ವಾಟ್ಸಾಪ್‌ನಲ್ಲಿ ಮ್ಯೂಟ್ ವೀಡಿಯೊ ಫೀಚರ್ಸ್‌ ಬಳಸುವುದು ಹೇಗೆ ?

|

ವಾಟ್ಸಾಪ್‌ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್ ಅಪ್ಲಿಕೇಶನ್‌ ಆಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಸೇವಾ ನಿಯಮ ವಿವಾದದಿಂದ ಹೆಚ್ಚು ಚರ್ಚೆಯಲ್ಲಿದೆ. ಆದರೂ ಇದರ ನಡುವೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಬಳಕೆದಾರರಿಗೆ ಕಾಲಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇನ್ನು ಇತ್ತೀಚಿಗಷ್ಟೇ ಮ್ಯೂಟ್‌ ವೀಡಿಯೋ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಇದು ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಾಗಲಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಇತ್ತೀಚೆಗೆ ಮ್ಯೂಟ್‌ ವೀಡಿಯೊ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಬಳಸಿ ವಾಟ್ಸಾಪ್‌ನಲ್ಲಿ ವೀಡಿಯೋ ಮ್ಯೂಟ್‌ ಮಾಡಿ ಆಡಿಯೋಗಳನ್ನು ಚಾಟ್‌ಗಳಲ್ಲಿ ಸೆಂಡ್‌ ಮಾಡಬಹುದಾಗಿದೆ. ಅಲ್ಲದೆ ವಾಟ್ಸಾಪ್ ಸ್ಟೇಟಸ್‌ಗೆ ಶೇರ್‌ ಮಾಡುವ ಮೊದಲು ವೀಡಿಯೊ ಮ್ಯೂಟ್‌ ಮಾಡಿ ಆಡಿಯೋ ಮಾತ್ರ ಶೇರ್‌ ಮಾಡಲು ಇದು ನಿಮಗೆ ಅನುಮತಿಸುತ್ತದೆ. ಹಾಗಾದ್ರೆ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್‌ನಲ್ಲಿ ನೀವು ಆಡಿಯೊ ಇಲ್ಲದೆ ವಾಟ್ಸಾಪ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲು ಬಯಸಿದರೆ ಮ್ಯೂಟ್ ವೀಡಿಯೊ ಫೀಚರ್ಸ್‌ ಸೂಕ್ತವಾಗಿದೆ. ಇನ್ನು ಇಲ್ಲಿಯವರೆಗೆ, ವೀಡಿಯೊದಲ್ಲಿ ಆಡಿಯೊವನ್ನು ಎಡಿಟ್‌ ಮಾಡಲು ನೀವು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಈಗ ನೀವು ನೇರವಾಗಿ ವಾಟಸ್ಆಪ್‌ ಅಪ್ಲಿಕೇಶನ್‌ನಲ್ಲಿಯೇ ಮ್ಯೂಟ್ ವೀಡಿಯೊ ಫೀಚರ್ಸ್‌ ಅನ್ನು ಬಳಸಬಹುದಾಗಿದೆ. ಈ ಮೂಲಕ ವೀಡಿಯೋವನ್ನು ಮ್ಯೂಟ್‌ ಮಾಡಿ ಕೇವಲ ಆಡಿಯೋವನ್ನು ಶೇರ್‌ ಮಾಡಬಹುದಾಗಿದೆ.

ವಾಟ್ಸಾಪ್‌ ಮ್ಯೂಟ್ ವೀಡಿಯೊ ಫೀಚರ್ಸ್‌ ಬಳಸುವುದು ಹೇಗೆ ?

ವಾಟ್ಸಾಪ್‌ ಮ್ಯೂಟ್ ವೀಡಿಯೊ ಫೀಚರ್ಸ್‌ ಬಳಸುವುದು ಹೇಗೆ ?

