ವಿಂಡೋಸ್ 10 ಪಿಸಿ ಅಮೇಜಾನ್ ಅಲೆಕ್ಸಾ ಬಳಕೆ ಹೇಗೆ?

By GizBot Bureau
|

ವಾಯ್ಸ್ ಬೇಸ್ ಇರುವ ಕೃತಕ ಬುದ್ಧಿಮತ್ತೆ ಗಳು ಬೇರೆಬೇರೆ ಡಿವೈಸ್ ಗಳಲ್ಲಿ ತನ್ನ ಛಾಪನ್ನು ಮೂಡಿಸಲು ಮುಂದಾಗುತ್ತಿದೆ ಮತ್ತು ಅದರ ಅಗತ್ಯತೆ ಬಳಕೆದಾರನಿಗೂ ಇದೆ. ಆದರೆ ಅದು ಇನ್ನೂ ಎಲ್ಲರಿಗೂ ತಿಳಿಯುವಂತಾಗಿಲ್ಲ ಮತ್ತು ನಿಧಾನವಾಗಿ ಪ್ರಚಾರ ಪಡೆಯುತ್ತಿದೆ.ಮೈಕ್ರೋಸಾಫ್ಟ್ ಮತ್ತು ಅಮೇಜಾನ್ ಸಂಸ್ಥೆಗಳು ಇದರ ಪ್ರಯೋಜನವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪಾಲುದಾರಿಕೆ ಮಾಡಿಕೊಂಡಿವೆ ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ವಿಂಡೋಸ್ 10 ಪಿಸಿ ಅಮೇಜಾನ್ ಅಲೆಕ್ಸಾ ಬಳಕೆ ಹೇಗೆ?


ಈ ಬಾರಿಯ ಅಂದರೆ 2018 ರ ಮೈಕ್ರೋಸಾಫ್ಟ್ ನ ಡೆವಲಪರ್ ಸಮ್ಮೇಳನದಲ್ಲಿ ಈ ಎರಡೂ ಕಂಪನಿಗಳು ಮಾತನಾಡಲು ಮತ್ತು ಪದಗಳ ಬಳಕೆಗೆ ಹೇಗೆ ಈ AI ಅಸಿಸ್ಟೆಂಟ್ ಗಳು ಪ್ರಯೋಜನಕಾರಿಯಾಗಿರುತ್ತವೆ ಎಂಬುದನ್ನು ಪ್ರಯೋಗ ಮಾಡಿ ತೋರಿಸಿದ್ದವು.ಎರಡೂ ಕಂಪೆನಿಗಳು ಡಿಜಿಟಲ್ ಅಸಿಸ್ಟೆಂಟ್ ನ್ನು ಇನ್ನಷ್ಟು ವಿಸ್ತರಿಸಿ ಇತರೆ ಫ್ಲಾಟ್ ಫಾರ್ಮ್ ಗಳಲ್ಲೂ ಅದರ ಪ್ರಯೋಜನವನ್ನು ನೀಡುವ ಬಗ್ಗೆ ಪಾಲುದಾರಿಕೆಯಲ್ಲಿ ಶ್ರಮ ವಹಿಸುತ್ತಿವೆ .

ಮೈಕ್ರೋಸಾಫ್ಟ್ ಈಗಾಗಲೇ ಅಲೆಕ್ಸಾವನ್ನು ವಿಂಡೋಸ್ ಪ್ಲಾಟ್ ಫಾರ್ಮ್ ನಲ್ಲಿ ತರಲು ಕೆಲಸ ಮಾಡುತ್ತಿದ್ದು ಭವಿಷ್ಯದ ಕೆಲವೇ ದಿನದಲ್ಲಿ ಇದು ಸಾಧ್ಯವಾಗಲಿದೆ. ಸದ್ಯ, ಈ ವೈಶಿಷ್ಟ್ಯವು ಕೇವಲ ವಿಂಡೋಸ್ 10 ನ ಡಿವೈಸ್ ಗಳಿರುವ HP, ಲೆನೋವೋ, Asus ಮತ್ತು Acer ಬ್ರಾಂಡ್ ನ ಕೆಲವು ಡಿವೈಸ್ ಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.

ಒಂದು ವೇಳೆ ನಿಮ್ಮ ಲ್ಯಾಪ್ ಟಾಪ್ ಹೀಗೆ ಬೆಂಬಲಿಸುವ ಪಟ್ಟಿಯಲ್ಲಿ ಇಲ್ಲದೇ ಇದ್ದು, ನಿಮ್ಮ ಲ್ಯಾಪ್ ಟಾಪ್ ವಿಂಡೋಸ್ ಪವರ್ಡ್ ಲ್ಯಾಪ್ ಟಾಪ್ ಆಗಿದ್ದು, ನೀವು ಅಮೇಜಾನ್ ಅಲೆಕ್ಸಾವನ್ನು ಇನ್ಸ್ಟಾಲ್ ಮಾಡಿ ಬಳಸಲು ಬಯಸುತ್ತಿದ್ದರೆ, ಹೇಗೆ ಅಮೇಜಾನ್ ಅಲೆಕ್ಸಾವನ್ನು ವಿಂಡೋಸ್ 10 ಪಿಸಿಯಲ್ಲಿ ಇನ್ಸ್ಟಾಲ್ ಮಾಡುವುದು ಎಂಬ ಬಗೆಗಿನ ಹಂತಗಳನ್ನು ಇಲ್ಲಿ ವಿವರಿಸಿದ್ದೇವೆ. ದಯವಿಟ್ಟು ಗಮನಿಸಿ.

