Instagram ನಲ್ಲಿ ವ್ಯಾನಿಶ್ ಮೋಡ್ ಅನ್ನು ಆನ್ ಮತ್ತು ಆಫ್ ಮಾಡುವುದು ಹೇಗೆ?
ಇನ್‌ಸ್ಟಾಗ್ರಾಮ್‌ನ ಜನಪ್ರಿಯ ಪೋಟೋ ಶೇರಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ. ಬಳಕೆದಾರರಿಎ ಹಲವು ಅನುಕೂಲಕರ ಫಿಚರ್ಸ್‌ಗಳನ್ನ ಪರಿಚಯಿಸಿರುವ ಇನ್‌ಸ್ಟಾಗ್ರಾಮ್ ಇತ್ತೀಚಿಗಷ್ಟೇ ನವೀಕರಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್ ಚಾಟ್‌ಗಳ ವ್ಯಾನಿಶ್ ಮೋಡ್ ಫೀಚರ್ಸ್ ಪರಿಚಯಿಸಿಉತ್ತು. ಸದ್ಯ ಇದೀಗ ವ್ಯಾನಿಶ್ ಮೋಡ್ ಫೀಚರ್ಸ್ ಬಳಕೆದಾರರಿಗೆ ಲಬ್ಯವಿದೆ. ಈ ಫೀಚರ್ಸ್ ನಿಮ್ಮ ಇನ್‌ಸ್ಟಾಗ್ರಾಮ್ ಚಾಟ್‌ನ ಸಂದೇಶಗಳನ್ನು ನೀವು ನೋಡಿದ ನಂತರ ಕಣ್ಮರೆಯಾಗುವಂತೆ ಮಾಡುತ್ತದೆ ಮತ್ತು ಕಣ್ಮರೆಯಾಗುವ ಮೋಡ್ ಆನ್ ಆಗಿದ್ದರೆ ಚಾಟ್‌ನಿಂದ ನಿರ್ಗಮಿಸುತ್ತದೆ.

ಹೌದು, ಇನ್‌ಸ್ಟಾಗ್ರಾಮ್ ಪರಿಚಯಿಸಿರುವ ವ್ಯಾನಿಶ್ ಮೋಡ್ ನಿಮ್ಮ ಇನ್‌ಸ್ಟಾಗ್ರಾಮ್‌ನಲ್ಲಿರುವ ಸಂದೇಶವನ್ನು ಕಣ್ಮರೆಯಾಗುವಂತೆ ಮಾಡಲಿದೆ. ನೀವು ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಸಂದೇಶವನ್ನು ಪರಿಶೀಲಿಸಿದರೆ, ಅದರ ಕೆಳಭಾಗದಲ್ಲಿ "ವ್ಯಾನಿಶ್ ಮೋಡ್ ಅನ್ನು ಆನ್ ಮಾಡಲು ಸ್ವೈಪ್ ಮಾಡಿ" ಎಂಬ ಸೂಚನೆಯನ್ನು ನೀವು ನೋಡುತ್ತೀರಿ. ಇದನ್ನು ಆನ್ ಮಾಡಿದರೆ ನಿಮ್ಮ ಸಂದೇಶಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗಿ ಬಿಡುತ್ತವೆ. ಆಪ್ ಮಾಡಿದರೆ ಎಂದಿನಂತೆ ಉಳಿದುಕೊಳ್ಳಲಿವೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾನಿಶ್ ಮೋಡ್ ಅನ್ನು ಆನ್ ಮತ್ತು ಅಫ್ ಮಾಡುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ನೀವು ವ್ಯಾನಿಶ್ ಮೋಡ್ ಅನ್ನು ಆನ್ ಮಾಡುವುದು ಹೇಗೆ
ನೀವು ಈಗಾಗಲೇ ಇನ್‌ಸ್ಟಾಗ್ರಾಮ್ ಬಳಕೆದಾರರಾಗಿದ್ದರೆ, ಮೊದಲು ನೀವು ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಬೇಕು ಮತ್ತು ನಿಮ್ಮ ಅಪ್ಲಿಕೇಶನ್ ಅನ್ನು ಇನ್‌ಸ್ಟಾಗ್ರಾಮ್‌ನ ಇತ್ತೀಚಿನ ಆವೃತ್ತಿಗೆ ಆಪ್ಡೇಟ್ ಮಾಡಿ. ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಇನ್‌ಸ್ಟಾಗ್ರಾಮ್ ತೆರೆಯಿರಿ ಮತ್ತು ನೀವು ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಲು ಬಯಸುವ ಚಾಟ್ ಅನ್ನು ತೆರೆಯಿರಿ.
ಹಂತ:2 ಚಾಟ್‌ನ ಕೊನೆಯಲ್ಲಿ ನೀವು "ವ್ಯಾನಿಶ್ ಮೋಡ್ ಅನ್ನು ಆನ್ ಮಾಡಲು ಸ್ವೈಪ್ ಮಾಡಿ" ಅನ್ನೊದನ್ನು ನೋಡುತ್ತೀರಿ.
ಹಂತ:3 ನಂತರ ವ್ಯಾನಿಶ್ ಮೋಡ್ ಅನ್ನು ಮೇಲಕ್ಕೆ ಎಳೆಯಿರಿ. ಇದೀಗ ಸಕ್ರಿಯಗೊಳ್ಳುತ್ತದೆ.
ಈ ಮೂಲಕ ವ್ಯಾನಿಶ್ ಮೋಡ್ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಇದು ನೀವು ಚಾಟ್‌ನಿಂದ ನಿರ್ಗಮಿಸಿದ ನಂತರ ಎಲ್ಲಾ ಓದಿದ ಸಂದೇಶಗಳು ಕಣ್ಮರೆಯಾಗುವಂತೆ ಮಾಡುತ್ತದೆ. ನೀವು ಸಕ್ರಿಯಗೊಳಿಸಿದ ಚಾಟ್‌ಗೆ ಹಿಂತಿರುಗಿದರೆ ಹಳೆಯ ಚಾಟ್‌ಗಳು ಅಥವಾ ಮಿಡೀಯಾ ಅಥವಾ ವೀಡಿಯೊಗಳನ್ನು ಸಹ ನೀವು ನೋಡಲು ಸಾಧ್ಯವಾಗುವುದಿಲ್ಲ.

