ಟೆಲಿಗ್ರಾಮ್‌ನಲ್ಲಿ ಆಟೋ-ಡಿಲೀಟ್‌ ಟೈಮರ್ ಫೀಚರ್ಸ್‌ ಸಕ್ರಿಯಗೊಳಿಸುವುದು ಹೇಗೆ ?

|

ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಆಟೋ ಡಿಲೀಟ್‌ ಟೈಮರ್‌ ಫೀಚರ್‌ ಕೂಡ ಒಂದಾಗಿದೆ. ಇತ್ತೀಚಿಗೆ ಪರಿಚಯಿಸಲಾಗಿರುವ ಈ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಇದು ಬಳಕೆದಾರರು ತನ್ನ ಪ್ಲಾಟ್ ಫಾರ್ಮ್ ನಲ್ಲಿ ಶೇರ್ ಮಾಡಿರುವ ಎಲ್ಲಾ ಸಂದೇಶಗಳಿಗೆ ಟೈಮರ್ ಹಾಕಲು ಅವಕಾಶ ನೀಡುತ್ತದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ನ ಆಟೋ ಡಿಲೀಟ್‌ ಟೈಮರ್‌ ಫೀಚರ್ಸ್‌ ಮೂಲಕ ನೀವು ಶೇರ್‌ ಮಾಡಿರುವ ಎಲ್ಲಾ ಸಂದೇಶಗಳಿಗೆ ಟೈಮರ್‌ ಹಾಕಲು ಅವಕಾಶ ನೀಡಲಿದೆ. ಬಳಕೆದಾರರು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು ಮತ್ತು ಆಟೋ-ಡಿಲೀಟ್‌ ಟೈಮರ್ ಅನ್ನು ಒಂದು ದಿನ ಅಥವಾ ಒಂದು ವಾರಕ್ಕೆ ಸೆಟ್‌ ಮಾಡಬಹುದು. ಈಗ, ಟೆಲಿಗ್ರಾಮ್ ಈ ಆಯ್ಕೆಗೆ ಮೂರನೇ ಆಯ್ಕೆಯನ್ನು ಸೇರಿಸಿದೆ. ಅದರಂತೆ ಬಳಕೆದಾರರು ಆಟೋ-ಡಿಲೀಟ್‌ ಟೈಮರ್ ಅನ್ನು ಒಂದು ತಿಂಗಳಿಗೆ ಸೆಟ್‌ ಮಾಡಬಹುದು. ಹಾಗಾದ್ರೆ ಟೆಲಿಗ್ರಾಮ್‌ನಲ್ಲಿ ಆಟೋ ಡಿಲೀಟ್‌ ಟೈಮರ್‌ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೈಮರ್

ಟೆಲಿಗ್ರಾಮ್‌ನಲ್ಲಿ ನೀವು ಒಮ್ಮೆ ಟೈಮರ್ ಅನ್ನು ಒಂದು ತಿಂಗಳಿಗೆ ಸೆಟಹೊಂದಿಸಿದರೆ, ಆಯ್ದ ಸಂದೇಶ ಅಥವಾ ಸಂದೇಶಗಳು ತಿಂಗಳಿಗೊಮ್ಮೆ ಕಣ್ಮರೆಯಾಗುತ್ತವೆ. ಇದು ವಾಟ್ಸಾಪ್‌ನಲ್ಲಿರುವ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ಸ್‌ ಮಾದರಿಯಲ್ಲಿದೆ. ಆದಾಗ್ಯೂ, ಟೆಲಿಗ್ರಾಮ್‌ಗಿಂತ ಭಿನ್ನವಾಗಿ, ಬಳಕೆದಾರರಿಗೆ ಅವರ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಟೈಮ್‌ಲೈನ್ ಆಯ್ಕೆ ಮಾಡುವ ಆಯ್ಕೆಯನ್ನು ನೀಡುತ್ತದೆ. ಆದರೆ ವಾಟ್ಸಾಪ್‌ನಲ್ಲಿ ಸಂದೇಶಗಳು ಒಂದು ವಾರದ ನಂತರ ಕಣ್ಮರೆಯಾಗುತ್ತವೆ. ಇನ್ನು ನೀವು ಕೂಡ ಟೆಲಿಗ್ರಾಮ್‌ನಲ್ಲಿ ಆಟೋ ಡಿಲೀಟ್‌ ಟೈಮರ್‌ ಫೀಚರ್ಸ್‌ ಬಳಸುವುದಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್‌ನಲ್ಲಿ ಆಟೋ-ಡಿಲೀಟ್‌ ಟೈಮರ್ ಅನ್ನು ಸಕ್ರಿಯಗೊಳಿಸುವುದು ಹೇಗೆ ?

ಆಂಡ್ರಾಯ್ಡ್‌ನಲ್ಲಿ ಆಟೋ-ಡಿಲೀಟ್‌ ಟೈಮರ್ ಅನ್ನು ಸಕ್ರಿಯಗೊಳಿಸುವುದು ಹೇಗೆ ?

ಹಂತ 1: ಟೆಲಿಗ್ರಾಂನಲ್ಲಿ ಸಂಬಂಧಿತ ಚಾಟ್ ವಿಂಡೋಗಳನ್ನು ತೆರೆಯಿರಿ.

ಹಂತ 2: ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.

ಹಂತ 3: ಕ್ಲಿಯರ್‌ ಹಿಸ್ಟರಿ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಒಂದು ಅವಧಿಯನ್ನು ಆರಿಸಿ.

ಹಂತ 5: ಮುಗಿದಿದೆ ಟ್ಯಾಪ್ ಮಾಡಿ.

ಐಒಎಸ್‌ನಲ್ಲಿ ಆಟೋ-ಡಿಲೀಟ್‌ ಟೈಮರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಐಒಎಸ್‌ನಲ್ಲಿ ಆಟೋ-ಡಿಲೀಟ್‌ ಟೈಮರ್ ಅನ್ನು ಸಕ್ರಿಯಗೊಳಿಸುವುದು ಹೇಗೆ?

ಹಂತ 1: ಟೆಲಿಗ್ರಾಂನಲ್ಲಿ ಸಂಬಂಧಿತ ಚಾಟ್ ವಿಂಡೋಗಳನ್ನು ತೆರೆಯಿರಿ.

ಹಂತ 2: ನೀವು ಟೈಮರ್ ಹಾಕಲು ಬಯಸುವ ಸಂದೇಶವನ್ನು ಒತ್ತಿ ಹಿಡಿದುಕೊಳ್ಳಿ.

ಹಂತ 3: ಕೆಳಭಾಗದಲ್ಲಿರುವ ಆಯ್ಕೆ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 4: ಈಗ ಚಾಟ್ ವಿಂಡೋದ ಮೇಲಿನ ಎಡ ಮೂಲೆಯಲ್ಲಿ ಕ್ಲಿಯರ್ ಚಾಟ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 5: ಆಟೋ-ಡಿಲೀಟ್‌ ಆಯ್ಕೆಯನ್ನು ಸಕ್ರಿಯಗೊಳಿಸಿ ಮೇಲೆ ಟ್ಯಾಪ್ ಮಾಡಿ.

ಹಂತ 6: ನಿಮ್ಮ ಅಗತ್ಯಗಳನ್ನು ಪೂರೈಸುವ ಟೈಮ್‌ಲೈನ್ ಅನ್ನು ಆಯ್ಕೆ ಮಾಡಿ.

ಹಂತ 7: ಮುಗಿದಿದೆ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

Read more about:
English summary
Telegram auto-delete timer feature has now extended the duration that messages can be left alive.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X