ವಾಟ್ಸ್ ಆಪ್ ಟಿಪ್ಸ್ : ಕಿರಿಕಿರಿ ಮಾಡುವ ಸ್ನೇಹಿತರನ್ನು ದೂರವಿಡುವುದು ಹೇಗೆ?
ಯಾವುದೇ ಸಂದೇಹವಿಲ್ಲದೆ ಹೇಳುವ ವಿಚಾರವೇನೆಂದರೆ ವಾಟ್ಸ್ ಆಪ್ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಸಾಮಾಜಿಕ ಮೆಸೇಜಿಂಗ್ ಆಪ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. ಮಿಲಿಯನ್ ಗಟ್ಟಲೆ ಟೆಕ್ಸ್ಟ್ ಮೆಸೇಜ್ ಗಳು, ವೀಡಿಯೋಗಳು, ಇಮೇಜ್ ಗಳು ಮತ್ತು ಜಿಐಎಫ್ ಫೈಲ್ ಗಳನ್ನು ಪ್ರತಿದಿನ ಈ ಪ್ಲ್ಯಾಟ್ ಫಾರ್ಮ್ ನಲ್ಲಿ ಹಂಚಿಕೊಳ್ಳಲಾಗುತ್ತದೆ.

ಆದರೆ ನೀವು ಯಾವುದೇ ಮೂವಿ ನೋಡುವಾದ ಅಥವಾ ಬಹಳ ಮಹತ್ವದ ಕೆಲಸ ಮಾಡುವಾಗ ಕಿರಿಕಿರಿ ಉಂಟುಮಾಡುವ ವಾಟ್ಸ್ ಆಪ್ ಮೆಸೇಜ್ ಗಳಿಂದ ಮುಕ್ತಿ ಬಯಸುವುದೇ ಆದಲ್ಲಿ ಕೆಲವು ಸಿಂಪಲ್ ಸೂತ್ರಗಳನ್ನು ಅಥವಾ ಸೆಟ್ಟಿಂಗ್ಸ್ ಗಳನ್ನು ವಾಟ್ಸ್ ಆಪ್ ನಲ್ಲಿ ಮಾಡಿಕೊಳ್ಳಬಹುದು. ಅಭಿಮಾನಿಗಳಲ್ಲಿ ಕೆಲವು ಕಿರಿಕಿರಿ ಉಂಟುಮಾಡುವ ವ್ಯಕ್ತಿಗಳು ರಿವ್ಯೂಗಳನ್ನು ನೀಡಿ, ಮೆಮೋಸ್ ಗಳನ್ನು ಕಳುಹಿಸಿ ಅಥವಾ ಜಿಫ್ ಫೈಲ್ ಗಳು ಅಥವಾ ಲೇಖನಗಳನ್ನು ವಾಟ್ಸ್ ಆಪ್ ನಲ್ಲಿ ಹಂಚಿಕೊಳ್ಳುವ ಮೂಲಕ ನಿಮ್ಮ ಮನಸ್ಸನ್ನೇ ಹಾಳು ಮಾಡಿ ನಿಮ್ಮ ಅಧ್ಬುತವಾದ ಸಮಯವನ್ನು ಲೂಟಿ ಮಾಡಿ ಬಿಡುತ್ತಾರೆ. ಅಂತಹವರನ್ನು ವಾಟ್ಸ್ ಆಪ್ ನಲ್ಲಿ ದೂರವಿಡುವುದು ಹೇಗೆ ಎಂಬ ಬಗ್ಗೆ ಕೆಲವು ಸಿಂಪಲ್ ಸೂತ್ರಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಟಿಪ್ 1:ನೋಟಿಫಿಕೇಷನ್ ಪ್ರಿವ್ಯೂವನ್ನು ಆಫ್ ಮಾಡಿ
ನಾವೆಲ್ಲರೂ ನಮ್ಮ ಸ್ಮಾರ್ಟ್ ಫೋನಿಗೆ ಎಡಿಕ್ಟ್ ಆಗಿ ಬಿಟ್ಟಿದ್ದೇವೆ ಮತ್ತು ವಾಟ್ಸ್ ಆಪ್ ನ್ನು ಕೂಡ ಬಿಟ್ಟಿರಲಾರದಷ್ಟು ನೆಚ್ಚಿಕೊಂಡಿದ್ದೇವೆ. ನಮ್ಮ ಫೋನ್ ಜಸ್ಟ್ ಒಂದು ಸಣ್ಣ ಶಬ್ದ ಮಾಡಿದರೆ ಸಾಕು ನಾವು ಅದನ್ನು ಎತ್ತಿಕೊಂಡು ಬಿಡುತ್ತೇವೆ. ಇದರಲ್ಲಿ ಸ್ಪಾಯಲರ್ ಗಳು ಅಥವಾ ಲೂಟಿಕೋರರು ಅಥವಾ ಅನಗತ್ಯದವರ ಮೆಸೇಜ್ ಕೂಡ ಇರಬಹುದು. ಇಂತಹ ಮೆಸೇಜ್ ಗಳ ನೋಟಿಫಿಕೇಷನ್ ನ್ನು ಆಫ್ ಮಾಡುವುದಕ್ಕೆ ಅವಕಾಶವಿರುತ್ತದೆ..
