Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್ ಸಂಪೂರ್ಣ ಲಾಕ್ ಆದರೆ ಅನ್‌ಲಾಕ್ ಮಾಡುವುದು ಹೇಗೆ..?

By Sushma Charhra
Get to know how to disable ads on your Xiaomi smartphone

ನಿಮ್ಮ ಸ್ಮಾರ್ಟ್ ಫೋನಿನ ಡಾಟಾ ಪ್ರೊಟೆಕ್ಟ್ ಮಾಡಿಕೊಳ್ಳುವ ಉದ್ದೇಶದಿಂದ ಯಾವಾಗಲೂ ಪಿನ್, ಪಾಸ್ ವರ್ಡ್ ಇಲ್ಲವೇ ಸ್ಕ್ರೀನ್ ಲಾಕ್ ಪ್ಯಾಟರ್ನ್ ನ್ನು ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಪ್ರತಿಯೊಬ್ಬರೂ ಕೂಡ ತಮ್ಮ ಫೋನಿಗೆ ಇದನ್ನು ಬಳಸಿಯೇ ಬಳಸುತ್ತಾರೆ. ಮೊಬೈಲ್ ಯಾರದ್ದೋ ಕೈ ಸೇರಿದಾಗ ಯಾವುದೇ ಅಚಾತುರ್ಯಗಳು ನಡೆಯಬಾರದು ಎಂಬುದು ಇದರ ಹಿಂದಿನ ಉದ್ದೇಶ.

ಸ್ಮಾರ್ಟ್‌ಫೋನ್ ಸಂಪೂರ್ಣ ಲಾಕ್ ಆದರೆ ಅನ್‌ಲಾಕ್ ಮಾಡುವುದು ಹೇಗೆ..?

ತಜ್ಞರು ಯಾವಾಗಲೂ ಕಷ್ಟಕರವಾಗಿರುವ ಪಾಸ್ ವರ್ಡ್ ಗಳನ್ನೇ ಅಥವಾ ಪ್ಯಾಟರ್ನ್ ನ್ನೇ ಬಳಕೆ ಮಾಡಿ ಎಂದು ಸಲಹೆ ನೀಡುತ್ತಾರೆ ಮತ್ತು ಇತರರಿಂದ ಅದನ್ನು ಊಹಿಸಲು ಅಸಾಧ್ಯವಾಗುವಂತಹ ಪಾಸ್ ವರ್ಡ್ ನ್ನು ಇಟ್ಟುಕೊಳ್ಳಿ ಎಂದು ಹೇಳುತ್ತಾರೆ. ಅವರ ಸಲಹೆಯೇನೋ ಸರಿಯೇ. ಆದರೆ..!

ಆದರೆ ಏನು ಎಂಬುದು ನಿಮ್ಮ ಪ್ರಶ್ನೆಯೇ?

ಆದರೆ ಏನು ಎಂಬುದು ನಿಮ್ಮ ಪ್ರಶ್ನೆಯೇ?

ಆದರೆ ಕಷ್ಟವಾಗಿರುವ ಪಾಸ್ ವರ್ಡ್ ನೆನಪಿಟ್ಟುಕೊಳ್ಳುವುದು ಕಷ್ಟವಲ್ಲವೇ? ಖಂಡಿತ ಕಷ್ಟ ಮತ್ತು ಅದನ್ನು ಮರೆತು ಬಿಡುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ ಕೆಲವು ಭಯಭೀತಿಗೊಂಡ ಸಂದರ್ಬದಲ್ಲಿ ಸುಲಭದ ಪಾಸ್ ವರ್ಡ್ ಗಳೇ ನೆನಪಾಗುವುದಿಲ್ಲ ಇನ್ನು ಕಷ್ಟವಾಗಿರುವ ಪಾಸ್ ವರ್ಡ್ ಗಳು ಹೇಗೆ ತಾನೆ ನೆನಪಿಗೆ ಬರುತ್ತದೆ ಹೇಳಿ. ಇಂತಹ ಸಂದರ್ಬದಲ್ಲಿ ಫೋನ್ ಲಾಕ್ ಆಗಿ ಬಿಡುತ್ತದೆ.

