ಗೂಗಲ್ ಮ್ಯಾಪ್ ಬಳಸಿ ನೀವು ಕಳೆದುಕೊಂಡಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನ್ನು ಹುಡುಕುವುದು ಹೇಗೆ?

|

ಗೂಗಲ್ ಮ್ಯಾಪ್ ನಮ್ಮ ಕಳೆದು ಹೋದ ಚಪ್ಪಲಿ ಹುಡುಕಿ ಕೊಡುತ್ತಾ ಅಂತ ಬಾಯಿಮಾತಿಗೆ ತಮಾಷೆ ಮಾಡಿ ಕೇಳೋದುಂಟು. ಆದರೆ ಚಪ್ಪಲಿ ಹುಡುಕಿ ಕೊಡದೇ ಇರಬಹುದು, ಕಳೆದು ಹೋದ ಫೋನ್ ನ್ನು ಮಾತ್ರ ಖಂಡಿತ ಹುಡುಕಿ ಕೊಡುತ್ತೆ.

ಫೋನ್ ಕಳೆದುಹೋಗಿದೆಯೇ, ಹಾಗಾದ್ರೆ ಗೂಗಲ್ ಮ್ಯಾಪ್ ಬಳಸಿ ಹುಡುಕಿ

ನಿಮ್ಮ ಪಾಕೆಟ್ ನಲ್ಲಿದ್ದ ಫೋನ್ ಇದ್ದಕ್ಕಿದ್ದಂತೆ ಕಳೆದು ಹೋಗಿ ಬಿಟ್ಟಿದೆಯಾ? ಆಗ ನಿಮಗೆ ಖಂಡಿತ ಬೇಸರವಾಗಿರುತ್ತದೆ. ಅದರಲ್ಲೂ ಇತ್ತೀಚೆಗಷ್ಟೇ ಖರೀದಿಸಿದ ಫೋನ್ ಆಗಿದ್ರೆ ಖಂಡಿತ ಬೇಸರ ದುಪ್ಪಟ್ಟಾಗಿರುತ್ತದೆ.

ದುಬಾರಿ ಫೋನ್ ಕಳ್ಳರ ಪಾಲಾಗಿದ್ದರೆ ಅಥವಾ ಕೈತಪ್ಪಿ ನೀವೇ ಎಲ್ಲೋ ಬಿಟ್ಟು ಬಂದಿದ್ದು ಎಲ್ಲಿ ಎಂಬುದು ನಿಮಗೆ ತಿಳಿಯದೇ ಇದ್ದಲ್ಲಿ ಆಗುವ ಬೇಸರ ಅಷ್ಟಿಷ್ಟಲ್ಲ. ಆಗ ನೀವು ನನ್ನ ಫೋನ್ ಎಲ್ಲಿ ಬಿಟ್ಟೆ ಎಂದು ಭೂತಕಾಲದ ಪ್ರತಿಕ್ಷಣವನ್ನು ನೆನಪು ಮಾಡಲು ಪ್ರಯತ್ನಿಸುತ್ತೀರಿ ಆದರೆ ನೆನಪಾಗುವುದಿಲ್ಲ. ಹೇಗೆ ಕಳೆದುಹೋದ ಫೋನ್ ಹುಡುಕುವುದು ಎಂದು ಹೊಳೆಯುವುದೇ ಇಲ್ಲ. ಅಷ್ಟೇ ಅಲ್ಲ ಯಾರದ್ದೋ ಫೋನ್ ನಿಂದ ನಿಮ್ಮ ಫೋನಿಗೆ ಕರೆ ಮಾಡುತ್ತೀರಿ. ಆದರೂ ಹುಡುಕಲು ಸಾಧ್ಯವಾಗುವುದಿಲ್ಲ ಎಂದಿಟ್ಟುಕೊಳ್ಳಿ. ಆಗೇನು ಮಾಡುತ್ತೀರಿ? ಹೊಸ ಮಾರ್ಗವೊಂದು ಇಲ್ಲಿದೆ.

