ATM ಕಾರ್ಡ್‌ ಇಲ್ಲದೆ ಹೋದರು ಎಟಿಎಂನಲ್ಲಿ ಹಣವನ್ನು ವಿತ್‌ ಡ್ರಾ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ ಅಕೌಂಟ್‌ನಲ್ಲಿರುವ ಹಣವನ್ನು ಪಡೆದುಕೊಳ್ಳಲು ಹೆಚ್ಚಿನ ಜನರು ಎಟಿಎಂ ಅನ್ನೇ ಅವಲಂಬಿಸಿದ್ದಾರೆ. ಬ್ಯಾಂಕ್‌ಗಿಂತ ಹೆಚ್ಚಾಗಿ ಎಟಿಎಂ ಕೇಂದ್ರಗಳ ಕಡೆಗೆ ಹೆಚ್ಚಿನ ಜನರು ಹೋಗುತ್ತಾರೆ. ಇದೇ ಕಾರಣಕ್ಕೆ ಎಟಿಎಂಗಳಲ್ಲೂ ಜನರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಲ್ಲದೆ ಎಟಿಎಂನಲ್ಲಿ ಹಣ ಡ್ರಾ ಮಾಡುವುದಕ್ಕೆ ಮಿತಿಯನ್ನು ಸಹ ವಿಧಿಸಲಾಗಿದೆ. ಇನ್ನು ಎಟಿಎಂ ನಲ್ಲಿ ಹಣ ಪಡೆಯಬೇಕಾದರೆ ಎಟಿಎಂ ಕಾರ್ಡ ಅಗತ್ಯವಿದೆ. ಆದರೆ ಇನ್ಮುಂದೆ ಎಟಿಎಂ ಕಾರ್ಡ್‌ ಇಲ್ಲದೆ ಹೋದರೂ ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಬಹುದಾಗಿದೆ.

ಎಟಿಎಂ ಕಾರ್ಡ್‌

ಹೌದು, ಎಟಿಎಂ ಕಾರ್ಡ್‌ ಇಲ್ಲದೆ ಹೋದರು ಹಣ ಡ್ರಾ ಮಾಡುವುದಕ್ಕೆ ಅವಕಾಶವನ್ನು ಇದೀಗ ಕಲ್ಪಿಸಲಾಗಿದೆ. ಸ್ವಯಂಚಾಲಿತ ಟೆಲ್ಲರ್ ಯಂತ್ರಗಳನ್ನು ಎಟಿಎಂಗಳನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ-ಶಕ್ತಗೊಂಡ interoperable ಕಾರ್ಡ್‌ಲೆಸ್ ನಗದು ಹಿಂತೆಗೆದುಕೊಳ್ಳುವ ವ್ಯವಸ್ಥೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹಾಗಾದ್ರೆ ಎಟಿಂಎ ಕಾರ್ಡ್‌ ಇಲ್ಲದೆ ಹಣ ಡ್ರಾ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಡಿಯಾ

ಎನ್‌ಸಿಆರ್‌ ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಡ್‌ಲೆಸ್‌ ಕ್ಯಾಶ್‌ ಡ್ರಾ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ತಂತ್ರಜ್ಞಾನವು ಬಳಕೆದಾರರಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆ ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಅನುವು ಮಾಡಿಕೊಡುತ್ತದೆ. ಸದ್ಯ ಸಿಟಿ ಯೂನಿಯನ್ ಬ್ಯಾಂಕ್ ದೇಶಾದ್ಯಂತ ತನ್ನ ಸುಮಾರು 1,500 ಎಟಿಎಂಗಳು ಈಗಾಗಲೇ ಈ ತಂತ್ರಜ್ಞಾನವನ್ನು ಬೆಂಬಲಿಸುತ್ತಿವೆ ಎನ್ನಲಾಗಿದೆ. ಇನ್ನು ಈ ಟೆಕ್ನಾಲಜಿ ಬಳಸಿಕೊಂಡು ಎಟಿಎಂ ಇಲ್ಲದೆ ಹಣವನ್ನು ಡ್ರಾ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಎಟಿಎಂ ಕಾರ್ಡ್‌ ಇಲ್ಲದೆ ಹೋದರು ಎಟಿಎಂನಲ್ಲಿ ಹಣವನ್ನು ಡ್ರಾ ಮಾಡುವುದು ಹೇಗೆ?

ಇಂಟೆರ್ಪೊರೆಬಲ್‌ ಕಾರ್ಡ್ಲೆಸ್ ಕ್ಯಾಶ್ ವಿಥ್‌ ಡ್ರಾ ಟೆಕ್ನಾಲಜಿ ಸೌಲಭ್ಯದ ಸಹಾಯದಿಂದ ಹಣವನ್ನು ಎಟಿಂ ಕಾರ್ಡ್‌ ಇಲ್ಲದೆ ಹಣ ಡ್ರಾ ಮಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ಮೊಬೈಲ್ ಫೋನ್ ಮತ್ತು ಯುಪಿಐ-ಶಕ್ತಗೊಂಡ BHIM, Paytm, GPay, PhonePe ಮುಂತಾದ ಯಾವುದೇ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಆದರಿಂದ ನೀವು ಎಟಿಎಂ ಕಾರ್ಡ್ ಅನ್ನು ಜೊತೆಗೆ ತೆಗೆದುಕೊಂಡು ಹೋಗುವ ಅವಶ್ಯ ಕತೆ ಇಲ್ಲ.

ಎಟಿಎಂ ಕಾರ್ಡ್‌ ಇಲ್ಲದೆ ಹೋದರು ಎಟಿಎಂನಲ್ಲಿ ಹಣವನ್ನು ಡ್ರಾ ಮಾಡುವುದು ಹೇಗೆ?

ಎಟಿಎಂ ಕಾರ್ಡ್‌ ಇಲ್ಲದೆ ಹೋದರು ಎಟಿಎಂನಲ್ಲಿ ಹಣವನ್ನು ಡ್ರಾ ಮಾಡುವುದು ಹೇಗೆ?

ಹಂತ:1 ಈ ಸೌಲಭ್ಯವನ್ನು ಬೆಂಬಲಿಸುವ ಯಾವುದೇ ಎಟಿಎಂಗೆ ಹೋಗಿ ಮತ್ತು ಯಂತ್ರದಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಹಂತ:2 ನೀವು ಹಿಂತೆಗೆದುಕೊಳ್ಳಲು ಬಯಸುವ ನಿಖರವಾದ ಮೊತ್ತವನ್ನು ನಮೂದಿಸಿ.
ಹಂತ:3 ಯುಪಿಐ-ಶಕ್ತಗೊಂಡ ಮೊಬೈಲ್ ಅಪ್ಲಿಕೇಶನ್ ಬಳಸಿ ನೀವು ವ್ಯವಹಾರವನ್ನು ಅಧಿಕೃತಗೊಳಿಸಬೇಕಾಗಿದೆ.
ಹಂತ:4 ವಹಿವಾಟನ್ನು ಅನುಮೋದಿಸಿದ ನಂತರ ನೀವು ಹಣವನ್ನು ಡ್ರಾ ಮಾಡಲು ಸಾಧ್ಯವಾಗುತ್ತದೆ.

QR ಕೋಡ್

ಇನ್ನು QR ಕೋಡ್‌ಗಳು ಕ್ರಿಯಾತ್ಮಕವಾಗಿರುವುದರಿಂದ, ಅವು ಪ್ರತಿ ವಹಿವಾಟಿನೊಂದಿಗೆ ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ಇವುಗಳನ್ನು ಬೇರೆ ಯಾರು ಕೂಡ ನಕಲಿಸಲಾಗುವುದಿಲ್ಲ. ಈ ಪ್ರಕ್ರಿಯೆಯ ಮೂಲಕ ವ್ಯವಹಾರವು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ ಡ್ರಾ ಮಾಡುವ ಮಿತಿ ಆರಂಭದಲ್ಲಿ 5,000 ರೂ.ಗಳಿರುವ ಸಾಧ್ಯತೆಯಿದೆ, ಹಾಗೂ ನಂತರದ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ.

ಈ ಸೌಲಭ್ಯ ಎಲ್ಲರಿಗೂ ಯಾವಾಗ ಲಭ್ಯವಾಗುತ್ತದೆ?

ಈ ಸೌಲಭ್ಯ ಎಲ್ಲರಿಗೂ ಯಾವಾಗ ಲಭ್ಯವಾಗುತ್ತದೆ?

ಎನ್‌ಸಿಆರ್ ಕಾರ್ಪೊರೇಷನ್ ಮತ್ತು ಎನ್‌ಪಿಸಿಐ ಪ್ರಸ್ತುತ ದೇಶದ ಎಲ್ಲಾ ಎಟಿಎಂಗಳಲ್ಲಿ ಈ ಸೌಲಭ್ಯವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದು ಚರ್ಚಿಸುತ್ತಿದೆ. ಎರಡು ಸಂಸ್ಥೆಗಳು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಅವರೊಂದಿಗೆ ಔಪಚಾರಿಕ ಒಡನಾಟವನ್ನು ಪ್ರಕಟಿಸಲಾಗುವುದು ಎನ್ನಲಾಗಿದೆ. ಸದ್ಯ ಸಿಟಿ ಯೂನಿಯನ್ ಎಟಿಎಂಗಳಲ್ಲಿ ಈ ಸೌಲಭ್ಯವನ್ನು ಅನುಮತಿಸಲು ತನ್ನ ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್ ಅನ್ನು ಅಪ್‌ಗ್ರೇಡ್ ಮಾಡಿದೆ ಎಂದು ಎನ್‌ಸಿಆರ್ ಕಾರ್ಪೊರೇಶನ್ ವಕ್ತಾರರು ಹೇಳಿದ್ದಾರೆ. ಯಂತ್ರಾಂಶವನ್ನು ಅಪ್‌ಗ್ರೇಡ್ ಮಾಡುವ ಅಗತ್ಯವಿಲ್ಲದ ಕಾರಣ, ಈ ಸೌಲಭ್ಯವನ್ನು ದೇಶದ ಎಲ್ಲಾ ಎಟಿಎಂಗಳಲ್ಲಿ ಲಭ್ಯವಾಗುವಂತೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
ATM cardless withdrawal is now possible as users will now be able to withdraw cash without a card using a UPI-based app and QR code.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X