ಡೆಸ್ಕ್‌ಟಾಪ್‌ನಲ್ಲಿ ಮಲ್ಟಿಪಲ್ ವಾಟ್ಸ್‌ಆಪ್ ಬಳಸುವುದು ಹೇಗೆ ಗೊತ್ತಾ..?

|

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಸುಮಾರು 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಆಪ್ ಆಗಿದೆ. ಕಂಪೆನಿಯೇ ತಿಳಿಸುವ ಪ್ರಕಾರ, ಪ್ರತಿದಿನ ಸುಮಾರು 60 ಮಿಲಿಯನ್ ಮೆಸೇಜ್ ಗಳನ್ನು ಕಳಿಸಲಾಗುತ್ತದೆ.

2014 ರಲ್ಲಿ ಸಾಮಾಜಿಕ ಜಾಲತಾಣದ ದೈತ್ಯ ಎಂದು ಕರೆಸಿಕೊಳ್ಳುವ ಫೇಸ್ ಬುಕ್ ವಾಟ್ಸ್ ಆಪ್ ನ್ನು ಪಡೆದಿದ್ದು ತನ್ನ ಆದಾಯ ಮತ್ತು ಬಳಕೆದಾರರನ್ನು ಅಧಿಕಗೊಳಿಸುವ ಉದ್ದೇಶವನ್ನು ಹೊಂದಿತ್ತು ಮತ್ತು ಆಗ ಕಂಪೆನಿಯು ವಾಟ್ಸ್ ಆಪ್ ವೆಬ್ ವರ್ಷನ್ ನ್ನು ಪರಿಚಯಿಸಿತು. ಹೆಚ್ಚಿನವರಿಗೆ ತಿಳಿದಿರುವ ಪ್ರಕಾರ ವಾಟ್ಸ್ ಆಪ್ ವೆಬ್ ತನ್ನ ಬಳಕೆದಾರರಿಗೆ ವಾಟ್ಸ್ ಆಪ್ ಅಕೌಂಟನ್ನು ಪಿಸಿಯಲ್ಲಿ ಆಕ್ಸಿಸ್ ಮಾಡಲು ಅವಕಾಶ ನೀಡುತ್ತದೆ.

ಡೆಸ್ಕ್‌ಟಾಪ್‌ನಲ್ಲಿ ಮಲ್ಟಿಪಲ್ ವಾಟ್ಸ್‌ಆಪ್ ಬಳಸುವುದು ಹೇಗೆ ಗೊತ್ತಾ..?

ಹೆಚ್ಚಿನ ಸಂದರ್ಬದಲ್ಲಿ ಬಹಳಷ್ಟು ಜನರದ್ದು ಬೇರೆಬೇರೆ ಎರಡು ವಿಭಿನ್ನ ವಾಟ್ಸ್ ಆಪ್ ಅಕೌಂಟ್ ಗಳಿರುತ್ತದೆ. ಎರಡೂ ಅಕೌಂಟ್ ಗಳನ್ನು ಸುಲಭದಲ್ಲಿ ಒಂದೇ ಸ್ಮಾರ್ಟ್ ಫೋನ್ ನಲ್ಲಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಆದರೆ ಪಿಸಿಯಲ್ಲೂ ಕೂಡ ನೀವು ಇದನ್ನು ಸಾಧಿಸಬಹುದು ಎಂಬುದು ನಿಮಗೆ ತಿಳಿದಿದೆಯಾ? ಹೌದು, ಕೆಲವು ಸರಳ ಟ್ರಿಕ್ ಬಳಸಿ ವಿಭಿನ್ನ ಎರಡು ವಾಟ್ಸ್ ಆಪ್ ಅಕೌಂಟ್ ನ್ನು ಒಂದೇ ಬ್ರೌಸರ್ ನಲ್ಲಿ ಯಾವುದೇ ತೊಂದರೆ ಇಲ್ಲದೆ ತೆರೆಯಲು ಸಾಧ್ಯವಾಗುತ್ತದೆ.

