ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಬಳಕೆ ಹೇಗೆ..?
ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಉದ್ದ ಡಿಸ್ ಪ್ಲೇಯನ್ನು ಹೊಂದಿವೆ. ಈ ಹಿನ್ನಲೆಯಲ್ಲಿ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗಿದೆ. ಆಂಡ್ರಾಯ್ಡ್ ನ್ಯಾಗಾ ಗಿಂತಲು ಮೇಲಿನ ಆಂಡ್ರಾಯ್ಡ್ ಫೋನ್ ಗಳಲ್ಲಿ ಈ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಆಯ್ಕಯಿಂದಾಗಿ ಬಳಕೆದಾರರು ಒಂದೇ ಬಾರಿ ಎರಡು ಆಪ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಒಮ್ಮೆಗೆ ಒಂದೇ ಸ್ಕ್ರಿನ್ ನಲ್ಲಿ ಎರಡು ಆಪ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದ. ಈ ಹಿನ್ನಲೆಯಲ್ಲಿ ಗೂಗಲ್ ಮಾಡಿಕೊಟ್ಟಿರುವ ಅವಕಾಶದ ಬಗ್ಗೆ ಮಾಹಿತಿಯೂ ಮುಂದಿದೆ. ಈ ಹಿನ್ನಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿಯೂ ನೀವು ಒಮ್ಮೆಗೆ ಎರಡು ಕಾರ್ಯಗಳನ್ನು ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ ಸ್ಪ್ಲಿಟ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಸ್ಲ್ಪಿಟ್ ಸ್ಕ್ರಿನ್ ಬಳಕೆ ಮಾಡಿಕೊಳ್ಳುವುದು ಹೇಗೆ..?
1) ರಿಸೆಂಟ್ ಆಪ್ ಲಿಸ್ಟ್ ಓಪನ್ ಮಾಡಿಕೊಳ್ಳುವ ಬಟನ್ ಅನ್ನು ಕ್ಲಿಕ್ ಮಾಡಿರಿ, ಈ ಸಂದರ್ಭದಲ್ಲಿ ನೀವು ರಿಸೆಂಟ್ ಆಗಿ ಬಳಕೆ ಮಾಡಿದ ಆಪ್ ಗಳ ವಿವರವೂ ಕಾಣಿಸಿಕೊಳ್ಳಲಿದೆ.
2) ಇದಾದ ಮೇಲೆ ನಿಮ್ಮ ಫೋನಿನ ಸ್ಕ್ರಿನ್ ನಲ್ಲಿ ಮೇಲ್ ಭಾಗದಲ್ಲಿ ಸ್ಪ್ಲಿಟ್ ಸ್ಕ್ರಿನ್ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಇದರಲ್ಲಿ ನೀವು ಬಳಕೆ ಮಾಡಿಕೊಳ್ಳಬೇಕಾದ ಎರಡು ಆಪ್ ಗಳನ್ನು ಡ್ರಾಗ್ ಮಾಡಿಕೊಳ್ಳಿ.
3) ಇದಾದ ಮೇಲೆ ಸ್ಕ್ರಿನ್ ಮೇಲ್ ಭಾಗ ಮತ್ತು ಕೆಳ ಭಾಗದಲ್ಲಿ ಎರಡು ಆಪ್ ಗಳು ಕಾಣಿಸಿಕೊಳ್ಳಿದೆ, ಇದರಿಂದಾಗಿ ನೀವು ಎರಡು ಕಾರ್ಯಗಳನ್ನು ಒಮ್ಮೆಗೆ ಮಾಡಬಹುದಾಗಿದೆ.
ಎಕ್ಸಿಟ್ ಆಗುವುದು ಹೇಗೆ..?
ಇದಲ್ಲದೇ ನೀವು ಸ್ಪ್ಲಿಟ್ ಸ್ಕ್ರಿನ್ ಬಳಕೆ ಮಾಡಿದ ಮೇಲೆ ಅದರಿಂದ ಹೊರಗೆ ಬರುವುದು ಹೇಗೆ ಎಂಬುದನ್ನು ತಿಳಿಯಬೇಕಾಗಿದೆ. ಮೇಲಿರುವ ಆಪ್ ಗಳನ್ನು ಒತ್ತಿ ಹಿಡಿದು ಡ್ರಾಗ್ ಮಾಡಿದ ಸಂದರ್ಭದಲ್ಲಿ ಫುಲ್ ಸ್ಕ್ರಿನ್ ನಲ್ಲಿ ಆಪ್ ಕಾಣಸಿಕೊಳ್ಳಿದೆ.
ಇದಲ್ಲದೇ ಬಾಟಮ್ ನಲ್ಲಿ ಕಾಣಿಸಿಕೊಳ್ಳುವ ಆಪ್ ಅನ್ನು ಇದೇ ಮಾದರಿಯಲ್ಲಿ ಒತ್ತಿ ಹಿಡಿದರೆ ಸಾಕು ಅದು ಸಹ ಪೂರ್ಣ ಪ್ರಮಾಣದಲ್ಲಿ ಸ್ಕ್ರಿನ್ ನಲ್ಲಿ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಬಳಕೆದಾರರು ಎರಡು ಆಪ್ ಗಳನ್ನು ಒಮ್ಮೆಗೆ ಬಳಕೆ ಮಾಡಿಕೊಳ್ಳುವ ಅವಕಾಶವು ದೊರೆಯಲಿದೆ.


Click it and Unblock the Notifications