ವಿಂಡೋಸ್ 10 ಪಿಸಿ ಅಮೇಜಾನ್ ಅಲೆಕ್ಸಾ ಬಳಕೆ ಹೇಗೆ?


ಅಗತ್ಯತೆಗಳು:

• ವಿಂಡೋಸ್ 10 ನಲ್ಲಿ ರನ್ ಆಗುವ ಲ್ಯಾಪ್ ಟಾಪ್

• ಇಂಟರ್ ನೆಟ್ ಕನೆಕ್ಟಿವಿಟಿ

• ಅಮೇಜಾನ್ ಲಾಗಿನ್ ಐಡಿ ಮತ್ತು ಪಾಸ್ ವರ್ಡ್

• ಎಲ್ಲಾ ರೀತಿಯ ವಿಂಡೋಸ್ 10 ಅಪ್ ಡೇಟ್ ಗಳನ್ನು ಈ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನವೇ ಇನ್ಸ್ಟಾಲ್ ಮಾಡಿರಬೇಕು

• ಮೈಕ್ರೋಸಾಫ್ಟ್ ವೆಬ್ ಸೈಟ್ ಅಥವಾ ವಿಂಡೋಸ್ ಅಪ್ ಡೇಟ್ ಮುಖಾಂತರ '.Net Framework 4.7.2' ಅನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

• ನಿಮ್ಮ ಭಾಷೆಯ ಸೆಟ್ಟಿಂಗ್ ಅನ್ನು English US ಗೆ ಬದಲಾಯಿಸಿ ( ಯಾಕೆಂದರೆ ಅಲೆಕ್ಸಾ ಸದ್ಯಕ್ಕೆ ಇಂಗ್ಲೀಷ್ ಯುಎಸ್ ಗೆ ಮಾತ್ರ ಬೆಂಬಲ ನೀಡುತ್ತದೆ. )

ಅನುಸರಿಸಬೇಕಾಗಿರುವ ಹಂತಗಳು:

1. ವಿಂಡೋಸ್ 10 ನಲ್ಲಿ ಅಮೇಜಾನ್ ಅಲೆಕ್ಸಾ ವನ್ನು ಡೌನ್ ಲೋಡ್ ಮಾಡಿ

2. ಇನ್ಸ್ಟಾಲರ್ ಅನ್ನು ರನ್ ಮಾಡಿ ಮತ್ತು ಆನ್ ಸ್ಕ್ರೀನ್ ವಿವರಣೆಯನ್ನು ಅನುಸರಿಸಿ

3.ಈಗ ಸ್ಟಾರ್ಟ್ ಮೆನುವನ್ನು ತೆರೆಯಿರಿ ಮತ್ತು ಅಲೆಕ್ಸಾ ಆಪ್ ನ್ನು ಲಾಂಚ್ ಮಾಡಿ

4. ಕಂಟಿನ್ಯೂ ಬಟನ್ ನ್ನು ಒತ್ತುವ ಮೂಲಕ ಟರ್ಮ್ಸ್ ಮತ್ತು ಕಂಡೀಷನ್ ಗೆ ಒಪ್ಪಿಗೆ ಸೂಚಿಸಿ

5. “Configure Alexa on PC settings” ಸ್ಕ್ರೀನ್ ನಲ್ಲಿ 'Launch the app on sign into this computer” ಮತ್ತು 'Allow app sounds’ ಬಾಕ್ಸ್ ಎರಡನ್ನೂ ಪರೀಕ್ಷಿಸಿ.ನಂತರ ಫಿನಿಶ್ ಸೆಟ್ ಅಪ್ ಬಟನ್ ನ್ನು ಕ್ಲಿಕ್ಕಿಸಿ

6. ಈಗ, ಅಮೇಜಾನ್ ಅಕೌಂಟನ್ನು ಲಾಗಿನ್ ಆಗಲು ಬಳಸಿ

7. ಮುಗಿತು, ಇದಿಷ್ಟು ಮಾಡಿದರೆ, ನೀವು ಈಗ ಅಲೆಕ್ಸಾವನ್ನು ನಿಮ್ಮ ಇಚ್ಛೆಗೆ ಅನುಸಾರವಾಗಿ ಬಳಕೆ ಮಾಡಬಹುದು.

Most Read Articles
Best Mobiles in India

English summary
How to use Amazon Alexa on any Windows 10 PC. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X