BT ಸ್ಪೀಕರ್‌ನ್ನು ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡುವುದು ಹೇಗೆ..?
ಕಳೆದ ಕೆಲವು ವರ್ಷಗಳಿಂದ ಆಡಿಯೋ ಸಂಬಂಧಿತ ತಂತ್ರಜ್ಞಾನವು ಬಹಳ ಮುಂದುವರಿದಿದೆ. ಅದೆಷ್ಟೋ ವರ್ಷಗಳ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಮೈಕ್ ಸೆಟ್, ದೊಡ್ಡ ದೊಡ್ಡ ಗಜಗಾತ್ರದ ಸ್ಪೀಕರ್ ಗಳು ಈಗ ಕಾಣಸಿಗುವುದಿಲ್ಲ. ಬದಲಾಗಿ ಇದೀಗ ಅಂಗೈ ಅಗಲದ ಸ್ಪೀಕರ್ ಗಳ ಅಧ್ಬುತ ದುನಿಯಾ ನಮ್ಮ ಮುಂದಿದೆ.

ಅಷ್ಟೇ ಅಲ್ಲ ಸ್ಪೀಕರ್ ಗಳಿಗಾಗಿ ಉದ್ದುದ್ದ ವಯರ್ ಗಳನ್ನು ಕನೆಕ್ಟ್ ಮಾಡುವ ಅಗತ್ಯವೂ ಈಗಿಲ್ಲ. ಭಾರೀ ಸಣ್ಣ ಗಾತ್ರದ ಮತ್ತು ವಯರ್ ಲೆಸ್ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಸ್ಪೀಕರ್ ಗಳನ್ನೇ ಹೆಚ್ಚಿನವರು ಈಗ ಬಳಸುತ್ತಿದ್ದಾರೆ. ಬ್ಲೂಟೂತ್ ಅಥವಾ ಎನ್ಎಫ್ಸಿ ಮೂಲಕ ಡಿವೈಸ್ ಗಳಿಗೆ ಸ್ಪೀಕರ್ ಗಳನ್ನು ಕನೆಕ್ಟ್ ಮಾಡಿ ಶಬ್ಧವನ್ನು ಜೋರಾಗಿ ಕೇಳಿಸಿಕೊಳ್ಳಲಾಗುತ್ತದೆ.

ರೆಡಿ-ಟು-ಗೈಡ್ ಮಾಹಿತಿ
ಬ್ಲೂಟೂತ್ ಅನೇಬಲ್ ಆಗಿರುವ ಸ್ಪೀಕರ್ ಗಳನ್ನು ನಿಮ್ಮ ಸ್ಮಾರ್ಟ್ ಫೋನ್ ಗೆ ಅಥವಾ ಲ್ಯಾಪ್ ಟಾಪ್ ಇಲ್ಲವೇ ಡೆಸ್ಕ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳುವುದು ಹೇಗೆ? ಈ ಬಗ್ಗೆ ನಿಮಗಿನ್ನೂ ಅರಿವಿಲ್ಲದೇ ಇದ್ದಲ್ಲಿ ಇಲ್ಲಿದೆ ನೋಡಿ ರೆಡಿ-ಟು-ಗೈಡ್ ಮಾಹಿತಿಗಳು.

ಅಗತ್ಯತೆಗಳು:
1.ಎರಡೂ ಡಿವೈಸ್ ಗಳಿಗೂ ಬ್ಲೂಟೂತ್ ಕನೆಕ್ಷನ್ ನ ಆಯ್ಕೆ ಇರಬೇಕು .
2.ನಿಮ್ಮ ಬ್ಲೂಟೂತ್ ಸ್ಪೀಕರ್ ನಲ್ಲಿ ಬ್ಯಾಟರಿ ಚಾರ್ಜ್ ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
3.ನಿಮಗೆ ನಿಮ್ಮ ಸ್ಪೀಕರ್ ಹೆಸರು ತಿಳಿದಿರಬೇಕು.

