ಆಪ್ ಇನ್‌ಸ್ಟಾಲ್ ಮಾಡದೆಯೂ ವಾಟ್ಸ್‌ಆಪ್ ಬಳಸಿ..!
ಸ್ಮಾರ್ಟ್‌ಫೋನ್‌ಗಳ ಸ್ಟೊರೇಜ್ ಸಾಮರ್ಥ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಅದರಂತೆ ಮೊಬೈಲ್‌ನ ಸ್ಮರಣ ಸಾಮರ್ಥ್ಯ ಎಷ್ಟೇ ಹೆಚ್ಚಾದರೂ ಅದು ಬಳಕೆದಾರರಿಗೆ ಕಡಿಮೆಯಾಗುತ್ತಲೇ ಇದೆ. ಹೊಸ ಹೊಸ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಪ್ರವೃತ್ತಿಯಿಂದ ಸ್ಮಾರ್ಟ್‌ಫೋನ್‌ನಲ್ಲಿ ಯಾವಗಲೂ ಮೆಮೊರಿ ಸಮಸ್ಯೆ ತಲೆದೂರುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಮೊಬೈಲ್‌ನಲ್ಲಿರುವ ಆಪ್‌ಗಳನ್ನು ಡಿಲೀಟ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಹೆಚ್ಚು ಸ್ಟೊರೇಜ್‌ನ್ನು ಬಳಸುವುದರಲ್ಲಿ ಎಲ್ಲರ ಮೆಚ್ಚಿನ ವಾಟ್ಸ್‌ಆಪ್‌ನದ್ದೆ ಎತ್ತಿದ ಕೈ.

ಹೌದು, ಚಾಟ್, ವಿಡಿಯೋ, ಆಡಿಯೋ, ಜಿಫ್, ಫೋಟೋಗಳು ಅಂತೆಲ್ಲಾ ನೂರು ತರಹದ ಡಾಕ್ಯುಮೆಂಟ್‌ಗಳು ಸೇವ್ ಆಗಿ ವಾಟ್ಸ್‌ಆಪ್‌ನ ಮೆಮೊರಿ ಬೇಡಿಕೆಯನ್ನು ವಿಸ್ತರಿಸುತ್ತಲೇ ಹೋಗುತ್ತವೆ. ಅದಕ್ಕಾಗಿಯೇ ವಾಟ್ಸ್‌ಆಪ್ ಕೂಡ ಡಿಲೇಟ್ ಮಾಡಬಹುದು. ಆದ್ರೆ, ವಾಟ್ಸ್‌ಆಪ್ ಇಲ್ಲ ಅಂದ್ರೆ.. ಹೇಗೆ ಚಾಟ್ ಮಾಡೋದು..? ಎಲ್ಲಾ ಕಾಂಟ್ಯಾಕ್ಟ್ ಮಿಸ್ ಆಗ್ತಾವೆ ಎಂಬ ಯೋಚನೆ ಬಂದೆ ಬರುತ್ತೆ. ಆ ಯೋಚನೆ ಬೇಡ ಮೊಬೈಲ್‌ನಲ್ಲಿ ವಾಟ್ಸ್‌ಆಪ್‌ನ್ನು ಇನ್‌ಸ್ಟಾಲ್ ಮಾಡದೆಯೂ ನೀವು ವಾಟ್ಸ್‌ಆಪ್ ಬಳಸಬಹುದು. ಹೇಗೆ ಅಂತಿರಾ ಮುಂದೆ ನೋಡಿ.

