ಗೂಗಲ್‌ನ ಈ ಹೊಸ ಟ್ರ್ಯಾಕರ್ ಅಲರ್ಟ್ ಫೀಚರ್ ಎಷ್ಟು ಉಪಯುಕ್ತ ಗೊತ್ತಾ?
ಸ್ಮಾರ್ಟ್‌ಫೋನ್ ಮೂಲಕ ಯಾರನ್ನಾದರೂ ಟ್ರ್ಯಾಕ್ ಮಾಡುವುದಕ್ಕೆ ಹಲವು ಮಾರ್ಗಗಳಿವೆ. ಹಾಗೆಯೇ ಟ್ರ್ಯಾಕ್‌ಗೆ ಮಾಡುತ್ತಿರುವುದನ್ನು ಪತ್ತೆ ಮಾಡಲು ಗೂಗಲ್ ಹೊಸ ಫೀಚರ್ಸ್ ಇತ್ತೀಚಿಗೆ ನಡೆದ ಗೂಗಲ್ I/O 2023 ನಲ್ಲಿ ಘೋಷಿಸಿದೆ. ಬಳಕೆದಾರರು ಬ್ಲೂಟೂತ್ ಟ್ರ್ಯಾಕರ್ಸ್ ಅಥವಾ ಕೀ ಅಥವಾ ಟ್ಯಾಗ್ ಡಿವೈಸ್‌ಗಳನ್ನು ಕಳೆದುಕೊಂಡಿದ್ದರೆ, ಈ ಫೀಚರ್ ಸೂಕ್ತ ಎನಿಸುತ್ತದೆ.
ಹೌದು, ಗೂಗಲ್ ಸಂಸ್ಥೆಯು ಇತ್ತೀಚಿಗೆ ಅನ್‌ನೌನ್ ಟ್ರ್ಯಾಕರ್ ಅಲರ್ಟ್ (Unknown tracker alerts) ಆಯ್ಕೆಯನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ ಮಾಡಿದೆ. ಈ ಆಯ್ಕೆಯು ಬಳಕೆದಾರರು ಬ್ಲೂಟೂತ್ ಟ್ರ್ಯಾಕರ್ಸ್ ಅಥವಾ ಕೀ ಅಥವಾ ಟ್ಯಾಗ್ ಡಿವೈಸ್ ಪತ್ತೆ ಮಾಡುವುದು ತುಂಬಾ ಸುಲಭ ಆಗಿದೆ.

ಬ್ಲೂಟೂತ್ ಟ್ರ್ಯಾಕರ್‌ಗಳು, ಟ್ಯಾಗ್‌ಗಳು ಕಳೆದುಹೋದರೆ ಅವುಗಳನ್ನು ಪತ್ತೆಹಚ್ಚಲು ಮಾಡಲು ಅನ್‌ನೌನ್ ಟ್ರ್ಯಾಕರ್ ಅಲರ್ಟ್ ನೆರವಾಗಲಿದೆ. ಗೂಗಲ್‌ನ ಈ ಟ್ರ್ಯಾಕರ್ ಅಲರ್ಟ್ ವ್ಯವಸ್ಥೆಯು ಅನ್‌ನೌನ್ ಟ್ರ್ಯಾಕರ್ ಅವರೊಂದಿಗೆ ಎಲ್ಲಿ ಪ್ರಯಾಣಿಸಿದೆ ಎಂಬುದನ್ನು ಗುರುತಿಸಲು ಬಳಕೆದಾರರ ಡಿವೈಸ್‌ನ ಸ್ಥಳವನ್ನು ಬಳಸುತ್ತದೆ. ಹಾಗಾದರೆ ಅನ್‌ನೌನ್ ಟ್ರ್ಯಾಕರ್ ಅಲರ್ಟ್ ಆಯ್ಕೆ ಸಕ್ರಿಯ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಆಂಡ್ರಾಯ್ಡ್‌ನಲ್ಲಿ ಅನ್‌ನೌನ್ ಟ್ರ್ಯಾಕರ್ ಅಲರ್ಟ್ ಆನ್ ಮಾಡಲು ಹೀಗೆ ಮಾಡಿ :
ಆಂಡ್ರಾಯ್ಡ್ 12 (S) ಮತ್ತು ನಂತರ ಓಎಸ್ ಇರುವ ಡಿವೈಸ್‌ಗಳಲ್ಲಿ ಈ ಕ್ರಮ
ಹಂತ 1 : ಮೊಬೈಲ್/ ಟ್ಯಾಬ್‌ನಲ್ಲಿ ಸೆಟ್ಟಿಂಗ್ ಆಯ್ಕೆ ಟ್ಯಾಪ್ ಮಾಡಿ.
ಹಂತ 2 : ಸುರಕ್ಷತೆ ಮತ್ತು ತುರ್ತುಸ್ಥಿತಿ ಮತ್ತು ನಂತರ ಅನ್‌ನೌನ್ ಟ್ರ್ಯಾಕರ್ ಅಲರ್ಟ್ ಆಯ್ಕೆ ಕ್ಲಿಕ್ ಮಾಡಿ.
ಹಂತ 3 : ಅಲರ್ಟ್‌ಗಳನ್ನು ಅನುಮತಿಸಿ ಆನ್ ಅಥವಾ ಆಫ್ ಆಯ್ಕೆ ಕ್ಲಿಕ್ ಮಾಡಿ.
ಆಂಡ್ರಾಯ್ಡ್ 11 (R) ಮತ್ತು ಇದಕ್ಕೂ ಹಿಂದಿನ ಓಎಸ್ ಡಿವೈಸ್‌ನಲ್ಲಿ ಹೀಗೆ ಮಾಡಿ:
ಹಂತ 1 : ಡಿವೈಸ್‌ನಲ್ಲಿ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ.
ಹಂತ 2 : ಬಳಿಕ ಗೂಗಲ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ವೈಯಕ್ತಿಕ ಸುರಕ್ಷತೆಯನ್ನು ಕ್ಲಿಕ್ ಮಾಡಿ.
ಹಂತ 3 : ಈಗ Unknown ಟ್ರ್ಯಾಕರ್ ಅಲರ್ಟ್ ಆಯ್ಕೆ ಟ್ಯಾಪ್ ಮಾಡಿ.
ಹಂತ 4 : ಅಲರ್ಟ್‌ಗಳನ್ನು ಅನುಮತಿಸಿ ಆನ್ ಅಥವಾ ಆಫ್ ಮಾಡಿ.
ಹತ್ತಿರದ ಟ್ರ್ಯಾಕರ್‌ಗಳಿಗಾಗಿ ಮ್ಯಾನುವಲ್ ಆಗಿ ಸ್ಕ್ಯಾನ್ ಮಾಡಲು ಹೀಗೆ ಮಾಡಿ:
ಹಂತ 1 : ಮೊಬೈಲ್ ಅಥವಾ ಟ್ಯಾಬ್‌ನಲ್ಲಿ ಸೆಟ್ಟಿಂಗ್ ಆಯ್ಕೆ ಟ್ಯಾಪ್ ಮಾಡಿ.
ಹಂತ 2 : ಸುರಕ್ಷತೆ ಮತ್ತು ತುರ್ತು ಟ್ಯಾಪ್ ಮಾಡಿ ಮತ್ತು ನಂತರ Unknown ಟ್ರ್ಯಾಕರ್ ಅಲರ್ಟ್ ಆಯ್ಕೆ ಕ್ಲಿಕ್ ಮಾಡಿ.
ಹಂತ 3 : ಆ ಬಳಿಕ ಸ್ಕ್ಯಾನ್ ಆಯ್ಕೆ ಕ್ಲಿಕ್ ಮಾಡಿ.
ನೋಟಿಫಿಕೇಶನ್ ಸ್ವೀಕರಿಸಿದಾಗ ಟ್ರ್ಯಾಕರ್ ಅನ್ನು ಪತ್ತೆ ಮಾಡಲು ಹೀಗೆ ಮಾಡಿರಿ :
ಹಂತ 1 : ಡಿವೈಸ್‌ನಲ್ಲಿ ಗೂಗಲ್ ಮ್ಯಾಪ್ ಅನ್ನು ತೆರೆಯಲು ಟ್ರ್ಯಾಕರ್ ನೋಟಿಫಿಕೇಶನ್ ಅನ್ನು ಟ್ಯಾಪ್ ಮಾಡಿ.
ಹಂತ 2 : ಟ್ರ್ಯಾಕರ್ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವುದನ್ನು ಪತ್ತೆ ಹಚ್ಚಿ.
ಹಂತ 3 : ಪ್ಲೇ ಸೌಂಡ್ ಆಯ್ಕೆ ಅನ್ನು ಕ್ಲಿಕ್ ಮಾಡಿರಿ (ಇದು ಟ್ರ್ಯಾಕರ್ ಜೋರು ಶಬ್ದ ಮಾಡಲು ಕಾರಣವಾಗುತ್ತದೆ)
ಹಂತ 4 : ನಂತರ ಪತ್ತೆಹಚ್ಚಲು ಟ್ರ್ಯಾಕರ್ ಮಾಡಿದ ಶಬ್ದದ ಕಡೆಗೆ ಹುಡುಕಿ
ಹಂತ 5 : ಬಳಕೆದಾರರೇ ಟ್ರ್ಯಾಕರ್ ಅನ್ನು ಕಂಡುಕೊಂಡರೆ, ಮುಂದಿನ ಹಂತಗಳನ್ನು ಕ್ಲಿಕ್ ಮಾಡಿ.
ಹಂತ 6 : ಒಂದು ವೇಳೆ ನೀವೇನಾದರೂ ಶಬ್ದ ಕೇಳದಿದ್ದರೆ, ಮತ್ತೆ 'ಪ್ಲೇ ಸೌಂಡ್' ಆಯ್ಕೆ ಅನ್ನು ಕ್ಲಿಕ್ ಮಾಡಿ.


Click it and Unblock the Notifications