ಸ್ಮಾರ್ಟ್ ಫೋನ್ ನಲ್ಲಿ ಅನುಸರಿಸಬೇಕಾಗಿರುವ ಹಂತಗಳು :
1.ಬ್ಲೂಟೂತ್ ಸ್ಪೀಕರ್ ನ್ನು ಆನ್ ಮಾಡಿ ಮತ್ತು ಪೇರಿಂಗ್ ಮೋಡ್ ನಲ್ಲಿ ಅದನ್ನು ಇಡಬೇಕು. ( ಸಾಮಾನ್ಯವಾಗಿ ಪವರ್ ಬಟನ್ ನ್ನು ಪ್ರೆಸ್ ಮಾಡಿ ಕೆಲವು ಸೆಕೆಂಡು ಹಿಡಿದುಕೊಳ್ಳುವುದರಿಂದ ಇದನ್ನು ಸಾಧಿಸಬಹುದು. )
2.ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಬ್ಲೂಟೂತ್ ಆಯ್ಕೆಗೆ ತೆರಳಿ ಮತ್ತು ಡಿವೈಸ್ ನ್ನು ಸ್ಕ್ಯಾನ್ ಮಾಡಿ.
3.ಒಮ್ಮೆ ನೀವು ಬ್ಲೂಟೂತ್ ಸ್ಪೀಕರ್ ನ ಹೆಸರನ್ನು ಗಮನಿಸಿದಾಗ ಅದನ್ನು ಟ್ಯಾಪ್ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ನೊಂದಿಗೆ ಪೇರ್ ಮಾಡಿ.
4.ಪೇರ್ ಆದ ನಂತರ ನೀವು ಮೊಬೈಲ್ ನಲ್ಲಿ ಪ್ಲೇ ಮಾಡಿದ ಆಡಿಯೋ ಸ್ಪೀಕರ್ ನಲ್ಲಿ ಕೇಳಿಸುತ್ತದೆ.

ಪಿಸಿ ಅಥವಾ ಲ್ಯಾಪ್ ಟಾಪ್ ನಲ್ಲಿ ಅನುಸರಿಸಬೇಕಾಗಿರುವ ಹಂತಗಳು :
1.ನಿಮ್ಮ ಬ್ಲೂಟೂತ್ ಸ್ಪೀಕರ್ ನ್ನು ಆನ್ ಮಾಡಿ ಮತ್ತು ಪೇರಿಂಗ್ ಮೋಡ್ ಅನೇಬಲ್ ಮಾಡಲು ಪವರ್ ಬಟನ್ ನ್ನು ಪ್ರೆಸ್ ಮಾಡಿ ಮತ್ತು ಕೆಲವು ಸೆಕೆಂಡ್ ಹೋಲ್ಡ್ ಮಾಡಿ. ( ವಿಭಿನ್ನ ಸ್ಪೀಕರ್ ಗಳಲ್ಲಿ ವಿಭಿನ್ನ ರೀತಿಯ ಪೇರಿಂಗ್ ಮೋಡ್ ಅನೇಬಲ್ ಆಯ್ಕೆಗಳಿರುತ್ತದೆ )
2.ಸೆಟ್ಟಿಂಗ್ಸ್ ನ್ನು ತೆರೆಯಿರಿ ಮತ್ತು ಡಿವೈಸ್ ಆಯ್ಕೆಯನ್ನು ಗಮನಿಸಿ.
3.'Bluetooth & other devices'ನ್ನು ಕ್ಲಿಕ್ಕಿಸಿ
4.ಈಗ, '+' ಐಕಾನ್ ನ್ನು ಹಿಟ್ ಮಾಡಿ . ಅಲ್ಲಿ ಬ್ಲೂಟೂತ್ ಸ್ಪೀಕರ್ ನ್ನು ಆಡ್ ಮಾಡಬಹುದು.
5.'Bluetooth' ಆಯ್ಕೆಯನ್ನು ಮುಂದಿನ ಪಾಪ್ ಅಪ್ ನಲ್ಲಿ ಆಯ್ಕೆ ಮಾಡಿ.
6.ಸ್ಪೀಕರ್ ಹೆಸರನ್ನು ಕ್ಲಿಕ್ಕಿಸಿ. ಆಗ ನಿಮ್ಮ ಪಿಸಿ ಅಥವಾ ಲ್ಯಾಪ್ ಟಾಪ್ ಗೆ ಸ್ಪೀಕರ್ ಕನೆಕ್ಟ್ ಆಗುತ್ತದೆ.


Click it and Unblock the Notifications