ಗೂಗಲ್ ಪ್ಲಸ್‌ಗೆ ಫೋಟೋ ಅಪ್ಲೋಡ್‌ ಮಾಡೋದು ಹೇಗೆ?

Posted By: Staff
ಗೂಗಲ್ ಪ್ಲಸ್‌ಗೆ ಫೋಟೋ ಅಪ್ಲೋಡ್‌ ಮಾಡೋದು ಹೇಗೆ?
ಆನ್‌ಲೈನ್‌ ಸರ್ಚ್‌ ಇಂಜಿನ್‌ ಗೂಗಲ್‌ ಸೋಷಿಯಲ್‌ ನೆಟ್ವರ್ಕಿಂಗ್‌ ಸೈಟ್‌ ಫೇಸ್‌ಬುಕ್‌ಗೆ ಪೈಪೋಟಿ ನೀಡಲು ನೂತನ ಗೂಗಲ್‌ ಪ್ಲಸ್‌ ಹೆಸರಿನ ಆನ್‌ಲೈನ್‌ ನೆಟ್ವರ್ಕಿಂಗ್‌ ಸೈಟ್‌ ಆರಂಭಿಸಿದ್ದು ಈ ನೂತನ ಸೈಟ್‌ ಇದೀಗ ಭಾರತದಲ್ಲಿಯೂ ಕೂಡ ನಿಧಾನವಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಆದರೂ ಕೂಡ ಬಳಕೆದಾರರಿಗೆ ಫೇಸ್‌ಬುಕ್‌ ರೀತಿಯಲ್ಲಿ ಸುಲಭವಾಗಿ ಗೂಗಲ್‌ ಪ್ಲಸ್‌ ಅಕೌಂಟ್‌ ಬಳಸುವುದರ ಕುರಿತಾಗಿ ಅಷ್ಟು ಅನುಭವ ಇಲ್ಲ ಅದರಲ್ಲಿಯೂ ಫೋಟೋ ಅಪ್ಲೋಡ್‌ ಮಾಡುವುದು ಅದನ್ನು ಶೇರ್‌ ಮಾಡುವುದು ಕಷ್ಟಾ ಅನ್ನಿಸುವುದರಿಂದ ಗೂಗಲ್‌ ಪ್ಲಸ್‌ ಬಳಸುವುದಕ್ಕೆ ಹಿಂದೇಟು ಹಾಕುತ್ತಾರೆ.

ಅಗಕ್ಕಾಗಿಯೆ ಗಿಜ್ಬಾಟ್‌ ಗೂಗಲ್ ಪ್ಲಸ್‌ ಅಕೌಂಟ್‌ನಲ್ಲಿ ಫೋಟೋ ಹೇಗೆ ಅಪ್ಲೋಡ್‌ ಮಾಡುವುದು ಎಂಬುದರ ವಿವರಣೆಯನ್ನು ತಂದಿದೆ ಒಂಮ್ಮೆ ಓದಿ ನೋಡಿ.

ಸ್ಟೆಪ್‌ 1 : ಮೊದಲಿಗೆ ನಿಮ್ಮ ಗೂಗಲ್‌ ಅಕೌಂಟ್‌ ಲಾಗ್‌ ಇನ್‌ ಮಾಡಿ ನಂತರ ಗೂಗಲ್‌ ಪ್ಲಸ್‌ ಅಕೌಂಟ್‌ ಕ್ಲಿಕ್‌ ಮಾಡಿ.

ಸ್ಟೆಪ್‌ 2 : ನಂತರ ಪ್ರೋಫೈಲ್‌ನ ಮೇಲೆ ನೀಡಲಾಗಿರುವ ಪಿಕ್ಚರ್‌ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ.
ಸ್ಟೆಪ್‌ 3 : ಬಾಕ್ಸ್‌ ಮೇಲೆ ಕ್ಲಿಕ್‌ ಮಾಡುತ್ತಿದ್ದಂತೆಯೇ ನಿಮಗೆ ಫೋಟೋ ಅಪ್ಲೋಡ್‌ ಆಪ್ಷನ್‌ ದೊರೆಯುತ್ತದೆ. ಅದನ್ನು ಕ್ಲಿಕ್‌ ಮಾಡಿ ನಿಮ್ಮ ಪಿಸಿ ನಲ್ಲಿರುವ ಯಾವುದೇ ಫೋಟೋಗಳನ್ನು ಅಪ್ಲೋಡ್‌ ಮಾಡಬಹುದಾಗಿದೆ.


ಸ್ಟೆಪ್‌ 4 : ಅಂದಹಾಗೆ ನೀವು ನಿಮ್ಮ ಫೋಟೋ ಶೇರ್‌ ಮಾಡಬೇಕೆಂದಿದ್ದಲ್ಲಿ ಅದನ್ನು ಓಪನ್‌ ಮಾಡಿ ಸೆಲೆಕ್ಟ್‌ ಮಾಡಿಕೊಂಡು ಹಸಿರು ಬಣ್ಣದ ಐಕಾನ್‌ ಕ್ಲಿಕ್‌ ಮಾಡಿ ನಿಮ್ಮ ಫೋಟೋ ಶೇರ್‌ ಆಗಿಬಿಡುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot