ಸ್ಟಾರ್ಸ್‌ ರೀತಿ ಕಾಣಿಸುವ ಪಾಸ್ವರ್ಡ್‌ ತಿಳಿದುಕೊಳ್ಳುವುದು ಹೇಗೆ?

Posted By: Staff
ಸ್ಟಾರ್ಸ್‌ ರೀತಿ ಕಾಣಿಸುವ ಪಾಸ್ವರ್ಡ್‌ ತಿಳಿದುಕೊಳ್ಳುವುದು ಹೇಗೆ?

ಕೆಲವೊಂದು ಸಂದರ್ಭಗಳಲ್ಲಿ ನೀವು ನಿಮ್ಮ ಪಾಸ್ವರ್ಡ್‌ ಮರೆತು ಹೋಗುವ ಸಾಧ್ಯತೆಗಳಿರುತ್ತದೆ. ಅದರಲ್ಲಿಯೂ ಪದೇ ಪದೇ ಬೇರೆ ಬೇರೆ ಕಂಪ್ಯೂಟರ್‌ ಬಳಸುವವರಿಗಂತೂ ಈ ಸಮಸ್ಯೆ ತಪ್ಪಿದ್ದಲ್ಲ. ಕೆಲವೊಂದು ವೆಬ್‌ಸೈಟ್‌ಗಳೂ ಪಾಸ್ವಾರ್ಡ್‌ ನೆನಪಿನಲ್ಲಿಟ್ಟುಕೊಳ್ಳುವ ಆಪ್ಷನ್‌ ಹೊಂದಿರುತ್ತವೆ ಆದರೆ ಎಲ್ಲಾ ತಾಣಗಳಲ್ಲಿಯೂ ಈ ಆಪ್ಷನ್‌ ಇರಬೇಕಲ್ಲ? ಹಾಗಿದ್ದಲ್ಲಿ ಪಾಸ್ವರ್ಡ್‌ ಮರೆತು ಹೋದರೆ ಮಾಡುವುದಾದರೂ ಏನು?

ಇದಕ್ಕೆ ಉಳಿದ ಒಂದೇ ಮಾರ್ಗವೆಂದರೆ ಲಾಗ್‌ಇನ್‌ ಆದ ಬಳಿಕ "ಫರ್ಗಾಟ್‌ ಪಾಸ್ವರ್ಡ್‌" ಆಪ್ಷನ್‌ ಕ್ಲಿಕ್‌ ಮಾಡುವುದು. ಅಂದಹಾಗೆ ಮತ್ತೊಂದು ಮಾರ್ಗವಿದ್ದು ಈ ಮೂಲಕ ನೀವು ಪಾಸ್ವರ್ಡ್‌ ಚೇಂಜ್‌ ಮಾಡಲು ಮನವಿ ಮಾಡಿದಾಗ ತೋರಿಸುವ ಸ್ಟಾರ್ಸ್‌ ರೀತಿಯ ಹಳೆಯ ಪಾಸ್ವರ್ಡ್‌ ಅನ್ನು ಓದಬಹುದಾಗಿದೆ. ಈ ಕೆಳಗೆ ತಿಳಿಸಿರುವಂತೆ ಅನುಸರಿಸಿದಲ್ಲಿ ನೀವು ನಿಮ್ಮ ಮರೆತ ಪಾಸ್ವರ್ಡ್‌ ಅನ್ನು ಓದಬಹುದಾಗಿದೆ.

 • ನೀವು ಲಾಗ್‌ಇನ್‌ ಆಗಬೇಕೆಂದಿರುವ ವೆಬ್‌ಸೈಟ್‌ಗೆ ತೆರಳಿ.

 • ನಂತರ ಲಾಗ್‌ಇನ್‌ ಪೇಜ್‌ಗೆ ತೆರಳಿ.
 • ಸೇವ್‌ ಆದಂತಹ ಪಾಸ್ವರ್ಡ್‌ ತಂತಾನೆ ಮೂಡಿರುತ್ತದೆ.

 • ಪಾಸ್ವರ್ಡ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ.

 • ನಂತರ ಇನ್ಸ್‌ಪೆಕ್ಟ್‌ ಎಲಿಮೆಂಟ್‌ ಮೇಲೆ ಕ್ಲಿಕ್‌ ಮಾಡಿ.
 • ಪಾಸ್ವರ್ಡ್‌ ಟ್ರೇಸ್‌ ಮಾಡಿಕೊಳ್ಳಿ.

 • ಲೇಬಲ್‌ ಕೆಳಗೆ ‘input type=”password” ಎಂದು ಕಾಣಿಸುತ್ತದೆ.

 • “type=password” ಎಂಬಲ್ಲಿ ಡಬಲ್‌ ಕ್ಲಿಕ್‌ ಮಾಡಿ.

 • ವಾಲ್ಯೂಮ್‌ ಫಾರ್ಮ್‌ ಬದಲಾಯಿಸಿ ‘password’ to ‘text’.

 • ನಂತರ ಎಂಟರ್‌ ಕ್ಲಿಕ್‌ ಮಾಡಿ.

 • ನಂತರ ನಕ್ಷತ್ರಗಳ ಹಿಂದೆ ಅಡಗಿರುವ ಪಾಸ್ವರ್ಡ್‌ ನಿಮ್ಮ ಮುಂದೆ ಕಾಣಿಸುತ್ತದೆ.

ಫೈರ್‌ ಫಾಕ್ಸ್‌ನಲ್ಲಿ ಟೆಕ್ಸಟ್‌ ಎಡಿಟರ್‌ ಸಾಮಾನ್ಯವಾಗಿ ಎಲಿಮೆಂಟ್‌ ವ್ಯೂವರ್‌ನಲ್ಲಿ ಅಡಗಿರುತ್ತದೆ. ಇದನ್ನು ಓಪನ್‌ ಮಾಡಲು ನಿಮ್ಮ ವಿಂಡೋನ ಎಡ ಭಾಗದ ಕೆಳಬದಿಯಲ್ಲಿ ಇರುವ ಮಾರ್ಕ್‌ಅಪ್‌ ಪ್ಯಾನಲ್‌ ಐಕಾನ್‌ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ.

ಅಂದಹಾಗೆ ನಕ್ಷತ್ರಗಳ ಹಿಂದೆ ಅಡಗಿರುವ ಪಾಸ್ವರ್ಡ್‌ ತಿಳಿಯುವ ಈ ಟ್ರಿಕ್‌ ಕೇವಲ ಒಂದು ಬಾರಿ ಮಾತ್ರವೇ ಕೆಲಸ ಮಾಡುತ್ತದೆ. ಅಂದರೆ ಮುಂದಿನ ಬಾರಿ ನೀವು ಲಾಗ್‌ ಇನ್‌ ಆದಲ್ಲಿ ಪುನಃ ನಕ್ಷತ್ರಗಳಂತೆ ನಿಮ್ಮ್ ಪಾಸ್ವರ್ಡ್‌ ಗೋಚರಿಸುತ್ತದೆ. ಇದರಿಂದ ನಿಮ್ಮ ಪಾಸ್ವರ್ಡ್‌ ಬೇರೆಯವರಿಗೆ ಗೋಚರಿಸುತ್ತದೆ ಎಂಬ ಆತಂಕವೇನು ಪಡುವಂತಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot