Home
ಟೆಕ್ ನೌಕರಿ

ಗೂಗಲ್ ಮ್ಯಾಪ್‌ನಲ್ಲಿದೆರುವ ಸೇಫ್ಟಿ ಫೀಚರ್ ಬಳಸುವುದು ಹೇಗೆ?

ಪ್ರತಿಯೋರ್ವ ಸ್ಮಾರ್ಟ್‌ಫೋನ್ ಬಳಕೆದಾರನೂ ತಮಗೆ ತಿಳಿದಿರದ ಸ್ಥಳಕ್ಕೆ ಹೋಗಲು 'ಗೂಗಲ್ ಮ್ಯಾಪ್' ಮೊರೆ ಹೋಗುವುದು ಸಾಮಾನ್ಯ. ಇಂತಹ ಜನಪ್ರಿಯ ಗೂಗಲ್ ಮ್ಯಾಪ್ ಯಾವಾಗಲೂ ಹೊಸ ವೈಶಿಷ್ಟ್ಯಗಳನ್ನು ಪಡೆಯುವ ಮೂಲಕ ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಹೊಸ ಹೊಸ ಫೀಚರ್ಸ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸುಲಭವಾಗಿ ಗಮ್ಯಸ್ಥಾನವನ್ನು ಹುಡುಕಲು ಹಾಗೂ ತಲುಪಲು ನೆರವಾಗಲಿದೆ. ಇಂತಹ ಗೂಗಲ್ ಮ್ಯಾಪ್‌ನಲ್ಲಿ ಕೆಲವೊಂದು ಫೀಚರ್ಸ್ ಮಾತ್ರ ನಮನ್ನು ಹೆಚ್ಚಾಗಿ ಸೆಳೆಯುತ್ತಿವೆ.

ಸ್ಟೇ ಸೇಫರ್

ಹೌದು, ಗೂಗಲ್ ಮ್ಯಾಪ್‌ ಆಪ್‌ನಲ್ಲಿ ಸ್ಟೇ ಸೇಫರ್ ಎಂಬ ಹೊಸ ಫೀಚರ್ ಲಭ್ಯವಿರುವುದು ನಿಮಗೆ ತಿಳಿದಿರಬಹುದು. ಇದೊಂದು ಅತ್ಯುತ್ತಮ ಫೀಚರ್ ಆಗಿದ್ದು, ಟ್ಯಾಕ್ಸಿ, ಆಟೊ ಅಥವಾ ಇನ್ಯಾವುದೇ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರ ಸುರಕ್ಷೆಗಾಗಿ ಈ ಹೊಸ ಫೀಚರ್ ಅನ್ನು ಗೂಗಲ್ ಪರಿಚಯಿಸಿದೆ. ಈ ಫೀಚರ್ ಅನ್ನು ನೀವು ಅಥವಾ ನಿಮ್ಮವರ ಸುರಕ್ಷತೆಗಾಗಿ ಬಳಸಿಕೊಳ್ಳಬಹುದಾಗಿದ್ದು, ಅಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್‌ಡೇಟ್ ಆಗಿರುವ ಗೂಗಲ್ ಮ್ಯಾಪ್ ಆಪ್‌ನಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿದೆ.

 Stay safer

ಈ ಸ್ಟೇ ಸೇಫರ್ ಬಳಕೆ ಕೂಡ ಸುಲಭವಾಗಿದ್ದು, ಗೂಗಲ್ ಮ್ಯಾಪ್ ಓಪನ್ ಮಾಡಿದಾಗ ನೀವು ಹೋಗಬೇಕಾಗಿರುವ ಸ್ಥಳ ನಮೂದಿಸಿದಾಗ ಹೇಗೆ ಹೋಗಬಹುದು ಎಂಬ ನಿರ್ದೇಶನ ಕಾಣಿಸುತ್ತದೆ. ಅದರ ಕೆಳಗಡೆ Start ಆಪ್ಶನ್‌ನ ಬಲಭಾಗದಲ್ಲಿ Stay safer ಬಟನ್ ಇದೆ. ಇದನ್ನು ಕ್ಲಿಕ್ ಮಾಡಿದ ಕೂಡಲೇ Stay Safer ಅಡಿಯಲ್ಲಿ ಎರಡು ಆಪ್ಶನ್ ಕಾಣಿಸುತ್ತದೆ. ಅಲ್ಲಿ Share live trip ಆಪ್ಶನ್ ಕ್ಲಿಕ್ ಮಾಡುವ ಮೂಲಕ ನೀವು ಸಂಚರಿಸುತ್ತಿರುವ ರೂಟ್‌ನ್ನು ನಿಮ್ಮ ಗೆಳೆಯರು ಅಥವಾ ಆಪ್ತರೊಂದಿಗೆ ಹಂಚಿಕೊಳ್ಳಬಹುದಾಗಿದೆ.

