ಆನ್‌ಲೈನ್‌ನಲ್ಲಿ ವರ್ಡ್ ಡಾಕ್ಯುಮೆಂಟ್‌ ಅನ್ನು ಕೊಲಾಬ್ರೇಟ್‌ ಮಾಡುವುದು ಹೇಗೆ !

|

ಯಾವುದೇ ಒಂದು ಮಾಹಿತಿಯನ್ನ ದಾಖಲೆಗಳ ರೂಪದಲ್ಲಿ ಸಂಗ್ರಹಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಡಾಕ್ಯುಮೆಂಟ್‌ಗಳನ್ನ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಜಿ ಮೇಲ್‌, ಪಿಡಿಎಫ್‌ಗಳಲ್ಲಿ ಸಂಗ್ರಹಿಸಿ ಇಡುವುದು ಸರ್ವೆ ಸಾಮಾನ್ಯವಾಗಿದೆ. ಡಾಕ್ಯೂಮೆಂಟ್‌ಗಳನ್ನ ಕೊಲಾಬ್ರೆಟ್‌ ಮಾಡುವುದು ಕೂಡ ತುಂಬಾನೆ ಮುಕ್ಯವಾಗಿದೆ. ನೀವು ದಾಖಲಿಸಿದ ಫೈಲ್‌ನಲ್ಲಿ ಲಬ್ಯವಿರುವ ಮಾಹಿತಿಯನ್ನ ಮತ್ತೆ ಎಡಿಟ್‌ ಮಾಡಲು ಇನ್ನೊಬ್ಬರಿಗೆ ಅವಕಾಶ ನೀಡಬೇಕಿರುವುದು ನಮ್ಮ ಕರ್ತವ್ಯ. ಇದೇ ಕಾರಣಕ್ಕೆ ಡಾಕ್ಯುಮೆಂಟ್ ಗಳಲ್ಲಿ ಕೊಲಾಬ್ರೇಟ್‌ ಮಾಡಬೇಕು ಎಂದಾಗ ಗೂಗಲ್ ಡಾಕ್ಸ್ ಮೊದಲ ಬರುತ್ತದೆ. ಆದಾಗ್ಯೂ, ಡಾಕ್ಯುಮೆಂಟ್‌ಗಳಲ್ಲಿ ಇತರರೊಂದಿಗೆ ಸಹಕರಿಸಲು ಮೈಕ್ರೋಸಾಫ್ಟ್ ವರ್ಡ್ ಅವಕಾಶ ನೀಡುತ್ತದೆ.

ಮೈಕ್ರೋಸಾಫ್ಟ್

ಹೌದು, ಮೈಕ್ರೋಸಾಫ್ಟ್ ಆಫೀಸ್ ಮತ್ತು ಗೂಗಲ್ ಡಾಕ್ಸ್ ಕಚೇರಿ ಕೆಲಸ ಮತ್ತು ಶಾಲೆ ಅಥವಾ ಕಾಲೇಜು ಯೋಜನೆಗಳಿಗೆ ಪ್ರಮುಖ ಸಾಧನಗಳಾಗಿವೆ. ಅದಕ್ಕಾಗಿಯೇ ಡಾಕ್ಯುಮೆಂಟ್‌ಗಳ ಕೊಲಾಬ್ರೆಟ್‌ ಬಹಳ ಮುಖ್ಯವಾಗಿರುತ್ತದೆ. ಅಲ್ಲದೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಡಾಕ್ಯುಮೆಂಟ್‌ನಲ್ಲಿ ಯಾವುದೇ ಹೊಸ ಮಾಹಿತಿಯನ್ನ ಸೇರಿಸುವುದಕ್ಕೆ ನಿಮಗೆ ಡಾಕ್ಯುಮೆಂಟ್ ಸಹಯೋಗದ ಅಗತ್ಯವಿದೆ. ಇದಲ್ಲದೆ ನಿಮ್ಮ ಎಡಿಟರ್‌ಗಳು ಕೂಡ ನಿಮ್ಮ ಲೇಬರವಣಿಗೆಯನ್ನ ಇನ್ನಷ್ಟು ಬದಲಾವಣೆ ಮಾಡಲು ಹೊಸ ಪದಗಳನ್ನ ಸೇರಿಸಲೂ ಬಹುದು. ಹಾಗಾದ್ರೆ ಡಾಕ್ಯೂಮೆಂಟ್‌ ಕೊಲಾಬ್ರೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೈಕ್ರೋಸಾಫ್ಟ್ ವರ್ಡ್: ಪಿಸಿ ಅಥವಾ ಮ್ಯಾಕ್ ಮೂಲಕ ಸಹಕರಿಸುವುದು ಹೇಗೆ ?

