ವಾಟ್ಸಾಪ್‌ ವಾಯ್ಸ್‌ ಮೆಸೇಜ್‌ ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ?

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಅನುಕೂಲವಾಗುವ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಕೆಲವು ಫೀಚರ್ಸ್‌ಗಳು ವಾಟ್ಸಾಪ್‌ ಬಳಸುವವರಿಗೆ ಪ್ರಮುಖ ಎನಿಸಿವೆ. ಇದರಲ್ಲಿ ವಾಟ್ಸಾಪ್‌ ವಾಯ್ಸ್‌ ನೋಟ್‌ ಸಾಕಷ್ಟು ಪ್ರಖ್ಯಾತಿ ಪಡೆದಿದೆ. ತ್ವರಿತವಾಗಿ ಸಂದೇಶವನ್ನು ಕಳುಹಿಸುವಾಗ ಟೆಕ್ಸ್ಟ್‌ ಟೈಪ್‌ ಮಾಡುವ ಬದಲು ವಾಯ್ಸ್‌ ನೋಟ್‌ ಕಳುಹಿಸುವುದು ಸೂಕ್ತವಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ವಾಯ್ಸ್‌ನೋಟ್‌ ಕಳುಹಿಸುವುದು ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಕೆಲಸದ ಒತ್ತಡ, ಸಮಯದ ಅಭಾವದ ಕಾರಣಕ್ಕೆ ಹೆಚ್ಚಿನ ಮಂದಿ ಪಠ್ಯ ಸಂದೇಶದ ಬದಲಿಗೆ ವಾಯ್ಸ್‌ ನೋಟ್‌ ಕಳುಹಿಸುವುದಕ್ಕೆ ಮುಂದಾಗುತ್ತಾರೆ. ಶಾರ್ಟ್‌ ಆಡಿಯೊ ಕ್ಲಿಪ್‌ಗಳನ್ನು ಸೆಂಡ್‌ ಮಾಡುವ ಮೂಲಕ ನೀವು ಏನು ಹೇಳಬೇಕೋ ಅದನ್ನು ಹೇಳಬಹುದಾಗಿದೆ. ಆದರೆ ಕೆಲವು ಅಗತ್ಯ ಸಂದರ್ಭದಲ್ಲಿ ನಿಮಗೆ ಬೇರೆಯವರು ಕಳುಹಿಸಿರುವ ವಾಯ್ಸ್‌ ನೋಟ್‌ ಅನ್ನು ಕೇಳಲು ಸಾದ್ಯವಾಗದಿರಬಹುದು. ಇಂತಹ ಸನ್ನಿವೇಶದಲ್ಲಿ ವಾಯ್ಸ್‌ ನೋಟ್‌ ಅನ್ನು ಟ್ರಾನ್ಸ್ಕ್ರಿಬ್ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ವಾಯ್ಸ್‌

ಪಠ್ಯವನ್ನು ಟೈಪ್‌ ಮಾಡಿ ಸಂದೇಶ ಕಳುಹಿಸುವುದಕ್ಕಿಂತ ವಾಯ್ಸ್‌ ನೋಟ್‌ ಸಂದೇಶ ತುಂಬಾನೆ ಸುಲಭ. ಆದರೆ ಕೆಲವು ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ನಿಮಗೆ ಕಳುಹಿಸಿರುವ ವಾಯ್ಸ್‌ ನೋಟ್‌ ಅನ್ನು ಕೇಳಲು ಆಗದಿರಬಹುದು. ಸಾರ್ವಜನಿಕ ಸ್ಥಳದಲ್ಲಿರುವಾ ಹೆಡ್‌ಫೋನ್‌ ಇಲ್ಲದೆ ವಾಯ್ಸ್‌ ನೋಟ್‌ ಕೇಳಲು ಅಸಾಧ್ಯವಾಗಬಹುದು. ಇಂತಹ ಸನ್ನಿವೇಶದಲ್ಲಿ ನೀವು ನಿಮ್ಮ ಸ್ನೇಹಿತನ ವಾಯ್ಸ್‌ ನೋಟ್‌ ಸಂದೇಶದಲ್ಲಿ ಏನಿದೆ ಅನ್ನೊದನ್ನ ತಿಳಿಯಬಹುದು. ಇದಕ್ಕಾಗಿ ನೀವು ನಿಮಗೆ ಬಂದಿರುವ ವಾಯ್ಸ್‌ ನೋಟ್‌ ಅನ್ನು ಟ್ರಾನ್ಸ್ಕ್ರಿಬ್ ಮೂಲಕ ಅದರಲ್ಲಿ ಏನಿದೆ ಎಂಬ ಸಾರಾಂಶವನ್ನು ತಿಳಿದುಕೊಳ್ಳಬಹುದಾಗಿದೆ.