 Tracking your trip

ಇನ್ನು ಅಲ್ಲಿಯೇ ಕಾಣುವ Get off-route alerts ಕ್ಲಿಕ್ ಮಾಡಿದ ಕೂಡಲೇ Tracking your trip ಎಂಬ ವಿಂಡೊ ತೆರೆದುಕೊಳ್ಳುತ್ತದೆ, ಇಲ್ಲಿ ನೀವು ಸಂಚರಿಸುತ್ತಿರುವ ರೂಟ್ ಮ್ಯಾಪ್ ಕಾಣಿಸುತ್ತದೆ. ಅಲ್ಲಿ Stop ಬಟನ್ ಕೂಡಾ ಇದೆ.ನಿಮ್ಮ ಸಾಗುತ್ತಿರುವ ಹಾದಿಯ ದೂರ ಮತ್ತು ಕ್ರಮಿಸಲು ಬೇಕಾಗುವ ಸಮಯವೂ ಇಲ್ಲಿ ಕಾಣಿಸುತ್ತದೆ. ಒಂದು ವೇಳೆ ನೀವು ಸಾಗುತ್ತಿರುವ ದಾರಿ ಬಿಟ್ಟು ನಿಮ್ಮ ವಾಹನ ಬೇರೆ ದಾರಿಯಾಗಿ 500 ಮೀ ಹೋದರೆ ನಿಮ್ಮ ಫೋನ್‌ಗೆ alert ಸಂದೇಶ ಬರುತ್ತದೆ. ಇದರಿಂದ ನಿಮಗೆ ದಾರಿಯಲ್ಲಿ ಎಚ್ಚರಿಕೆ ಸಿಕ್ಕಿದಂತಾಗುತ್ತದೆ.

ಸುರಕ್ಷತಾ ವೈಶಿಷ್ಟ್ಯ

ಭಾರತದಲ್ಲಿ ಗೂಗಲ್ ಮ್ಯಾಪ್ ಬಳಕೆದಾರರಿಗಾಗಿ ಗೂಗಲ್ ಕಂಪೆನಿ ತಂದಿರುವ ವಿಶೇಷ ಸುರಕ್ಷತಾ ವೈಶಿಷ್ಟ್ಯ ಇದಾಗಿದೆ. ವಿಶೇಷವಾಗಿ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಬಳಕೆದಾರರನ್ನು ಗೂಗಲ್ ಕಂಪೆನಿ ಗುರಿಯಾಗಿರಿಸಿಕೊಂಡು ಸುರಕ್ಷತೆ ನೀಡಲು ಮುಂದಾಗಿದೆ. ಇನ್ನು ಹೀಗೆಯೇ ಗೂಗಲ್ ಸ್ಮಾರ್ಟ್ ವಿಳಾಸ ಹುಡುಕಾಟ ಮೂಲಕ ಬಳಕೆದಾರರಿಗೆ ನಿಖರವಾದ ವಿಳಾಸ ಲಭ್ಯವಾಗದಿದ್ದರೂ ಸಮಿಪದ ಲೊಕೇಷನ್ ಗುರುತಿಸಲು ಸಹಾಯ ಹಾಗೂ ವಾಯ್ಸ್ ನೇವಿಗೇಷನ್ ಬೆಂಬಲ ಕೂಡ ನೀಡುತ್ತಿರುವುದನ್ನು ನಾವು ನೋಡಬಹುದು.

Best Mobiles in India

English summary
Google maps a new safety feature for Google Maps users in India aimed especially at users traveling in auto-rickshaws and taxis. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+