Home
ಟೆಕ್ ನೌಕರಿ

ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ಪಾಸ್‌ವರ್ಡ್‌ ಮರೆತು ಹೋಗಿದೆಯಾ? ಈ ಕೆಲಸ ಮಾಡಿ!

ಸ್ಮಾರ್ಟ್‌ಫೋನ್‌ ಕೇವಲ ಕರೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ರಮುಖ ದಾಖಲೆಗಳನ್ನು ಸ್ಟೋರ್‌ ಮಾಡುವುದಕ್ಕೆ ಕೂಡ ಬಳಕೆಯಾಗ್ತಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ ತಮ್ಮ ದಾಖಲೆಗಳ ಸುರಕ್ಷತೆಗಾಗಿ ಆಂಡ್ರಾಯ್ಡ್‌ ಫೋನ್‌ನಲ್ಲಿ ಪಾಸ್‌ವರ್ಡ್‌, ಪಿನ್‌ ಇಲ್ಲವೇ ಫಿಂಗರ್‌ಪ್ರಿಂಟ್‌ ಲಾಕ್‌ ಅನ್ನು ಸೆಟ್‌ ಮಾಡುತ್ತಾರೆ.

ಹೌದು, ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಡಿವೈಸ್‌ ಅನ್ನು ಪಾಸ್‌ವರ್ಡ್‌ ಇಲ್ಲವೇ ಪಿನ್‌ ಅಥವಾ ಫಿಂಗರ್‌ಪ್ರಿಂಟ್‌ ಲಾಕ್‌ ಮಾಡುವುದು ಸಾಮಾನ್ಯ. ಒಂದು ವೇಳೆ ನಿಮ್ಮ ಫೋನ್‌ ಸ್ಕ್ರೀನ್‌ ಲಾಕ್‌ನ ಪಾಸ್‌ವರ್ಡ್‌ ಮರೆತು ಹೋದರೆ ಏನು ಮಾಡಬೇಕು? ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್‌ ಲಾಕ್‌ ಆಗಿ ಹೋದರೆ ತೆರೆಯವುದು ಹೇಗೆ ಅನ್ನುವುದೇ ತಿಳಿಯುವುದಿಲ್ಲ, ಹಾಗಾದ್ರೆ ನಿಮ್ಮ ಮೊಬೈಲ್‌ ಸ್ಕ್ರೀನ್‌ ಲಾಕ್‌ನ ಪಾಸ್‌ವರ್ಡ್‌ ಮರೆತು ಹೋದರೆ ಏನು ಮಾಡುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ಪಾಸ್‌ವರ್ಡ್‌ ಮರೆತು ಹೋಗಿದೆಯಾ?

ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಮೊಬೈಲ್‌ ಸ್ಕ್ರೀನ್ ಲಾಕ್‌ ಪ್ಯಾಟರ್ನ್‌ ಸೆಟ್‌ ಮಾಡುವ ಮುನ್ನ ಕೆಲವು ಅಂಶಗಳನ್ನು ಪರಿಗಣಿಸಬೇಕು. ಮರೆತು ಹೋದ ಪಾಸ್‌ವರ್ಡ್‌ ಇಲ್ಲವೇ ಪ್ಯಾಟರ್ನ್‌ ಅನ್ನು ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ ಇಲ್ಲದೆ ಹೋದರೆ ಪ್ಯಾಟರ್ನ್‌ ರೀಸೆಟ್‌ ಮಾಡಲು ಗೂಗಲ್‌ ಖಾತೆಯನ್ನು ಬಳಸಿರಿ. ಬಳಕೆದಾರರು ತಮ್ಮ ಗೂಗಲ್‌ ಖಾತೆಯೊಂದಿಗೆ ಸ್ಮಾರ್ಟ್‌ಫೋನ್‌ಗೆ ಲಾಗ್‌ಇನ್‌ ಆಗಿದ್ದರೆ ಪಾಸ್‌ವರ್ಡ್ ಅಥವಾ ಪ್ಯಾಟರ್ನ್ ಅನ್ನು ಮರೆತೆ ಸಂದರ್ಭಗಳಲ್ಲಿ ಪ್ರಯೋಜನಕಾರಿ ಎನಿಸುತ್ತದೆ.

ಗೂಗಲ್‌ ಅಕೌಂಟ್‌ ಮೂಲಕ ಸ್ಕ್ರೀನ್‌ ಲಾಕ್‌ ತೆರೆಯಿರಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ಲಾಕ್‌ ತೆರೆಯುವಾಗ ನೀವು ತಪ್ಪಾದ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್‌ ಬಳಸಿದರೆ Forgot Pattern/Password ಆಯ್ಕೆ ಕಾಣಿಸಲಿದೆ. ಈ ಆಯ್ಕೆಯ ಮೂಲಕ ನಿಮ್ಮ ನೋಂದಾಯಿತ ಗೂಗಲ್ ಖಾತೆಗೆ ಲಾಗಿನ್ ಮಾಡಲು ಕೇಳಲಾಗುತ್ತದೆ. ಈ ಮೂಲಕ ನೀವು ನಿಮ್ಮ ಗೂಗಲ್‌ ಖಾತೆಗೆ ಲಾಗಿನ್‌ ಆಗಬೇಕಾಗುತ್ತದೆ. ಇದರಲ್ಲಿ ನಿಮ್ಮ ಫೋನ್ ಆಟೋಮ್ಯಾಟಿಕ್‌ ಅನ್‌ಲಾಕ್‌ ಆಗಲಿದೆ. ನಂತರ ನೀವು ಹೊಸ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್ ಅನ್ನು ಸೆಟ್‌ ಮಾಡಬಹುದು. ಆದರೆ ಈ ರೀತಿಯ ಆಯ್ಕೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿಲ್ಲ ಅನ್ನೋದು ಗಮನಿಸಬೇಕಾದ ವಿಚಾರ.

ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ಪಾಸ್‌ವರ್ಡ್‌ ಮರೆತು ಹೋಗಿದೆಯಾ?

ಸ್ಮಾರ್ಟ್‌ಲಾಕ್‌ ಆಯ್ಕೆ ಬಳಸಿರಿ
ಇದಲ್ಲದೆ ನಿಮ್ಮ ಮೊಬೈಲ್‌ನ ಸ್ಕ್ರೀನ್‌ಲಾಕ್‌ ಪಾಸ್‌ವರ್ಡ್‌ ಅಥವಾ ಪ್ಯಾಟರ್ನ್ ಲಾಕ್ ಮರೆತು ಹೋದಾಗ ಆಂಡ್ರಾಯ್ಡ್‌ನ ಸ್ಮಾರ್ಟ್‌ ಲಾಕ್‌ ಫೀಚರ್‌ ಕೂಡ ಸಹಾಯಕವಾಗಲಿದೆ. ಈ ಆಯ್ಕೆಯು ಸಾಮಾನ್ಯವಾಗಿ ಮನೆಯ ವೈ-ಫೈ ಸಹಾಯದಿಂದ ನಿಮ್ಮ ಆಂಡ್ರಾಯ್ಡ್‌ ಫೋನ್‌ಗೆ ಲಾಗ್ ಆಗುತ್ತದೆ. ಪಿನ್ ಮರೆತ ವೇಳೆ ನಿಮ್ಮ ಫೋನ್ ಅನ್ನು ಹೋಮ್ ನೆಟ್‌ವರ್ಕ್ ಬಳಿ ತೆಗೆದುಕೊಳ್ಳುವ ಮೂಲಕ ಮೊಬೈಲ್‌ ಸ್ಕ್ರೀನ್‌ ಲಾಕ್‌ ಅನ್ನು ಆಟೋಮ್ಯಾಟಿಕ್‌ ಆಗಿ ಅನ್‌ಲಾಕ್ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ಪಾಸ್‌ವರ್ಡ್‌ ಮರೆತು ಹೋಗಿದೆಯಾ?

ಫೈಂಡ್‌ ಮೈ ಮೊಬೈಲ್‌ ಮೂಲಕ ಲಾಕ್‌ ತೆರೆಯಿರಿ
ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ಪ್ಯಾಟರ್ನ್‌ ಮರೆತು ಹೋದಾಗ ಫೈಂಡ್‌ ಮೈ ಮೊಬೈಲ್‌ ಆಯ್ಕೆಯು ಕೂಡ ಸಹಾಯಕ್ಕೆ ಬರಲಿದೆ. ಅದರಲ್ಲೂ ಸ್ಯಾಮ್‌ಸಂಗ್‌ ಫೋನ್‌ ಬಳಸುವವರಿಗೆ ಇದು ಭಾರಿ ಉಪಯುಕ್ತವಾಗಿದೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಗ್ರಾಹಕರು ಲ್ಯಾಪ್‌ಟಾಪ್‌ನಲ್ಲಿ 'ಫೈಂಡ್ ಮೈ ಮೊಬೈಲ್' ಫೀಚರ್‌ ಮೂಲಕ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಲಾಕ್‌ ತೆರಯಬಹುದು. ಇದಕ್ಕಾಗಿ ನೀವು ಲ್ಯಾಪ್‌ಟಾಪ್‌ನಲ್ಲಿ ಸ್ಯಾಮ್‌ಸಂಗ್ ಫೈಂಡ್ ಮೈ ಫೋನ್ (Samsung Find My Mobile) ವೆಬ್‌ಸೈಟ್‌ಗೆ ಹೋಗಿ, ಸ್ಯಾಮ್‌ಸಂಗ್ ಫೋನಿನ ವಿವರಗಳನ್ನು ನಮೂದಿಸಿ ಮತ್ತು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ತೆಗೆದುಹಾಕಲು 'ಅನ್‌ಲಾಕ್ ಮೈ ಸ್ಕ್ರೀನ್' ಆಯ್ಕೆಯನ್ನು ಬಳಸಬಹುದು.

Best Mobiles in India

English summary
How to Unlock Android Smartphone Screenlock Pattern if Forgotten?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+