ಲಾಕ್‌ ಆಗಿರುವ ಆಂಡ್ರಾಯ್ಡ್ ಫೋನ್‌ನ್ನು ಅನ್‌ಲಾಕ್‌ ಮಾಡುವುದು ಹೇಗೆ?

Posted By:

ಬಹಳಷ್ಟು ಸಲ ಸಣ್ಣ ಮಕ್ಕಳು ಸ್ಮಾರ್ಟ್‌ಫೋನಲ್ಲಿ ಬಟನ್‌ಗಳನ್ನು ಒತ್ತುತ್ತಾ,ಸ್ಕ್ರೀನ್‌ ಮೇಲೆ ಕೈಯಾಡಿಸುತ್ತಾ ಆಟ ಆಡುತ್ತಿರುತ್ತಾರೆ.ದೊಡ್ಡವರು ಇದನ್ನು ಗಮನಿಸುವುದೇ ಇಲ್ಲ. ತುರ್ತಾ‌ಗಿ ಸ್ಮಾರ್ಟ್‌ಫೋನ್‌ನಿಂದ ಕೆಲಸ ಆಗಬೇಕು ಎಂದು ಭಾವಿಸಿ ಪಾಸ್‌ವರ್ಡ್ ಒತ್ತಲು ಹೋದರೆ ಗೂಗಲ್‌ ಅಕೌಂಟ್‌ನ ಇಮೇಲ್‌ ಐಡಿ ಮತ್ತು ಪಾಸ್‌ವರ್ಡ್‌ ದಾಖಲಿಸಿ ಎಂದು ಹೇಳುತ್ತದೆ. ಕೆಲವೊಮ್ಮೆ ಇಲ್ಲೂ ತಪ್ಪಾಗಿ ಅಕ್ಷರಗಳನ್ನು ಒತ್ತಿ ಬಿಟ್ಟರೆ ಫೋನ್‌ಲ್ಲಿ ಮತ್ತೆ ಏನು ಮಾಡಲು ಸಾಧ್ಯವಿಲ್ಲ.

ಆಂಡ್ರಾಯ್ಡ್‌ ಸ್ಮಾರ್ಟ್‌‌‌ಫೋನಲ್ಲಿ ಇಪ್ಪತ್ತು ಸಲ ತಪ್ಪಾಗಿ ಪಾಸ್‌ವರ್ಡ್ ದಾಖಲಿಸಿದ್ರೆ ಮತ್ತೆ ಪುನಃ ಪಾಸ್‌ವರ್ಡ್‌ ಒತ್ತಲು ಸಾಧ್ಯವಿಲ್ಲ.ಮತ್ತೆ ನೀವು ಕಂಪೆನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಹೋಗಿ ಫೋನ್‌ ಆನ್‌ಲಾಕ್‌ ಮಾಡಬೇಕಷ್ಟೇ.ಆದರೆ ನೀವೇ ಸುಲಭವಾಗಿ ಅನ್‌ಲಾಕ್‌ ಮಾಡಬಹುದು. ಅದಕ್ಕೆ ಕೆಲವೊಂದು ಹಂತಗಳಿದ್ದು ಇದನ್ನು ಅನುಸರಿಸಿದರೆ ನೀವು ಸ್ಮಾರ್ಟ್‌ಫೋನ್ನು ಅನ್‌ಲಾಕ್ ಮಾಡಬಹುದು.

 ಲಾಕ್‌ ಆಗಿರುವ ಆಂಡ್ರಾಯ್ಡ್ ಫೋನ್‌ನ್ನು ಅನ್‌ಲಾಕ್‌ ಮಾಡುವುದು ಹೇಗೆ?

1.ಫೋನ್‌‌ನ್ನು ಟರ್ನ್‌ ಆಫ್‌ ಮಾಡಿ ಬಿಡಿ.
2.ಮೇಲಿನ ವಾಲ್ಯೂಮ್‌ ಕೀ,ಮೆನು ಕೀ ಮತ್ತು ಪವರ್‌ ಕೀ ಒಂದೇ ಬಾರಿಗೆ ಒತ್ತಿ ಹಿಡಿದಾಗ ಕೆಲ ಕ್ಷಣದಲ್ಲಿ ಸ್ಮಾರ್ಟ್‌ಫೋನಿನ ಹೆಸರು ಸ್ಕ್ರೀನ್‌ನಲ್ಲಿ ಕಾಣುತ್ತದೆ.ಈಗ ಮತ್ತೊಮ್ಮೆ ಈ ಮೂರು ಕೀಯನ್ನು ಒಂದೇ ಬಾರಿಗೆ ಒತ್ತಿ ಬಿಡಿ.
3. ಈಗ ನಿಮ್ಮ ಸ್ಕ್ರೀನ್‌ Android system Recovery ಎಂದು ತೋರಿಸುತ್ತಿರುತ್ತದೆ.
ಇಲ್ಲಿ ಮೂರನೇ "Wipe data/factory reset" ಆಯ್ಕೆಯನ್ನು ವಾಲ್ಯೂಮ್‌ ಕೀ ಮತ್ತು ಸೆಂಟರ್‌ ಮೆನು ಕೀ ಒತ್ತಿ ಆರಿಸಿಕೊಳ್ಳಿ.ನಂತರ "Yes" ಆಯ್ಕೆಯನ್ನು ವಾಲ್ಯೂಮ್‌ ಕೀ ಮತ್ತು ಸೆಂಟರ್‌ ಮೆನು ಕೀ ಒತ್ತಿ ಆರಿಸಿಕೊಳ್ಳಿ.
4.ಸ್ವಲ್ಪ ಸಮಯದ ಬಳಿಕ ರಿಸೆಟ್‌ ಆಗಿದೆ ಎಂದು ಫೋನ್‌ ತಿಳಿಸುತ್ತದೆ
ನಂತರ reboot ಆಯ್ಕೆಯನ್ನು ಆರಿಸಿದ್ದಲ್ಲಿ ಫೋನ್‌ ಅನ್‌‌ಲಾಕ್‌ ಆಗಿರುತ್ತದೆ.

ಈ ರೀತಿ ಮಾಡಿದಾಗ ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಡೇಟಾಗಳು ಡಿಲೀಟ್‌ ಆಗುತ್ತದೆ.ಹೀಗಾಗಿ ಈ ಪ್ರಯೋಗಕ್ಕೆ ಮುಂದಾಗುವ ಮೊದಲು ಈ ಅಂಶ ಗಮನದಲ್ಲಿರಲಿ.

source:techobar.blogspot.in

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot