ವಾಟ್ಸಾಪ್‌ ನೋಟಿಫಿಕೇಶನ್ ಅನ್ನು ನಿಲ್ಲಿಸುವುದು ಹೇಗೆ?

|

ವಾಟ್ಸಾಪ್‌ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇನ್ನು ನಿಮ್ಮ ವಾಟ್ಸಾಪ್‌ಗೆ ಯಾವುದೇ ಸಂದೇಶ ಬಂದರೂ ಡಿಸ್‌ಪ್ಲೇ ಮೇಲೆ ನೋಟಿಫಿಕೇಶನ್ ಬರಲಿದೆ. ಈ ರೀತಿ ಯಾವುದೇ ಸಂದೇಶ ಬಂದರೂ ನೋಟಿಫಿಕೇಶನ್ ಬರುವುದರಿಂದ ಕೆಲವೊಮ್ಮೆ ಡಿಸ್‌ಪ್ಲೇ ಅಸ್ತವ್ಯಸ್ತವಾಗಿ ಕಾಣಲಿದೆ. ಇಂತಹ ಸಂದರ್ಭದಲ್ಲಿ ವಾಟ್ಸಾಪ್‌ ನೋಟಿಫಿಕೇಶನ್ ಅನ್ನು ಸ್ಟಾಪ್‌ ಮಾಡುವುದಕ್ಕೆ ಕೂಡ ಅವಕಾಶವಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಮೂಲಕ ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬ ಮತ್ತು ಸ್ನೇಹಿತರ ಸದಸ್ಯರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ. ಆದರೆ ವಾಟ್ಸಾಪ್‌ ಮೂಲಕ ನೀವು ನಿಮ್ಮ ಸಹೋದ್ಯೋಗಿಗಳು, ಗ್ರೂಪ್‌ ಚಾಟ್‌ಗಳನ್ನ ನಡೆಸುವುದರಿಂದ ನಿಮ್ಮ ಫೋನಿನ ಡಿಸ್‌ಪ್ಲೇ ಮೇಲೆ ಈ ಎಲ್ಲಾ ಸಂದೇಶಗಳ ನೋಟಿಫಿಕೇಶನ್ ಬರಲಿದೆ. ಆದರೆ ನಿಮ್ಮ ವಾಟ್ಸಾಪ್‌ ನೋಟಿಫಿಕೇಶನ್‌ ಅನ್ನು ಸ್ಟಾಪ್‌ ಕೂಡ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಮಾತ್ರವಲ್ಲದೆ, ಪ್ರಸ್ತುತ ಸಂದರ್ಭದಲ್ಲಿ ಹಲವು ಆಪ್‌ಗಳನ್ನ ಬಳಸುತ್ತಿರುವುದರಿಂದ ಅನೇಕ ಆಪ್‌ಗಳ ನೋಟಿಫೀಕೇಶನ್‌ ಡಿಸ್‌ಪ್ಲೇ ಮೇಲೆ ಬರುತ್ತಿರುತ್ತವೆ. ಅದರಲ್ಲು ನಿಮ್ಮ ವಾಟ್ಸಾಪ್‌ ಗ್ರೂಪ್‌ ಚಾಟ್‌ಗಳಿಂದ ಅನೇಕ ನೋಟಿಫಿಕೇಶನ್‌ಗಳು ಬರುತ್ತಿದ್ದರೆ, ಯಾವ ನೋಟಿಫಿಕೇಶನ್‌ ಯಾವುದಕ್ಕೆ ಸಂಬಂಧಿಸಿದೆ ಅನ್ನೊದು ತಿಳಿಯುವುದೇ ಇಲ್ಲ. ಅಲ್ಲದೆ ಡಿಸ್‌ಪ್ಲೇ ತುಂಬಾ ನೋಟಿಫಿಕೇಶನ್‌ಳೇ ತುಂಬಿದ್ದರೆ ಕಿರಿಕಿರಿ ಎನಿಸುವುದು ಕೂಡ ಸಹಜ. ಈ ಕಿರಿಕಿರಿಯಿಂದ ಪಾರಾಗಲು ಸುಲಭ ಮಾರ್ಗವೆಂದರೆ ನೋಟಿಫಿಕೇಶನ್‌ಗಳನ್ನ ಸ್ಟಾಪ್‌ ಮಾಡುವುದು.