ವಾಯ್ಸ್‌ನೋಟ್‌

ವಾಟ್ಸಾಪ್‌ನಲ್ಲಿ ವಾಯ್ಸ್‌ನೋಟ್‌ ಅನ್ನು ಲಿಪ್ಯಂತರ ಮಾಡುವ ಫೀಚರ್ಸ್‌ ಇಲ್ಲ. ಆದರೆ ಇದಕ್ಕಾಗಿ ನೀವು ಥರ್ಡ್‌ ಪಾರ್ಟಿ್‌ ಅಪ್ಲಿಕೇಶನ್‌ ಬಳಸಬಹುದಾಗಿದೆ.ವಾಟ್ಸಾಪ್‌ನಲ್ಲಿ ವಾಯ್ಸ್‌ನೋಟ್‌ ಅನ್ನು ಟ್ರಾನ್ಸ್ಕ್ರಿಬ್ ಮಾಡೋದಕ್ಕೆ ಟ್ರಾನ್ಸ್‌ಕ್ರೈಬರ್ ಅಪ್ಲಿಕೇಶನ್‌ ಸಹಾಯ ಪಡೆದುಕೊಳ್ಳಬಹುದಾಗಿದೆ. ಸದ್ಯ ಈ ಅಪ್ಲಿಕೇಶನ್ ಪ್ರಸ್ತುತ ಬೀಟಾದಲ್ಲಿದೆ ಆದರೆ ಅನೇಕ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾದ್ರೆ ಟ್ರಾನ್ಸ್‌ಕ್ರೈಬರ್ ಮೂಲಕ ವಾಟ್ಸಾಪ್‌ ವಾಯ್ಸ್‌ನೋಟ್‌ ಟ್ರಾನ್‌ಸ್ಕ್ರಿಬ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ವಾಟ್ಸಾಪ್‌ ವಾಯ್ಸ್‌ನೋಟ್‌ ಅನ್ನು ಟ್ರಾನ್ಸ್‌ಸ್ಕ್ರಿಬ್‌ ಮಾಡುವುದು ಹೇಗೆ?

