ಸ್ಮಾರ್ಟ್‌ಫೋನ್‌ಗಳಲ್ಲಿ ಜಾಹಿರಾತು ಟ್ರ್ಯಾಕಿಂಗ್‌ ಅನ್ನು ನಿರ್ಬಂಧಿಸುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳಲ್ಲಿಯೂ ಸಹ ಜಾಹಿರಾತುಗಳನ್ನ ನಾವು ಕಾಣಬಹುದಾಗಿದೆ. ಯಾವುದೇ ಅಪ್ಲಿಕೇಶನ್‌ ತೆರೆದೂ ಸಣ್ಣದೊಂದು ಜಾಹಿರಾತು ಅಲ್ಲಿ ನಿಮಗೆ ಕಾಣಸಿಗುತ್ತದೆ. ಅಂತಹ ಜಾಹಿರಾತನ್ನು ನಿವು ಒಮ್ಮೆ ಕ್ಲಿಕ್‌ ಮಾಡಿದರೆ ಸಾಕು ನಂತರದ ಹಂತಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ತುಂಬ ಇದೇ ರೀತಿಯ ಜಾಹಿರಾತುಗಳು ತುಂಬಿರುತ್ತವೆ. ಇದು ಕೆಲವೊಮ್ಮೆ ನಿಮ್ಮ ತಾಳ್ಮೆಯನ್ನು ಕೆಡಿಸಿಬಿಡುತ್ತದೆ. ಆದರೆ ಇದಕ್ಕೆಲ್ಲಾ ಕಾರಣ ಏನು ಗೊತ್ತಾ? ಅದುವೇ ಲೊಕೇಶನ್‌ ಟ್ರ್ಯಾಕಿಂಗ್‌. ಇದನ್ನು ಜಾಹಿರಾತುದಾರರು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಅಪ್ಲಿಕೇಶನ್‌

ಹೌದು, ನೀವು ಯಾವುದೇ ಅಪ್ಲಿಕೇಶನ್‌ನಲ್ಲಿ ಜಾಹೀರಾತನ್ನು ತೆರೆದರೆ, ಮುಂದಿನ ಕ್ಷಣದಲ್ಲಿ ನಿಮ್ಮ ಡಿಸ್‌ಪ್ಲೇ ಇದೇ ರೀತಿಯ ಜಾಹೀರಾತುಗಳಿಂದ ತುಂಬಿರುತ್ತದೆ. ಇದರ ಹಿಂದಿನ ಪ್ರಮುಖ ಕಾರಣ ಲೊಕೇಶನ್‌ ಟ್ರ್ಯಾಕಿಂಗ್, ಇದು ಸ್ಥಳಗಳನ್ನು ಹುಡುಕಲು ಅನುಕೂಲಕರವಾಗಿ ಕಾಣಿಸಬಹುದು. ಆದರೆ ಇದು ಟೆಕ್ ದೈತ್ಯರು ನಿಮಗೆ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತದೆ. ವೆಬ್ ಬಳಕೆದಾರರು ಇನ್ನೂ ಅನಗತ್ಯ ಮಾರ್ಕೆಟಿಂಗ್ ಪಾಪ್-ಅಪ್‌ ಜಾಹಿರಾತುಗಳಿಂದ ಹೈರಾಣಗಿದ್ದರೆ, ಈ ಸಮಸ್ಯೆಯನ್ನು ಪರಿಹರಿಸಲು ಸುಲಭ ದಾರಿ ಇದೆ. ಅದು ಏನು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ನಿಮ್ಮ ಫೋನ್‌ನ ಲೊಕೇಶನ್‌ ಸೆಟ್ಟಿಂಗ್‌ಗಳಲ್ಲಿ ಬದಲಾವಣೆಗಳನ್ನು ಮಾಡಿ!

ನಿಮ್ಮ ಫೋನ್‌ನ ಲೊಕೇಶನ್‌ ಸೆಟ್ಟಿಂಗ್‌ಗಳಲ್ಲಿ ಬದಲಾವಣೆಗಳನ್ನು ಮಾಡಿ!

