ಪಿಸಿಯಿಂದ ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ನ್ನು ನೇರವಾಗಿ ತೆಗೆದುಕೊಳ್ಳುವುದು ಹೇಗೆ ಗೊತ್ತಾ?
ನಾವಿಲ್ಲಿ ಪಿಸಿಯಿಂದ ನೇರವಾಗಿ ಹೇಗೆ ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದು ಎಂಬ ಬಗ್ಗೆ ತಿಳಿಸುತ್ತಿದ್ದೇವೆ. ಅದಕ್ಕಾಗಿ ನೀವು AirDroid ಅನ್ನೋ ಆಪ್ ನ್ನು ಬಳಕೆ ಮಾಡಬೇಕಾಗುತ್ತದೆ ಮತ್ತು ಇದು ನಿಮಗೆ ನಿಮ್ಮ ಆಂಡ್ರಾಯ್ಡ್ ನ್ನು ನೇರವಾಗಿ ಪಿಸಿಯಿಂದ ರಿಮೋಟ್ ಆಗಿ ಮ್ಯಾನೇಜ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಜೊತೆಗೆ ಪಿಸಿಯಿಂದ ನೇರವಾಗಿ ನಿಮ್ಮ ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ.

ಸಾಮಾನ್ಯವಾಗಿ ನಿಮಗೆ ನಿಮ್ಮ ಆಂಡ್ರಾಯ್ಡ್ ಸ್ಕ್ರೀನ್ ಶಾಟ್ ವಿಂಡೋಸ್ ಪಿಸಿಯಲ್ಲಿ ಬೇಕಿದ್ದಾಗ ಆಂಡ್ರಾಯ್ಡ್ ನಲ್ಲಿ ಮೊದಲು ಸ್ಕ್ರೀನ್ ಶಾಟ್ ತೆಗೆದುಕೊಂಡು ನಂತರ ಬ್ಲೂಟೂತ್, ಯುಎಸ್ ಬಿ ಕೇಬಲ್ ಅಥವಾ ಇತರೆ ಯಾವುದಾದರೂ ಮಾರ್ಗದಿಂದ ಅದನ್ನು ವಿಂಡೋಸ್ ಪಿಸಿಗೆ ಟ್ರಾನ್ಫರ್ ಮಾಡಿಕೊಳ್ಳಬೇಕಾಗುತ್ತದೆ.ಆದರೆ ಈ ಪ್ರೊಸೆಸ್ ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಅದೇ ಕಾರಣಕ್ಕೆ ನಾವಿಲ್ಲಿ ಮತ್ತೊಂದು ಸುಲಭದ ವಿಧಾನವನ್ನು ನಿಮಗೆ ತಿಳಿಸುತ್ತಿದ್ದೇವೆ. ಆಂಡ್ರಾಯ್ಡ್ ನಲ್ಲಿ ಕೆಲವು ಬಟನ್ ಗಳನ್ನು ಪ್ರೆಸ್ ಮಾಡುತ್ತಲೇ ಕುಳಿತುಕೊಳ್ಳುವ ಅಗತ್ಯವಿಲ್ಲ. ಆಂಡ್ರಾಯ್ಡ್ ನ ಸ್ಕ್ರೀನ್ ಶಾಟ್ ಗಳನ್ನು ನೇರವಾಗಿ ಪಿಸಿಯಲ್ಲೇ ತೆಗೆದುಕೊಳ್ಳಬಹುದಾದ ಸುಲಭದ ವಿಧಾನವನ್ನು ನಾವಿಲ್ಲಿ ನಿಮಗಾಗಿ ವಿವರಿಸುತ್ತಿದ್ದೇವೆ.
