ನಿಮ್ಮ ಹತ್ತಿರದ COVID-19 ವ್ಯಾಕ್ಸಿನೇಷನ್ ಸೆಂಟರ್‌ ಅನ್ನು ಟ್ರ್ಯಾಕ್ ಮಾಡುವುದು ಹೇಗೆ?

|

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ರಾಕೆಟ್‌ ವೇಗದಲ್ಲಿ ಹರಡುತ್ತಿದೆ. ಇದರ ನಡುವೆ ಕೊರೊನಾ ವ್ಯಾಕ್ಸಿನೇಷನ್‌ ಅಭಿಯಾನ ಕೂಡ ನಡೆಯುತ್ತಿದೆ. ಆದರೂ ದೆಹಲಿ , ಮಹಾರಾಷ್ಟ್ರ, ಕೇರಳ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಬಿಗಾಡಯಿಸುತ್ತಿದೆ. ಎರಡನೇ ಅಲೆಯ ಸೋಂಕಿನ ಸರಪಳಿಯನ್ನು ಮುರಿಯಲು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೂ ಕೊವೀಡ್‌ ವ್ಯಾಕ್ಸಿನ್‌ ಲಸಿಕೆ ದಾಸ್ತಾನು ಕೊರತೆಯು ಹಲವಾರು ರಾಜ್ಯಗಳಲ್ಲಿ ಕಳವಳಕಾರಿಯಾಗಿದೆ.

ಕೊರೊನಾ

ಹೌದು, ಕೊರೊನಾ ಎರಡನೇ ಅಲೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಸದ್ಯ 45 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ COVID-19 ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದಾಗಿದೆ. ಇನ್ನು ಫಲಾನುಭವಿಗಳು ವಾಕ್ಸಿನ್ ಸೌಲಭ್ಯವನ್ನು ಆರಿಸಿಕೊಳ್ಳಬಹುದು ಅಥವಾ ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಆದರೆ ಕೊರೊನಾ ಎರಡನೇ ಅಲೆ ಪೀಡಿತ ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸುವ ಸಾಧ್ಯತೆಯಿರುವುದರಿಂದ, ನಿಮ್ಮ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಗುರುತಿಸುವುದು ಮುಖ್ಯವಾಗಿದೆ ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ಕೋವಿಡ್‌ ವ್ಯಾಕ್ಸಿನೇಷನ್‌ ಸೆಂಟರ್‌ ಅನ್ನು ಪತ್ತೆ ಹಚ್ಚುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಹತ್ತಿರದ COVID-19 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಟ್ರ್ಯಾಕ್ ಮಾಡುವುದು ಹೇಗೆ

ನಿಮ್ಮ ಹತ್ತಿರದ COVID-19 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಟ್ರ್ಯಾಕ್ ಮಾಡುವುದು ಹೇಗೆ

ನಿಮ್ಮ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಗೂಗಲ್‌ ಮ್ಯಾಪ್‌ ಮೂಲಕ ನೀವು ಹುಡುಕಲು ಬಯಸಿದರೆ, ನಿಮ್ಮ ಮೊಬೈಲ್ ಅಥವಾ ವೆಬ್ ಬ್ರೌಸರ್‌ನಲ್ಲಿ ಅಪ್ಲಿಕೇಶನ್ ತೆರೆಯಿರಿ.
ಸರ್ಚ್‌ ಬಾರ್‌ನಲ್ಲಿ COVID-19 ವ್ಯಾಕ್ಸಿನೇಷನ್ ಸೆಂಟರ್‌ ಟೈಪ್ ಮಾಡಿ. ಸರ್ಚ್‌ ಐಕಾನ್ ಮೇಲೆ ಟ್ಯಾಪ್ ಮಾಡಿ. ಒಮ್ಮೆ ಟ್ಯಾಪ್ ಮಾಡಿದ ನಂತರ, ನಿಮ್ಮ ಮನೆಯ ಸಮೀಪವಿರುವ COVID-19 ಲಸಿಕೆ ಕೇಂದ್ರಗಳನ್ನು ತೋರಿಸುವ ಫಲಿತಾಂಶಗಳು ಗೋಚರಿಸುತ್ತವೆ. ಅಪಾಯಿಂಟ್ಮೆಂಟ್ ಅಗತ್ಯವಿದ್ದರೆ ಅಥವಾ ಆಸ್ಪತ್ರೆ ಕೆಲವು ರೋಗಿಗಳಿಗೆ ಸೀಮಿತವಾಗಿದೆಯೆ ಎಂದು ನಿರ್ದಿಷ್ಟ ಕೇಂದ್ರ ಅಥವಾ ಆಸ್ಪತ್ರೆಯನ್ನು ಆಯ್ಕೆ ಮಾಡುತ್ತದೆ.