ವಾಟ್ಸಾಪ್‌ ನೋಟಿಫಿಕೇಶನ್ ಅನ್ನು ನಿಲ್ಲಿಸುವುದು ಹೇಗೆ?

ವಾಟ್ಸಾಪ್‌ ನೋಟಿಫಿಕೇಶನ್ ಅನ್ನು ನಿಲ್ಲಿಸುವುದು ಹೇಗೆ?

ಹಂತ 1: ವಾಟ್ಸಾಪ್ ತೆರೆಯಿರಿ> ಹೆಚ್ಚಿನ ಆಯ್ಕೆಗಳನ್ನು ಟ್ಯಾಪ್ ಮಾಡಿ.

ಹಂತ 2: ಸೆಟ್ಟಿಂಗ್‌ಗಳು> ನಂತರ ನೋಟಿಫಿಕೇಶನ್‌ಗಳಿಗೆ ಹೋಗಿ.

ಹಂತ 3: ಸಂದೇಶ ನೋಟಿಫಿಕೇಶನ್‌ಗಳ ವಿಭಾಗದ ಅಡಿಯಲ್ಲಿ ಶೋ ನೋಟಿಫಿಕೇಶನ್ ಬಟನ್ ಅನ್ನು ಟಾಗಲ್ ಮಾಡಿ. ಹಾಗೆ ಮಾಡುವುದರಿಂದ ವೈಯಕ್ತಿಕ ಚಾಟ್‌ಗಳಲ್ಲಿ ಸಂದೇಶ ಅಧಿಸೂಚನೆಗಳನ್ನು ತೋರಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ.

ಹಂತ 4: ಇದಲ್ಲದೆ ಗ್ರೂಪ್‌ ನೋಟಿಫಿಕೇಶನ್‌ಗಳ ವಿಭಾಗದ ಅಡಿಯಲ್ಲಿ ಶೋ ನೋಟಿಫಿಕೇಶನ್ ಬಟನ್ ಆಫ್ ಮಾಡಿ. ಹಾಗೆ ಮಾಡುವುದರಿಂದ ಗ್ರೂಪ್‌ ಚಾಟ್‌ಗಳಲ್ಲಿ ಸಂದೇಶ ಅಧಿಸೂಚನೆಗಳನ್ನು ತೋರಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ.

ಪ್ರಿವ್ಯೂ ಬಟನ್

ಇದಕ್ಕೆ ಪರ್ಯಾಯವಾಗಿ, ನೀವು ಶೋ ಪ್ರಿವ್ಯೂ ಬಟನ್ ಅನ್ನು ಟಾಗಲ್ ಮಾಡಬಹುದು. ಹಾಗೆ ಮಾಡುವುದರಿಂದ ನೀವು ಹೊಸ ಸಂದೇಶವನ್ನು ಸ್ವೀಕರಿಸಿದ್ದೀರಿ ಎಂದು ನಿಮಗೆ ತಿಳಿದಿದೆಯೆಂದು ಖಚಿತಪಡಿಸುತ್ತದೆ ಆದರೆ ಆ ಸಂದೇಶದ ವಿಷಯಗಳನ್ನು ವಾಟ್ಸಾಪ್‌ ತೆರೆಯದೆ ನೋಡಲು ಸಾಧ್ಯವಾಗುವುದಿಲ್ಲ.

Best Mobiles in India

English summary
you can ensure that these endless WhatsApp notifications don’t clutter your phone’s home screen?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X