Home
ಟೆಕ್ ನೌಕರಿ

ICC T20 World Cup 2024: ಮೊಬೈಲ್ ಮತ್ತು ಟಿವಿಯಲ್ಲಿ ಉಚಿತವಾಗಿ ಲೈವ್ ವೀಕ್ಷಿಸುವುದು ಹೇಗೆ?

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ICC T20 World Cup 2024 (ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್) ಟೂರ್ನಿಯ ಕಡೆಗೆ ಕ್ರಿಕೆಟ್‌ ಪ್ರೇಮಿಗಳ ಕಣ್ಣು ನೆಟ್ಟಿದೆ. ಟ್ರೋಫಿ ಗೆಲುವಿನ ಬರ ಎದುರಿಸುತ್ತಿರುವ ಭಾರತ ಈ ಬಾರಿಯಾದರೂ ಸಕ್ಸಸ್‌ ಕಾಣಲಿ ಅಂತ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ ಮ್ಯಾಚ್‌ಗಳನ್ನು ಭಾರತದಲ್ಲಿ ಮೊಬೈಲ್ ಮತ್ತು ಟಿವಿಯಲ್ಲಿ 'ಫ್ರೀ'ಯಾಗಿ ಲೈವ್ ವೀಕ್ಷಿಸುವುದು ಹೇಗೆ? ಅನ್ನೋದು ಅಭಿಮಾನಿಗಳಿಗೆ ಕಾಡುತ್ತಿದ್ದು, ನಿಮ್ಮ ಈ ಗೊಂದಲಕ್ಕೆ ಇಲ್ಲಿದೆ ಉತ್ತರ.

IPL 2024 ಬಳಿಕ, ಇದೀಗ ಮತ್ತೊಂದು ಚುಟುಕು ಕ್ರಿಕೆಟ್ ಸಮರ ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಹೌದು, ಈಗಾಗಲೇ (ಜೂನ್ 01) ಪ್ರಾರಂಭವಾಗಿರುವ T20 World Cup 2024 ಕುರಿತು ನಾವು ಹೇಳುತ್ತಿದ್ದೇವೆ. ಟಿ-20 ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ 20 ತಂಡಗಳು ಸ್ಪರ್ಧೆಯಲ್ಲಿವೆ. ಈ ತಂಡಗಳನ್ನು 4 ಭಾಗಗಳಾಗಿ ವಿಂಗಡಿಸಲಾಗಿದ್ದು, ಐದು ತಂಡಗಳಿರುವ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್‌-8 ಹಂತಕ್ಕೆ ಹೋಗಲಿವೆ. ಬಳಿಕ, 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜೂನ್ 29 ರಂದು ಫೈನಲ್ ಪಂದ್ಯ ನಡೆಯಲಿದೆ.

T20 ವಿಶ್ವಕಪ್‌ ಪಂದ್ಯಗಳ ಫ್ರೀ ಲೈವ್ ಸ್ಟ್ರೀಮಿಂಗ್‌ ವೀಕ್ಷಣೆ ಎಲ್ಲಿ? ಹೇಗೆ?

ಟೂರ್ನಿಯ ಪಂದ್ಯಗಳ ಲೈವ್‌ ವೀಕ್ಷಣೆ ಹೇಗೆ?

2024ರ ಸಾಲಿನ ICC T20 World Cup-2024 ಟೂರ್ನಿಯ ಪಂದ್ಯಗಳು ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕದಲ್ಲಿ ನಡೆಯಲಿವೆ. ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 6, ರಾತ್ರಿ 8, ರಾತ್ರಿ 9, ಬೆಳಗ್ಗೆ 5, ಮಧ್ಯರಾತ್ರಿ 12:30 ಮತ್ತು ರಾತ್ರಿ 10:30ಕ್ಕೆ ಶುರುವಾಗಲಿವೆ. ಎಲ್ಲಾ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ಪ್ರಸಾರ ಮಾಡಲಿದೆ. ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌ ಮೊಬೈಲ್‌ ಅಪ್ಲಿಕೇಷನ್‌ ಮೂಲಕ, ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ ಟಿವಿಗಳಲ್ಲಿ ಲೈವ್‌ಸ್ಟ್ರೀಮಿಂಗ್‌ ವೀಕ್ಷಿಸಬಹುದು.