ಮೈಕ್ರೋಸಾಫ್ಟ್ ವರ್ಡ್: ಪಿಸಿ ಅಥವಾ ಮ್ಯಾಕ್ ಮೂಲಕ ಸಹಕರಿಸುವುದು ಹೇಗೆ ?

ನೀವು ವರ್ಡ್ ಡಾಕ್ಯುಮೆಂಟ್‌ನಲ್ಲಿ ಕೊಲಾಬ್ರೆಟ್‌ ಮಾಡಲು ಬಯಸಿದರೆ, ನಿಮ್ಮ ಫೈಲ್ ಅನ್ನು ಒನ್‌ಡ್ರೈವ್‌ನಲ್ಲಿ ಸೇವ್‌ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು, ಅಂದರೆ ಮೈಕ್ರೋಸಾಫ್ಟ್ನ ಕ್ಲೌಡ್ ಸ್ಟೋರೇಜ್ ಸೇವೆಯಲ್ಲಿ ಸೇವ್‌ ಆಗಿರುವುದನ್ನು ನೋಡಲು ಈ ಹಂತಗಳನ್ನು ಅನುಸರಿಸಿ.

* ನಿಮ್ಮ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಡಾಕ್ಯುಮೆಂಟ್ ತೆರೆಯಿರಿ.
* ನಿಮ್ಮ ಡಾಕ್ಯುಮೆಂಟ್ ಅನ್ನು ಸೇವ್‌ ಮಾಡಲು ರೆಡಿ ಆದ ನಂತರ, ಫೈಲ್> save as > ಫೈಲ್ ಅನ್ನು ಒನ್‌ಡ್ರೈವ್‌ನಲ್ಲಿ ಸೇವ್‌ ಮಾಡಿ. ಈಗ, ನಿಮ್ಮ ಫೈಲ್ ಕ್ಲೌಡ್‌ನಲ್ಲಿ ಸೇವ್‌ ಆಗಲಿದೆ.
* ನಂತರ, ಶೇರ್‌ ಅನ್ನು ಕ್ಲಿಕ್ ಮಾಡಿ ಮತ್ತು ನೀವು ಸಹಯೋಗಿಸಲು ಬಯಸುವ ಜನರನ್ನು ಸೇರಿಸಿ.
* ನೀವು ನಿರ್ದಿಷ್ಟಪಡಿಸಿದ ಜನರನ್ನು ಕ್ಲಿಕ್ ಮಾಡಿ ನೀವು ಇದನ್ನು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಡಾಕ್ಯುಮೆಂಟ್ ಅನ್ನು ಸಂಪಾದಿಸಲು ನೀವು ಅನುಮತಿಸಬೇಕೆ ಎಂದು ಆಯ್ಕೆ ಮಾಡಲು ವೀಕ್ಷಿಸಬಹುದು. ಎಡಿಟಿಂಗ್‌ ಅನ್ನು ಅನುಮತಿಸುವುದರಿಂದ ಅವುಗಳನ್ನು ಎಡಿಟ್‌ ಮಾಡಲು ಅನುಮತಿಸುತ್ತದೆ ಮತ್ತು ಡೌನ್‌ಲೋಡ್ ಅನ್ನು ನಿರ್ಬಂಧಿಸಿ ಡಾಕ್ಯುಮೆಂಟ್ ಡೌನ್‌ಲೋಡ್ ಮಾಡುವುದನ್ನು ತಡೆಯುತ್ತದೆ.
* ಇದಾದ ನಂತರ, ಆಪ್ಲೈ ಅನ್ನು ಒತ್ತಿರಿ. ಈಗ, ನೀವು ಈ ಫೈಲ್ ಅನ್ನು ಹಂಚಿಕೊಳ್ಳಲು ಬಯಸುವ ಜನರ ಸಂಪರ್ಕ ವಿವರಗಳನ್ನು ನಮೂದಿಸಿ ಅಥವಾ ನೀವು ಲಿಂಕ್ ಅನ್ನು ನಕಲಿಸಬಹುದು ಮತ್ತು ಅದನ್ನು ಥರ್ಡ್‌ ಪಾರ್ಟಿ ಸರ್ವಿಸ್‌ ಆಪ್‌ಗಳಾದ ವಾಟ್ಸಾಪ್ ಅಥವಾ ಫೇಸ್ಬುಕ್ ಮೆಸೆಂಜರ್ ಮೂಲಕ ಹಂಚಿಕೊಳ್ಳಬಹುದು.
* ಅಂತಿಮವಾಗಿ, ನಿಮ್ಮ ಫೈಲ್ ಅನ್ನು ಇತರರೊಂದಿಗೆ ಹಂಚಿಕೊಳ್ಳಲು SEND ಅನ್ನು ಒತ್ತಿರಿ.

ಮೈಕ್ರೋಸಾಫ್ಟ್ ವರ್ಡ್: ವೆಬ್ ಮೂಲಕ ಕೊಲಾಬ್ರೆಟ್‌ ಮಾಡುವುದು ಹೇಗೆ

ಮೈಕ್ರೋಸಾಫ್ಟ್ ವರ್ಡ್: ವೆಬ್ ಮೂಲಕ ಕೊಲಾಬ್ರೆಟ್‌ ಮಾಡುವುದು ಹೇಗೆ

ಇನ್ನು ಮೈಕ್ರೋಸಾಫ್ಟ್ ವರ್ಡ್ ಸಹ ಆನ್‌ಲೈನ್‌ನಲ್ಲಿ ಲಭ್ಯವಿದೆ. ಆದರಿಂದ ಮೈಕ್ರೋಸಾಫ್ಟ್ ವರ್ಡ್ ಫೈಲ್ ಅನ್ನು ಆನ್‌ಲೈನ್‌ನಲ್ಲಿ ನೀವು ಹೇಗೆ ರಚಿಸಬಹುದು ಮತ್ತು ಸಹಕರಿಸಬಹುದು ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

*ಮೈಕ್ರೋಸಾಫ್ಟ್ ವರ್ಡ್ ಆನ್‌ಲೈನ್‌ಗೆ ಹೋಗಿ ಮತ್ತು ನಿಮ್ಮ ಮೈಕ್ರೋಸಾಫ್ಟ್ ಖಾತೆಗೆ ಸೈನ್ ಇನ್ ಮಾಡಿ.
*ಖಾಲಿ ಡಾಕ್ಯುಮೆಂಟ್ ಕ್ಲಿಕ್ ಮಾಡಿ ಅಥವಾ ನೀವು ಒನ್‌ಡ್ರೈವ್‌ನಲ್ಲಿ ಉಳಿಸಿದ ಫೈಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು.
*ನೀವು ಸಹಯೋಗಿಸಲು ಸಿದ್ಧವಾದ ನಂತರ, ಶೇರ್‌ ಅನ್ನು ಒತ್ತಿ ಮತ್ತು ಮೇಲಿನ ಹಂತಗಳನ್ನು ಮತ್ತೆ ಪುನರಾವರ್ತಿಸಿ.
*ನೀವು ಕಳುಹಿಸು ಅನ್ನು ಒತ್ತಿ ನಂತರ, ನಿಮ್ಮ ಸ್ವೀಕರಿಸುವವರು ಡಾಕ್ಯುಮೆಂಟ್‌ನಲ್ಲಿ ನಿಮ್ಮೊಂದಿಗೆ ಸಹಕರಿಸಲು ಸಾಧ್ಯವಾಗುತ್ತದೆ.

ಮೈಕ್ರೋಸಾಫ್ಟ್ ವರ್ಡ್: ನಿಮ್ಮ ಫೋನ್ ಮೂಲಕ ಕೊಲಾಬ್ರೆಟ್‌ ಮಾಡುವುದು ಹೇಗೆ

ಮೈಕ್ರೋಸಾಫ್ಟ್ ವರ್ಡ್: ನಿಮ್ಮ ಫೋನ್ ಮೂಲಕ ಕೊಲಾಬ್ರೆಟ್‌ ಮಾಡುವುದು ಹೇಗೆ

ನಿಮ್ಮ ಫೋನ್‌ನಲ್ಲಿನ ಡಾಕ್ಯುಮೆಂಟ್‌ಗಳಲ್ಲಿ ಸಹಕರಿಸಲು, ನಿಮಗೆ ಮೈಕ್ರೋಸಾಫ್ಟ್ ವರ್ಡ್ ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಹಾಗಾದ್ರೆ ಮೈಕ್ರೊಸಾಫ್ಟ್ ವರ್ಡ್‌ ಅನ್ನು ನಿಮ್ಮ ಫೋನ್‌ ಮೂಲಕ ಕೊಲಾಬ್ರೆಟ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

*ನಿಮ್ಮ ಫೋನ್‌ನಲ್ಲಿ ಮೈಕ್ರೋಸಾಫ್ಟ್ ವರ್ಡ್ ಡೌನ್‌ಲೋಡ್ ಮಾಡಿ. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುಡಾಗಿದೆ.
* ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು ನಿಮ್ಮ Microsoft ಖಾತೆಗೆ ಸೈನ್ ಇನ್ ಮಾಡಿ.
* ನಂತರ ಕೆಳಭಾಗದಲ್ಲಿರುವ + ಐಕಾನ್ ಅನ್ನು ಒತ್ತುವ ಮೂಲಕ ನೀವು ಹೊಸ ಡಾಕ್ಯುಮೆಂಟ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು.
* ಒನ್‌ಡ್ರೈವ್‌ನಲ್ಲಿ ಈಗಾಗಲೇ ಉಳಿಸಲಾದ ಹಿಂದಿನ ಫೈಲ್‌ನಲ್ಲಿ ಸಹ ನೀವು ಕೆಲಸ ಮಾಡಲು ಪ್ರಾರಂಭಿಸಬಹುದು. ಅದನ್ನು ಪರಿಶೀಲಿಸಲು, ಕೆಳಭಾಗದಲ್ಲಿರುವ ಫೋಲ್ಡರ್ ಐಕಾನ್ ಅನ್ನು ಒತ್ತಿರಿ> ಒನ್‌ಡ್ರೈವ್ ಟ್ಯಾಪ್ ಮಾಡಿ> ನಿಮ್ಮ ಫೈಲ್ ಆಯ್ಕೆಮಾಡಿ.
* ಇದರಿಂದ, ಒಮ್ಮೆ ನೀವು ಸಹಕರಿಸಲು ಸಿದ್ಧರಾದರೆ, ನೀವು ಹಂಚಿಕೆ ಗುಂಡಿಯನ್ನು ಮೇಲಕ್ಕೆ ಒತ್ತಿ ಮತ್ತು ಮೊದಲು ಹೇಳಿದ ಅದೇ ಹಂತಗಳನ್ನು ಪುನರಾವರ್ತಿಸಬೇಕು.
* ನೀವು SEND ಅನ್ನು ಒತ್ತಿ ನಂತರ, ನಿಮ್ಮ ಸ್ವೀಕರಿಸುವವರು ಡಾಕ್ಯುಮೆಂಟ್‌ನಲ್ಲಿ ನಿಮ್ಮೊಂದಿಗೆ ಸಹಕರಿಸಲು ಸಾಧ್ಯವಾಗುತ್ತದೆ.
* ಡಾಕ್ಯುಮೆಂಟ್‌ನಲ್ಲಿ ಸಹಕರಿಸುವ ಈ ಪ್ರಕ್ರಿಯೆಯು ಕೇವಲ ಮೈಕ್ರೋಸಾಫ್ಟ್ ವರ್ಡ್‌ಗೆ ಸೀಮಿತವಾಗಿಲ್ಲ. ಮೈಕ್ರೋಸಾಫ್ಟ್ ಎಕ್ಸೆಲ್ ಮತ್ತು ಪವರ್‌ಪಾಯಿಂಟ್ ಬಳಸಿ ಇತರರೊಂದಿಗೆ ಸಹಕರಿಸಲು ನೀವು ಇದೇ ಹಂತಗಳನ್ನು ಸಹ ಬಳಸಬಹುದು.

Most Read Articles
Best Mobiles in India

Read more about:
English summary
Microsoft Word allows users to invite others to collaborate so that changes can be made while you're working on the document. In this guide, we tell you how to collaborate on a Microsoft Word document in real time.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X