ಗೇಮ್‌ ಡೌನ್‌ಲೋಡ್ ಮಾಡುವುದಕ್ಕಿಂತ ಮುಂಚೆ ಟ್ರೈ ಮಾಡಿ..! ಹೇಗೆ ಗೊತ್ತಾ..?

  |

  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಗೇಮ್ಸ್ ಗಳ ಪಟ್ಟಿಯನ್ನು ಗಮನಿಸಿದಾಗ ಸಾಕಷ್ಟು ಗೇಮ್ ಗಳನ್ನು ಕಾಣಬಹುದು. ಅವುಗಳಲ್ಲಿರುವುದನ್ನು ಇನ್ಸ್ಟಾಲ್ ಮಾಡಬೇಕು ಎಂದು ಇಚ್ಛಿಸುವಾಗ ಕೆಲವು ಗೇಮ್ ಗಳನ್ನು ಟ್ರೈ ಮಾಡಬೇಕು ಎಂದು ಅನ್ನಿಸುತ್ತದೆ. ಸುಮ್ಮನೆ ಇನ್ಸ್ಟಾಲ್ ಮಾಡುವ ಬದಲು ಟ್ರೈ ಮಾಡಿ ನಂತರ ಇಷ್ಟವಾದರೆ ಮಾತ್ರವೇ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು ಎಂದು ಅನ್ನಿಸಬಹುದು. ಇದಕ್ಕಾಗಿ ಈಗ ಕೆಲವು ಗೇಮ್ ಗಳು ನಿಮಗೆ ಟ್ರೈ ಮಾಡಿ ಸ್ಯಾಂಪಲ್ ನೋಡಲು ಅವಕಾಶ ನೀಡುತ್ತದೆ.

  2017 ರಲ್ಲಿ ಇನ್ಸ್ಟೆಂಟ್ ಆಪ್ಸ್ ವೈಶಿಷ್ಟ್ಯತೆಯು ಬಿಡುಗಡೆಗೊಂಡಾಗ ಅದು ವೆಬ್ ವರ್ಷನ್ ನಲ್ಲಿ ಬಳಕೆದಾರರಿಗೆ ಡೌನ್ ಲೋಡ್ ಮಾಡದೆಯೂ ಬಳಕೆ ಮಾಡಲು ಅವಕಾಶ ನೀಡುತ್ತಿತ್ತು. ಇದೀಗ ಗೂಗಲ್ ಅದೇ ವೈಶಿಷ್ಟ್ಯತೆಯನ್ನು ಗೇಮ್ ಗಳಿಗೂ ಕೂಡ ಪರಿಚಯಿಸಿದೆ. ಗೂಗಲ್ ಪ್ಲೇ ಇನ್ಸೆಂಟ್ ಮೂಲಕ, ಬಳಕೆದಾರರು ಗೇಮ್ ಗಳ ಡೆಮೋ ನೋಡಲು ಅವಕಾಶವಿರುತ್ತದೆ. ನಂತರ ಗೇಮ್ ಇಷ್ಟವಾದರೆ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

  ಗೇಮ್‌ ಡೌನ್‌ಲೋಡ್ ಮಾಡುವುದಕ್ಕಿಂತ ಮುಂಚೆ ಟ್ರೈ ಮಾಡಿ..! ಹೇಗೆ ಗೊತ್ತಾ..?

  ಆದರೆ, ಡೆಮೊ ನೋಡಲು ನಿಮಗೆ ಗೇಮಿನ ಸಂಪೂರ್ಣ ವರ್ಷನ್ ಲಭ್ಯವಾಗುವುದಿಲ್ಲ. ಕೆಲವು ಗೇಮ್ ಗಳು ಕೇವಲ ಟ್ಯೂಟೋರಿಯಲ್ ಆಗಿರಬಹುದು ಮತ್ತು ಕೆಲವು ಗೇಮ್ ಗಳಲ್ಲಿ ಎಲ್ಲಾ ಲೆವೆಲ್ ನ ಡೆಮೊಗೂ ಕೂಡ ಅವಕಾಶವಿರುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಡೌನ್ ಲೋಡ್ ಮಾಡುವುದಕ್ಕಿಂತ ಮುಂಚೆ ಗೇಮ್ ನ್ನು ಟ್ರೈ ಮಾಡುವ ಅವಕಾಶ ನೀಡುವ ಗೇಮ್ ಗಳ ಪಟ್ಟಿ ಈ ಕೆಳಗಿದೆ.

  1. Clash Royale
  2. Panda Pop
  3. Words with friends
  4. Solitaire
  5. Final Fantasy XV
  6. Bubble Witch
  7. Ocean Reef Life
  8. MARVEL Strike Force
  9. Candy Crush Saga
  10. Burger
  11. Defender III
  12. Words with Friends
  13. Mighty Battles
  14. Panda Pop
  15. Dragon Mania Legends
  16. Shark World
  17. War 1944
  18. Zombie Gunship
  19. Rodeo Stampede
  20. Doodle Alchemy

  ಒಂದು ವೇಳೆ ನೀವು ಈ ವೈಶಿಷ್ಟ್ಯತೆಯನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಬಳಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾದರೆ ಈ ಕೆಳಗಿನ ಸರಳವಾದ ಹಂತಗಳನ್ನು ಅನುಸರಿಸಿ.

  1. ಗೂಗಲ್ ಪ್ಲೇ ಸ್ಟೋರ್ ನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತೆರೆಯಿರಿ.

  2.

  ಮೇಲೆ ತಿಳಿಸಿರುವ ಪಟ್ಟಿಯಲ್ಲಿರುವ ಯಾವುದೇ ಗೇಮ್ ನ್ನು ಹುಡುಕಾಡಿ.

  3.

  ಲಿಸ್ಟ್ ನಲ್ಲಿರುವ ಗೇಮ್ ನ್ನು ಟ್ಯಾಪ್ ಮಾಡಿ.

  4.

  ಇನ್ಸ್ಟಾಲ್ ಬಟನ್ ನ ಬದಿಯಲ್ಲಿರುವ ಟ್ರೈ ನೌ ಆಯ್ಕೆಯನ್ನು ಗಮನಿಸಿ.

  5.

  ಇದು ನಿಮಗೆ ಪರ್ಮಿಷನ್ ನ್ನು ಕೇಳುತ್ತದೆ. ಅದನ್ನು ಅಸೆಪ್ಟ್ ಮಾಡಿ ಮತ್ತು ಗೇಮ್ ಲೋಡ್ ಆಗುವುದಕ್ಕೆ ಕಾಯಿರಿ.

  6.

  ಅಂತ್ಯದಲ್ಲಿ. ನೀವು ಇನ್ಸ್ಟಾಲಿಂಗ್ ಗೇಮ್ ಎಂಬ ಆಯ್ಕೆ ಪ್ರೌಂಪ್ಟನ್ನು ಗಮನಿಸುತ್ತೀರಿ.ನಿಮಗೆ ಗೇಮ್ ಇಷ್ಟವಾಗಿದ್ದು ನೀವು ಅದನ್ನು ಡೌನ್ ಲೋಡ್ ಮಾಡಲು ಇಚ್ಛಿಸುತ್ತೀರಾದರೆ ಇನ್ಸ್ಟಾಲ್ ಬಟನ್ ನ್ನು ಕ್ಲಿಕ್ಕಿಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  How to try a game before downloading. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more