ನೀವು ವ್ಯಾನಿಶ್ ಮೋಡ್ ಅನ್ನು ಆಫ್ ಮಾಡುವುದು ಹೇಗೆ
ಹಂತ:1 ವ್ಯಾನಿಶ್ ಮೋಡ್ ಆನ್ ಆಗಿರುವ ಚಾಟ್‌ಗೆ ಹೋಗಿ.
ಹಂತ:2 ಈಗ, ವ್ಯಾನಿಶ್ ಮೋಡ್ ಅನ್ನು ಆಫ್ ಮಾಡಲು ಚಾಟ್‌ನ ಕೆಳಗಿನಿಂದ ಸ್ವೈಪ್ ಮಾಡಿ.
ಹಂತ:3 ಚಾಟ್ ವಿಂಡೋದ ಮೇಲಿರುವ ಟರ್ನ್ ಆಫ್ ವ್ಯಾನಿಶ್ ಮೋಡ್ ಫೀಚರ್ಸ್ ಅನ್ನು ಸಹ ನೀವು ಟ್ಯಾಪ್ ಮಾಡಬಹುದು.

ನೀವು ಮೂಲತಃ ಚಾಟ್‌ನಲ್ಲಿ ಎರಡು ವಿಧಾನಗಳ ನಡುವೆ ಟಾಗಲ್ ಮಾಡಬಹುದು. ನೀವು ಅದನ್ನು ಕೆಲವು ಸಂದೇಶಗಳು ಅಥವಾ ಫೋಟೋಗಳಿಗಾಗಿ ಆನ್ ಮಾಡಬಹುದು, ಅದು ಅವುಗಳನ್ನು ಓದಿದ / ನೋಡಿದ ಕ್ಷಣವೇ ಕಣ್ಮರೆಯಾಗುತ್ತದೆ. ನಂತರ ನೀವು ಅದನ್ನು ಮತ್ತೆ ಟರ್ನ್ ಮಾಡಬಹುದು ಮತ್ತು ಕಣ್ಮರೆಯಾಗದ ನಿಮ್ಮ ಸಾಮಾನ್ಯ ಚಾಟ್ ಅನ್ನು ಮುಂದುವರಿಸಬಹುದು. ನೀವು ಸಂಪರ್ಕ ಹೊಂದಿದ ಜನರು ಮಾತ್ರ ನಿಮ್ಮೊಂದಿಗೆ ಚಾಟ್‌ನಲ್ಲಿ ಕಣ್ಮರೆಯಾಗಬಹುದು. ಇನ್ನು ವ್ಯಾನಿಶ್ ಮೋಡ್ ಸಹ ಆಪ್ಟ್-ಇನ್ ಆಗಿದೆ, ಆದ್ದರಿಂದ ನೀವು ಯಾರೊಂದಿಗಾದರೂ ವ್ಯಾನಿಶ್ ಮೋಡ್ ಅನ್ನು ನಮೂದಿಸಬೇಕೆ ಎಂದು ಆರಿಸಿಕೊಳ್ಳಿ. ನೀವು ವ್ಯಾನಿಶ್ ಮೋಡ್ ಬಳಸುತ್ತಿರುವಾಗ ಯಾರಾದರೂ ನಿಮ್ಮ ಚಾಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡರೆ, ನಿಮಗೆ ಸೂಚಿಸಲಾಗುತ್ತದೆ. ಹಾಗೆಯೇ ನೀವು ಯಾರನ್ನಾದರೂ ನಿರ್ಬಂಧಿಸಬಹುದು ಮತ್ತು ನಿಮಗೆ ಅಸುರಕ್ಷಿತವೆಂದು ಭಾವಿಸಿದರೆ ಸಂಭಾಷಣೆಯನ್ನು ವರದಿ ಮಾಡಬಹುದಾಗಿದೆ.


Click it and Unblock the Notifications