Home
ಟೆಕ್ ನೌಕರಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಬಳಸುವುದು ಹೇಗೆ?

By Gizbot Bureau

ಇದು ಮಲ್ಟಿಟಾಸ್ಕಿಂಗ್ ಯುಗ. ಪ್ರತಿಯೊಬ್ಬರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟೊಟ್ಟಿಗೆ ಮಾಡಲು ಇಚ್ಛಿಸುತ್ತಾರೆ. ಮೊಬೈಲ್ ನಲ್ಲೂ ಅಷ್ಟೇ,. ಎರಡು ಆಪ್ ಗಳು ಸ್ಕ್ರೀನ್ ನಲ್ಲಿ ಒಂದೇ ಸಮಯಕ್ಕೆ ಕೆಲಸ ಮಾಡುವುದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಬಳಕೆದಾರ ಯೋಚಿಸುತ್ತಿರುವಾಗಲೇ ಗೂಗಲ್ ಸ್ಪ್ಲಿಟ್ ಸ್ಕ್ರೀನ್ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಗೆ ಸೇರಿಸಿ ಬಿಟ್ಟಿದೆ. ಹೌದು ಆಂಡ್ರಾಯ್ಡ್ ನಲ್ಲಿ ಇತ್ತೀಚಿನ ಆಪ್ ಗಳನ್ನು ತೆರೆಯುವ ಆಯ್ಕೆಯು ಬಳಕೆದಾರನಿಗೆ ಸಾಕಷ್ಟು ಅನುಕೂಲವನ್ನು ಮಾಡಿಕೊಡುತ್ತದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್  ಬಳಸುವುದು ಹೇಗೆ?

ಅದೇ ರೀತಿ ಆ ಆಪ್ ಗಳನ್ನು ತೆರೆಯುವಾಗ ಎರಡು ಆಪ್ ಗಳನ್ನು ಒಂದೇ ಸಮಯಕ್ಕೆ ಸ್ಕ್ರೀನ್ ಸ್ಪ್ಲಿಟ್ ಮಾಡಿ ಬಳಕೆ ಮಾಡಲು ಸಾಧ್ಯವಾಗುತ್ತೆ.ಯಾವುದೋ ಒಂದು ವೀಡಿಯೋವನ್ನು ಒಂದು ಸ್ಕ್ರೀನ್ ನೋಡುತ್ತಲೇ, ಇನ್ನೊಂದು ಸ್ಕ್ರೀನ್ ತೆರೆದು ಗೂಗಲ್ ನಲ್ಲಿ ಯಾವುದೋ ಮಾಹಿತಿಯನ್ನು ಹುಡುಕಾಡಲು ಇದರಿಂದ ಸಾಧ್ಯವಾಗುತ್ತೆ. ಈಗಾಗಲೇ ಕೆಲವು ಈ ವೈಶಿಷ್ಟ್ಯವನ್ನು ಬಳಕೆ ಮಾಡುತ್ತಿರಬಹುದು. ಮಾಡದೇ ಇರುವವರಿಗಾಗಿ ಇದನ್ನು ಬಳಸುವುದು ಹೇಗೆ ಎಂಬ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಬಳಕೆ ಮಾಡುವುದು ಹೇಗೆ? - 

ಬಳಕೆ ಮಾಡುವುದು ಹೇಗೆ? - 

Nougat (7.0) ಮತ್ತು ಅದಕ್ಕಿಂತ ಮುಂದಿನ ವರ್ಷನ್ ನ ಮೊಬೈಲ್ ಹೊಂದಿರುವ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್ ನ್ನು ಬಳಕೆ ಮಾಡಲು ಬೆಂಬಲ ಸಿಗುತ್ತದೆ. ಒಂದು ವೇಳೆ ನಿಮ್ಮ ಫೋನ್ ಸ್ಪ್ಲಿಟ್ ಸ್ಕ್ರೀನ್ ಗೆ ಬೆಂಬಲ ನೀಡದೇ ಇರುವುದಾದರೆ "App may not work with split screen" ಎಂಬ ಮೆಸೇಜ್ ಬರುತ್ತದೆ. ಇನ್ನು ಹೆಚ್ಚಿನ ಆಪ್ ಗಳು ಸ್ಪ್ಲಿಟ್ ಸ್ಕ್ರೀನ್ ನ್ನು ಬೆಂಬಲಿಸುತ್ತದೆ. ಒಂದು ವೇಳೆ ಯಾವುದಾದರೂ ಆಪ್ ಬೆಂಬಲಿಸದೇ ಇದ್ದಲ್ಲಿ ಅದು "App doesn't support split screen" ಎಂಬ ಮೆಸೇಜ್ ಮೂಲಕ ಬೆಂಬಲ ನೀಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಸ್ಪ್ಲಿಟ್ ಸ್ಕ್ರೀನ್ ಬಳಸುವ ವಿಧಾನ ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಗೆ ಪ್ರವೇಶಿಸಲು ಈ ಹಂತಗಳನ್ನು ಅನುಸರಿಸಿ 

ಸ್ಪ್ಲಿಟ್ ಸ್ಕ್ರೀನ್ ಮೋಡ್ ಗೆ ಪ್ರವೇಶಿಸಲು ಈ ಹಂತಗಳನ್ನು ಅನುಸರಿಸಿ 

1) ರೀಸೆಂಟ್ ಆಪ್ ಗಳನ್ನು ತೆರೆಯಲು ಬಳಸುವು ಚೌಕಾಕಾರದ ಬಟನ್ ನಿಮ್ಮ ಕೆಪಾಸಿಟೀವ್ ಟಚ್ ಬಟನ್ ಗಳ ಕೊನೆಯಲ್ಲಿ ಸ್ಕ್ರೀನ್ ನಲ್ಲಿ ಇರುವುದನ್ನು ಟ್ಯಾಪ್ ಮಾಡಿ.

2) ಲಿಸ್ಟ್ ನ್ನು ಸ್ಕ್ರೋಲ್ ಮಾಡಿ ಮತ್ತು ಯಾವ ಆಪ್ ನ್ನು ನೀವು ಮೇಲ್ಬಾಗದಲ್ಲಿ ಇರಿಸಲು ಇಚ್ಛಿಸುತ್ತೀರಾ ಅದನ್ನು ಹುಡುಕಿ. ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ ಸ್ಕ್ರೀನ್ ಮೇಲ್ಬಾಗದಲ್ಲಿ ಅದನ್ನು ಇರಿಸಿ.ನಿಮಗೊಂದು ಸಣ್ಣ ಮೆಸೇಜ್ ಕಾಣಿಸುತ್ತದೆ. ಅದರಲ್ಲಿ ಹೀಗೆ ಹೇಳಲಾಗುತ್ತೆ. "Drag here to use split screen."

3) ಈಗ ನೀವು ಎಂಟರ್ ಆದಿರಿ, ಕೆಳಭಾಗದಲ್ಲಿ ಇರಿಸಲು ಇಚ್ಛಿಸುವ ಆಪ್ ನ್ನು ಆಯ್ಕೆ ಮಾಡಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಆಪ್ ಗಳನ್ನು ಬಳಕೆ ಮಾಡಬಹುದು.

ಒಂದು ವೇಳೆ ಈಗಾಗಲೇ ನಿಮ್ಮದು ಒಂದು ಆಪ್ ತೆರೆದಿದ್ದರೆ, ನೀವು ಸರಳವಾಗಿ ಟ್ಯಾಪ್ ಮಾಡಿ ಆಪ್ ಸ್ವಿಚ್ಚರ್ ನ್ನು ಹೋಲ್ಡ್ ಮಾಡಿದರೆ ಸಾಕು, ಡಿಸ್ಪ್ಲೇ ಆಗುತ್ತಿರುವ ಆಪ್ ಮೇಲ್ಬಾಗಕ್ಕೆ ತೆರಳುತ್ತದೆ. ಮುಂದೆ ನೀವು ಬಾಟಮ್ ಆಪ್ ಯಾವುದು ಬೇಕು ಎಂದು ಸ್ಕ್ರೀನ್ ನಲ್ಲಿ ಆಯ್ಕೆ ಮಾಡಬಹುದು. ಎರಡೂ ಆಪ್ ಗಳು ಕಪ್ಪು ಬಣ್ಣದ ಒಂದು ತೆಳುವಾಗ ಎಳೆಯ ಮೂಲಕ ವಿಭಾಗಿಸಲಾಗಿರುತ್ತದೆ.

ನಿರ್ಗಮಿಸುವುದು/ಮರೆಮಾಚುವುದು – 

ನಿರ್ಗಮಿಸುವುದು/ಮರೆಮಾಚುವುದು – 

ನೀವು ಸ್ಕ್ರೀನ್ ನ್ನು ಹೈಡ್ ಆಗುವಂತೆ ಮತ್ತು ಎಕ್ಸಿಟ್ ಆಗುವಂತೆಯೂ ಮಾಡಬಹುದು. ಸ್ಪ್ಲಿಟ್ ಸ್ಕ್ರೀನ್ ನಲ್ಲಿ, ಹೋಮ್ ಬಟನ್ ಬಳಕೆ ಮಾಡಿದರೆ ಟೆಂಪರರಿಯಾಗಿ ಅದು ಹೈಡ್ ಆಗುತ್ತದೆ. ಸ್ಕ್ರೀನ್ ಹೋಮ್ ಪೇಜ್ ಗೆ ರಿಟರ್ನ್ ಆಗುತ್ತದೆ ಮತ್ತು ಬ್ಲಾಕ್ ಎಳೆಯು ಮೇಲ್ಬಾಗಕ್ಕೆ ಮೂವ್ ಆಗುತ್ತದೆ.ಆಪ್ ಸ್ವಿಚ್ಚರ್ ನ್ನು ಟ್ಯಾಪ್ ಮಾಡುವ ಮೂಲಕ ಮತ್ತೆ ಸ್ಪ್ಲಿಟ್ ಸ್ಕ್ರೀನ್ ನ್ನು ತೆರೆದುಕೊಳ್ಳಬಹುದು. ಆದರೆ ಎರಡನೇ ಆಪ್ ನ್ನು ಮತ್ತೆ ಪುನಃ ಆಯ್ಕೆ ಮಾಡಿಕೊಳ್ಳಲೇಬೇಕು.

ನಿರ್ಗಮಿಸುವುದನ್ನು ಎರಡು ಸರಳ ವಿಧಾನದಲ್ಲಿ ಮಾಡಬಹುದು 

ನಿರ್ಗಮಿಸುವುದನ್ನು ಎರಡು ಸರಳ ವಿಧಾನದಲ್ಲಿ ಮಾಡಬಹುದು 

1) ರೀಸೆಂಟ್ ಆಪ್ಸ್ ಬಟನ್ ನ್ನು ಒತ್ತಿ ಮತ್ತು ಹೋಲ್ಡ್ ಮಾಡಿ ಮೇಲ್ಬಾಗದ ಆಪ್ ಸಂಪೂರ್ಣವಾಗಿ ಸ್ಕ್ರೀನ್ ನ್ನು ಆವರಿಸುವವರೆಗೆ ಹೋಲ್ಡ್ ಮಾಡಬೇಕು..

2)ಮಧ್ಯದಲ್ಲಿ ಸ್ಕ್ರೀನ್ ನ್ನು ವಿಭಾಗಿಸಿರುನ ಬ್ಲಾಕ್ ಎಳೆಯನ್ನು ಡ್ರ್ಯಾಗ್ ಮಾಡಿ ಸ್ಕ್ರೀನ್ ನ ಕೆಳಭಾಗದವರೆಗೂ ತೆಗೆದುಕೊಂಡು ಬನ್ನಿ.ಒಂದು ವೇಳೆ ಎರಡನೇ ಆಪ್ ನಿಮಗೆ ಕೆಲಸ ಮಾಡಲು ಬೇಕು ಎಂದಾದರೆ ಬ್ಲಾಕ್ ಎಳೆಯನ್ನು ಮೇಲ್ಬಾಗಕ್ಕೆ ಎಳೆಯಿರಿ.

Best Mobiles in India

English summary
How to use Split Screen Mode on Android. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+