ಪಿಸಿಯಲ್ಲಿ ನೇರವಾಗಿ ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳಿ:
ಈ ವಿಧಾನವು ಬಹಳ ಸುಲಭ ಮತ್ತು ಒಂದು ಆಪ್ ನ ಸಹಾಯದಿಂದ ನೀವಿದನ್ನು ಸಾಧಿಸಬಹುದು ಮತ್ತು ಸುಲಭವಾಗಿ ನಿಮ್ಮ ಪಿಸಿಯಲ್ಲಿ ಡಿವೈಸಿನ ಕಂಟ್ರೋಲ್ ನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ನೇರವಾಗಿ ಪಿಸಿಯಲ್ಲೇ ಡಿವೈಸಿನ ಸ್ಕ್ರೀನ್ ಶಾಟ್ ತೆಗೆದುಕೊಂಡು ಸೇವ್ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಕೆಳಗೆ ತಿಳಿಸಿರುವ ಸುಲಭದ ಮೆಥೆಡ್ ಗಳನ್ನು ಅನುಸರಿಸಿ.
ನೇರವಾಗಿ ಪಿಸಿಯಲ್ಲಿ ಆಂಡ್ರಾಯ್ಡ್ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಅನುಸರಿಸಬೇಕಾಗಿರುವ ಹಂತಗಳು:
ಹಂತ 1. ಮೊಟ್ಟಮೊದನೆಯದಾಗಿ ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ AirDroid: File Transfer/Manage ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.
ಹಂತ 2. ಇದೀಗ ನಿಮ್ಮ ಆಂಡ್ರಾಯ್ಡ್ ಮತ್ತು ಪಿಸಿಯನ್ನು ಕಾಮನ್ ವೈಫೈ ನೆಟ್ ವರ್ಕ್ ಬಳಸಿ ಕನೆಕ್ಟ್ ಮಾಡಿ ಮತ್ತು ಆ ನೆಟ್ ವರ್ಕ್ ಮೂಲಕ ನಿಮ್ಮ ಡಿವೈಸಿನ ಆಕ್ಸಿಸ್ ಸಾಧ್ಯವಾಗುತ್ತದೆ.
ಹಂತ 3. ನಿಮ್ಮ ಆಂಡ್ರಾಯ್ಡ್ ನಲ್ಲಿ ಇದೀಗ AirDroid ಆಪ್ ನ್ನು ಲಾಂಚ್ ಮಾಡಿ ಮತ್ತು ನೀವು ಐಪಿ ಅಡ್ರೆಸ್ ನ್ನು ಕಾಣುತ್ತೀರಿ ಮತ್ತು ಆಪ್ ನಲ್ಲಿ ಪೋರ್ಟ್ ನಂಬರ್ ಲಭ್ಯವಾಗುತ್ತದೆ. ಇದನ್ನು ನೋಟ್ ಮಾಡಿ ಇಟ್ಟುಕೊಳ್ಳಿ ಅಥವಾ ನೀವು ಸರಳವಾಗಿ QR ಕೋಡ್ ಸ್ಕ್ಯಾನರ್ ನ್ನು ಕ್ಲಿಕ್ಕಿಸಿ.
ಹಂತ4. ಇದೀಗ ನಿಮ್ಮ ಪಿಸಿ ಬ್ರೌಸರ್ ನಲ್ಲಿ web.airdroid.com ನ್ನು ತೆರೆಯಿರಿ ಮತ್ತು ನೀವು “Scan Qr Code” ಆಯ್ಕೆಯನ್ನು ಗಮನಿಸುತ್ತೀರಿ.
ಹಂತ 5. ಇದೀಗ ಸರಳವಾಗಿ AirDroid ಆಪ್ ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ತೆರೆಯಿರಿ ಮತ್ತು ಕಂಪ್ಯೂಟರ್ ಸ್ಕ್ರೀನ್ ನಲ್ಲಿರುವ QR Code ನ್ನು ಸ್ಕ್ಯಾನ್ ಮಾಡಿ. ಇದೀಗ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಕನೆಕ್ಷನ್ ನ್ನು ಎಕ್ಸೆಪ್ಟ್ ಮಾಡಬೇಕು ಮತ್ತು ನಂತರ ವಿಂಡೋಸ್ ಪಿಸಿಗೆ ನಿಮ್ಮ ಆಂಡ್ರಾಯ್ಡ್ ಡಿವೈಸ್ ಯಶಸ್ವಿಯಾಗಿ ಕನೆಕ್ಟ್ ಆಗುತ್ತದೆ.