ಗೂಗಲ್‌

ಇನ್ನು ನೀವು ಗೂಗಲ್‌ ಸರ್ಚ್‌ ಅಥವಾ ಗೂಗಲ್‌ ಅಪ್ಲಿಕೇಶನ್ ಮೂಲಕ ಕೋವಿಡ್‌ ವ್ಯಾಕ್ಸಿನೇಷನ್‌ ಸೆಂಟರ್‌ ಹುಡುಕುವುದಾದರೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ಡೆಸ್ಕ್‌ಟಾಪ್ ಅಥವಾ ಗೂಗಲ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಸರ್ಚ್‌ ತೆರೆಯಿರಿ. ಸರ್ಚ್‌ನಲ್ಲಿ COVID-19 ವ್ಯಾಕ್ಸಿನೇಷನ್ ಕೇಂದ್ರವನ್ನು ನಮೂದಿಸಿ ಮತ್ತು ಸರ್ಚ್‌ ಬಟನ್‌ ಟ್ಯಾಪ್ ಮಾಡಿ. ನಿಮ್ಮ ಸ್ಥಳದಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಲು ನೀವು ಇನ್ನಷ್ಟು ಗುಂಡಿಯನ್ನು ಟ್ಯಾಪ್ ಮಾಡಬಹುದು.

MapMyIndia

ಇದಲ್ಲದೆ ದೇಶೀಯ MapMyIndia ಸೈಟ್ ಅಥವಾ MapMyIndiaMove ಅಪ್ಲಿಕೇಶನ್ ಮೂಲಕ ಸಹ ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಹುಡುಕಬಹುದು. ಈ ಅಪ್ಲಿಕೇಶನ್‌ನಲ್ಲಿ ಕೋವಿಡ್‌ ವ್ಯಾಕ್ಸಿನೇಷನ್‌ ಸೆಂಟರ್‌ ಹುಡುಕಲು ಹುಡುಕಲು, ನಿಮ್ಮ ಮೊಬೈಲ್‌ನಲ್ಲಿ MapMyIndiaMove ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ. ಅಪ್ಲಿಕೇಶನ್‌ ಮೇಲ್ಭಾಗದಲ್ಲಿರುವ ‘ಸರ್ಚ್‌' ಬಾರ್‌ನಲ್ಲಿ ನನ್ನ ಹತ್ತಿರವಿರುವ COVID ವ್ಯಾಕ್ಸಿನೇಷನ್ ಕೇಂದ್ರ ಎಂದು ಟೈಪ್ ಮಾಡಿ ಮತ್ತು ನಿಮ್ಮ ಸ್ಥಳದ ಸಮೀಪವಿರುವ ಕೇಂದ್ರಗಳ ಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.

ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಪಡೆದುಕೊಳ್ಳಲು ಅಗತ್ಯವಾದ ದಾಖಲೆಗಳು ಯಾವುವು?

ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಪಡೆದುಕೊಳ್ಳಲು ಅಗತ್ಯವಾದ ದಾಖಲೆಗಳು ಯಾವುವು?

ಇನ್ನು ಕೊರೊನಾ ಲಸಿಕೆ ಪಡೆಯಲು ಫಲಾನುಭವಿಗಳು ನೇರವಾಗಿ ಆಸ್ಪತ್ರೆಗಳಿಗೆ ಹೋಗಬಹುದು. ಆದರೂ ಸರದಿ ಸಾಲಿನ ತೊಂದರೆಯನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ನೋಂದಾಯಿಸಲು ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ವ್ಯಾಕ್ಸಿನ್‌ ಪಡೆದುಕೊಳ್ಳಲು ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನೀಡಿದ ಪಾಸ್‌ಬುಕ್, ಸರ್ಕಾರಿ ನೌಕರರಿಗೆ ನೀಡಲಾದ ಸೇವಾ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿ ಹೊಂದಿರಬೇಕಾದ ಅಗತ್ಯವಿದೆ.

Most Read Articles
Best Mobiles in India

Read more about:
English summary
How to track nearby COVID-19 vaccination centres.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X