ನೋಟಿಫಿಕೇಷನ್ ಪ್ರಿವ್ಯೂವನ್ನು ಆಫ್ ಮಾಡುವುದು ಹೇಗೆ ಎಂಬುದು ಇಲ್ಲಿದೆ ನೋಡಿ:
- ವಾಟ್ಸಾ ಆಪ್ ನ್ನು ತೆರೆಯಿರಿ.
- ಆಪ್ ನ ಮೇಲ್ಬಾಗದ ಬಲತುದಿಯಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.
- ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ.
- ನೋಟಿಫಿಕೇಷನ್ ನ್ನು ಟ್ಯಾಪ್ ಮಾಡಿ.
- ಹೈ ಪ್ರಿಯಾರಿಟಿ ನೋಟಿಫಿಕೇಷನ್ ಇನ್ ಮೆಸೇಜ್ ಎಂಡ್ ಗ್ರೂಪ್ಸ್ ಎಂದಿರುವುದನ್ನು ಟಾಗಲ್ ಮಾಡಿ.

ಟಿಪ್ 2: ಕಾಂಟ್ಯಾಕ್ಟ್ಸ್ ನ್ನು ಬ್ಲಾಕ್ ಮಾಡಿ
ನಮ್ಮ ಸ್ನೇಹಿತರ ಬಳಗದಲ್ಲಿ ಎಲ್ಲರಿಗಿಂತ ಮುಂಚೆ ಮೂವಿಗಳನ್ನೋ ಅಥವಾ ಟಿವಿ ಶೋಗಳನ್ನೋ ಅಥವಾ ಇತ್ಯಾದಿ ಯಾವುದೇ ವೀಡಿಯೋವನ್ನು ಮೊದಲು ನೋಡಿ ಅದನ್ನು ಹಂಚಿಕೊಳ್ಳುವ ಸ್ವಭಾವದ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ. ಇವರೇ ನೋಡಿ ನಮ್ಮ ಸ್ಪಾಯಲರ್ ಗಳು ಅಥವಾ ನಮ್ಮ ಸಮಯದ ಲೂಟಿಕೋರರು ಅಥವಾ ನಮ್ಮ ಮನಸ್ಸನ್ನು ಹೊತ್ತಲ್ಲದ ಹೊತ್ತಲ್ಲಿ ಹಾಳುಮಾಡುವ ಕ್ರಿಮಿಗಳು. ಇಂತಹವರನ್ನು ನೀವು ನಿಮ್ಮ ವಾಟ್ಸ್ ಆಪ್ ಕಾಂಟ್ಯಾಕ್ಟ್ ನಲ್ಲಿ ಬ್ಲಾಕ್ ಮಾಡಿ ಇಡುವುದಕ್ಕೆ ಅವಕಾಶವಿರುತ್ತದೆ.
ಹೇಗೆ ಎಂಬುದು ಇಲ್ಲಿದೆ ನೋಡಿ:
- ವಾಟ್ಸ್ ಆಪ್ ನ್ನು ತೆರೆಯಿರಿ.
- ನೀವು ಬ್ಲಾಕ್ ಮಾಡಬೇಕು ಎಂದುಕೊಂಡಿರುವ ಚಾಟ್ ನ್ನು ತೆರೆಯಿರಿ.
- ವಿಂಡೋ ಬಲಭಾಗದ ಕಾರ್ನರ್ ನಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ
- ಮೋರ್> ಬ್ಲಾಕ್ ನ್ನು ಟ್ಯಾಪ್ ಮಾಡಿ
ಒಮ್ಮೆ ನೀವು ಕಾಂಟ್ಯಾಕ್ಟ್ ನ್ನು ಬ್ಲಾಕ್ ಮಾಡಿದ ನಂತರ, ವಾಟ್ಸ್ ಆಪ್ ವಿಂಡೋದಲ್ಲಿ ನೀವು ಬ್ಲಾಕ್ ಮಾಡಿದ ಕಾಂಟ್ಯಾಕ್ಟ್ ನ ಯಾವುದೇ ಮೆಸೇಜ್ ಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದರೆ ನೀವು ಟೆಕ್ಸ್ಟ್ ಮಾಡುವುದಕ್ಕೆ ಅಥವಾ ಮೆಸೇಜ್ ಕಳುಹಿಸುವುದಕ್ಕೆ ಅವಕಾಶವಿರುತ್ತದೆ.