ಹಂತ 6. ಒಮ್ಮೆ ಕನೆಕ್ಷನ್ ಯಶಸ್ವಿಯಾದ ನಂತರ ಸ್ಕ್ರೀನ್ ಶಾಟ್ ಆಯ್ಕೆಯನ್ನು AirDroid ವೆಬ್ ವರ್ಷನ್ ನಲ್ಲಿ ನೀವು ಬಳಸಿಕೊಂಡು ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು.
ಅಷ್ಟೇ! ನೀವು ಇದೀಗ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದಂತಾಯ್ತು. ಈ ವಿಧಾನದಿಂದ ನೀವು ಯಾವುದೇ ಸ್ಕ್ರೀನ್ ಶಾಟ್ ನ್ನು ಕೂಡ ನೇರವಾಗಿ ಪಿಸಿಯಲ್ಲೇ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಆಂಡ್ರಾಯ್ಡ್ SDK ಬಳಸಿ:
ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನಮಗೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಆಯ್ಕೆಗಳಿರುವುದಿಲ್ಲ. ಆದರೆ ನೀವು ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ಪಿಸಿಗೆ ಕನೆಕ್ಟ್ ಮಾಡುವ ಮೂಲಕ ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕಾಗಿ ನೀವು ಗೂಗಲ್ ನ ಆಂಡ್ರಾಯ್ಡ್ SDK ಬಳಸಬೇಕಾಗುತ್ತದೆ. ನೀವೇನು ಮಾಡಬೇಕು ಎಂಬ ವಿವರ ಇಲ್ಲಿದೆ ನೋಡಿ.
ಹಂತ 1. ಮೊದಲನೆಯದಾಗಿ ಜಾವಾ ಡೆವಲಪ್ ಮೆಂಟ್ ಕಿಟ್( (JDK) ನ್ನು ಒರಾಕಲ್ ವೆಬ್ ಸೈಟ್ ಮೂಲಕ ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.
ಹಂತ 2. ಮುಂದಿನ ಹಂತದಲ್ಲಿ, ನೀವು ಆಂಡ್ರಾಯ್ಡ್ SDK ಯನ್ನು ಗೂಗಲ್ ನ ಆಂಡ್ರಾಯ್ಡ್ ಡೆವಲಪರ್ಸ್ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿ. ಹಂತ 3. ಮುಂದಿನ ಹಂತದಲ್ಲಿ ಹಂತ, SDK ಮ್ಯಾನೇಜರ್ ಶಾರ್ಟ್ ಕಟ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ನಂತರ 'Run as administrator’ ನ್ನು ಸೆಲೆಕ್ಟ್ ಮಾಡಿ.
ಹಂತ 4. ಅಂತಿಮವಾಗಿ, ಆಂಡ್ರಾಯ್ಡ್ SD ಫ್ಲ್ಯಾಟ್ ಫಾರ್ಮ್ ಟೂಲ್ಸ್ ಬಾಕ್ಸ್ ನ್ನು ಚೆಕ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
ಹಂತ 5. ನಿಮ್ಮ ಆಂಡ್ರಾಯ್ಡ್ ನಲ್ಲಿ USB Debugging ವೋಡ್ ನ್ನು ಆನ್ ಮಾಡಿ.
ಹಂತ 6. USB Debugging ಮೋಡ್ ಅನೇಬಲ್ ಆದ ನಂತರ ನಿಮ್ಮ ಆಂಡ್ರಾಯ್ಡ್ ಡಿವೈಸ್ ನ್ನು ನಿಮ್ಮ ಕಂಪ್ಯೂಟರ್ ಗೆ USB ಕೇಬಲ್ ಮೂಲಕ ಕನೆಕ್ಟ್ ಮಾಡಿಕೊಳ್ಳಿ. ನಿಮ್ಮ ಕಂಪ್ಯೂಟರ್ ಸ್ವಯಂಚಾಲಿತವಾಗಿ ಡ್ರೈವರ್ಸ್ ಗಳನ್ನು ಡಿಟೆಕ್ಟ್ ಮಾಡಿ ಇನ್ಸ್ಟಾಲ್ ಮಾಡುತ್ತದೆ.
