Home
ಟೆಕ್ ನೌಕರಿ

ಹಳೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಸಿಸಿಟಿವಿ ಮಾಡೋದು ಹೇಗೆ?!

By Gizbot Bureau

ನಿಮ್ಮ ಬಳಿ ಎರಡು ಜೊತೆ ಆಂಡ್ರಾಯ್ಡ್ ಫೋನ್ ಇದಿಯಾ? ಒಂದನ್ನು ಹಾಗೇ ಎಲ್ಲೋ ಮೂಲೆಯಲ್ಲಿ ಇಡೋ ಬದಲು ಯಾಕೆ ನೀವದನ್ನು ನಿಮ್ಮನೆಯ ಸೆಕ್ಯುರಿಟಿಗೆ ಬಳಸಲಾರದು? ಅರೆ ಏನು ಹೇಳ್ತಿದ್ದೀವಿ ಅಂತ ಆಶ್ಚರ್ಯ ಆಗ್ತಾ ಇದಿಯಾ? ಹಳೆ ಪೋನನ್ನು ಸಿಸಿಟಿವಿ ಮಾಡೋದಾ? ಎಂದು ಮರು ಪ್ರಶ್ನೆ ಕೇಳ್ತಿದ್ದೀರಾ.. ಹೌದು ಕಣ್ರೀ,, ನಿಮ್ಮ ಮನೆಗೆ ಸಿಸಿಟಿವಿ ಅಗತ್ಯವಾಗಿ ಬೇಕಿದೆ.

ಆದರೆ ಅದನ್ನು ಹಾಕಿಸೋದು ತುಂಬಾ ದುಬಾರಿ ಆಗುತ್ತೆ, ಇನ್ನು ಅದನ್ನು ಹಾಕಿಸಿದ್ರೆ ಮೈಂಟೇನೆನ್ಸ್ ಚಾರ್ಜಸ್ ಕೂಡ ಹಾಕಬೇಕು ಎಂದು ಆಲೋಚಿಸುತ್ತಿದ್ದೀರಾ? ಒಂದು ಹಂತಕ್ಕೆ ನಿಮ್ಮ ಆಲೋಚನೆ ಸರಿಯಾಗಿಯೇ ಇದೆ.ಕಡಿಮೆ ರೇಟಿನಲ್ಲೇ ಹಳೆ ಆಂಡ್ರಾಯ್ಡ್ ಫೋನ್ ನಿಮ್ಮ ಮನೆಯ ಸಿಸಿಟಿವಿ ಕೆಲಸವನ್ನು ಮಾಡುವುದಾದರೆ ಯಾಕೆ ಸುಮ್ಮನೆ ವೆಚ್ಚ ಮಾಡಬೇಕು ಅಲ್ವಾ?

ಹಳೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಸಿಸಿಟಿವಿ ಮಾಡೋದು ಹೇಗೆ?!

ಸೆಕ್ಯುರಿಟಿ ಕ್ಯಾಮರಾಗಳು ಕೇವಲ ನಿಮ್ಮನ್ನು ಮತ್ತು ನಿಮ್ಮ ಮನೆಯನ್ನು ಸೇಫ್ ಮಾಡಲು ಮಾತ್ರ ಇರುವ ಸಾಧನಗಳಲ್ಲ. ನೀವಿಲ್ಲದೇ ಇರುವಾಗ ನಿಮ್ಮ ಮನೆಯಲ್ಲಿ ಏನು ನಡೆಯುತ್ತೆ ಎಂಬುದನ್ನು ತಿಳಿಯಲೂ ಕೂಡ ಇದು ನೆರವಾಗುತ್ತೆ. ಅದೂ ಅಲ್ಲದೆ ನಿಮ್ಮ ಮನೆಯಲ್ಲಿ ಪ್ರಾಣಿಗಳನ್ನು ನೀವು ಸಾಕುತ್ತಿದ್ದರೆ, ನೀವು ಕೆಲಸಕ್ಕೆ ಹೋದಾಗ ಅವುಗಳ ಮೇಲೆ ಒಂದು ಕಣ್ಣಿಟ್ಟಿರಲು ಅದು ನೆರವಾಗುತ್ತೆ.ಹಳೆ ಫೋನಿನಲ್ಲಿ ಆಂಡ್ರಾಯ್ಡ್ ಸಿಸ್ಟಮ್ ಇದ್ದರೆ ಅದನ್ನು ಹೇಗೆ ಸೆಕ್ಯುರಿಟಿ ಕ್ಯಾಮರಾಗಳನ್ನಾಗಿ ಮಾಡಬಹುದು ಗೊತ್ತಾ? ಮುಂದೆ ಓದಿ..

ಹಂತ 1: ಹಳೆಯ ಫೋನಿನಲ್ಲಿ ಅಥವಾ ಫೋನುಗಳಲ್ಲಿ ಸೆಕ್ಯುರಿಟಿ ಕ್ಯಾಮರಾ ಆಪ್ ರನ್ ಆಗುವಂತೆ ಮಾಡಿ

ಸೆಕ್ಯುರಿಟಿ ಕ್ಯಾಮರಾ ಆಪ್ ನ್ನು ನಿಮ್ಮ ಹಳೆಯ ಫೋನಿನಲ್ಲಿ(ಗಳಲ್ಲಿ) ಡೌನ್ ಲೋಡ್ ಮಾಡಿ. ಅದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವಾರು ಆಪ್ ಗಳು ಲಭ್ಯವಿದ್ದು, ಹೆಚ್ಚಿನವು ಯಾವುದೇ ಹಣವನ್ನು ಕೇಳುವುದಿಲ್ಲ, ಫ್ರೀ ಆಪ್ ಗಳಾಗಿರುತ್ತವೆ.ಒಮ್ಮೆ ಡೌನ್ ಲೋಡ್ ಮಾಡಿದ ನಂತರ ಆಪ್ ನಲ್ಲಿ ನಿಮ್ಮನ್ನ ನೀವು ರಿಜಿಸ್ಟರ್ ಮಾಡಿಕೊಳ್ಳಿ ಮತ್ತು ಕೆಲವು ಬೇಸಿಕ್ ಮಾಹಿತಿಗಳನ್ನು ನೀಡಿ ಅಕೌಂಟ್ ಕ್ರಿಯೇಟ್ ಮಾಡಿ.

ಹಳೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಸಿಸಿಟಿವಿ ಮಾಡೋದು ಹೇಗೆ?!

ಹಂತ 2: ಕ್ಯಾಮರಾವನ್ನು ಎಲ್ಲಿ ಇಡಬೇಕು ಎಂಬ ಜಾಗ ಆಯ್ದುಕೊಳ್ಳಿ

ಈ ಹಂತವು ಬಹಳ ಮುಖ್ಯವಾದದ್ದು. ನೀವು ಕ್ಯಾಮರಾವನ್ನು ನಿಮ್ಮ ಮನೆಯ ಯಾವ ಜಾಗದಲ್ಲಿ ಇಡಬೇಕು ಎಂದು ಬಯಸುತ್ತೀರಿ? ಹೆಚ್ಚಿನವರು ತಮ್ಮ ಬೆಲೆಬಾಳುವ ವಸ್ತುಗಳನ್ನಿಟ್ಟಿರುವ ರೂಮ್ ಗಳಲ್ಲಿ ಫಿಕ್ಸ್ ಮಾಡಲು ಇಚ್ಛಿಸುತ್ತಾರೆ. ಒಟ್ಟಾರೆ ಒಂದೇ ಜಾಗದಿಂದ ಹೆಚ್ಚು ಪ್ರದೇಶ ಕಾಣುವಂತೆ ಫಿಕ್ಸ್ ಮಾಡುವುದು ಎಲ್ಲರ ಉದ್ದೇಶವಾಗಿರುತ್ತದೆ. ಅಥವಾ ಮುಖ್ಯದ್ವಾರದ ಬಳಿ ಕೂಡ ಫಿಕ್ಸ್ ಮಾಡಬಹುದು.

ಹಂತ 3 : ಪವರ್ ಕನೆಕ್ಷನ್ ಕೊಟ್ಟು, ನಿಮ್ಮ ಫೋನನ್ನು ಫಿಕ್ಸ್ ಮಾಡಿ...

ನಿಮ್ಮ ಹಳೆ ಫೋನನ್ನು ಕ್ಯಾಮರಾದಂತೆ ಗೋಡೆಯಲ್ಲಿ ಫಿಕ್ಸ್ ಮಾಡಲು ನಿಮಗೆ ಟ್ರೈಪಾಡ್ ಸ್ಟ್ಯಾಂಡ್ ಅಥವಾ ಸಕ್ಷನ್ ಕಪ್ ಗಳ ಸಹಾಯ ಬೇಕಾಗಬಹುದು. ನೀವು ಯಾವ ಜಾಗವನ್ನು ಆಯ್ದುಕೊಂಡಿದ್ದೀರಿ ಎಂಬ ಆಧಾರದ ಮೇಲೆ ಅದು ನಿರ್ಧರಿತವಾಗುತ್ತೆ. ಫೋನ್ ಯಾವಾಗಲೂ ಆನ್ ನಲ್ಲೇ ಇದ್ದು, ಲೋ ಬ್ಯಾಟರಿ ಆಗದೆ ಸಿಸಿಟಿವಿಯಂತೆ ಕೆಲಸ ಮಾಡುತ್ತಲೇ ಇರಬೇಕು ಎಂದರೆ ಫೋನ್ ಇಡುವ ಜಾಗದಲ್ಲಿ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು.

ಹೀಗೆ ನೀವು ನಿಮ್ಮ ಹಳೆ ಆಂಡ್ರಾಯ್ಡ್ ಫೋನನ್ನು ಸೆಕ್ಯುರಿಟಿ ಕ್ಯಾಮರಾಗಳನ್ನಾಗಿ ಬದಲಾಯಿಸಿಕೊಳ್ಳಬಹುದು.

Best Mobiles in India

English summary
How to turn your old Android smartphone into a home security camera. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+