ಜಿ-ಮೇಲ್‌ ನಲ್ಲಿ ಹೊಸ ‘ಕಾಪಿ ಅಡ್ರೆಸ್‌’ ಪಾಪ್ಅಪ್ ಮೆನುವನ್ನು ಬಳಸುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಸೇವೆಗಳನ್ನು ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಜಿ-ಮೇಲ್‌ ಸೇವೆ ಕೂಡ ಒಂದಾಗಿದೆ. ಜಿ-ಮೇಲ್‌ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಗೂಗಲ್‌ ತನ್ನ G-mail ಅಪ್ಲಿಕೇಶನ್‌ನಲ್ಲಿ ಇ-ಮೇಲ್ ವಿಳಾಸಗಳನ್ನು ಕಾಪಿ ಅಥವಾ ಪೇಸ್ಟ್‌ ಮಾಡಲು ಗೂಗಲ್ ಬಳಕೆದಾರರಿಗೆ ಅವಕಾಶ ನೀಡಿದೆ. ಆದರೆ ಇದು ಯಾವಾಗಲೂ ಸುಲಭದ ಕೆಲಸವಲ್ಲ. ಏಕೆಂದರೆ ಇಮೇಲ್ ಅನ್ನು ಸರಿಯಾಗಿ ಆಯ್ಕೆ ಮಾಡುವುದು ಅತ್ಯಂತ ಕಷ್ಟಕರವಾಗಿದೆ. ಆದರೆ ಇತ್ತೀಚಿನ ಅಪ್ಡೇಟ್‌ನಲ್ಲಿ ಇದನ್ನು ಸರಿಪಡಿಸಲಾಗಿದೆ.

ಜಿ-ಮೇಲ್

ಹೌದು, ಜಿ-ಮೇಲ್‌ ನಲ್ಲಿ ಇಮೇಲ್ ವಿಳಾಸವನ್ನು ಕಾಪಿ ಮತ್ತು ಪೇಸ್ಟ್‌ ಮಾಡುವ ಫೀಚರ್ಸ್‌ನಲ್ಲಿ ಅಪ್ಡೇಟ್‌ ಮಾಡಲಾಗಿದೆ. ಇಮೇಲ್‌ ವಿಳಾಸವನ್ನು ಲಾಂಗ್‌ ಪ್ರೆಸ್‌ ಮಾಡುವ ಬದಲು ಮತ್ತು ಪಠ್ಯವನ್ನು ನಕಲಿಸಲು ಇದು ನಿಮಗೆ ಅವಕಾಶ ನೀಡುತ್ತದೆ. ಆದರೆ ನೀವು ಈಗ ಹೊಸ ಎರಡು-ಗುಂಡಿಗಳ ಪಾಪ್ಅಪ್ ಮೆನುವನ್ನು ಪಾಪ್ ಅಪ್ ಮಾಡುವ ಇಮೇಲ್ ವಿಳಾಸವನ್ನು ಟ್ಯಾಪ್ ಮಾಡಬಹುದು. ಪೇಸ್ಟ್‌ ಮತ್ತು ರಿಮೋವ್‌ ಆಯ್ಕೆಗಳೊಂದಿಗೆ ಐಕಾನ್‌ಗಳಿಂದ ಸಹ ಸೂಚಿಸಲಾಗುತ್ತದೆ. ಹಾಗಾದ್ರೆ ಈ ಫೀಚರ್ಸ್‌ ಅನ್ನು ಉಪಯೋಗಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಂಡ್ರಾಯ್ಡ್‌

ನೀವು ಆಂಡ್ರಾಯ್ಡ್‌ ಜಿಮೇಲ್‌ನ ಇತ್ತೀಚಿನ ಅಪ್ಡೇಟ್‌ ಮಾಡಿದ್ದರೆ, ಇಮೇಲ್ ವಿಳಾಸಗಳನ್ನು ಕೇವಲ ಟ್ಯಾಪ್ ಮೂಲಕ ಕಾಪಿ ಮತ್ತು ಪೇಸ್ಟ್‌ ಮಾಡುವ ಹೊಸ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದರೂ ಇದನ್ನು "ಸರ್ವರ್-ಸೈಡ್" ಅಪ್‌ಡೇಟ್ ಮೂಲಕ ಸಕ್ರಿಯಗೊಳಿಸಲಾಗಿದೆ ಎನ್ನಲಾಗಿದೆ. ಈ ಫೀಚರ್ಸ್‌ ಉಪಯೋಗಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಜಿ-ಮೇಲ್‌ ನಲ್ಲಿ ಹೊಸ ‘ಕಾಪಿ ಅಡ್ರೆಸ್‌' ಪಾಪ್ಅಪ್ ಮೆನುವನ್ನು ಬಳಸುವುದು ಹೇಗೆ?

ಜಿ-ಮೇಲ್‌ ನಲ್ಲಿ ಹೊಸ ‘ಕಾಪಿ ಅಡ್ರೆಸ್‌' ಪಾಪ್ಅಪ್ ಮೆನುವನ್ನು ಬಳಸುವುದು ಹೇಗೆ?

ಹಂತ 1: Google Play Store ಗೆ ಹೋಗಿ ಮತ್ತು ನಿಮ್ಮ Gmail ಅಪ್ಲಿಕೇಶನ್ ಅನ್ನು ಅಪ್ಡೇಟ್‌ ಮಾಡಿರಿ.

ಹಂತ 2: ನಿಮ್ಮ ಫೋನ್‌ನ ಮುಖಪುಟ ಅಥವಾ ಅಪ್ಲಿಕೇಶನ್ ಡ್ರಾಯರ್‌ನಿಂದ ನವೀಕರಿಸಿದ Gmail ಅಪ್ಲಿಕೇಶನ್ ತೆರೆಯಿರಿ.

ಹಂತ 3: ನ್ಯೂ ಮೆಸೇಜ್‌ ವಿಂಡೋವನ್ನು ತೆರೆಯಲು ಕಂಪೋಸ್‌ ಬಟನ್ ಟ್ಯಾಪ್ ಮಾಡಿ.

ಹಂತ 4: ಈಗ ಸ್ವೀಕರಿಸುವವರ ಯಾವುದೇ ಕ್ಷೇತ್ರಗಳಲ್ಲಿ ಇಮೇಲ್ ವಿಳಾಸವನ್ನು ಟೈಪ್ ಮಾಡಿ.

ಹಂತ 5: ನೀವು ವಿಳಾಸವನ್ನು ನಮೂದಿಸಿದ ನಂತರ, ಸ್ವೀಕರಿಸುವವರಲ್ಲಿ ಒಬ್ಬರನ್ನು ಟ್ಯಾಪ್ ಮಾಡಿ ಮತ್ತು ಹೊಸ ಪಾಪ್-ಅಪ್ ಮೆನು ತೋರಿಸುತ್ತದೆ.

ಹಂತ 6: ನೀವು ಹೊಸ ಮೆನುವಿನಿಂದ ‘ಕಾಪಿ' ಅಥವಾ ‘ರಿಮೋವ್‌' ಟ್ಯಾಪ್ ಮಾಡಬಹುದು.

ಕಂಟ್ಯಾಕ್ಟ್‌

ಕಂಟ್ಯಾಕ್ಟ್‌ ಅನ್ನು ಒಂದು ಕ್ಷೇತ್ರದಿಂದ ಇನ್ನೊಂದಕ್ಕೆ ಸರಿಸಲು ಅಥವಾ ಅದನ್ನು ಮತ್ತೊಂದು ಸಂಪರ್ಕದೊಂದಿಗೆ ಬದಲಾಯಿಸಲು ಬಯಸುವ ಬಳಕೆದಾರರಿಗೆ ಹೊಸ ಕಾಪಿ ಫೀಚರ್ಸ್‌ ವಿಶೇಷವಾಗಿ ಸೂಕ್ತವಾಗಿರುತ್ತದೆ. ಇದು ಯಾರಿಗೆ ಎಮರ್ಜೆನ್ಸಿ ಇರುತ್ತದೋ ಮತ್ತು ತ್ವರಿತವಾಗಿ ವಿಳಾಸವನ್ನು ಟೂ ಕ್ಷೇತ್ರದಿಂದ ಸಿಸಿ ಕ್ಷೇತ್ರಕ್ಕೆ ಅಥವಾ ಬಿಸಿಸಿ ಕ್ಷೇತ್ರಕ್ಕೆ ಸರಿಸಲು ಬಯಸಿದಾಗ ವಿಷಯಗಳನ್ನು ಸುಲಭಗೊಳಿಸಲು ಇದು ಖಂಡಿತವಾಗಿಯೂ ಸಹಾಯ ಮಾಡುತ್ತದೆ, ಆದ್ದರಿಂದ ಈ ಫೀಚರ್ಸ್‌ ಅನ್ನು ಈಗಿನಿಂದಲೇ ಬಳಸುವುದು ಸೂಕ್ತವಾಗಿರಲಿದೆ.

Best Mobiles in India

English summary
how to use copy address feature on gmail.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X