ಅಗತ್ಯತೆಗಳು:

ವಾಟ್ಸ್ ಆಪ್ ವೆಬ್ ನ್ನು ಆಕ್ಸಿಸ್ ಮಾಡಲು ಬಳಕೆದಾರರಿಗೆ ತಮ್ಮ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆಪ್ ಆಕ್ಸಿಸ್ ಇರಬೇಕು ಜೊತೆಗೆ ಎರಡೂ ಡಿವೈಸ್ ನಲ್ಲೂ ಇಂಟರ್ನೆಟ್ ಕನೆಕ್ಷನ್ ನಿರಂತರವಾಗಿ ಇರಬೇಕು. ಅದಕ್ಕಿಂತ ಹೆಚ್ಚಾಗಿ ಬಳಕೆದಾರರು ಬಳಸುವ ವೆಬ್ ಬ್ರೌಸರ್ ಅಪ್ ಡೇಟೆಡ್ ವರ್ಷನ್ ಆಗಿರಬೇಕು.

1. ಮೊದಲಿಗೆ http://web.whatsapp.com ನ್ನು ನಿಮ್ಮ ವೆಬ್ ಬ್ರೌಸರ್ ನಲ್ಲಿ ತೆರಿಯಿರಿ. ಮತ್ತು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ನಲ್ಲಿ ತೆರೆಯಿರಿ .

ಡೆಸ್ಕ್‌ಟಾಪ್‌ನಲ್ಲಿ ಮಲ್ಟಿಪಲ್ ವಾಟ್ಸ್‌ಆಪ್ ಬಳಸುವುದು ಹೇಗೆ ಗೊತ್ತಾ..?

2. ಒಮ್ಮೆ ಮೇಲಿನ ಹಂತವನ್ನು ಪೂರೈಸಿದ ನಂತರ ನಿಮ್ಮ ಟ್ಯಾಬ್ ಅಥವಾ ಸ್ಮಾರ್ಟ್ ಫೋನ್ ನ ವಾಟ್ಸ್ ಆಪ್ ಅಕೌಂಟಿನ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ.

3. ಈಗ, ನಿಮ್ಮ ವಿಭಿನ್ನ ವಾಟ್ಸ್ ಆಪ್ ಅಕೌಂಟನ್ನು ಸೇಮ್ ಬ್ರೌಸರ್ ನಲ್ಲಿ ತೆರೆಯಲು ನೀವು ಇನ್ನೊಂದು ಹೊಸ ಟ್ಯಾಬ್ ನ್ನು ತೆರೆಯಬೇಡಿ.

4.ನಂತರ, ಈ ಲಿಂಕ್ ನ್ನು ಹೊಸ ಟ್ಯಾಬ್ ನಲ್ಲಿ ಪೇಸ್ಟ್ ಮಾಡಿ. http://dyn.web.whatsapp.com ಮತ್ತು ಎಂಟರ್ ಕ್ಲಿಕ್ ಮಾಡಿ.

5. ಒಮ್ಮೆ ಮುಗಿದ ನಂತರ, ಕ್ಯೂಆರ್ ಕೋಡ್ ನ್ನು ನೀವು ಸೇಮ್ ಸ್ಕ್ರೀನ್ ನಲ್ಲಿ ಕಾಣಬಹುದು.

6.ಈಗ, ಮತ್ತೊಂದು ವಾಟ್ಸ್ ಆಪ್ ಅಕೌಂಟ್ ಬಳಸಿ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ. ಇಷ್ಟು ಮಾಡಿದರೆ ನಿಮ್ಮ ಕೆಲಸ ಮುಗಿದಂತೆ.

ಈಗ ನೀವು ಸೇಮ್ ಬ್ರೌಸರ್ ಮೂಲಕ ಎರಡು ವಿಭಿನ್ನ ವಾಟ್ಸ್ ಆಪ್ ಅಕೌಂಟ್ ನ್ನು ಆಕ್ಸಿಸ್ ಮಾಡಲು ಸಾಧ್ಯವಾಗುತ್ತದೆ.

Best Mobiles in India

English summary
How to use multiple WhatsApp accounts on desktop. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X