ವಾಟ್ಸಾಪ್‌ ವಾಯ್ಸ್‌ನೋಟ್‌ ಅನ್ನು ಟ್ರಾನ್ಸ್‌ಸ್ಕ್ರಿಬ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ 'ವಾಟ್ಸಾಪ್‌ ಗಾಗಿ ಟ್ರಾನ್ಸ್‌ಕ್ರೈಬರ್' ಇನ್‌ಸ್ಟಾಲ್‌ ಮಾಡಿ.
ಹಂತ:2 ನಂತರ ವಾಟ್ಸಾಪ್‌ ವಾಯ್ಸ್‌ ನೋಟ್‌ ಅನ್ನು ಅಪ್ಲಿಕೇಶನ್‌ಗೆ ಶೇರ್‌ಮಾಡಿ
ಹಂತ:3 ಇದೀಗ ನಿಮ್ಮ ವಾಯ್ಸ್‌ ನೋಟ್‌ ಅನ್ನು ಲಿಪ್ಯಂತರ ಮಾಡಲು 'WhatsApp ಗಾಗಿ ಟ್ರಾನ್ಸ್‌ಕ್ರೈಬರ್' ಆಯ್ಕೆಮಾಡಿ
ಹಂತ:4 WhatsApp ಅಪ್ಲಿಕೇಶನ್ ಐಕಾನ್‌ಗಾಗಿ ಟ್ರಾನ್ಸ್‌ಕ್ರೈಬರ್ ನಲ್ಲಿ ಸರ್ಚ್‌ ಮಾಡಿ. ಇದರಲ್ಲಿ ಅಪ್ಲಿಕೇಶನ್ ಇಂಟರ್ಫೇಸ್ ತೆರೆಯಲು ಅದರ ಮೇಲೆ ಕ್ಲಿಕ್ ಮಾಡಿ.
ಹಂತ:5 ಇದರಲ್ಲಿ ನಿಮಗೆ 'ಲಿಪ್ಯಂತರ' ಆಯ್ಕೆಮಾಡಿ ಎಂಬ ಆಯ್ಕೆಕಾಣಲಿದೆ ಅದನ್ನು ಟ್ಯಾಪ್‌ ಮಾಡಿ
ಹಂತ:6 ಈಗ ನಿಮ್ಮ ವಾಯ್ಸ್‌ ನೋಟ್‌ ಟ್ರಾನ್‌ಸ್ಕ್ರಿಬ್‌ ಆಗುಲ ಕೆಲವು ಸೆಕೆಂಡುಗಳ ಕಾಲ ಕಾಯಿರಿ.

ಇದೆಲ್ಲವೂ ಮುಗಿದ ನಂತರ ನಿಮ್ಮ ವಾಯ್ಸ್‌ ನೋಟ್‌ ಲಿಪ್ಯಂತರವಾಗಲಿದೆ. ಇದರಲ್ಲಿ ಟ್ರಾನ್‌ಸ್ಕ್ರಿಬ್‌ ಟೆಕ್ಸ್ಟ್‌ ಅನ್ನು ಕಾಪಿ ಮಾಡಬಹುದು. ಈ ಮೂಲಕ ನಿಮ್ಮ ಗೆಳೆಯ ಅಥವಾ ಕುಟುಂಬಸ್ಥರು ನಿಮಗೆ ಕಳುಹಿಸಿರುವ ವಾಯ್ಸ್‌ನೋಟ್‌ನಲ್ಲಿ ಏನಿದೆ ಅನ್ನೊದನ್ನ ಟೆಕ್ಸ್ಟ್‌ ರೂಪದಲ್ಲಿ ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಸಂಸ್ಥೆಯು ಶೀಘ್ರದಲ್ಲೇ ಬಳಕೆದಾರರಿಗೆ ನಿರ್ದಿಷ್ಟ ಸಂಪರ್ಕ (specific contact) ಸಂಖ್ಯೆಗೆ ಲಾಸ್ಟ್‌ ಸೀನ್ ಕಾಣದಂತೆ ಮಾಡುವ ಆಯ್ಕೆ ಅಳವಡಿಸಲು ಸಜ್ಜಾಗಿದೆ ಎಂದು WABetaInfo ವರದಿ ಮಾಡಿದೆ. ಸದ್ಯ ವಾಟ್ಸಾಪ್‌ನಲ್ಲಿ ಲಾಸ್ಟ್‌ ಸೀನ್ ಮರೆಮಾಡಲು ಅನುಮತಿಸುವ ಅವಕಾಶ ಇದ್ದು, ಎಲ್ಲರೂ, ನನ್ನ ಸಂಪರ್ಕಗಳು ಹಾಗೂ ಯಾರೂ ಇಲ್ಲ ಎನ್ನುವ ಮೂರು ಆಯ್ಕೆಗಳನ್ನು ಇದು ಹೊಂದಿದೆ. ಆದ್ರೆ ಬರಲಿರುವ ಹೊಸ ಆಯ್ಕೆಯು ನಿರ್ದಿಷ್ಟ ಸಂಪರ್ಕಗಳಿಗೆ ಮಾತ್ರ ಮರೆಮಾಡುವ ಆಯ್ಕೆ ಇರಲಿದೆ.ಬಳಕೆದಾರರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ನಿರ್ದಿಷ್ಟ ಸಂಪರ್ಕಕ್ಕೆ ಲಾಸ್ಟ್‌ ಸೀನ್ ಮರೆಮಾಡುವ ಆಯ್ಕೆ ಸದ್ಯ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇತರ ಫೀಚರ್ಸ್‌ಗಳಂತೆ, ವಾಟ್ಸಾಪ್ ಬೀಟಾ ಬಳಕೆದಾರರಿಗೆ ಈ ಫೀಚರ್ ಬಿಡುಗಡೆ ಮಾಡಲಿದೆ ಎಂದು ನಾವು ನಿರೀಕ್ಷಿಸಬಹುದು.

ವಾಟ್ಸಾಪ್‌ಗೆ ಬರುವ Important ಮೆಸೆಜ್ ಅನ್ನು ಸೇವ್ ಮಾಡುವುದು ಹೇಗೆ ಗೊತ್ತಾ?

ವಾಟ್ಸಾಪ್‌ಗೆ ಬರುವ Important ಮೆಸೆಜ್ ಅನ್ನು ಸೇವ್ ಮಾಡುವುದು ಹೇಗೆ ಗೊತ್ತಾ?

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್, ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿದೆ. ವಿಡಿಯೋ ಕರೆ, ವಾಯಿಸ್‌ ಮೆಸೆಜ್‌ ಸೇರಿದಂತೆ ಹಲವು ಸೇವೆಗಳಲ್ಲಿ ಅಪ್‌ಡೇಟ್‌ ಆಗಿದೆ. ಹಾಗೆಯೇ ಇಂಪಾರ್ಟೆಂಟ್ ಮೆಸೆಜ್‌ಗಳನ್ನು ಸೇವ್ ಮಾಡಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಬರುವ ಅನೇಕ ಮೆಸೆಜ್‌ಗಳಲ್ಲಿ ಕೆಲವೊಂದು ಅತೀ ಮುಖ್ಯವಾದ ಮೆಸೆಜ್ ಆಗಿರುತ್ತವೆ. ಕೆಲವೊಮ್ಮೆ ಅವು ಮತ್ತೆ ಬೇಕಾಗಬಹುದಾದ ಸಂದರ್ಭಗಳು ಇರುತ್ತವೆ. ಅಂತಹ ವೇಳೆ ಥಟ್‌ ಅಂತಾ ಮೆಸೆಜ್ ತೆರೆಯಬಹುದು.

ವಾಟ್ಸಾಪ್‌ನಲ್ಲಿ ಅತೀ ಮುಖ್ಯವಾದ ಮೆಸೆಜ್‌ಗೆ ಸ್ಟಾರ್‌ ಮಾರ್ಕ್ ಮಾಡಲು ಹೀಗೆ ಮಾಡಿರಿ

ವಾಟ್ಸಾಪ್‌ನಲ್ಲಿ ಅತೀ ಮುಖ್ಯವಾದ ಮೆಸೆಜ್‌ಗೆ ಸ್ಟಾರ್‌ ಮಾರ್ಕ್ ಮಾಡಲು ಹೀಗೆ ಮಾಡಿರಿ

* ವಾಟ್ಸಾಪ್‌ನಲ್ಲಿ, ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಿರಿ.
* ಅದರ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು.
* ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಗುರುತಿಸುತ್ತೀರಿ.
* ಈ ಸಂದೇಶವನ್ನು ಬುಕ್‌ಮಾರ್ಕ್ ಮಾಡಲು ಸ್ಟಾರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

Best Mobiles in India

English summary
WhatsApp Voice Notes: Here's how you can transcribe WhatsApp voice notes easily in a few steps.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X