ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸಿಗ್ನಲ್ ಅಪ್ಲಿಕೇಶನ್‌ ಅನ್ನು ಬಳಸುವುದು ಹೇಗೆ?

|

ವಾಟ್ಸಾಪ್‌ನ ಹೊಸ ಸೇವಾ ನಿಯಮ ವಿವಾದದ ನಂತರ ವಾಟ್ಸಾಪ್‌ನ ಪ್ರತಿಸ್ಫರ್ಧಿ ಅಪ್ಲಿಕೇಶನ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದರಲ್ಲಿ ಸಿಗ್ನಲ್‌ ಅಪ್ಲಿಕೇಶನ್‌ ವಾಟ್ಸಾಪ್‌ಗೆ ಭಾರಿ ಸೆಡ್ಡು ಹೊಡೆದಿದೆ. ಈಗಾಗಲೇ ಭಾರತವೂ ಸೇರಿದಂತೆ ಹೆಚ್ಚಿನ ಜನರು ವಾಟ್ಸಾಪ್‌ ತ್ಯಜಿಸಿ ಸಿಗ್ನಲ್‌ ಅಪ್ಲಿಕೇಶನ್‌ ಕಡೆಗೆ ಒಲವು ತೋರಿದ್ದಾರೆ. ಇನ್ನು ಸಿಗ್ನಲ್‌ ಅಪ್ಲಿಕೇಶನ್‌ ಕೂಡ ವಾಟ್ಸಾಪ್‌ ಮಾದರಿಯ ಫೀಚರ್ಸ್‌ಗಳನ್ನು ಹೊಂದಿದ್ದು, ಗೌಪ್ಯತೆಯ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ಅನ್ನು ಮಿರಿಸಲಿದೆ. ಸದ್ಯ ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲ ಲ್ಯಾಪ್‌ಟಾಪ್‌ ನಲ್ಲಿಯೂ ಕೂಡ ಬಳಸಬಹುದಾಗಿದೆ.

ಸಿಗ್ನಲ್‌

ಹೌದು, ಸಿಗ್ನಲ್‌ ಅಪ್ಲಿಕೇಶನ್‌ ವಾಟ್ಸಾಪ್‌ ಮಾದರಿಯ ಫೀಚರ್ಸ್‌ಗಳ ಮೂಲಕವೇ ಗಮನ ಸೆಳೆದಿದೆ. ವಾಟ್ಸಾಪ್‌ ಮಾಡಿದ ಎಡವಟ್ಟನ್ನೇ ಬಂಡವಾಳ ಮಾಡಿಕೊಂಡು ಹೆಚ್ಚಿನ ಜನರನ್ನು ಆಕರ್ಷಿಸಿದೆ. ಸದ್ಯ ಈ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಅನ್ನು ನಿಮ್ಮ ಫೋನ್ ಮತ್ತು ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿ ನಡುವೆ ಕೆಲವು ಸುಲಭ ಹಂತಗಳೊಂದಿಗೆ ನಿಮ್ಮ ಖಾತೆಯನ್ನು ಸಿಂಕ್ ಮಾಡಲು ಅನುಮತಿಸುತ್ತದೆ. ಜೊತೆಗೆ ಇದು ಪಠ್ಯ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹಾಗೂ ಧ್ವನಿ ಮತ್ತು ವೀಡಿಯೊ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ನಿಮಗೆ ಅನುಮತಿಸುತ್ತದೆ. ಹಾಗಾದ್ರೆ ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಲ್ಯಾಪ್‌ಟಾಪ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಸಿಗ್ನಲ್‌ ಅಪ್ಲಿಕೇಶನ್‌ ಓಪನ್ ಸೋರ್ಸ್ ಸಿಗ್ನಲ್ ಪ್ರೊಟೊಕಾಲ್‌ನಿಂದ ಎಲ್ಲರನ್ನು ಆಕರ್ಷಿಸಿದೆ. ಅಲ್ಲದೆ ಡಿಸ್‌ಅಪಿಯರಿಂಗ್‌ ಮೆಸೇಜ್‌, ಸ್ಕ್ರೀನ್‌ ಸೆಕ್ಯೂರ್‌ ಮತ್ತು ರಿಜಿಸ್ಟರ್‌ ಲಾಕ್‌ನಂತಹ ಗೌಪ್ಯತೆ ಫೀಚರ್ಸ್‌ಗಳನ್ನು ಸಹ ಸಿಗ್ನಲ್ ಅಪ್ಲಿಕೇಶನ್‌ ನೀಡುತ್ತದೆ. ಈ ಎಲ್ಲಾ ಫೀಚರ್ಸ್‌ಗಳು ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗಿಂತ ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಹೆಚ್ಚು ಜನಪ್ರಿಯಗೊಳಿಸಿದೆ. ಇನ್ನು ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ನೀವು ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಬಳಸುವುದು ವಾಟ್ಸಾಪ್ ವೆಬ್ ಬಳಸುವುದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಸಿಗ್ನಲ್ ವೆಬ್ ಕ್ಲೈಂಟ್ ಹೊಂದಿಲ್ಲ ಮತ್ತು ಇದು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಸೀಮಿತವಾಗಿದೆ.