ನಿಮ್ಮ ದಿನನಿತ್ಯದ ಆಕ್ಟಿವಿಟಿಗಳನ್ನು ಟ್ರ್ಯಾಕ್ ಮಾಡುವುದನ್ನು ಐಒಎಸ್ ಅಥವಾ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ತಡೆಯಲು, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸ್ವಲ್ಫ ಬದಲಾಯಿಸಿ. ಹಾಗಾದ್ರೆ ನೀವು ನಿಮ್ಮ Android ಡಿವೈಸ್‌ನಲ್ಲಿ ಲೊಕೇಶನ್‌ ಅನ್ನು ಆಫ್ ಮಾಡಲು ನೀವು ಏನು ಮಾಡಬೇಕು ಅನ್ನೊದನ್ನ ಇಲ್ಲಿ ತಿಳಿಯಿರಿ.
ಹಂತ:1 ಮೊದಲು, ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಮೆನು ತೆರೆಯಿರಿ.
ಹಂತ:2 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ:3 ಕೆಳಕ್ಕೆ ಸ್ಕ್ರೋಲ್ ಮಾಡುವಾಗ ನೀವು ‘ಗೂಗಲ್ ಲೊಕೇಶನ್‌ ಸೆಟ್ಟಿಂಗ್ಸ್‌' ಅನ್ನು ಕಾಣಬಹುದು
ಹಂತ:4 "ಲೊಕೇಶನ್‌ ರಿಪೋರ್ಟಿಂಗ್‌" ಮತ್ತು "ಲೊಕೇಶನ್‌ ಹಿಸ್ಟರಿ" ಒತ್ತಿ ಮತ್ತು ಸ್ಲೈಡರ್ ಅನ್ನು ಆಫ್ ಮಾಡಿ
ಹಂತ:5 ಲೊಕೇಶನ್‌ ಹಿಸ್ಟರಿ ಅಡಿಯಲ್ಲಿ "ಲೊಕೇಶನ್‌ ಹಿಸ್ಟರಿ ಡಿಲಿಟ್‌" ಇದೆ, ಇದು ಡಿವೈಸ್‌ನ ಲೊಕೇಶನ್‌ ಸ್ಟೋರೇಜ್‌ ಅನ್ನು ಡಿಲೀಟ್‌ ಮಾಡಲಿದೆ.

ಆಪಲ್ ಡಿವೈಸ್‌ನಲ್ಲಿ ಲೊಕೇಶನ್‌ ಸೆಟ್ಟಿಂಗ್ಸ್‌ ಅನ್ನು ಸ್ಟಾಫ್ ಮಾಡುವುದು ಹೇಗೆ?

ಆಪಲ್ ಡಿವೈಸ್‌ನಲ್ಲಿ ಲೊಕೇಶನ್‌ ಸೆಟ್ಟಿಂಗ್ಸ್‌ ಅನ್ನು ಸ್ಟಾಫ್ ಮಾಡುವುದು ಹೇಗೆ?

ಹಂತ:1 ಡಿವೈಸ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ ಮತ್ತು ಗೌಪ್ಯತೆಗೆ ಹೋಗಿ
ಹಂತ:2 ನಂತರ ಲೊಕೇಶನ್‌ ಸರ್ವಿಸ್‌ ಅನ್ನು ಆಯ್ಕೆಮಾಡಿ
ಹಂತ:3 ಕೆಳಗೆ ಸ್ಕ್ರೋಲ್ ಮಾಡುವಾಗ ನೀವು ‘ಸಿಸ್ಟಮ್ ಸರ್ವಿಸ್‌' ಅನ್ನು ಕಾಣಬಹುದು
ಹಂತ:4 ಮಹತ್ವದ ಲೊಕೇಶನ್‌ಗಳನ್ನು ಆಫ್ ಮಾಡಿ ಮತ್ತು ‘ಲಾಗ್ ಇನ್ ರೆಕಾರ್ಡ್' ಅನ್ನು ಡಿಲೀಟ್‌ ಮಾಡಲು ಕ್ಲಿಯರ್‌ ಹಿಸ್ಟರಿಯನ್ನು ಟ್ಯಾಪ್ ಮಾಡಿ

ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಜಾಹೀರಾತು ಟ್ರ್ಯಾಕಿಂಗ್ ಅನ್ನು ಮಿತಿಗೊಳಿಸುವುದು ಹೇಗೆ?

ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಜಾಹೀರಾತು ಟ್ರ್ಯಾಕಿಂಗ್ ಅನ್ನು ಮಿತಿಗೊಳಿಸುವುದು ಹೇಗೆ?

ನೀವು ಆಪಲ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಜಾಹೀರಾತು ಟ್ರ್ಯಾಕಿಂಗ್ ಅನ್ನು ಮಿತಿಗೊಳಿಸಬಹುದು. Android ಪ್ಲಾಟ್‌ಫಾರ್ಮ್‌ಗಾಗಿ- Settings > Google > Ads > Toggle on "Opt out of ads personalizationಗೆ ಟಾಗಲ್ ಮಾಡಿ. ಐಒಎಸ್ ಬಳಕೆದಾರರುSettings > Privacy > Advertising > Toggle "Limit Ad Tracking" ಆನ್‌ಗೆ ಟಾಗಲ್ ಮಾಡಿ.

Most Read Articles
Best Mobiles in India

English summary
In case you are annoyed with unwanted ads flooding your screen here are a few simple steps you can follow to limit ad tracking on your mobile.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X