ಇನ್ಸ್ಟಾಗ್ರಾಮ್ ಸ್ಟೋರೀಸ್ ನಲ್ಲಿ ಜಿಫ್ ಸ್ಟಿಕರ್ಗಳನ್ನು ಬಳಸುವುದು ಹೇಗೆ?
ಜಿಫ್ಫಿ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಇನ್ಸ್ಟಾಗ್ರಾಮ್ ತನ್ನ ಹೊಸ ಆವೃತ್ತಿಯಲ್ಲಿ ಬಳಕೆದಾರರಿಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಿಫ್ ಸ್ಟಿಕರ್ಗಳನ್ನು ಬಳಸುವ ಫೀಚರ್ ನೀಡಿದೆ.
ಫೇಸ್ಬುಕ್ ನ ಸ್ವಾಧೀನಕ್ಕೆ ಬಂದ ನಂತರ ಇನ್ಸ್ಟಾಗ್ರಾಮ್ ಬಹಳಷ್ಟು ಫೀಚರ್ಗಳನ್ನು ಪಡೆದು ತುಂಬಾ ಸುಧಾರಣೆಯನ್ನು ಕಂಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೆ ಇನ್ಸ್ಟಾಗ್ರಾಮ್ ಜಿಫ್ಫಿ ಯೊಂದಿಗೆ ಕೈಜೋಡಿಸಿದ್ದು ಇನ್ಸ್ಟಾಗ್ರಾಮ್ ಸ್ಟೋರೀಸ್ ನ ಸ್ಟಿಕರ್ಸ್ ಟ್ಯಾಬ್ ನಲ್ಲಿ ಜಿಫ್ ಸ್ಟಿಕರ್ಗಳನ್ನು ನೀಡಲಿದೆ.

ಈ ಜಿಫ್ ಸ್ಟಿಕರ್ಗಳು ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಇನ್ಸ್ಟಾಗ್ರಾಮ್ ನ 29ನೇ ಆವೃತ್ತಿಯ ಭಾಗವಾಗಿ ಲಭಿಸಲಿದೆ. ಅಲ್ಲದೆ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ನ ಇನ್ನೊಂದು ಆವೃತ್ತಿಯನ್ನೂ ಬಿಡುಗಡೆಮಾಡಲು ಸಜ್ಜಾಗಿದ್ದು, ಇದು ಬಳಕೆದಾರರಿಗೆ ಸ್ಟೋರಿಯಲ್ಲಿ ಯಾವುದೇ ಗಾತ್ರದ ಫೋಟೋ ಅಥವಾ ವೀಡಿಯೋ ಅಪ್ಲೋಡ್ ಮಾಡುವ ಸಾಮರ್ಥ್ಯ ನೀಡಲಿದೆ. ಇದು ಸಾಂಪ್ರದಾಯಿಕ ಇನ್ಸ್ಟಾಗಾಮ್ ಫೀಡ್ ನ ಕಸ್ಟಮ್ ಗಾತ್ರದ ಪೋಸ್ಟ್ಗಳಿಗೆ ಸಮಾನವಾಗಿದ್ದು, ಝೂಮ್ ಔಟ್ ಮಾಡುವ ಮೂಲಕ ಫೋಟೋಗಳನ್ನು ಅದರ ಮೂಲ ಆಯಾಮದಲ್ಲಿ ಶೇರ್ ಮಾಡಬಹುದಾಗಿದೆ.
ಜಿಫ್ ಫೀಚರ್ ಅನ್ನು ಲಾಂಚ್ ಮಾಡುವ ಮೊದಲು ಕಳೆದ ನವಂಬರ್ ನಲ್ಲಿಯೇ ಅದರ ಪರೀಕ್ಷೆಯನ್ನು ಪ್ರಾರಂಭಿಸಲಾಗಿತ್ತು.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಿಫ್ ಸ್ಟಿಕರ್ಗಳನ್ನು ಬಳಸುವ ವಿಧಾನ ಈ ಕೆಳಗಿನಂತಿದೆ
ಹಂತ 1: ನಿಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಿಫ್ ಸ್ಟಿಕರ್ ಬಳಸಲು ಮೊದಲು ಫೋಟೋ ಕ್ಲಿಕ್ ಮಾಡುವ ಮೂಲಕ ಅಥವಾ ಗ್ಯಾಲರಿಯಿಂದ ಫೋಟೋ ಆಯ್ದುಕೊಳ್ಳಿ, ಅಥವಾ ಇನ್ಸ್ಟಾಗ್ರಾಮ್ ಸ್ಟೋರೀಸ್ ಟ್ಯಾಬ್ ನಲ್ಲಿ ವೀಡಿಯೋ ರೆಕಾರ್ಡ್ ಮಾಡಿ.
