ಬ್ಲೂಟೂತ್ ಮೂಲಕ ಡೇಟಾ ಕಳುಹಿಸುವುದು ಹೇಗೆ?

ಬ್ಲೂಟೂತ್ ಕುರಿತಾಗಿ ಬಹುತೇಕ ಎಲ್ಲರಿಗೂ ತಿಳಿದಿಯೇ ಇರುತ್ತದೆ. ಲ್ಯಾಪ್‌ಟಾಪ್, ಮೊಬೈಲ್ ಫೋನ್ಸ್, ಟ್ಯಾಬ್ಲೆಟ್ ಸೇರಿದಂತೆ ಇಂದು ಹಲವು ತಾಂತ್ರಕ ಸರಕುಗಳಲ್ಲಿ ಬ್ಲೂಟೂತ್‌ನ ಬಳಕೆ ಮಾಡಲಾಗುತ್ತಿದೆ. ಹೀಗಿದ್ದರೂ ಕೂಡಾ ಹೊಸದಾಗಿ ಕೊಂಡಂತಹ ಮೊಬೈಲ್ ಫೋನ್‌ನಲ್ಲಿ ನೀಡಲಾಗಿರುವ ಫೀಚರ್ಸ್‌ಗಳನ್ನು ಅಷ್ಟು ಸುಲಭವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಅಂದಹಾಗೆ ಮೊಬೈಲ್ ಫೋನ್‌ಗಳಲ್ಲಿ ಬ್ಲೂಟೂತ್ ಸುಲಭವಾಗಿ ಚಾಲನೆ ಗೊಳಿಸಬಹುದಾಗಿದೆ ಆದರೆ ನೀವು ಮೊದಲ ಬಾರಿಗೆ ಬ್ಲೂಟೂತ್ ಬಳಕೆ ಮಾಡುತ್ತಿದ್ದಲ್ಲಿ ಸಾಮಾನ್ಯವಾಗಿ ನಿಮಗೆ ಕೊಂಚ ಗೊಂದಲಗಳು ಎದುರಾಗುತ್ತವೆ. ಅದಕ್ಕಾಗಿಯೇ ಗಿಜ್ಬಾಟ್ ಇಂದು ನಿಮಗಾಗಿ ಬ್ಲೂಟೂತ್ ಚಾಲನೆ ಗೊಳಿಸುವ ಸುಲಭ ವಿಧಾನವನ್ನು ತಂದಿದೆ ಒಮ್ಮೆ ಓದಿ ನೋಡಿ.
ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಬ್ಲೂಟೂತ್ ಚಾಲನೆ ಗೊಳಿಸಿ ಸುಲಭ ರೀತಿಯಲ್ಲಿ ಡೇಟಾ ಟ್ರಾನ್ಸಫರ್ ಮಾಡಬಹುದಾಗಿದೆ.
- ಮೊದಲಿಗೆ ನಿಮ್ಮ ಫೋನ್‌ನ ಮೆನ್ಯುಗೆ ತೆರಳಿ ಸೆಟ್ಟಿಂಗ್ಸ್ ಆಪ್ಷನ್ ಕ್ಲಿಕ್ ಮಾಡಿ.
- ಸೆಟ್ಟಿಂಗ್ಸ್ ಆಪ್ಷನ್‌ನಲ್ಲಿ ಕನೆಕ್ಟಿವಿಟಿ ಆಪ್ಷನ್ ನೀಡಲಾಗಿರುತ್ತದೆ ಅದನ್ನು ಕ್ಲಿಕ್ ಮಾಡಿ.
- ಕನೆಕ್ಟಿವಿಟಿ ಆಪ್ಷನ್‌ನಲ್ಲಿ ವೈ-ಫೈ ಹಾಗೂ ಬ್ಲೂಟೂತ್ ಆಪ್ಷನ್ ಕಾಣಿಸುತ್ತದೆ ಅದರಲ್ಲಿ ಬ್ಲೂಟೂತ್ ಆಯ್ಕೆ ಮಾಡಿ ಆನ್ ಮಾಡಿಕೊಳ್ಳಿ.
- ಬ್ಲೂಟೂತ್ ಆನ್ ಮಾಡಿದ ಬಳಿಕ ಪುನಃ ನಿಮ್ಮ ಮೊಬೈಲ್ ಸ್ಕ್ರೀನ್‌ಗೆ ತಲುಪಿ ಸಿಗ್ನಲ್ ರೀತಿಯಲ್ಲಿ ನೀಲಿ ಬಣ್ಣದ ಬ್ಲೂಟೂತ್ ಐಕಾನ್ ನಿಮಗೆ ಗೋಚರಿಸುತ್ತದೆ.
- ಇದೀಗ ನಿಮ್ಮ ಮೊಬೈಲ್ ಫೋನ್‌ನ ಬ್ಲೂಟೂತ್ ಆಪ್ಷನ್ ಆನ್ ಆಗಿದ್ದು ನಿಮ್ಮ ಆಪ್ತರೊಂದಿಗೆ ನಿಮ್ಮ ಮೊಬೈಲ್‌ನಲ್ಲಿನ ಡೇಟಾ ಹಂಚಿಕೊಳ್ಳ ಬಹುದಾಗಿದೆ.
- ಅಂದಹಾಗೆ ಬ್ಲೂಟೂತ್‌ನ ಅಗತ್ಯ ಇಲ್ಲದೇ ಹೋದಲ್ಲಿ ಮರೆಯದೇ ಅದನ್ನು ಆಫ್ ಮೋಡ್‌ನಲ್ಲಿಡಿ ಏಕೆಂದರೆ ಬ್ಲೂಟೂತ್ ಆನ್ ಇದ್ದಷ್ಟೂ ಸಮಯ ಹೆಚ್ಚು ಬ್ಯಾಟರಿ ವ್ಯಯವಾಗುತ್ತದೆ.
- ಸದಾಕಾಲ ಬ್ಲೂಟೂತ್ ಆನ್‌ನಲ್ಲಿಡುವುದರಿಂದ ನಿಮ್ಮ ಫೋನ್‌ನ ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತದೆ.
- ಆದ್ದರಿಂದಲೇ ಅಗತ್ಯವಿದ್ದಲ್ಲಿ ಮಾತ್ರವೇ ಬ್ಲೂಟೂತ್‌ನ ಬಳಕೆ ಮಾಡುವುದು ಸೂಕ್ತ ಇಲ್ಲವಾದಲ್ಲಿ ವ್ಯರ್ಥವಾಗುತ್ತದೆ.
/?s=laptops
Comments
Best Mobiles in India


Click it and Unblock the Notifications








