Home
ಟೆಕ್ ನೌಕರಿ

ಟೋಕಿಯೊ ಒಲಿಂಪಿಕ್ಸ್ 2020 ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ?

ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬ ಎನಿಸಿಕೊಂಡಿರುವ ಟೋಕಿಯೊ ಒಲಿಂಪಿಕ್ಸ್ 2020 ಇಂದು ಪ್ರಾರಂಭವಾಗಿದೆ. ಮುಂದುವರಿಯೋಣ: ಭಾವಾತ್ಮಕ ಒಗ್ಗೂಡುವಿಕೆ ಎಂಬ ಸೂಕ್ತಿಯೊಂದಿಗೆ ಒಲಿಂಪಿಕ್ಸ್‌ ಕ್ರೀಡಾಕೂಟ ಇಂದು ಟೋಕಿಯಾದಲ್ಲಿ ಉದ್ಘಾಟನೆಯಾಗಿದೆ. ಇನ್ನು ಈಗಾಗಲೇ ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಯಿಂದಲೇ ಸ್ಪರ್ಧೆಗಳು ಪ್ರಾರಂಭವಾಗಿವೆ. ಇನ್ನು ಈ ಭಾರಿ ಕರೊನಾ ಬೀತಿಯಿಂದಾಗಿ ಒಲಿಂಪಿಕ್ಸ್‌ಗೆ ಪ್ರೇಕ್ಷಕರನ್ನು ನಿಷೇಧಿಸಲಾಗಿದೆ. ಇದರಿಂದ ಒಲಿಂಪಿಕ್ಸ್‌ ಸ್ಪರ್ಧೆಗಳನ್ನು ನೀವು ಆನ್‌ಲೈನ್‌ ಮತ್ತು ಟಿವಿಯಲ್ಲಿ ಮಾತ್ರ ನೋಡಬಹುದಾಗಿದೆ.

ಟೋಕಿಯೊ

ಹೌದು, ಇಂದಿನಿಂದ ಟೋಕಿಯೊ ಒಲಿಂಪಿಕ್ಸ್ 2020 ಪ್ರಾಂಭವಾಗಿದೆ. ಇಂದಿನಿಂದ ಮುಂದಿನ 17 ದಿನಗಳಲ್ಲಿ, ವಿಶ್ವದ ಹಲವಾರು ಕ್ರೀಡಾಪಟುಗಳು ಪರಸ್ಪರರ ವಿರುದ್ಧ ಸ್ಪರ್ಧಿಸುವುದನ್ನು ನಾವು ಆನ್‌ಲೈನ್‌ ಮತ್ತು ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಈ ಭಾರಿಯ ಒಲಿಂಪಿಕ್ಸ್‌ನಲ್ಲಿ ಭಾರತವೂ ಕೂಡ 127 ಕ್ರೀಡಾಪಟುಗಳನ್ನು ಕಳುಹಿಸಿದೆ. ಅಲ್ಲದೆ ಹೆಚ್ಚಿನ ಪದಕಗಳ ನಿರೀಕ್ಷಯನ್ನು ಸಹ ಹೊಂದಿದೆ. ಹಾಗಾದ್ರೆ ಈ ಭಾರಿಯ ಟೋಕಿಯಾ ಒಲಿಂಪಿಕ್ಸ್‌ ಸ್ಪರ್ಧೆಗಳನ್ನು ವೀಕ್ಷಿಸುವುದು ಹೇಗೆ? ಭಾರತದ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಲಿಂಪಿಕ್ಸ್‌

ಟೋಕಿಯಾ ಒಲಿಂಪಿಕ್ಸ್‌ 2020 ಈಗಾಗಲೇ ಲೈವ್‌ ಆಗಿದೆ. ಭಾರತದ ಕ್ರೀಡಾಪಟುಗಳು ಕುಡ ಸ್ಫರ್ದಾ ಕಣದಲ್ಲಿದ್ದಾರೆ. ಮೊದಲ ದಿನದ ಸ್ಫರ್ದೆಗಳಲ್ಲಿ ದೀಪಿಕಾ ಕುಮಾರಿ ಆರ್ಚರಿಯಲ್ಲಿ 9ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಸ್ಪರ್ಧಾಕಣದಲ್ಲಿದ್ದಾರೆ ಎನ್ನಲಾಗಿದೆ. ಇದಲ್ಲದೆ ಭಾರತದ ಕ್ರೀಡಾಪಟುಗಳಾದ ಸಾನಿಯಾ ಮಿರ್ಜಾ, ಪಿ.ವಿ ಸಿಂಧು, ಅಂಕಿತಾ ರೈನಾ, ಸೌರಭ್ ಚೌಧರಿ, ಶರತ್ ಕಮಲ್ ನಂತಹ ಪ್ರಮುಖರು ಕೂಡ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ನೀವು ಒಲಿಂಪಿಕ್ಸ್‌ ಕ್ರೀಡಾಹಬ್ಬವನ್ನು ಲೈವ್ ಸ್ಟ್ರೀಮಿಂಗ್ ಅಥವಾ ದೂರದರ್ಶನದಲ್ಲಿ ನೀವು ಈವೆಂಟ್ ಅನ್ನು ವೀಕ್ಷಿಸುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಟೋಕಿಯೊ ಒಲಿಂಪಿಕ್ಸ್ 2020 ಅನ್ನು ವೀಕ್ಷಿಸುವುದು ಹೇಗೆ?

ಟೋಕಿಯೊ ಒಲಿಂಪಿಕ್ಸ್ 2020 ಅನ್ನು ವೀಕ್ಷಿಸುವುದು ಹೇಗೆ?

ಭಾರತದಲ್ಲಿ, ಟೋಕಿಯೊ ಒಲಿಂಪಿಕ್ಸ್ 2020 ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದ್ದು, ಸೋನಿಲೈವ್‌ನಲ್ಲಿ ನೇರ ಪ್ರಸಾರವಾಗಲಿದೆ. ರಾಷ್ಟ್ರೀಯ ಪ್ರಸಾರ ಪ್ರಸರಣ ಭಾರತಿ ಅವರ ದೂರದರ್ಶನವು ಟೋಕಿಯೊ ಒಲಿಂಪಿಕ್ಸ್ ಅನ್ನು ನೇರ ಪ್ರಸಾರ ಮಾಡಲಿದೆ. ನಿಮ್ಮ ಟಿವಿ ಪೂರೈಕೆದಾರರಲ್ಲಿ ಈ ಚಾನಲ್‌ಗಳನ್ನು ಹೇಗೆ ವೀಕ್ಷಿಸಬೇಕು ಎಂಬುದನ್ನು ಕಂಡುಹಿಡಿಯಲು ಏರ್‌ಟೆಲ್, ಟಾಟಾ ಸ್ಕೈ ಮತ್ತು ಡಿಶ್ ಟಿವಿಗಾಗಿ ನಮ್ಮ ಚಾನಲ್ ಪಟ್ಟಿ ಪುಟಗಳನ್ನು ಪರಿಶೀಲಿಸಿ. ಸೋನಿಲೈವ್ ಐಒಎಸ್, ಆಂಡ್ರಾಯ್ಡ್ ಮತ್ತು ವೆಬ್‌ನಲ್ಲಿ ಲಭ್ಯವಿದೆ ಮತ್ತು ಎಲ್‌ಐವಿ ಪ್ರೀಮಿಯಂನ ಬೆಲೆ ರೂ. 299, ಅಥವಾ ರೂ. ವರ್ಷಕ್ಕೆ 999 ರೂ. ಚಂದಾದರಿಕೆಯನ್ನು ಹೊಂದಿವೆ.

Best Mobiles in India

English summary
Tokyo Olympics 2020 is going to start from Saturday, July 23, 2021, and streamed online and also broadcast on TV.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+