ಅನ್ ಬ್ಲಾಕ್ ಮಾಡಬೇಕು ಎಂದಾದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ. ಬ್ಲಾಕ್ ಮಾಡಿರುವ ಕಾಂಟ್ಯಾಕ್ಟ್ ನ್ನು ತೆರೆಯಿರಿ> ವಿಂಡೋ ಬಲಭಾಗದ ಕಾರ್ನರ್ ನಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.> ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ> ಅನ್ ಬ್ಲಾಕ್ ನ್ನು ಟ್ಯಾಪ್ ಮಾಡಿ.

ಟಿಪ್ 3: ವಾಟ್ಸ್ ಆಪ್ ಸ್ಟೇಟಸ್ ನ್ನು ಮ್ಯೂಟ್ ಮಾಡಿ
ಈ ಲೂಟಿಕೋರರು ಅಥವಾ ಸಮಯವನ್ನು ಹಾಳುಮಾಡುವವರು ಕೇವಲ ವಾಟ್ಸ್ ಆಪ್ ಮೆಸೇಜ್ ಗಳ ರೂಪದಲ್ಲಿ ಮಾತ್ರವೇ ನಮಗೆ ಹಿಂಸೆ ನೀಡುವುದಿಲ್ಲ. ಬದಲಾಗಿ ವಾಟ್ಸ್ ಆಪ್ ಸ್ಟೇಟಸ್ ನ ರೂಪದಲ್ಲೂ ಕೂಡ ಕಿರಿಕಿರಿ ಉಂಟು ಮಾಡುತ್ತಾರೆ. ನಿಮ್ಮ ಯಾವುದೇ ಸ್ನೇಹಿತರು ಪದೇ ಪದೇ ನಿಮಗೆ ಇಷ್ಟವಿಲ್ಲದ ಪೋಸ್ಟ್ ಗಳನ್ನು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಂಚಿಕೊಳ್ಳುತ್ತಾರಾದರೆ ನೀವು ಅವರನ್ನು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಮ್ಯೂಟ್ ಮಾಡಿ ಇಡಬಹುದು. ಆಗ ಅವರ ಸ್ಟೇಟಸ್ ನಿಮಗೆ ಕಾಣಿಸುವುದೇ ಇಲ್ಲ. (ಬ್ಲಾಕ್ ಮಾಡುವ ಬದಲು ಇದನ್ನೂ ಮಾಡಬಹುದು.)
ನೀವು ಮಾಡಬೇಕಾಗಿರುವುದು ಏನು ಗೊತ್ತಾ?
- ವಾಟ್ಸ್ ಆಪ್ ಸ್ಟೇಟಸ್ ಗೆ ತೆರಳಿ .
- ಕಾಂಟ್ಯಾಕ್ಟ್ಸ್ ಸ್ಟೇಟಸ್ .
- ಮ್ಯೂಟ್ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಮುಂದುವರಿಯಿರಿ.

ಟಿಪ್ 4: ಗ್ರೂಪ್ ನೋಟಿಫಿಕೇಷನ್ ನ್ನು ಕಸ್ಟಮೈಸ್ ಮಾಡಿಕೊಳ್ಳಿ
ಕೇವಲ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಅಥವಾ ವಯಕ್ತಿಕ ಮೆಸೇಜ್ ನಲ್ಲಿ ಮಾತ್ರವೇ ಕಿರಿಕಿರಿ ಮಾಡುವುದಿಲ್ಲ ಬದಲಾಗಿ ವಾಟ್ಸ್ ಆಪ್ ಗ್ರೂಪಿನಲ್ಲೂ ಕೂಡ ಕೆಲವು ಸ್ಪಾಯಲರ್ ಗಳು ಇರುತ್ತಾರೆ.ಇಂತಹ ವ್ಯಕ್ತಿಗಳಿಂದ ನೀವು ಸ್ವಲ್ಪ ದೂರವಿರಬೇಕು ಎಂದು ಬಯಸುವುದೇ ಆದಲ್ಲಿ ಅವರ ವಯಕ್ತಿಕ ಮೆಸೇಜಿಗೆ ಅಥವಾ ಗ್ರೂಪ್ ನೋಟಿಫಿಕೇಷನ್ ಗೆ ವಿಭಿನ್ನ ಕಸ್ಟಮೈಜ್ ಸೆಟ್ಟಿಂಗ್ ನ್ನು ಮಾಡಬಹುದು. ಆಗ ವಿಭಿನ್ನ ಟೋನ್ ನಲ್ಲಿ ನಿಮಗೆ ಅವರ ಮೆಸೇಜ್ ಗಳು ಲಭ್ಯವಾಗುತ್ತದೆ. ಟೋನ್ ಮೂಲಕವೇ ನೀವು ಅವರನ್ನು ಅವಾಯ್ಡ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ನೀವೇನು ಮಾಡಬೇಕು ಎಂಬುದು ಇಲ್ಲಿದೆ:
- ನಿಮ್ಮ ವಾಟ್ಸ್ ಆಪ್ ಗ್ರೂಪಿಗೆ ತೆರಳಿ
- ಗ್ರೂಪ್ ಹೆಸರಿನ ಮೇಲೆ ಟ್ಯಾಪ್ ಮಾಡಿ
- ಕಾಂಟ್ಯಾಕ್ಟ್ಸ್> ವ್ಯೂ ಕಾಂಟ್ಯಾಕ್ಟ್ಸ್ ನ್ನು ಲಾಂಗ್ ಪ್ರೆಸ್ ಮಾಡಿ
- ಕಸ್ಟಮ್ ನೋಟಿಫಿಕೇಷನ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
- ಟೋನ್ ನ್ನು ಸೆಲೆಕ್ಟ್ ಮಾಡಿ.
ಒಮ್ಮೆ ನೀವು ಹೀಗೆ ಮಾಡಿದ ನಂತರ, ನಿಮಗೆ ಸ್ಪೆಷಲ್ ಮೆಸೇಜ್ ಟೋನ್ ರಿಮೈಡಿಂಗ್ ಲಭ್ಯವಾಗುತ್ತದೆ. ನಿಮ್ಮ ಸ್ಪೆಷಲ್ ಸ್ನೇಹಿತ ಕೀ ಪ್ಲಾಟ್ಸ್ ಗಳನ್ನು ಕಳುಹಿಸುವುದರಲ್ಲಿ ಫೇಮಸ್ ಆದ ವ್ಯಕ್ತಿ ಇನ್ನೊಂದು ಗ್ರೂಪಿನಲ್ಲಿ ಇರುವ ಸಾಧ್ಯತೆಯನ್ನು ಕೂಡ ಇದು ನೀಡುತ್ತದೆ .

ಟಿಪ್ 5: ಆಟೋ ಡೌನ್ ಲೋಡ್ ನ್ನು ಆಫ್ ಮಾಡಿ
ವಾಟ್ಸ್ ಆಪ್ ನಲ್ಲಿ ಬರುವುದೆಲ್ಲ ಡೌನ್ ಲೋಡ್ ಆಗುವುದನ್ನು ನೀವು ತಪ್ಪಿಸುವುದಕ್ಕೆ ಸಾಧ್ಯವಿದೆ.ಇದು ನಿಮಗೆ ಭವಿಷ್ಯದಲ್ಲಿ ಸ್ಪೇಸ್ ಅಥವಾ ಮೊಬೈಲ್ ಮೆಮೊರಿಯನ್ನೂ ಕೂಡ ಉಳಿಸುತ್ತದೆ.
ನೀವೇನು ಮಾಡಬೇಕು ಗೊತ್ತಾ?:
- ನಿಮ್ಮ ಸ್ಮಾರ್ಟ್ ಫೋನಿನಲ್ಲಿ ವಾಟ್ಸ್ ಆಪ್ ನ್ನು ತೆರೆಯಿರಿ
- ಆಪ್ ಬಲ ಕಾರ್ನರ್ ನಲ್ಲಿ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.
- ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ.
- ಡಾಟಾ ಮತ್ತು ಸ್ಟೋರೇಜ್ ಯ್ಯೂಸೇಜ್ ಆಯ್ಕೆಯನ್ನು ಟ್ಯಾಪ್ ಮಾಡಿ.
- ಮೀಡಿಯಾ ಆಟೋ ಡೌನ್ ಲೋಡ್ ಆಯ್ಕೆಯಲ್ಲಿ ನೀವು ನೋ ಮೀಡಿಯಾ ಆಯ್ಕೆಯನ್ನು ಎಲ್ಲಾ ಮೂರು ಸೆಟ್ಟಿಂಗ್ಸ್ ನಲ್ಲಿ ಸೆಲೆಕ್ಟ್ ಮಾಡಿ. ನಂತರ ನೀವು ಸೇಫ್!


Click it and Unblock the Notifications