ಆಪಲ್ ನಲ್ಲಿ “ಫೈಂಡ್ ಮೈ ಫೋನ್” ಫೀಚರ್ ಇರುವಂತೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗಾಗಿ “ಫೈಂಡ್ ಯುವರ್ ಫೋನ್” ಫಂಕ್ಷನ್ ಕಾರ್ಯ ನಿರ್ವಹಿಸುತ್ತದೆ. ಈ ಫೀಚರ್ ನಲ್ಲಿ ನೀವು ಭೇಟಿ ನೀಡಿದ ಎಲ್ಲಾ ಪ್ರದೇಶದ ಟ್ರ್ಯಾಕ್ ಇರುತ್ತದೆ. ಗೂಗಲ್ ಮ್ಯಾಪ್ ನ ಸಹಾಯದಿಂದಾಗಿ ಇದೀಗ ನೀವು ನಿಮ್ಮ ಫೋನಿನ ಟ್ರ್ಯಾಕ್ ನ್ನು ಟೈಮ್ ಲೈನ್ ಸಹಾಯದಿಂದ ಗುರುತಿಸಬಹುದು. ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ. ಅದನ್ನು ಸಾಧಿಸುವುದು ಹೇಗೆ ಎಂಬ ಹಂತಹಂತವಾದ ಮಾಹಿತಿಯನ್ನು ಈ ಕೆಳಗಿನಂತೆ ಅನುಸರಿಸಿ.

ಪ್ರಮುಖ ಅಗತ್ಯತೆಗಳು:

- ಅಂತರ್ಜಾಲ ಸಂಪರ್ಕವಿರುವ ಇತರೆ ಯಾವುದಾದರೂ ಸ್ಮಾರ್ಟ್ ಫೋನ್ ಅಥವಾ ಪಿಸಿ

- ನಿಮ್ಮ ಗೂಗಲ್ ಅಕೌಂಟಿನ ಲಾಗಿನ್ ಐಡಿ ಮತ್ತು ಪಾಸ್ ವರ್ಡ್

ಅನುಸರಿಸಬೇಕಾಗಿರುವ ಹಂತಗಳು:

1. www.maps.google.co.in ನ್ನು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಪಿಸಿಯಲ್ಲಿ ತೆರೆಯಿರಿ

2. ನೀವು ಕಳೆದುಕೊಂಡಿರುವ ಸ್ಮಾರ್ಟ್ ಫೋನಿಗೆ ಲಿಂಕ್ ಆಗಿರುವ ಗೂಗಲ್ ಅಕೌಂಟ್ ಬಳಸಿ ಲಾಗಿನ್ ಆಗಿ

3. ಮೇಲ್ಬಾಗದ ಬಲ ತುದಿಯಲ್ಲಿರುವ ಮೂರು ಲಂಬವಾಗಿರುವ ಚುಕ್ಕಿಗಳನ್ನು ಟ್ಯಾಪ್ ಮಾಡಿ.

4. 'Your timeline’ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

5. ನೀವು ಯಾವ ವರ್ಷದ, ಯಾವ ತಿಂಗಳಿನ, ಯಾವ ದಿನದಲ್ಲಿ ನಿಮ್ಮ ಫೋನ್ ಎಲ್ಲಿದೆ ಎಂದು ತಿಳಿಯಲು ಇಚ್ಛಿಸುತ್ತೀರಿ ಎಂಬುದನ್ನು ಎಂಟರ್ ಮಾಡಿ.

6. ನಿಮ್ಮ ಫೋನಿನ ಸದ್ಯದ ಲೊಕೇಷನ್ ಜೊತೆಗೆ ಮ್ಯಾಪ್ ನಿಮ್ಮ ಲೊಕೇಷನ್ ಹಿಸ್ಟರಿಯನ್ನು ಕೂಡ ಇದೀಗ ಒದಗಿಸುತ್ತದೆ.

ಸೂಚನೆ: ಈ ಫೀಚರ್ ಸರಿಯಾಗಿ ಕೆಲಸ ಮಾಡಬೇಕು ಎಂದರೆ ನಿಮ್ಮ ಡಿವೈಸ್ ಸ್ವಿಚ್ ಆನ್ ಆಗಿರಬೇಕು ಮತ್ತು ಲೊಕೇಷನ್ ಸೇವೆಯು ಆನ್ ಆಗಿರಬೇಕು.

Most Read Articles
Best Mobiles in India

English summary
How to track your lost Android smartphone using Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X