ಫೇಸ್ ಮಾಸ್ಕ್‌ ಬಳಸಿದ್ದರೂ ನಿಮ್ಮ ಆಪಲ್ ಐಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

|

ಜನಪ್ರಿಯ ಆಪಲ್ ಸಂಸ್ಥೆ ಐಒಎಸ್ 14.5 ಸಾಫ್ಟ್‌ವೇರ್ ಅಪ್ಡೇಟ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಅಪ್ಡೇಟ್‌ನಲ್ಲಿ ಆಪಲ್‌ನ ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಶನ್ ಎಕೋ ಸಿಸ್ಟಂಗೆ ಕೆಲವು ಪ್ರೈವೆಸಿ ಅಪ್ಡೇಟ್‌ಗಳು ಲಭ್ಯವಿದೆ. ಇನ್ನು ಐಒಎಸ್ 14.5 ಅಪ್‌ಡೇಟ್‌ನ ಬಹುನಿರೀಕ್ಷಿತ ಫೀಚರ್ಸ್‌ಗಳಲ್ಲಿ ಬಳಕೆದಾರರಿಗಾಗಿ ಫೇಸ್ ಮಾಸ್ಕ್‌ನೊಂದಿಗೆ ಐಫೋನ್ ಅನ್ಲಾಕ್ ಮಾಡುವ ಅವಕಾಶ ನೀಡಿರುವುದು ಕೂಡ ಸೇರಿದೆ.

ಆಪಲ್‌

ಹೌದು, ಆಪಲ್‌ ಸಂಸ್ಥೆ ತನ್ನ ಐಒಎಸ್‌ 14.5 ಸಾಫ್ಟ್‌ವೇರ್ ಅಪ್ಡೇಟ್‌ ಮೂಲಕ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಮಾಸ್ಕ್‌ ದರಿಸಿದ್ದರೂ ಸಹ ನಿಮ್ಮ ಆಪಲ್‌ ಫೋನ್‌ ಸ್ಕ್ರೀನ್‌ ಅನ್ನು ಅನ್‌ಲಾಕ್‌ ಮಾಡುವ ಅವಕಾಶ ನೀಡಿದೆ. ಕರೋನವೈರಸ್ ವಿರುದ್ಧ ಹೋರಾಡಲು ಮಾಸ್ಕ್‌ ಸಹಾಯ ಮಾಡಿದರೆ, ಐಫೋನ್ ಬಳಕೆದಾರರು ಸುರಕ್ಷಿತ ಫೇಸ್ ಐಡಿಯನ್ನು ಅನ್ಲಾಕ್ ಮಾಡುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಇದನ್ನು ಮನಗಂಡು ಆಪಲ್‌ ಸಂಸ್ಥೆ ಅಂತಿಮವಾಗಿ ಹೊಸ ಫೀಚರ್ಸ್ ಪರಿಚಯಿಸಿದೆ. ಹಾಗಾದ್ರೆ ಫೇಸ್ ಮಾಸ್ಕ್‌ ಧರಿಸಿ ನಿಮ್ಮ ಆಪಲ್ ಐಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್‌

ಮಾಸ್ಕ್‌ ಹಾಕಿದ್ದರೂ ಸಹ ಐಫೋನ್‌ ಅನ್ನು ಅನ್ಲಾಕ್ ಮಾಡಲು ಐಒಎಸ್ 14.5 ಅಪ್ಡೇಟ್ ಮಾಡಿದೆ. ಫೇಸ್ ಮಾಸ್ಕ್ ಆನ್ ಮಾಡಿದರೂ ಸಹ ಐಒಎಸ್ 14.5 ಅಪ್‌ಡೇಟ್ ಬಳಕೆದಾರರು ತಮ್ಮ ಐಫೋನ್ ಅನ್ಲಾಕ್ ಮಾಡಲು ಅನುಮತಿಸುತ್ತದೆ. ಆದರೆ ಇದಕ್ಕಾಗಿ ಆಪಲ್ ವಾಚ್ ಹೊಂದಿರಬೇಕಾಗುತ್ತದೆ. ಏಕೆಂದರೆ ಆಪಲ್‌ ವಾಚ್‌ ಫೇಸ್‌ನೊಂದಿಗೆ ಫೇಸ್‌ಐಡಿಯನ್ನು ಬೈಪಾಸ್ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ನೀವು ಆಪಲ್ ವಾಚ್ ಹೊಂದಿದ್ದರೆ, ಈ ಫೇಸ್ ಮಾಸ್ಕ್ ಅನ್ಲಾಕ್ ಫೀಚರ್ಸ್‌ಅನ್ನು ಬಳಸಲು, ವಾಚ್ ಮತ್ತು ಐಫೋನ್ ಅನ್ನು ಹತ್ತಿರದಲ್ಲಿರಿಸಿಕೊಳ್ಳಿ ಇದು ಪರದೆಯನ್ನು ಆನ್ ಮಾಡುವ ಮೂಲಕ ನಿಮ್ಮ ಐಫೋನ್ ಅನ್ನು ಅನ್ಲಾಕ್ ಮಾಡಲು ಸಹಾಯ ಮಾಡುತ್ತದೆ.