ಹಂತ 2: ಈಗ ಪರದೆಯ ಮೇಲ್ಭಾಗದಲ್ಲಿ ಬಲಬದಿಯಲ್ಲಿರುವ ಸ್ಟಿಕರ್ಸ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ಒಂದು ಜಿಫ್ ಬಟನ್ ಅನ್ನು ಕಾಣುವಿರಿ. ಅದನ್ನು ಬಳಸಿ ನೀವು ನಿಮ್ಮ ಕಂಟೆಂಟ್ ಗೆ ಆನಿಮೇಟೆಡ್ ಸ್ಟಿಕರ್ ಗಳನ್ನು ಹಾಕಬಹುದಾಗಿದೆ.
ಹಂತ 3: ಅದನ್ನು ಕ್ಲಿಕ್ ಮಾಡಿದಾಗ ಈಗ ಬಹಳ ಟ್ರೆಂಡ್ ಆಗುತ್ತಿರುವ ಜಿಫ್ ಸ್ಟಿಕರ್ಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತದೆ. ನೀವು ನಿಮಗಿಷ್ಟವಾದ ಜಿಫ್ ಸ್ಟಿಕರ್ ಅನ್ನು ಆಯ್ದು ನಿಮ್ಮ ಕಂಟೆಂಟ್(ಫೋಟೋ ಅಥವಾ ವೀಡಿಯೋ) ಮೇಲೆ ನಿಮಗಿಷ್ಟ ಬಂದಲ್ಲಿ ಇರಿಸಬಹುದು.
ಹಂತ 4: ಅಲ್ಲದೆ ನೀವು ಜಿಫ್ ಸ್ಟಿಕರ್ ನ ಗಾತ್ರವನ್ನು ನಿಮಗೆ ಬೇಕಾದಂತೆ ಬದಲಿಸಬಹುದು ಮತ್ತು ಬೇರೆ ಸ್ಟಿಕರ್ ಮತ್ತು ಟೆಕ್ಸ್ಟ್ ಅನ್ನೂ ಹಾಕಬಹುದು. ಇನ್ಸ್ಟಾಗ್ರಾಮ್ ಸಂಸ್ಥೆ ತಿಳಿಸಿರುವಂತೆ ನೀವು ಜಿಫ್ಫಿ ಯ ಡೇಟಾಬೇಸ್ ನಿಂದ ಹೆಚ್ಚಿನ ಆಯ್ಕೆಗಳನ್ನು ಪಡೆಯಲು ಸರಿಯಾದ ಕೀವರ್ಡ್ ಬಳಸಿ ಸ್ಟಿಕರ್ಗಳನ್ನು ಹುಡುಕಬೇಕು.
ಇನ್ನು ನೀವು ಟೆಕ್ಸ್ಟ್-ಆಧಾರಿತ ಜಿಫ್ಗಳನ್ನು ಹುಡುಕುತ್ತಿದ್ದರೆ, "ವರ್ಡ್-ಆರ್ಟ್" ಅನ್ನು ಅರಸಿರಿ. ನೀವು 'ಎಫೆಕ್ಟ್ಸ್' ಎಂದು ಹುಡುಕಿದರೆ ಅದು ನಿಮಗೆ ಸ್ಪಾರ್ಕಲ್ ಅಥವಾ ಸುಡುಮದ್ದುಗಳ ಸ್ಟಿಕರ್ ನೀಡುತ್ತದೆ. 'ಆಕ್ಸೆಸರೀಸ್' ಎಂದು ಹುಡುಕಿದರೆ ಬನ್ನಿ ಇಯರ್ಸ್, ಲಿಪ್-ಲಿಕಿಂಗ್ ಮೌತ್, ವ್ಯಾಗಿಂಗ್ ಟಂಗ್ ಮೊದಲಾದ ಸ್ಟಿಕರ್ಗಳು ನಿಮಗೆ ದೊರೆಯಲಿದ್ದು, ಫೋಟೋದಲ್ಲಿ ಮುಖದ ಮೇಲೆ ಇರಿಸಬಹುದಾಗಿದೆ.


Click it and Unblock the Notifications








