ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ನಿಜಕ್ಕೂ ಇಂತಹ ಸ್ಥಿತಿ ಎಲ್ಲರಿಗೂ ಬಂದೊದಗುತ್ತದೆ. ನಿಮಗೆ ವಾಟ್ಸಾಪ್‌ನಲ್ಲಿ ಮಾತನಾಡಬೇಕು ಎಂದಿರುತ್ತದೆ ಆದರೆ ಇಂಟರ್ನೆಟ್ ಸಂಪರ್ಕವೇ ಇರುವುದಿಲ್ಲ ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಅನ್ನು ಬಳಸಬೇಕು ಎಂಬ ಮಾಹಿತಿ ನಿಮಗೆ ತಿಳಿಯಬೇಕು ಎಂದಾದಲ್ಲಿ ಇಂದಿನ ಲೇಖನ ನಿಮಗೆ ಈ ಬಗೆಯಲ್ಲಿ ಸಹಾಯ ಮಾಡಲಿದೆ. ಹಾಗಿದ್ದರೆ ಅದೇನು ಎಂಬುದನ್ನು ಸರಳವಾಗಿ ಇಲ್ಲಿ ತಿಳಿದುಕೊಳ್ಳಿ.
ಇದರೊಂದಿಗೆ ವಾಟ್ಸಾಪ್‌ನಲ್ಲಿ ಚಾಟ್ ಮಾಡುವಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ನಾವು ತಿಳಿಸಿದ್ದು ಈ ಗೌಪ್ಯತೆಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಟ್ಸಾಪ್ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

#1
ವಾಟ್ಸಾಪ್ ಅನ್ನು ಬಳಸದೇ ಇರುವ ಸಂದರ್ಭದಲ್ಲಿ ಎಸ್ಎಮ್ಎಸ್ ಸಹಾಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಎಸ್‌ಎಮ್‌ಎಸ್‌ಗಳೇ ವಾಟ್ಸಾಪ್‌ಗೆ ಪರ್ಯಾಯವಾಗಿ ಕೆಲಸ ಮಾಡಬಹುದು.

#2
ಇಂಟರ್ನೆಟ್ ಸಂಪರ್ಕ ಇಲ್ಲ ಎಂದ ಸಂದರ್ಭದಲ್ಲಿ ಬ್ಯಾಕ್‌ಲಾಗ್ ಸಂದೇಶಗಳನ್ನು ತೆರವುಗೊಳಿಸುವ ವಿಶೇಷ ಅವಕಾಶ ಇದಾಗಿದೆ. ಇಂಟರ್ನೆಟ್ ಸಂಪರ್ಕ ಇಲ್ಲವೆಂದಾದಾಗ ನಿಮಗೆ ಬ್ರೌಸ್ ಮಾಡುವುದು, ನಿಮ್ಮ ಹಿಂದಿನ ಸಂದೇಶಗಳನ್ನು ಓದುವುದು ಇಲ್ಲವೇ ಡಿಲೀಟ್ ಮಾಡುವುದು ಮೊದಲಾದ ಕೆಲಸಗಳನ್ನು ನಿರ್ವಹಿಸಬಹುದು. ಅಂತೆಯೇ ಸಂದೇಶಗಳಿಗಾಗಿ ಡ್ರಾಫ್ಟ್ ಅನ್ನು ರಚಿಸಿಟ್ಟುಕೊಳ್ಳಬಹುದು.

#3
ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬ್ಲ್ಯೂಟೂತ್ ಮೆಸೆಂಜರ್ ಅನ್ನು ಬಳಸಿಕೊಂಡು ವಾಟ್ಸಾಪ್ ಬಳಸಬಹುದು. ಇದು ವಾಟ್ಸಾಪ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಬಳಸುವುದಿಲ್ಲ ಅಂತೆಯೇ ವಾಟ್ಸಾಪ್‌ನಿಂದ ಅಧಿಕೃತ ಅಪ್ಲಿಕೇಶನ್ ಅಲ್ಲ.

#4
ಚಾಟ್ ನಿರ್ದಿಷ್ಟ ಗ್ಲೋಬಲ್ ಸಿಮ್ ಇದಾಗಿರುವುದರಿಂದ ಸಿಮ್ ಇನ್‌ಸ್ಟಾಲ್ ಮಾಡುವುದರೊಂದಿಗೆ ಎಲ್ಲವೂ ಸ್ವಯಂಚಾಲಿತವಾಗಿರುತ್ತದೆ. ಪಾಲುದಾರರ ಡೇಟಾ ಸರ್ವೀಸ್‌ನಲ್ಲಿ ನೀವು ಇದ್ದೀರಿ ಎಂದಾದಲ್ಲಿ ನಿಮ್ಮ ಫೋನ್ ಇದಕ್ಕೆ ಸಂಪರ್ಕಗೊಳ್ಳುತ್ತದೆ ಮತ್ತು ನಿಮಗೆ ವಾಟ್ಸಾಪ್ ಮಾಡಬಹುದಾಗಿದೆ.ಇದು ತನ್ನದೇ ಆದ ದರಗಳನ್ನು ಒಳಗೊಂಡಿದ್ದು ಅನಿಯಮಿತ ಚಾಟ್ ಮತ್ತು ಎಸ್‌ಎಮ್‌ಎಸ್‌ಗಳನ್ನು ನಿಮಗೆ ಮಾಡಬಹುದಾಗಿದೆ. ದಿನದ ಸರಾಸರಿ ಅವಧಿಯನ್ನು ನೀವು ಮೀರುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ನಿಮ್ಮ ಫೋನ್‌ನಲ್ಲಿರುವ ವಾಟ್ಸಾಪ್‌ನ ಸಂರಕ್ಷಣೆಗಾಗಿ ಪಾಸ್‌ವರ್ಡ್ ಅಥವಾ ಪಿನ್ ಅನ್ನು ಬಳಸಿ. ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಈ ಕೆಲಸವನ್ನು ಮಾಡುತ್ತವೆ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಬಳಸಿ ವಾಟ್ಸಾಪ್ "ಚಿತ್ರಗಳು" ಮತ್ತು ವೀಡಿಯೋಗಳ" ಫೋಲ್ಡರ್ ಅನ್ನು ಹುಡುಕಿ. ಪ್ರತಿಯೊಂದರಲ್ಲಿ ನೋಮೀಡಿಯಾ ಫೋಲ್ಡರ್ ಅನ್ನು ರಚಿಸಿ. ಫೋಲ್ಡರ್ ಸ್ಕ್ಯಾನಿಂಗ್ ಮಾಡುವಲ್ಲಿಂದ ಆಂಡ್ರಾಯ್ಡ್‌ನ ಗ್ಯಾಲರಿಯನ್ನು ಇದು ನಿಲ್ಲಿಸುತ್ತದೆ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ನೀವು ಯಾವಾಗ ಆನ್‌ಲೈನ್‌ನಿಂದ ಹೊರಹೋಗಿರುತ್ತೀರಿ ಎಂಬ ಸುದ್ದಿಯನ್ನು ಲಾಸ್ಟ್ ಸೀನ್ ಬಳಕೆದಾರರಿಗೆ ತಿಳಿಸುತ್ತದೆ. ಇದು ಇತರರಿಗೆ ತಿಳಿಯುವುದು ಬೇಡ ಎಂಬುದು ನಿಮ್ಮ ಉದ್ದೇಶವಾಗಿದ್ದರೆ ಅದನ್ನು ಮರೆಮಾಡಿ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ನಿಮ್ಮ ಪ್ರೊಫೈಲ್ ಚಿತ್ರವನ್ನು ಲಿಂಕ್‌ಡ್ ಇನ್, ಫೇಸ್‌ಬುಕ್, ಇಲ್ಲವೇ ಟ್ವಿಟ್ಟರ್‌ನಲ್ಲಿ ನೀವು ಬಳಸಿದ್ದೀರಿ ಎಂದಾದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ಎಂದಿಗೂ ಅಪ್ಲಿಕೇಶನ್ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ. ಚಾಟ್ಸ್, ವಾಯ್ಸ್ ಸಂದೇಶ, ಪೇಮೆಂಟ್, ಫೋಟೋಗಳು ಅಥವಾ ವೀಡಿಯೊಗಳ ಕುರಿತಾದ ಇಮೇಲ್‌ಗಳನ್ನು ಕಳುಹಿಸುವುದಿಲ್ಲ. ಆದ್ದರಿಂದ ವಾಟ್ಸಾಪ್ ಹೆಸರುಳ್ಳ ಸ್ಕ್ಯಾಮ್ ಮೇಲ್‌ಗಳು ಬಂದಾಗ ಆದಷ್ಟು ಎಚ್ಚರವಾಗಿರಿ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ನಿಮ್ಮ ಫೋನ್ ಕಳೆದು ಹೋದಲ್ಲಿ ಅಥವಾ ಕದ್ದು ಹೋದಲ್ಲಿ ವಾಟ್ಸಾಪ್ ಖಾತೆಯನ್ನು ಸರಳವಾಗಿ ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೆಟ್‌ವರ್ಕ್ ಪ್ರೊವೈಡರ್‌ನಿಂದ ಸಿಮ್ ಕಾರ್ಡ್ ಲಾಕ್ ಮಾಡುವ ಮೂಲಕ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು. ಬೇರೆ ಸಿಮ್ ಬಳಸಿ ಬೇರೆ ಫೋನ್‌ನಿಂದ ಹೊಸ ಫೋನ್ ಸಂಖ್ಯೆಯ ಮೂಲಕ ವಾಟ್ಸಾಪ್ ಸಕ್ರಿಯಗೊಳಿಸಬಹುದಾಗಿದೆ.

ವಾಟ್ಸಾಪ್ ಚಾಟ್ ಅನ್ನು ಗೌಪ್ಯವಾಗಿರಿಸಿಕೊಳ್ಳುವುದು ಹೇಗೆ?
ನಿಮ್ಮ ಡಿಜಿಟಲ್ ಸಂವಹನದ ಬಗ್ಗೆ ನೀವು ಆದಷ್ಟು ಎಚ್ಚರವಾಗಿರಿ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಂವಹನದಲ್ಲಿ ಕಳುಹಿಸಬೇಡಿ. ಫೋನ್ ಸಂಖ್ಯೆಗಳು, ಇಮೇಲ್ ವಿಳಾಸ ಇತ್ಯಾದಿ.

ಗಿಜ್‌ಬಾಟ್ ಲೇಖನಗಳು

ಕನ್ನಡ ಗಿಜ್‌ಬಾಟ್ ತಾಣ
ಹೆಚ್ಚಿನ ಸುದ್ದಿಗಳನ್ನು ಓದಲು ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