ಹಂತ:1 ಮೊದಲಿಗೆ, ನೀವು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ವಾಟ್ಸಾಪ್‌ನ ಇತ್ತೀಚಿನ ಅಪ್ಡೇಟ್‌ ಅನ್ನು ಇನ್‌ಸ್ಟಾಲ್‌ ಮಾಡಿ. (ಇದರಲ್ಲಿ ನಿಮಗೆ ಮ್ಯೂಟ್ ವೀಡಿಯೊ ಐಕಾನ್ ಸಿಗದಿದ್ದರೆ, ವಾಟ್ಸಾಪ್ ಅದನ್ನು ಕ್ರಮೇಣ ಆಂಡ್ರಾಯ್ಡ್‌ನಲ್ಲಿ ಹೊರತರುತ್ತಿರುವುದರಿಂದ ನೀವು ಇನ್ನೂ ಫೀಚರ್ಸ್‌ ಅನ್ನು ಸ್ವೀಕರಿಸದಿರುವ ಅವಕಾಶವಿದೆ.)

ಹಂತ:2 ಯಾವುದೇ ವಾಟ್ಸಾಪ್ ಚಾಟ್ ತೆರೆಯಿರಿ.

ಹಂತ:3 ನೀವು ವೀಡಿಯೊವನ್ನು ರೆಕಾರ್ಡ್ ಮಾಡಲು ಬಯಸಿದರೆ ಕೆಳಭಾಗದಲ್ಲಿರುವ ಲಗತ್ತು ಐಕಾನ್ ಕ್ಲಿಕ್ ಮಾಡಿ ಮತ್ತು ಕ್ಯಾಮೆರಾ ಐಕಾನ್ ಟ್ಯಾಪ್ ಮಾಡಿ ಅಥವಾ ವೀಡಿಯೊ ಆಯ್ಕೆ ಮಾಡಲು ಗ್ಯಾಲರಿ ಐಕಾನ್ ಟ್ಯಾಪ್ ಮಾಡಿ.

ವೀಡಿಯೊ

ಹಂತ:4 ನಿಮಗೆ ಈಗ ವೀಡಿಯೊವನ್ನು ಪರದೆಯ ಮೇಲೆ ತೋರಿಸಲಾಗುತ್ತದೆ ಮತ್ತು ನೀವು ಅದನ್ನು ಇಲ್ಲಿ ಎಡಿಟ್‌ ಮಾಡಬಹುದು.

ಹಂತ:5 ವೀಡಿಯೊದಿಂದ ಸೌಂಡ್‌ ಅನ್ನು ತೆಗೆದುಹಾಕಲು ಮೇಲಿನ ಎಡಭಾಗದಲ್ಲಿರುವ ಸ್ಪೀಕರ್ ಐಕಾನ್ ಟ್ಯಾಪ್ ಮಾಡಿ.

ಹಂತ:6 ನಂತರ, ನೀವು ವಾಟ್ಸಾಪ್‌ನಲ್ಲಿ ಆಡಿಯೋ ಇಲ್ಲದೆ ವೀಡಿಯೊವನ್ನು ಹಂಚಿಕೊಳ್ಳಬಹುದು.

ವೀಡಿಯೊ

ಇನ್ನು ಈ ಮ್ಯೂಟ್ ವೀಡಿಯೊ ಐಕಾನ್ ಐಫೋನ್ ಅಪ್ಲಿಕೇಶನ್‌ನಲ್ಲಿ ಯಾವಾಗ ಲಭ್ಯವಿರುತ್ತದೆ ಎಂಬುದರ ಕುರಿತು ವಾಟ್ಸಾಪ್ ಇನ್ನೂ ಟೈಮ್‌ಲೈನ್ ಅನ್ನು ಬಹಿರಂಗಪಡಿಸಿಲ್ಲ. ಆದರೆ ಆಂಡ್ರಾಯ್ಡ್‌ನಲ್ಲಿ ಲಭ್ಯವಿರುವುದಾಗಿ ವಾಟ್ಸಾಪ್‌ ಹೇಳಿಕೊಂಡಿದೆ. ಈ ಮೂಲಕ ಬಳಕೆದಾರರು ತಮ್ಮ ವೀಡಿಯೋಗಳನ್ನು ಅಗತ್ಯಕ್ಕೆ ತಕ್ಕಂತೆ ಮ್ಯೂಟ್‌ ಮಾಡಿಕೊಂಡು ಶೇರ್‌ ಮಾಡಬಹುದಾಗಿದೆ.

Best Mobiles in India

English summary
WhatsApp now lets you get rid of sound from videos before you send them. This is how you can use the new feature.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X