ಲ್ಯಾಪ್‌ಟಾಪ್

ಆದರೆ ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ನೀವು ಸಿಗ್ನಲ್‌ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ವಿಂಡೋಸ್, ಮ್ಯಾಕೋಸ್ ಮತ್ತು ಲಿನಕ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಸಿಗ್ನಲ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್ ಲಭ್ಯವಿದೆ. ಇದಕ್ಕೆ ಕನಿಷ್ಠ 64-ಬಿಟ್ ವಿಂಡೋಸ್ 7, ಮ್ಯಾಕೋಸ್ 10.10, ಅಥವಾ ಉಬುಂಟು ಅಥವಾ ಡೆಬಿಯನ್ ನಂತಹ ಎಪಿಟಿಯನ್ನು ಬೆಂಬಲಿಸುವ 64-ಬಿಟ್ ಲಿನಕ್ಸ್ ವಿತರಣೆಗಳು ಬೇಕಾಗುತ್ತವೆ. ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅನ್ನು ಬಳಸಲು ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ.

ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅನ್ನು ಬಳಸುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅನ್ನು ಬಳಸುವುದು ಹೇಗೆ?

ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸಿಗ್ನಲ್ ಅನ್ನು ಬಳಸಲು ಪ್ರಾರಂಭಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ನಿಮ್ಮ ಲ್ಯಾಪ್‌ಟಾಪ್‌ ವಿಂಡೋಸ್ ಮೆಷಿನ್‌ ಅಥವಾ ಮ್ಯಾಕ್‌ಬುಕ್ ಅಥವಾ ಲಿನಕ್ಸ್ ಕಂಪ್ಯೂಟರ್ ಆಗಿರಬೇಕಾಗುತ್ತದೆ.

ಹಂತ:1 ಸಿಗ್ನಲ್ ಡೆಸ್ಕ್‌ಟಾಪ್ ಅನ್ನು ಡೌನ್‌ಲೋಡ್ ಮಾಡಿ.
ಹಂತ:2 ನಿಮ್ಮ ಯಂತ್ರದಲ್ಲಿ ಡೌನ್‌ಲೋಡ್ ಮಾಡಿದ ಸಿಗ್ನಲ್ ಡೆಸ್ಕ್‌ಟಾಪ್ ಅನ್ನು ಇನ್‌ಸ್ಟಾಲ್‌ ಮಾಡಿ.
ಹಂತ:3 ಒಮ್ಮೆ ಇನ್‌ಸ್ಟಾಲ್‌ ಮಾಡಿದ ನಂತರ, ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿ ಪರದೆಯಲ್ಲಿ ಲಭ್ಯವಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಫೋನ್‌ನೊಂದಿಗೆ ಸಿಗ್ನಲ್ ಡೆಸ್ಕ್‌ಟಾಪ್ ಅನ್ನು ಲಿಂಕ್ ಮಾಡಿ. QR ಕೋಡ್ ಅನ್ನು ಸ್ಕ್ಯಾನ್ ಮಾಡಲು, ನೀವು ಸಿಗ್ನಲ್ ಸೆಟ್ಟಿಂಗ್‌ಗಳಿಗೆ ಹೋಗಬೇಕು> ಲಿಂಕ್ಡ್ ಡಿವೈಸ್‌ಗಳನ್ನು ಟ್ಯಾಪ್ ಮಾಡಿ ನಂತರ ನಿಮ್ಮ Android ಫೋನ್‌ನಲ್ಲಿ ಪ್ಲಸ್ (+) ಚಿಹ್ನೆಯನ್ನು ಟ್ಯಾಪ್ ಮಾಡಿ ಅಥವಾ ಐಫೋನ್‌ನಲ್ಲಿ ನ್ಯೂ ಡಿವೈಸ್‌ ಅನ್ನು ಲಿಂಕ್ ಮಾಡಿ.
ಹಂತ:4 ನಿಮ್ಮ ಫೋನ್‌ನಲ್ಲಿ ನಿಮ್ಮ ಲಿಂಕ್ ಮಾಡಿದ ಡಿವೈಸ್‌ಗಾಗಿ ನೀವು ಈಗ ಹೆಸರನ್ನು ಆಯ್ಕೆ ಮಾಡಬಹುದು.
ಹಂತ:5 ಇದಾದ ನಂತರ ಫಿನಿಶ್‌ ಬಟನ್ ಅನ್ನು ಒತ್ತಿರಿ.

ಫೋನ್

ಈ ಮೇಲಿನ ಎಲ್ಲಾ ಕ್ರಮಗಳನ್ನು ತೆಗೆದುಕೊಂಡ ನಂತರ, ನಿಮ್ಮ ಸಿಗ್ನಲ್ ಖಾತೆಯನ್ನು ನಿಮ್ಮ ಫೋನ್ ಮತ್ತು ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿ ನಡುವೆ ಸಿಂಕ್ ಮಾಡಲಾಗುತ್ತದೆ. ಸಿಗ್ನಲ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ನೀವು ಸಂದೇಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ನಿಮ್ಮ ಫೋನ್ ಅನ್ನು ಹೊರತರದಂತೆ ಸಿಗ್ನಲ್ ಮೂಲಕ ಸಂದೇಶಗಳನ್ನು ಕಳುಹಿಸಲು ಸಹ ನಿಮಗೆ ಸಾಧ್ಯವಾಗುತ್ತದೆ.

Best Mobiles in India

English summary
How to use Signal app on your laptop and PC.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X