‘ನಿಮ್ಮ ಹಳೇಯ ಫೋನ್ ಅನ್ನು ಹೊಸದನ್ನಾಗಿ ಮಾಡಿಕೊಳ್ಳಿ’

Written By: Lekhaka

ಆಂಡ್ರಾಯ್ಡ್ ಎಂದರೆ ಸಾಕು ನಮ್ಮ ತಲೆಗೆ ಬರುವುದೇ ಅದನ್ನು ಯಾವರೀತಿಯಲ್ಲಿ ಬೇಕಾದರು ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದು. ಬೇರೆ ಓಎಸ್ ಗಳಿಗೆ ಹೋಲಿಕೆ ಮಾಡಿಕೊಂಡರೆ ಆಂಡ್ರಾಯ್ಡ್ ನಷ್ಟು ಬದಲಾವಣೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನಲಾಗಿದೆ.

‘ನಿಮ್ಮ ಹಳೇಯ ಫೋನ್ ಅನ್ನು ಹೊಸದನ್ನಾಗಿ ಮಾಡಿಕೊಳ್ಳಿ’

ಆಂಡ್ರಾಯ್ಡ್ ಅನ್ನು ರೂಟ್ ಮಾಡದೆಯೇ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದ್ದು, ಅದಕ್ಕಾಗಿಯೇ ಲಾಂಚರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿಯೂ CM ಲಾಂಟರ್ 3D ಮಾದರಿಯಲ್ಲಿ ಕಾಣಿಸಿಕೊಂಡಿದೆ. ಇದನ್ನು ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತುಂಬ ಥೀಮ್ ಗಳು ಐಕಾನ್ ಪ್ಯಾಕ್ ಗಳು:

ತುಂಬ ಥೀಮ್ ಗಳು ಐಕಾನ್ ಪ್ಯಾಕ್ ಗಳು:

ಈ CM ಲಾಂಚರ್ ನಲ್ಲಿ ನೀವು ತುಂಬ ಥೀಮ್ ಗಳನ್ನು ಕಾಣಬಹುದಾಗಿದ್ದು, ಇದರೊಂದಿಗೆ ವಾಲ್ ಪೇಪರ್ ಗಳು, ಐಕಾನ್ ಗಳು, ಕಾಟೆಂಟ್ ಥೀಮ್ ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿದೆ ಎನ್ನಲಾಗಿದೆ.

3D ಥೀಮ್ ಗಳು ಮತ್ತು ಲೈವ್ ವಾಲ್ ಪೇಪರ್ ಗಳು:

3D ಥೀಮ್ ಗಳು ಮತ್ತು ಲೈವ್ ವಾಲ್ ಪೇಪರ್ ಗಳು:

ಇದರಲ್ಲಿ 3D ವಾಲ್ ಪೇಪರ್ ಗಳು ಸೇರಿಂದತೆ ಅನೇಕ ನೂತನ ಮಾದರಿಯ ಥೀಮ್ ಗಳನ್ನು ಕಾಣಬಹುದಾಗಿದ್ದು, VR ಥೀಮ್ ಗಳು ಸೇರಿದಂತೆ ಅನೇಕ ಹೊಸತುಗಳು ಇದರಲ್ಲಿದೆ.

ಸೆಕ್ಯೂರಿಟಿ:

ಸೆಕ್ಯೂರಿಟಿ:

ಈ ಲಾಂಚರ್ ನಲ್ಲಿ ಸುಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಂಟಿ ವೈರಸ್, ಮಾಲ್ವೇರ್ ಸುರಕ್ಷತೆ ಸೇರಿಂತೆ ಹೈಡನ್ ಫೌಲ್ಡರ್ ಗಳನ್ನು ಹೊಂದಿದೆ. ಇದರಿಂದ ನಿಮಗೆ ಹೆಚ್ಚಿನ ಸುರಕ್ಷತೆ ಲಭ್ಯವಿರಲಿದೆ.

ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!

ಬ್ಯಾಟರಿ ಬ್ಯಾಕಪ್:

ಬ್ಯಾಟರಿ ಬ್ಯಾಕಪ್:

ಇದಲ್ಲದೇ ಇದು ಬ್ಯಾಟರಿ ಬಳಕೆಯನ್ನು ಮಾಡಿಕೊಳ್ಳುವ ಆಪ್ ಗಳನ್ನು ಬಾಕ್ ಗ್ರೌಂಡಿನಲ್ಲಿ ನಿಲ್ಲಿಸಲಿದ್ದು, ಇದರಿಂದಾಗಿ ನಿಮ್ಮ ಫೋನಿನ ಬ್ಯಾಟರಿಯೂ ದೀರ್ಘಕಾಲ ಬಾಳಿಕೆಯನ್ನು ನೀಡಲಿದೆ.

ಸರಳ ಬಳಕೆ ವಿಧಾನ:

ಸರಳ ಬಳಕೆ ವಿಧಾನ:

ಈ ಲಾಂಚರ್ ಬಳಕೆಯೂ ಸರಳವಾಗಿದ್ದು, ಇದರೊಂದಿಗೆ ವೈ-ಫೈ ಬೂಸ್ಟರ್ ಆಯ್ಕೆಯನ್ನು ನೀಡಲಾಗಿದೆ. ಇದು ಸಹ ನೂತನವಾಗಿದ್ದು, ನಿಮ್ಮ ಹಳೇಯ ಫೋನ್ ಅನ್ನು ಹೊಚ್ಚಹೊಸದಾಗಿ ಮಾಡಲಿದೆ.

ನ್ಯೂಸ್ ಆಪ್ ಡೇಟ್:

ನ್ಯೂಸ್ ಆಪ್ ಡೇಟ್:

ಇದಲ್ಲದೇ ಲಾಂಚರ್ ನಲ್ಲಿಯೇ ನ್ಯೂಸ್ ತೋರಿಸಲಿದ್ದು, ಬಳಕೆದಾರರು ತಮಗೆ ಬೇಕಾದ ಹಾಗೆ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಗ್ರಾಹಕರಿಗೆ ಹೆಚ್ಚಿನ ಪ್ರಿಯವಾದ ವಿಷಯವಾಗಿದೆ.

ನೂತನವಾಗಿದೆ:

ನೂತನವಾಗಿದೆ:

ಹೊಸ ಮಾದರಿಯ ಅನುಭವನ್ನು ನೀಡುವ ಈ ಲಾಂಚರ್, ಸರಳ, ಸುಂದರವಾಗಿದೆ. ಬಳಕೆದಾರಿಗೆ ಹೊಸತನದ ಜೊತೆಗೆ ಮನರಂಜನೆಯನ್ನು ನೀಡುವ ಕೆಲಸವನ್ನು ಇದು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
When it comes to Android, customization is the first word that comes to our mind.Today we are going to be looking at the cool features of CM Launcher 3D.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot