ಫೇಸ್ ಬುಕ್ ಮೂಲಕವೇ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡಬಹುದು..? ಹೇಗೆ..?
ನಿಮ್ಮ ಸ್ನೇಹಿತರು ಎಲ್ಲಿದ್ದಾರೆ, ಅವರ ಲೋಕೆಷನ್ ಯಾವುದು ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ. ಇದಕ್ಕಾಗಿ ನೀವು ಗೂಗಲ್ ನಲ್ಲಿ ಒಂದು ಎಕ್ಸ್ ಟೆಷನ್ ಹಾಕಿಕೊಳ್ಳುವ ಅವಶ್ಯಕತೆ ಇದೆ ಎನ್ನಲಾಗಿದೆ. Maraudaer Map ಎಂಬ ಎಕ್ಸ್ ಟೆಷನ್ ಅಳವಡಿಸಿಕೊಂಡರೆ ನಿಮ್ಮ ಸ್ನೇಹಿತರನ್ನು ಟ್ರಾಕ್ ಮಾಡಬಹುದಾಗಿದೆ.

ನಿಮ್ಮ ಫೇಸ್ ಬುಕ್ ಸ್ನೇಹಿತರನ್ನೇಲ್ಲರನ್ನು ನೀವು ಟ್ರಾಕ್ ಮಾಡಬಹುದಾಗಿದ್ದು, ಅದುವೇ ರಿಯಲ್ ಟೈಮಿನಲ್ಲಿಯೇ ಟ್ರಾಕ್ ಮಾಡುವ ಆಯ್ಕೆಯನ್ನು ಈ ಎಕ್ಸ್ ಟೆಷನ್ ನೀಡಲಿದೆ. ಈಗಾಗಲೇ ಫೇಸ್ ಬುಕ್ ಲೋಕೆಷನ್ ಸೆಂಡ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ಸ್ನೇಹಿತರನ್ನು ಟ್ರಾಕ್ ಮಾಡಬಹುದಾಗಿದೆ.
ಇದಕ್ಕಾಗಿ ನೀವು ಕ್ರೋಮ್ ನಲ್ಲಿ ಈ Extensiom Maraudaer Map ಅನ್ನು ಬ್ರೌಸ್ ಮಾಡಿ ಹುಡುಕಿಕೊಳ್ಳಬೇಕಾಗಿದೆ. ಇದನ್ನು ಕ್ರೊಮ್ ನೊಂದಿಗೆ ಆಡ್ ಮಾಡಿಕೊಂಡರೆ ಸಾಕಾಗಲಿದೆ ಎನ್ನಲಾಗಿದೆ. ಇದು ನಿಮ್ಮ ಸ್ನೇಹಿತರು ಇರುವ ಜಾಗವನ್ನು ನಿಖರವಾಗಿ ತೋರಿಸಲಿದೆ ಎನ್ನಲಾಗಿದೆ.
ಈಗಾಗಲೇ ಹಲವಾರು ಮಂದಿ ಈ ಎಕ್ಸ ಟೆಷನ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ನಿಮ್ಮ ಸ್ನೇಹಿತರನ್ನು ಹುಡಕಲು ಇದು ಸಹಾಯ ಮಾಡಲಿದೆ, ಅಲ್ಲದೇ ಅವರಿಗೆ ದಾರಿ ತೋರಿಸಲು ಇದು ಸಹಾಯವಾಗಲಿದೆ.
ಒಟ್ಟಿನಲ್ಲಿ ಫೇಸ್ ಬುಕ್ ನಿಂದ ಎಷ್ಟು ಉಪಯೋಗವಾಗುತ್ತಿದೆಯೋ ಹಾಗೆ ಕೆಟ್ಟದು ಆಗುತ್ತಿದೆ. ಇದನ್ನು ಕೇಲವರು ಸ್ನೇಹಿತರನ್ನು ಟ್ರಾಕ್ ಮಾಡಲು ಬಳಕೆ ಮಾಡಿಕೊಂಡರೆ ಇನ್ನು ಕೆಲವರು ಸ್ಪೈ ನಡೆಸಲು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications








