ವಾಟ್ಸಾಪ್ ವೆಬ್‌ನಲ್ಲಿ ಶಾರ್ಟ್‌ಕಟ್‌ ಕೀ ಬಳಸಿ ಕಾರ್ಯನಿರ್ವಹಿಸುವುದು ಹೇಗೆ?

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಆಪ್‌ ಆಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಸೇವಾ ಗೌಪ್ಯತೆ ನೀತಿ ಕಾರಣಕ್ಕೆ ವಿವಾದವನ್ನು ಎದುರಿಸುತ್ತಿದೆ. ಆದರೂ ತನ್ನ ಗ್ರಾಹಕರಿಗೆ ಹೊಸ ಫಿಚರ್ಸ್‌ಗಳ ಮೂಲಕವೇ ಆಕರ್ಷಿಸುತ್ತಿದೆ. ವಾಟ್ಸಾಪ್‌ ಫೀಚರ್ಸ್‌ಗಳ ವಿಚಾರದಲ್ಲಿ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗಿಂತಲೂ ಮುಂಚೂಣಿಯಲ್ಲಿದೆ. ಇನ್ನು ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯಲ್ಲಿಯೂ ಸಹ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹೆಚ್ಚಿನ ಜನರು ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯನ್ನು ಸಹ ಬಳಸುತ್ತಾರೆ. ಏಕೆಂದರೆ ವಾಟ್ಸಾಪ್ ವೆಬ್ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸಬಹುದಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿ ಹಲವು ಕಾರ್ಯಗಳನ್ನ ನಿರ್ವಹಿಸಬಹುದಾಗಿದೆ. ವಾಟ್ಸಾಪ್‌ ವೆಬ್‌ ಖಾತೆಗೆ ಲಾಗ್ ಇನ್ ಮಾಡಲು, ಬಳಕೆದಾರರು ವೆಬ್‌ಗಾಗಿ ವಾಟ್ಸಾಪ್ ಅನ್ನು ತೆರೆಯಬೇಕು ಮತ್ತು ಅವರ ಫೋನ್‌ನ ಕ್ಯಾಮೆರಾ ಬಳಸಿ ಆನ್-ಸ್ಕ್ರೀನ್ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇನ್ನು ಬಿಡುವಿಲ್ಲದ ಸಮಯದಲ್ಲಿ, ವಾಟ್ಸಾಪ್‌ ವೆಬ್‌ನಲ್ಲಿ ಕಾರ್ಯನಿರ್ವಹಿಸುವಾಗ ಶಾರ್ಟ್‌ಕಟ್‌ ಕೀ ಬಳಸಿ ಸಹ ಕಾರ್ಯನಿರ್ವಹಿಸಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿ ಸಾಧನಗಳನ್ನು ಲಿಂಕ್ ಮಾಡುವಾಗ ಬಳಕೆದಾರರು ತಮ್ಮ ಫೇಸ್ ಐಡಿ ಅಥವಾ ಫಿಂಗರ್ಪ್ರಿಂಟ್ ಬಳಸಿ ಅನ್ಲಾಕ್ ಮಾಡಲು ಅನುಮತಿಸುವ ವೆಬ್ ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ಭದ್ರತಾ ವೈಶಿಷ್ಟ್ಯವನ್ನು ಹೊರತಂದಿದೆ. ವಾಟ್ಸಾಪ್‌ ವೆಬ್‌ನಲ್ಲಿ ಸಕ್ರಿಯವಾಗಿರದ ಬಳಕೆದಾರರಿಗೆ ಶಾರ್ಟ್‌ಕಟ್‌ಗಳು ಸಾಕಷ್ಟು ಉಪಯುಕ್ತ ಎನಿಸಿದೆ. ಈ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಫಾಂಟ್ ಸೈಜ್‌ ಅನ್ನು ಎಡಿಟ್‌ ಮಾಡಬಹುದು. ಸ್ಟಿಕ್ಕರ್‌ಗಳು, ಜಿಐಎಫ್‌ಗಳು ಮತ್ತು ಎಮೋಜಿಗಳನ್ನು ಸೇರಿಸಬಹುದು. ಹಾಗಾದ್ರೆ ವಾಟ್ಸಾಪ್‌ ವೆಬ್‌ ಆವೃತ್ತಿಯಲ್ಲಿ ವಾಟ್ಸಾಪ್‌ಗೆ ಅನ್ವಯಿಸಬಹುದಾದ ಶಾರ್ಟ್‌ಕಟ್‌ ಕೀ ಗಳು ಯಾವುವು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಾಟ್ಸಾಪ್‌ ವೆಬ್‌ನಲ್ಲಿ ಬಳಸಬಹುದಾದ ಶಾರ್ಟ್‌ಕಟ್‌ ಕೀ ಗಳು!

ವಾಟ್ಸಾಪ್‌ ವೆಬ್‌ನಲ್ಲಿ ಬಳಸಬಹುದಾದ ಶಾರ್ಟ್‌ಕಟ್‌ ಕೀ ಗಳು!

ಪದ ಅಥವಾ ಪದಗುಚ್ಚವನ್ನು ಸರ್ಚ್‌ ಮಾಡಲು Ctrl + F ಒತ್ತಿರಿ

ಹೊಸ ಚಾಟ್ ಪ್ರಾರಂಭಿಸಲು, Ctrl + N ಒತ್ತಿರಿ

ಶಿಫ್ಟ್ + ಟ್ಯಾಬ್ ಬಟನ್‌ ಎಮೋಜಿಗಳನ್ನು ಫೋಕಸ್ ಮಾಡಲಿದೆ.

ಹೊಸ ಗುಂಪನ್ನು ಪ್ರಾರಂಭಿಸಲು, Ctrl + Shift + N ಒತ್ತಿರಿ

ನಿಮ್ಮ ಹಿಂದಿನ ಚಾಟ್‌ಗೆ ಹೋಗಲು, Ctrl + Shift + ಅನ್ನು ಒತ್ತಿರಿ

ಮುಂದಿನ ಚಾಟ್‌ಗೆ ಹೋಗಲು, Ctrl + Shift + ಒತ್ತಿರಿ

ಚಾಟ್ ಅನ್ನು ಆರ್ಕೈವ್ ಮಾಡಲು, Ctrl + E ಒತ್ತಿರಿ

ಚಾಟ್ ಅನ್ನು ಮ್ಯೂಟ್ ಮಾಡಲು, Ctrl + Shift + M.

ಓದುವ ಸ್ಥಿತಿಯನ್ನು ಬದಲಾಯಿಸಲು, Ctrl + Shift + U.

ಚಾಟ್ ಅಳಿಸಲು, Ctrl + Del

ಪ್ರೊಫೈಲ್ ತೆರೆಯಲು, Ctrl + P.

ಫಾಂಟ್ ಗಾತ್ರವನ್ನು ಹೆಚ್ಚಿಸಲು, Ctrl + = ಒತ್ತಿರಿ

ಫಾಂಟ್ ಗಾತ್ರವನ್ನು ಕಡಿಮೆ ಮಾಡಲು, Ctrl + ಒತ್ತಿರಿ -

ಡೀಫಾಲ್ಟ್ ಗಾತ್ರಕ್ಕೆ ಹಿಂತಿರುಗಲು, Ctrl + 0 ಒತ್ತಿರಿ

ಪಠ್ಯವನ್ನು ದಪ್ಪವಾಗಿಸಲು * text * ಬಳಸಿ

ಪಠ್ಯವನ್ನು ಇಟಲೈಸ್ ಮಾಡಲು _text_ ಬಳಸಿ

ಪಠ್ಯವನ್ನು ಹೊಡೆಯಲು ~ text ~ ಬಳಸಿ

ಮೊನೊಸ್ಪೇಸ್ಡ್ ಫಾಂಟ್‌ಗೆ ‘‘ ‘text' ‘‘ ಬಳಸಿ

ಎಮೋಜಿಯನ್ನು ಸೇರಿಸಲು, ಕೊಲೊನ್ ಒತ್ತಿರಿ

ಎಮೋಜಿಗಳು

ಇನ್ನು ಕೆಲವು ಎಮೋಜಿಗಳು ಕೊಲೊನ್ ಅನ್ನು ಟೈಪ್ ಮಾಡದೆ ತೋರಿಸುತ್ತವೆ. ಆ ಎಮೋಜಿಗಳಿಗೆ ಚಿಹ್ನೆಗಳನ್ನು ಬಳಸುವುದರ ಮೂಲಕ, ನಗು ಮುಖ ಅಥವಾ ದುಃಖದ ಮುಖ ಅಥವಾ ಹೃದಯ ಎಮೋಜಿಗಳಂತಹ ವಾಟ್ಆಪ್ ವೆಬ್‌ನ ಸ್ವಯಂ ಪರಿವರ್ತನೆಯ ಸಾಮರ್ಥ್ಯದ ಮೂಲಕ ತೋರಿಸುತ್ತದೆ. ಯಾವುದೇ ಚಾಟ್ ವಿಂಡೋದಲ್ಲಿರುವಾಗ ಶಿಫ್ಟ್ + ಟ್ಯಾಬ್ ಒತ್ತುವ ಮೂಲಕ ಬಳಕೆದಾರರು ಎಮೋಜಿಗಳು, ಸ್ಟಿಕ್ಕರ್‌ಗಳು ಮತ್ತು ಜಿಐಎಫ್ ಬಟನ್ ಅನ್ನು ಸಹ ಪ್ರವೇಶಿಸಬಹುದು. ಇದು ಎಮೋಜಿ ಐಕಾನ್ ಅನ್ನು ಹೈಲೈಟ್ ಮಾಡುತ್ತದೆ. ಎಲ್ಲಾ ಎಮೋಜಿಗಳು, ಜಿಐಎಫ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ನೋಡಲು, ನಿಮ್ಮ ಆಯ್ಕೆಯ ಎಮೋಟಿಕಾನ್ ಕಾಣಿಸಿಕೊಳ್ಳುವವರೆಗೆ ಎಂಟರ್ ಒತ್ತಿರಿ. ಹೀಗೆ ಶಾರ್ಟ್‌ಕಟ್‌ಗಳನ್ನು ಬಳಸುವ ಮೂಲಕ ವಾಟ್ಸಾಪ್‌ ವೆಬ್‌ನಲ್ಲಿ ನೀವು ಬಹುಕಾರ್ಯಗಳನ್ನು ಮಾಡಬಹುದಾಗಿದೆ.

Best Mobiles in India

English summary
During busy times, shortcuts come in handy to users,who are more often than not active on WhatsApp Web.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X