ಫೇಸ್ ಮಾಸ್ಕ್‌ನೊಂದಿಗೆ ನಿಮ್ಮ ಆಪಲ್ ಐಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

ಫೇಸ್ ಮಾಸ್ಕ್‌ನೊಂದಿಗೆ ನಿಮ್ಮ ಆಪಲ್ ಐಫೋನ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

ಹಂತ:1 ನಿಮ್ಮ ಐಫೋನ್ ಐಒಎಸ್ 14.5 ಮತ್ತು ವಾಚ್ಓಎಸ್ 7.4 ನಲ್ಲಿ ಆಪಲ್ ವಾಚ್ ಅನ್ನು ರನ್‌ ಮಾಡಬೇಕು.
ಹಂತ:2 ಇದನ್ನು ಮಾಡಿದ ನಂತರ, ಫೇಸ್ ಮಾಸ್ಕ್‌ನೊಂದಿಗೆ ಐಫೋನ್ ಅನ್ನು ಅನ್ಲಾಕ್ ಮಾಡುವುದು ಸುಲಭ.
ಹಂತ:3 ಮುಂದೆ, ಸೆಟ್ಟಿಂಗ್‌ಗಳ ಮೆನುಗೆ ಹೋಗಿ
ಹಂತ:4 ಫೇಸ್ ಐಡಿ ಮತ್ತು ಪಾಸ್ಕೋಡ್ ಆಯ್ಕೆಯನ್ನು ಓದಿ
ಹಂತ:5 ನಂತರ ಹೊಸ ಅನ್ಲಾಕ್ ವಿತ್ ಆಪಲ್ ವಾಚ್ ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ
ಹಂತ:6 ಫೀಚರ್ಸ್‌ ಅನ್ನು ಆನ್ ಮಾಡಿ.
ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ, ನಿಮ್ಮ ಐಫೋನ್‌ನಲ್ಲಿನ ಸೆಟ್ಟಿಂಗ್‌ಗಳನ್ನು ನೀವು ಹೊಂದಿಸಬೇಕಾಗುತ್ತದೆ.

ನಿಮ್ಮ ಐಫೋನ್‌ನಲ್ಲಿ ಐಒಎಸ್ 14.5 ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ?

ನಿಮ್ಮ ಐಫೋನ್‌ನಲ್ಲಿ ಐಒಎಸ್ 14.5 ಅನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಹಂತ:1 ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ
ಹಂತ:2 ಜನರಲ್‌ ಟ್ಯಾಪ್ ಮಾಡಿ
ಹಂತ:3 ಸಾಫ್ಟ್‌ವೇರ್ ಅಪ್ಡೇಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ:4 ಅಪ್ಡೇಟ್‌ಗಾಗಿ ಆಪಲ್ ಸರ್ವರ್‌ಗಳಿಗಾಗಿ ಕಾಯಿರಿ. ನಂತರ, ಡೌನ್‌ಲೋಡ್ ಮಾಡಲು ಮತ್ತು ಇನ್‌ಸ್ಟಾಲ್‌ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಹಂತ:5 ಡೌನ್‌ಲೋಡ್ ಪೂರ್ಣಗೊಂಡ ನಂತರ, ಅಪ್ಡೇಟ್‌ ಅನ್ನು ಇನ್‌ಸ್ಟಾಲ್‌ ಮಾಡಲು ನಿಮ್ಮ ಡಿವೈಸ್‌ ಅನ್ನು ರೀಬೂಟ್ ಮಾಡಿ.

ಐಫೋನ್ ಅನ್ನು ಐಒಎಸ್ 14.5 ಗೆ ಅಪ್‌ಗ್ರೇಡ್ ಮಾಡಲು ನೀವು ಹೋಗುವ ಮೊದಲು ನಿಮ್ಮ ಸಾಧನವನ್ನು ಸ್ಥಿರ ನೆಟ್‌ವರ್ಕ್‌ಗೆ ಸಂಪರ್ಕಪಡಿಸಿ ಮತ್ತು ನಿಮ್ಮ ಎಲ್ಲಾ ಡೇಟಾವನ್ನು ಐಕ್ಲೌಡ್‌ಗೆ ಬ್ಯಾಕಪ್ ಮಾಡಿ.

Best Mobiles in India

English summary
How to unlock your Apple iPhone with the face mask on.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X