ಐಪಿಎಲ್‌ 2024 ಪಂದ್ಯಗಳನ್ನು ಜಿಯೋ ಸಿನಿಮಾ ಲೈವ್‌ ಸ್ಟ್ರೀಮಿಂಗ್ ಮಾಡಿತ್ತು. ಆದರೆ, T20 World Cup 2024 ಟೂರ್ನಿಯ ಪ್ರಸಾರ ಹಕ್ಕನ್ನು ಸ್ಟಾರ್ ಇಂಡಿಯಾ ಖರೀದಿಸಿದೆ. ಹೀಗಾಗಿ, ಕೇವಲ ಹಾಟ್‌ ಸ್ಟಾರ್‌ ಮೂಲಕ ಮಾತ್ರವೇ ಪಂದ್ಯಗಳ ನೇರ ಪ್ರಸಾರ ಮೊಬೈಲ್‌ನಲ್ಲಿ ವೀಕ್ಷಿಸಬಹುದು. ಇನ್ನೂ, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಎಲ್ಲಾ 55 ಪಂದ್ಯಗಳನ್ನು ವೀಕ್ಷಿಸಬಹುದು. OTT ಪ್ಲಾಟ್‌ಫಾರ್ಮ್ ಬಳಕೆದಾರರು ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಎಲ್ಲಾ T-20 ಮ್ಯಾಚ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಭಾರತದಲ್ಲಿ ಲೈವ್ ಟೆಲಿಕಾಸ್ಟ್ ಅನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬೇಕು?

ಸ್ಟಾರ್ ಸ್ಪೋರ್ಟ್ಸ್ T20 World Cup 2024 ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕು ಪಡೆದಿದೆ. ಹೀಗಾಗಿ, ನೀವು ಈ ಕೆಳಗಿನ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ಗಳಲ್ಲಿ ಎಲ್ಲಾ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು. ನೀವೇನಾದರೂ ಸ್ಮಾರ್ಟ್ ಟಿವಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೀಕ್ಷಿಸಲು ಬಯಸಿದರೆ, ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಉಳಿದಂತೆ, ಭಾರತದಲ್ಲಿ ಎಲ್ಲ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿವೆ.

  • Star Sports 1
  • Star Sports 1 HD
  • Star Sports 2
  • Star Sports 2 HD
  • Star Sports Select 2
  • Star Sports Select 2 HD
  • Star Sports 1 Hindi
  • Star Sports 1 Hindi HD
  • Star Sports 3
  • Star Sports First
  • Star Sports 1 Tamil (HD+SD)
  • Star Sports 1 Telugu (SD+ HD)
  • Star Sports 1 Kannada
  • Maa Gold
  • Suvarana Plus SD

T20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

  • ಭಾರತ vs ಐರ್ಲೆಂಡ್ : ಜೂನ್ 5, 2024, ರಾತ್ರಿ 08:00, ನ್ಯೂಯಾರ್ಕ್
  • ಭಾರತ vs ಪಾಕಿಸ್ತಾನ : ಜೂನ್ 9, 2024, ರಾತ್ರಿ 08:00, ನ್ಯೂಯಾರ್ಕ್
  • ಅಮೆರಿಕ vs ಭಾರತ : ಜೂನ್ 12, 2024, ರಾತ್ರಿ 08:00, ನ್ಯೂಯಾರ್ಕ್
  • ಭಾರತ vs ಕೆನಡಾ : ಜೂನ್ 15, 2024, ರಾತ್ರಿ 08:00, ಫ್ಲೋರಿಡಾ
  • ಸೆಮಿಫೈನಲ್ 1 : ಜೂನ್ 27, 2024 06:00 AM ಟ್ರಿನಿಡಾಡ್ ಮತ್ತು ಟೊಬಾಗೊ
  • ಸೆಮಿಫೈನಲ್ 2 : ಜೂನ್ 27, 2024 08:00 PM ಗಯಾನಾ
  • ಫೈನಲ್ ಪಂದ್ಯ : ಜೂನ್ 29, 2024 08:00 PM ಬಾರ್ಬಡೋಸ್
Best Mobiles in India

English summary
After a thrilling IPL 2024 season, it is now time to witness another rollercoaster season of cricket tournament. If you are wondering where you can watch all the action of the World Cup. In this article, we will discuss all the details you need to know about the ICC Men's T20 World Cup 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+