ಕ್ರೋಮ್ ಬ್ರೌಸರ್ ಇನ್‌ಸ್ಟಾಲ್ ಮಾಡಿ
ನಿಮ್ಮ ಫೋನ್‌ನಲ್ಲಿ ವಾಟ್ಸ್‌ಆಪ್ ಡಿಲೀಟ್ ಮಾಡುವುದಕ್ಕೂ ಮುನ್ನ ಮತ್ತೊಂದು ಫೋನ್‌ನಲ್ಲಿ ಕ್ರೋಮ್ ಬ್ರೌಸರ್ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬ್ರೌಸರ್ ಇಲ್ಲ ಎಂದರೆ ಪ್ಲೇ ಸ್ಟೋರ್‌ನಿಂದ ಕ್ರೋಮ್ ಬ್ರೌಸರ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ ವಾಟ್ಸ್‌ಆಪ್ ಆನ್ ಮಾಡಿ
ನಂತರ ನಿಮ್ಮ ಮೊಬೈಲ್‌ನಲ್ಲಿರುವ ಕ್ರೋಮ್ ಬ್ರೌಸರ್‌ನಲ್ಲಿ ವೆಬ್ ವಾಟ್ಸ್‌ಆಪ್ ಆನ್ ಮಾಡಿ. ಆಗ ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್‌ಆಪ್‌ನ ಮೊಬೈಲ್ ಆವೃತ್ತಿ ತೆರೆದುಕೊಳ್ಳುತ್ತದೆ.

ಡೆಸ್ಕ್‌ಟಾಪ್ ವರ್ಷನ್‌ಗೆ ಹೋಗಿ
ನಿಮ್ಮ ಮೊಬೈಲ್‌ನಲ್ಲಿ ಈಗಾಗಲೇ ವಾಟ್ಸ್‌ಆಪ್ ವೆಬ್‌ನ ಮೊಬೈಲ್ ವರ್ಷನ್ ಒಪನ್ ಆಗಿರುತ್ತದೆ. ಅದನ್ನು ನೀವು ಡೆಸ್ಕ್‌ಟಾಪ್ ಆವೃತ್ತಿಗೆ ಬದಲಾಯಿಸಬೇಕಾಗುತ್ತದೆ. ಡೆಸ್ಕ್‌ಟಾಪ್ ಆವೃತ್ತಿಗೆ ಬದಲಾಯಿಸಲು ಕ್ರೋಮ್ ಬ್ರೌಸರ್‌ನ ಬಲ ಮೂಲೆಯಲ್ಲಿರುವ ಥ್ರೀ ಡಾಟ್ ಮೆನುವಿಗೆ ಭೇಟಿ ನೀಡಿ, ಅಲ್ಲಿ ಡೆಸ್ಕ್‌ಟಾಪ್ ಆವೃತ್ತಿಯನ್ನ ಆಯ್ಕೆ ಮಾಡಿಕೊಳ್ಳಬಹುದು. ಆಗ ನಿಮ್ಮ ಮೊಬೈಲ್‌ನಲ್ಲಿ ಡೆಸ್ಕ್‌ಟಾಪ್ ಆವೃತ್ತಿ ತೆರೆದುಕೊಳ್ಳುತ್ತದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
ನಂತರ ಅಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿತವಾಗುತ್ತದೆ. ನೀವು ಸ್ಕ್ಯಾನ್ ಮಾಡಿ ಪ್ರಕ್ರಿಯೆಯಲ್ಲಿ ಮುಂದುವರೆಯಬೇಕಾಗುತ್ತದೆ. ಈಗ ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸ್‌ಆಪ್‌ನಲ್ಲಿ ವೆಬ್ ವಾಟ್ಸ್‌ಆಪ್ ಆಯ್ಕೆಯನ್ನು ಒಪನ್ ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. ನಂತರ ನಿಮ್ಮ ಚಾಟ್ಸ್‌ಗಳೆಲ್ಲ ಬ್ರೌಸರ್‌ನಲ್ಲಿ ಒಪನ್ ಆಗುತ್ತವೆ. ನೀವು ನೊಟಿಫಿಕೇಶನ್ ಸ್ವೀಕರಿಸಲು ವೆಬ್‌ಸೈಟ್‌ನಲ್ಲಿ ನೊಟಿಫಿಕೇಶನ್ ಅನುಮತಿಸಿದರೆ ಸಾಕು. ಈಗ ವಾಟ್ಸ್‌ಆಪ್ ಇನ್‌ಸ್ಟಾಲ್ ಮಾಡಿಕೊಳ್ಳದೇ ಮೊಬೈಲ್‌ನಲ್ಲಿ ವಾಟ್ಸ್‌ಆಪ್ ಬಳಸಬಹುದು.


Click it and Unblock the Notifications