ಹಂತ 7. C:Program Files (x86)Androidandroid-SDK ಗೆ ಹೆಡ್ ಮಾಡಿ ಮತ್ತು ನಂತರ ddms.bat ಲಾಂಚ್ ಮಾಡಿ.
ಹಂತ 8. ನೀವು ಈ ಕೆಳಗೆ ತಿಳಿಸಿರುವಂತ ಇಂಟರ್ ಫೇಸ್ ನ್ನು ಗಮನಿಸುತ್ತೀರಿ. ಇಲ್ಲಿ ನೀವು ಆಂಡ್ರಾಯ್ಡ್ ಫೋನ್ ಸೆಲೆಕ್ಟ್ ಮಾಡಬೇಕು ಮತ್ತು ಡಿವೈಸ್ ಮೇಲೆ ಕ್ಲಿಕ್ಕಿಸಿ. ಡಿವೈಸ್ ಅಡಿಯಲ್ಲಿ ಡ್ರಾಪ್ ಡೌನ್ ಮೆನು ಇರುತ್ತದೆ. ಸ್ಕ್ರೀನ್ ಕ್ಯಾಪ್ಚರ್ ನ್ನು ಸೆಲೆಕ್ಟ್ ಮಾಡಿ.
ಹಂತ 9. ಇದು ನಿಮ್ಮ ಸದ್ಯದ ಆಂಡ್ರ್ಯಾಡ್ ಸ್ಕ್ರೀನಿನ ಸ್ಕ್ರೀನ್ ಶಾಟ್ ತೆಗೆದುಕೊಳ್ಳುತ್ತದೆ. ಇನ್ನೊಂದು ಸ್ಕ್ರೀನ್ ಶಾಟ್ ತೆಗೆದುಕೊಳ್ಳುತ್ತದೆ. ಟ್ಯಾಪ್ ಮಾಡಿ ಮತ್ತು ರಿಫ್ರೆಶ್ ಬಟನ್ ಕ್ಲಿಕ್ಕಿಸಿ. ಸ್ಕ್ರೀನ್ ಶಾಟ್ ನ್ನು ಸೇವ್ ಮಾಡುವುದಕ್ಕಾಗಿ ಸೇವ್ ಬಟನ್ ನ್ನು ಕ್ಲಿಕ್ಕಿಸಿ.
ಇಷ್ಟು ಮಾಡಿದರೆ ನೀವು ಆಂಡ್ರಾಯ್ಡ್ SDK ಬಳಸಿ ಆಂಡ್ರಾಯ್ಡ್ ಸ್ಕ್ರೀನ್ ಶಾಟ್ ನ್ನು ಕಂಪ್ಯೂಟರ್ ಡಿವೈಸ್ ನಲ್ಲಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಎಪವರ್ ಮಿರರ್ ಬಳಸಿ:
ಕಂಪ್ಯೂಟರ್ ನಲ್ಲಿ ಸ್ಕ್ರೀನ್ ಮಿರರಿಂಗ್ ಗಾಗಿ ಇರುವ ಬೆಸ್ಟ್ ಆಪ್ ಎಂದರೆ ಎಪವರ್ ಮಿರರ್. ಎಪವರ್ ಮಿರರ್ ನ ಗ್ರೇಟ್ ವಿಚಾರವೇನೆಂದರೆ ಇದು ಸ್ಮಾರ್ಟ್ ಫೋನ್ ಮಿರರಿಂಗ್ ಗೆ ಹಲವು ಆಯ್ಕೆಗಳನ್ನು ನೀಡುತ್ತದೆ.ಉದಾಹರಣೆಗೆ ನೀವು ಸ್ಕ್ರೀನ್ ಶಾಟ್ ನ್ನು ಕ್ಯಾಪ್ಚರ್ ಮಾಡುವಾಗ ಸ್ಕ್ರೀನಿನ ಕೆಲವು ಭಾಗಗಳನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಸ್ಕ್ರೀನ್ ನ್ನು ಬೇಕಿದ್ದರೂ ಕ್ಯಾಪ್ಚರ್ ಮಾಡಬಹುದು ಅಥವಾ ಆಂಡ್ರಾಯ್ಡ್ ಫೀಚರ್ ಗಳನ್ನು ಆಪರೇಟ್ ಮಾಡಬಹುದು ಇತ್ಯಾದಿ. ನಾವಿಲ್ಲಿ ಎಪವರ್ ಮಿರರ್ ಬಳಸಿ ಹೇಗೆ ಆಂಡ್ರಾಯ್ಡ್ ಸ್ಕ್ರೀನ್ ಶಾಟ್ ನ್ನು ನೇರವಾಗಿ ಪಿಸಿಯಲ್ಲಿ ತೆಗೆದುಕೊಳ್ಳಬಹುದು ಎಂಬುದನ್ನು ಹಂತಹಂತವಾಗಿ ವಿವರಿಸಿದ್ದೇವೆ.
ಹಂತ 1. ಮೊದಲನೆಯದಾಗಿ ಎಪವರ್ ಮಿರರ್ ನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ, ಒಮ್ಮೆ ಡೌನ್ ಲೋಡ್ ಆದ ನಂತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಮೊಬೈಲ್ ಆಪ್ ನ್ನು ಡೌನ್ ಲೋಡ್ ಮಾಡಿ.
ಹಂತ 2. ನಂತರ ಆಂಡ್ರಾಯ್ಡ್ ಡಿವೈಸ್ ನಲ್ಲಿ ಯುಎಸ್ ಬಿ ಡಿಬಗ್ಗಿಂಗ್ ಮೋಡ್ ನ್ನು ಆನ್ ಮಾಡಿ ಮತ್ತು ಕಂಪ್ಯೂಟರ್ ಗೆ ಇದನ್ನು ಕನೆಕ್ಟ್ ಮಾಡಿಕೊಳ್ಳಿ.
ಹಂತ 3. ಎಪವರ್ ಮಿರರ್ ಕಂಪ್ಯೂಟರ್ ಟೂಲ್ ನ್ನು ಲಾಂಚ್ ಮಾಡಿ ಮತ್ತು ಕನೆಕ್ಟ್ ಆಗಿರುವ ಡಿವೈಸ್ ಗಳ ಪಟ್ಟಿಯನ್ನು ಇದು ತೋರಿಸುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ್ನು ಸೆಲೆಕ್ಟ್ ಮಾಡಿ ಮತ್ತು ಸ್ಟಾರ್ಟ್ ನೌ ಅನ್ನು ಕ್ಲಿಕ್ಕಿಸಿ.
ಹಂತ 4.ಇದೀಗ ನೀವು ಪಿಸಿಯಲ್ಲಿ ಸಂಪೂರ್ಣ ಆಂಡ್ರಾಯ್ಡ್ ಸ್ಕ್ರೀನ್ ನ್ನು ಕಾಣಲು ಸಾಧ್ಯವಾಗುತ್ತದೆ. ಸ್ಕ್ರೀನ್ ಶಾಟ್ ತೆಗೆದುಕೊಳ್ಳುವುದಕ್ಕೆ ಸ್ಕ್ರಿನ್ ಶಾಟ್ ಐಕಾನ್ ನ್ನು ಟ್ಯಾಪ್ ಮಾಡಿ.
ಇದಿಷ್ಟ ಮಾಡಿದರೆ ಎಪವರ್ ಮಿರರ್ ಬಳಸಿ ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ನ್ನು ನೇರವಾಗಿ ಪಿಸಿಯಲ್ಲಿ ತೆಗೆದುಕೊಂಡು ಸೇವ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮೇಲಿನ ಎಲ್ಲಾ ಮೆಥೆಡ್ ಗಳು ಆಂಡ್ರಾಯ್ಡ್ ಫೋನಿನ ಸ್ಕ್ರೀನ್ ಶಾಟ್ ನ್ನು ಸುಲಭದಲ್ಲಿ ನೇರವಾಗಿ ಪಿಸಿಯಲ್ಲಿ ತೆಗೆದುಕೊಳ್ಳಲು ಅನುವು ಮಾಡಿಕೊಡುವ ವಿಧಾನಗಳಾಗಿವೆ.


Click it and Unblock the Notifications








