ಇಂಟರ್‌ನೆಟ್ ಶಟ್‌ಡೌನ್ ಆದಾಗ ಟ್ವೀಟ್ ಮಾಡೋದು ಹೇಗೆ..?
ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವಾಗಿ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ದೇಶದ ಹಲವು ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಇಂಟರ್‌ನೆಟ್ ಸ್ಥಗಿತವನ್ನು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ದೃಢೀಕರಿಸಿವೆ. ಇಂಟರ್‌ನೆಟ್ ಸ್ಥಗಿತದ ಪರಿಸ್ಥಿತಿಯಲ್ಲಿಯೂ ನೀವು ಟ್ವೀಟ್ ಮಾಡಲು ಬಯಸಿದರೆ ನಿಮಗೆ ಟ್ವಿಟ್ಟರ್ ಅವಕಾಶವನ್ನು ಕಲ್ಪಿಸಿದೆ.

ಹೌದು, ಇಂಟರ್‌ನೆಟ್ ಶಟ್‌ಡೌನ್ ಆದಾಗಲೂ ಕೂಡ ಟ್ವೀಟ್ ಮಾಡಲು ನೀವು ಮೊದಲು ನಿಮ್ಮ ಟ್ವಿಟ್ಟರ್ ಖಾತೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸುವುದು ಕಡ್ಡಾಯವಾಗಿದೆ. ನಿಮ್ಮ ಟ್ವಿಟ್ಟರ್ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆ ಸಂಪರ್ಕಿಸಿದ್ದರೆ, ಇಂಟರ್ನೆಟ್ ಸ್ಥಗಿತದ ಸಮಯದಲ್ಲಿ ಟ್ವೀಟ್ ಮಾಡಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಟ್ವಿಟ್ಟರ್ ಕೋಡ್
ಇಂಟರ್‌ನೆಟ್ ಇಲ್ಲದೇ ಟ್ವೀಟ್ ಮಾಡಲು, ನೀವು ಟ್ವಿಟ್ಟರ್ ಶಾರ್ಟ್‌ಕೋಡ್ ಅನ್ನು ತಿಳಿದುಕೊಂಡಿರಬೇಕು. ಭಾರತದಲ್ಲಿ ಟ್ವಿಟರ್ ಶಾರ್ಟ್ ಕೋಡ್: 9248948837 ಆಗಿದ್ದು, ಈ ಸಂಖ್ಯೆಗೆ ನೀವು SMS ಕಳುಹಿಸಬೇಕು.

ಟ್ವಿಟ್ಟರ್‌ನ ಅಧಿಕೃತ ಸಂಖ್ಯೆ
ಬಳಕೆದಾರರು 9248948837ಗೆ SMS ಸಂದೇಶಗಳನ್ನು ಕಳುಹಿಸಬಹುದು ಹಾಗೂ TWITTRನಿಂದ ಸಂದೇಶಗಳನ್ನು ಬಳಕೆದಾರರು ಸ್ವೀಕರಿಸುತ್ತಾರೆ ಎಂದು ಟ್ವಿಟ್ಟರ್‌ನ ಬೆಂಬಲ ಪುಟ ಹೇಳಿದೆ.

ಟೆಕ್ಸ್ಟ್ ಮೆಸೇಜ್
ನೀವು ಕಳುಹಿಸಲು ಬಯಸುವ ಯಾವುದೇ ಟ್ವೀಟ್‌ನ್ನು ಪಠ್ಯ ಸಂದೇಶವಾಗಿ ಟೈಪ್ ಮಾಡಿ ಮತ್ತು 9248948837ಗೆ ಕಳುಹಿಸಿದರೆ ಸಾಕು.

ಸ್ವಯಂಚಾಲಿತವಾಗಿ ಪೋಸ್ಟ್
ನಿಮ್ಮ ಟ್ವೀಟ್‌ನ್ನು 9248948837ಗೆ SMS ಮಾಡಿದರೆ, ನಿಮ್ಮ ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ಸ್ವಯಂಚಾಲಿತವಾಗಿ ಪೋಸ್ಟ್ ಮಾಡಲಾಗುತ್ತದೆ.

ಇಂಟರ್‌ನೆಟ್ ಸ್ಥಗಿತಕ್ಕೆ ಮಾತ್ರ
ಮೇಲೆ ತಿಳಿಸಲಾದ ಹಂತಗಳು ಇಂಟರ್ನೆಟ್ ಸ್ಥಗಿತಗೊಂಡಿದ್ದಾಗ ಮಾತ್ರ ಕಾರ್ಯನಿರ್ವಹಿಸುತ್ತವೆ. ಒಂದು ವೇಳೆ SMS ಸೇವೆಯನ್ನು ಕೂಡ ಸ್ಥಗಿತಗೊಳಿಸಿದ್ದರೆ ಈ ವಿಧಾನ ಕಾರ್ಯನಿರ್ವಹಿಸುವುದಿಲ್ಲ.


Click it and Unblock the Notifications








