದನ್ನು ನಿಲ್ಲಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಆಟೋಮ್ಯಾಟಿಕ್‌ ಸ್ಟ್ರೀಮ್‌ ಆಗುವುದನ್ನು ನಿಲ್ಲಿಸುವುದು ಹೇಗೆ?

ಹಂತ 1: ವೆಬ್ ಬ್ರೌಸರ್‌ನಿಂದ, ನಿಮ್ಮ ಅಕೌಂಟ್‌ ಪೇಜ್‌ಗೆ ಹೋಗಿ.

ಹಂತ 2: ನೀವು ಮ್ಯಾನೇಜ್‌ ಮಾಡಲು ಬಯಸುವ ಪ್ರೊಫೈಲ್‌ಗಾಗಿ ಪ್ರೊಫೈಲ್ ಮತ್ತು ಪೇರೆಂಟ್ಸ್‌ ಕಂಟ್ರೋಲ್‌ ಸೆಟ್ಟಿಂಗ್ಸ್‌ ಅನ್ನು ತೆರೆಯಿರಿ.

ಹಂತ 3: ಪ್ಲೇಬ್ಯಾಕ್ ಸೆಟ್ಟಿಂಗ್ಸ್‌ ಅನ್ನು ಬದಲಾಯಿಸಿ.

ಹಂತ 4: ಎಲ್ಲಾ ಡಿವೈಸ್‌ಗಳಲ್ಲಿ ಬ್ರೌಸ್ ಮಾಡುವಾಗ ಪ್ರಿವ್ಯೂವ್‌ಗಳನ್ನು ಆಟೋ ಮ್ಯಾಟಿಕ್‌ಪ್ಲೇ ಮಾಡುವ ಆಯ್ಕೆಯನ್ನು ಪರಿಶೀಲಿಸಿ ಅಥವಾ ಗುರುತಿಸಬೇಡಿ.

ನೆಟ್‌ಫ್ಲಿಕ್ಸ್‌

ಹೀಗೆ ಮಾಡುವುದರಿಂದ ನೀವು ನೆಟ್‌ಫ್ಲಿಕ್ಸ್‌ ತೆರೆದ ತಕ್ಷಣ ಆಟೋಮ್ಯಾಟಿಕ್‌ ಸ್ಟ್ರೀಮ್‌ ಆಗುವ ಟ್ರೇಲರ್‌ಗಳನ್ನು ತಡೆಯಬಹುದಾಗಿದೆ. ಅಲ್ಲದೆ ನೀವು ಸಿನಿಮಾಗಳ ಮೇಲೆ ಸುಳಿದಾಡಿದಾದ ಆಟೋಮ್ಯಾಟಿಕ್‌ ಪ್ಲೇ ಆಗುವುದು ಸಹ ಸ್ಟಾಪ್‌ ಆಗಲಿದೆ. ಇದರಿಂದ ನೀವು ನಿಮಗೆ ಬೇಕಾದ ಮನರಂಜನೆ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಏಕೆಂದರೆ ನೀವು ಸುಳಿದಾಡುವಾಗಲೇ ಆಟೋಮ್ಯಾಟಿಕ್‌ ಸ್ಟರೀಮಿಂಗ್‌ ಶರುವಾದರೆ ನಿಮ್ಮ ಹುಡುಕಾಟದಲ್ಲಿ ಕಿರಿಕಿರಿ ಎನಿಸಬಹುದು. ಆದರಿಂದ ಈ ಹಂತಗಳನ್ನು ಅನುಸರಿಸುವುದು ಉತ್ತಮವಾಗಿದೆ.

Most Read Articles
Best Mobiles in India

English summary
You will still be able to watch trailers on Netflix. But they won’t start playing automatically as you hover over a show or movie.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X