ಇನ್ನು ಕೆಲವು ಸಂದರ್ಬದಲ್ಲಿ ಮಕ್ಕಳು ನಿಮ್ಮ ಸ್ಮಾರ್ಟ್ ಫೋನ್ ತೆಗೆದುಕೊಂಡು ಆಟವಾಡುತ್ತಾ ತಪ್ಪಾಗಿ ಪದೇ ಪದೇ ಪಾಸ್ ವರ್ಡ್ ಹಾಕಿ , ನಿಮ್ಮ ಫೋನ್ ಲಾಕ್ ಆಗಿ ಬಿಡುತ್ತದೆ. ಇದಿಷ್ಟೇ ಕಾರಣಗಳಲ್ಲ, ಫೋನ್ ಲಾಕ್ ಆಗುವುದಕ್ಕೆ ಇನ್ನು ಹಲವು ಕಾರಣಗಳು ಸಿಗಬಹುದು. ಆದರೆ ಅದನ್ನು ಅನ್ ಲಾಕ್ ಮಾಡಿಕೊಳ್ಳುವುದು ಹೇಗೆ? ಅದಕ್ಕಾಗಿಯೇ ನಾವಿಲ್ಲಿ ನಿಮಗೆ ಸುಲಭ ಮತ್ತು ಸರಳವಾದ ವಿಧಾನಗಳನ್ನು ಹೇಳುತ್ತಿದ್ದೇವೆ.ಲೇಖನದ ಮುಂದಿನ ಭಾಗವನ್ನು ಅನುಸರಿಸಿ.

ಸ್ಮಾರ್ಟ್ ಫೋನ್ ನಲ್ಲಿ ಪಾಸ್ ವರ್ಡ್ ಅನ್ ಲಾಕ್ ಮಾಡುವುದು ಹೇಗೆ?

ಸ್ಮಾರ್ಟ್ ಫೋನ್ ನಲ್ಲಿ ಪಾಸ್ ವರ್ಡ್ ಅನ್ ಲಾಕ್ ಮಾಡುವುದು ಹೇಗೆ?

ವಿಧಾನ 1: ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ನ್ನು ಬಳಸಿ Using Android Device Manager

1. ನಿಮ್ಮ ಪಿಸಿ ಅಥವಾ ಫೋನ್ ನಲ್ಲಿ ‘https://myaccount.google.com/find-your-phone-guide ತೆರಿಯಿರಿ

2.ಈಗ, ನಿಮ್ಮ ಫೋನಿಗೆ ಲಿಂಕ್ ಆಗಿರುವ ಗೂಗಲ್ ಅಕೌಂಟ್ ನ್ನು ತೆರೆಯಿರಿ

3.

3.

ಒಮ್ಮೆ ಲಾಗಿನ್ ಆದ ನಂತರ, ಲಿಸ್ಟ್ ನಲ್ಲಿರುವ ಡಿವೈಸ್ ನಲ್ಲಿ ನೀವು ಅನ್ ಲಾಕ್ ಮಾಡಬೇಕಿರುವ ಡಿವೈಸ್ ಯಾವುದು ಎಂಬುದನ್ನು ಆಯ್ಕೆ ಮಾಡಿ.

4.

4.

ಮುಂದಿನ ಸ್ಕ್ರೀನ್ ನಲ್ಲಿ ‘Lock your phone' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

5.ಈಗ, ಹಳೆಯ ಪಿನ್ ನ್ನು ರಿಪ್ಲೇಸ್ ಮಾಡಲು ಹೊಸ ಪಾಸ್ ವರ್ಡ್ ನ್ನು ಎಂಟರ್ ಮಾಡಿ. ಅದು ಪ್ಯಾಟರ್ನ್ ಇಲ್ಲವೇ ಪಾಸ್ ವರ್ಡ್ ಯಾವುದು ಕೂಡ ಆಗಿರಬಹುದು.

6. ಕೆಳಭಾಗದಲ್ಲಿರುವ ‘Lock' ಬಟನ್ ನ್ನು ಕ್ಲಿಕ್ಕಿಸಿ.

7. ನಿಮ್ಮ ಸ್ಮಾರ್ಟ್ ಫೋನ್ ನ್ನು ತೆಗೆದುಕೊಳ್ಳಿ ಮತ್ತು ಹೊಸದಾಗಿ ಕ್ರಿಯೇಟ್ ಮಾಡಿರುವ ಪಾಸ್ ವರ್ಡ್ ಅಥವಾ ಸ್ಕ್ರೀನ್ ಲಾಕ್ ಪ್ಯಾಟರ್ನ್ ಬಳಸಿ ಸ್ಕ್ರೀನ್ ನ್ನು ಅನ್ ಲಾಕ್ ಮಾಡಿಕೊಳ್ಳಿ.

ವಿಧಾನ 2: ‘Ok Google’ ವಾಯ್ಸ್ ಮ್ಯಾಚ್ ಬಳಸಿ 

ವಿಧಾನ 2: ‘Ok Google’ ವಾಯ್ಸ್ ಮ್ಯಾಚ್ ಬಳಸಿ 

ಒಂದು ವೇಳೆ ನೀವು ಸರಿಯಾಗಿ ನಿಮ್ಮ ಗೂಗಲ್ ಅಸಿಸ್ಟೆಂಟ್ ನ್ನು ಸೆಟ್ ಮಾಡಿಕೊಂಡಿದ್ದಲ್ಲಿ, ಖಂಡಿತ ನೀವು ‘Unlock with voice' ಅನ್ನೋ ಆಯ್ಕೆಯನ್ನು ಗಮನಿಸಿರುತ್ತೀರಿ. ಈ ವೈಶಿಷ್ಟ್ಯವು ನೀವು ಸೆಟ್ ಮಾಡಿ ಇಟ್ಟಿರುವ ಪ್ರೀ ರೆಕಾರ್ಡೆಡ್ ವಾಯ್ಸ್ ಮುಖಾಂತರ ಕೆಲಸ ಮಾಡುತ್ತದೆ. ಒಂದು ವೇಳೆ ಈ ವೈಶಿಷ್ಟ್ಯತೆಯು ಆನ್ ಆಗಿದ್ದಲ್ಲಿ ಸರಳವಾಗಿ ಓಕೆ ಗೂಗಲ್ ಬಳಸಿ ನೀವು ನಿಮ್ಮ ಸ್ಮಾರ್ಟ್ ಫೋನಿನ ಸ್ಕ್ರೀನ್ ನ್ನು ಅನ್ ಲಾಕ್ ಮಾಡಿಕೊಳ್ಳಬಹುದು.

ವಿಧಾನ 3: ಸ್ಯಾಮ್ ಸಂಗ್ ಬಳಕೆದಾರಿಗಾಗಿ

ವಿಧಾನ 3: ಸ್ಯಾಮ್ ಸಂಗ್ ಬಳಕೆದಾರಿಗಾಗಿ

ಒಂದು ವೇಳೆ ನೀವು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಾ ಇದ್ದಲ್ಲಿ, ಸ್ಯಾಮ್ ಸಂಗ್ ಅಕೌಂಟ್ ನ್ನು ಬಳಸಿ ಕೂಡ ಅನ್ ಲಾಕ್ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ‘https://findmymobile.samsung.com/' ತೆರಿಯಿರಿ ಮತ್ತು ಐಡಿ, ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.

2. ‘Unlock' ನ್ನು ಸೆಲೆಕ್ಟ್ ಮಾಡಿ ಮತ್ತು ನಿಮ್ಮ ಅಕೌಂಟ್ ಪಾಸ್ ವರ್ಡ್ ನ್ನು ಕನ್ಫರ್ಮ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ನ್ನು ಅನ್ ಲಾಕ್ ಮಾಡಿ.

Best Mobiles in India

English summary
How to unlock your Android smartphone if it gets locked. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+