ಕೊರೋನಾ ವೈರಸ್‌ಗೆ ಸಾಲು ಸಾಲು ಬಲಿ..! ರಿಯಲ್ ಟೈಮ್ ವೈರಸ್ ಟ್ರಾಕ್ ಮಾಡಿ..!
ಅಪಾಯಕಾರಿ ಕೊರೋನಾ ವೈರಸ್ ವ್ಯಾಪಕವಾಗಿ ಜಗತ್ತಿನಾದ್ಯಂತ ಹರಡುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಜನ ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಚೀನಾದಲ್ಲಿ 5900ಕ್ಕೂ ಜನರಲ್ಲಿ ವೈರಸ್ ಪತ್ತೆಯಾಗಿದ್ದು, 126ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಮಾರಣಾಂತಿಕ ವೈರಸ್ ಹರಡುವ ಬಗ್ಗೆ ಜನರಿಗೆ ಅಪ್‌ಡೇಟ್ ಮಾಹಿತಿಯನ್ನು ತಿಳಿಸಲು, ಸೆಂಟರ್ ಫಾರ್ ಸಿಸ್ಟಮ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಸಂಸ್ಥೆ ಆನ್‌ಲೈನ್ ಡ್ಯಾಶ್‌ಬೋರ್ಡ್‌ನ್ನು ಪ್ರಾರಂಭಿಸಿದೆ. ಈ ಡ್ಯಾಶ್‌ಬೋರ್ಡ್ ರಿಯಲ್ ಟೈಮ್‌ನಲ್ಲಿ ವೈರಸ್‌ನ ಹರಡುವಿಕೆಯನ್ನು ಜನರಿಗೆ ತಿಳಿಸುತ್ತದೆ.

ಲೈವ್ ಡ್ಯಾಶ್‌ಬೋರ್ಡ್ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ಮತ್ತು ಯುಎಸ್, ಚೀನಾ ಮತ್ತು ಯುರೋಪ್‌ನಲ್ಲಿನ ಎಲ್ಲಾ ರೋಗ ನಿಯಂತ್ರಣ ಕೇಂದ್ರಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ. ಎಸ್ರಿ ಆಧಾರಿತ ನೈಜ-ಸಮಯದ ಗ್ರಾಫಿಕ್ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಮಾಹಿತಿಯನ್ನು ದೃಶ್ಯೀಕರಿಸಲಾಗುತ್ತಿದೆ ಎಂದು ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹೇಳಿಕೊಂಡಿದೆ. ಈ ಲಿಂಕ್‌ಗೆ ಹೋಗಿ, ವೈರಸ್ ಹರಡುವಿಕೆಯ ಬಗ್ಗೆ ನೈಜ-ಸಮಯದ ಮಾಹಿತಿ ತೆಗೆದುಕೊಳ್ಳಬಹುದು. ಇದು ಜಗತ್ತಿನ ವಿವಿಧ ದೇಶಗಳಲ್ಲಿ ದೃಢಪಡಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ಹಾಗೂ ಸಾವುಗಳ ಬಗ್ಗೆಯೂ ಮಾಹಿತಿ ನೀಡುತ್ತದೆ. ಡ್ಯಾಶ್‌ಬೋರ್ಡ್ ಪ್ರಕಾರ, ಚೀನಾದಿಂದ 5970 ಪ್ರಕರಣಗಳು ದೃಢಪಟ್ಟಿವೆ.

ಭಾರತದ ಆರೋಗ್ಯ ಸಚಿವಾಲಯವು ಸಹ 24x7 ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ, ಇದು ಕೊರೋನಾ ವೈರಸ್‌ಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮುಂತಾದ ರೋಗಲಕ್ಷಣಗಳನ್ನು ಅನುಭವಿಸಿದರೆ, 2020ರ ಜನವರಿ 1 ರಿಂದ ಚೀನಾಕ್ಕೆ ಪ್ರಯಾಣಿಸಿದ ಎಲ್ಲ ಪ್ರಯಾಣಿಕರಿಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಸ್ವಯಂ ವರದಿ ಮಾಡಿಕೊಳ್ಳಬೇಕು ಎಂದು ಸಚಿವಾಲಯ ಮನವಿ ಮಾಡಿದೆ.

ಕೊರೋನಾ ವೈರಸ್‌ನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕೆಲವು ತಡೆಗಟ್ಟುವ ಕ್ರಮಗಳನ್ನು ಸಹ ಪ್ರಕಟಿಸಿದೆ. ಡಬ್ಲ್ಯೂಹೆಚ್‌ಒ ಪ್ರಕಾರ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಉಸಿರಾಟದ ತೊಂದರೆಗಳು ಕೊರೋನಾ ವೈರಸ್‌ನ ಲಕ್ಷಣಗಳಾಗಿವೆ. ಪ್ರಸ್ತುತ, ಈ ವೈರಸ್‌ನಿಂದ ರಕ್ಷಿಸಲು ಯಾವುದೇ ವಿಶ್ವಾಸಾರ್ಹ ಲಸಿಕೆ ಎಲ್ಲಿಯೂ ಲಭ್ಯವಿಲ್ಲ. ವೈದ್ಯರು ಆರೋಗ್ಯ ಅಧಿಕಾರಿಗಳು ಇದೀಗ ರೋಗಲಕ್ಷಣಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ವೈರಸ್‌ನ್ನು ಸುಲಭವಾಗಿ ಪತ್ತೆಹಚ್ಚುವ ಪರೀಕ್ಷೆಯಲ್ಲಿ ಮುಂದಾಗಿವೆ.

WHO ಒಂದಿಷ್ಟು ನಿಯಂತ್ರಣ ಕ್ರಮಗಳನ್ನು ಶಿಫಾರಸು ಮಾಡಿದ್ದು, ನಿಯಮಿತವಾಗಿ ಕೈ ತೊಳೆಯುವುದು, ಮಾಂಸ ಆಹಾರ ತ್ಯಜಿಸುವುದು ಮತ್ತು ಕೆಮ್ಮು, ಸೀನುವಾಗ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳಬೇಕು ಎಂದು ಸಲಹೆಗಳನ್ನು ನೀಡಿದೆ. ಕರೋನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದ್ದು, ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಸೋಂಕಿತ ಪ್ರಾಣಿಗಳಿಂದ ಈ ವೈರಸ್ ಹರಡಿದೆ ಎನ್ನಲಾಗಿದೆ.


Click it and Unblock the Notifications








