ಟ್ರೂ ಕಾಲರ್‌ನಲ್ಲಿ ಕರೆ ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?

|

ಕೆಲವು ಸ್ಮಾರ್ಟ್ ಫೋನ್‌ಗಳಲ್ಲಿ ಕರೆ ರೆಕಾರ್ಡ್ ಮಾಡುವ ಸೌಲಭ್ಯವಿದ್ದರೂ, ಇನ್ನು ಕೆಲವು ಫೋನ್‌ಗಳಲ್ಲಿ ಕರೆ ರೆಕಾರ್ಡ್ ಮಾಡಲು ಬೇರೆ ಆಪ್‌ಗಳನ್ನು ಬಳಸಬೇಕಾಗುತ್ತದೆ. ಆದರೆ, ಇನ್ಮುಂದೆ ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಟ್ರೂ ಕಾಲರ್ ತನ್ನ ಬಳಕೆದಾರರಿಗೆ ಕರೆ ರೆಕಾರ್ಡ್ ಮಾಡುವ ಹೊಸ ಫೀಚರ್ ಅನ್ನು ಪರಿಚಯಿಸಿದೆ.

ಹೌದು, ಪ್ಲೇ ಸ್ಟೋರ್‌ನಲ್ಲಿ ಹಲವಾರು ರೀತಿಯ ಕಾಲ್ ರೆಕಾರ್ಡಿಂಗ್ ಆಪ್‌ಗಳು ಲಭ್ಯವಿವೆ. ಆದರೆ, ಇಷ್ಟು ದಿನ ಅನಗತ್ಯ ಕರೆಗಳ ಕಿರಿಕಿರಿ ತಪ್ಪಿಸಲು ಸಹಕಾರಿಯಾಗಿದ್ದ ಟ್ರೂ ಕಾಲರ್ ಆಪ್ ಸಹ ತನ್ನ ಆಪ್‌ನಲ್ಲಿ ಇಂತಹ ಫೀಚರ್ ಪರಿಚಯಿಸಿದೆ. ಪ್ಲೇ ಸ್ಟೋರ್‌ನಲ್ಲಿರುವ ಇತರೆ ಆಪ್‌ಗಳಿಗೆ ಹೋಲಿಸಿದರೆ ಟ್ರೂ ಕಾಲರ್‌ನಲ್ಲಿ ನಿರಾತಂಕವಾಗಿ ಕರೆ ರೆಕಾರ್ಡ್ ಮಾಡಬಹುದಾಗಿದೆ.

ಟ್ರೂ ಕಾಲರ್‌ನಲ್ಲಿ ಕರೆ ರೆಕಾರ್ಡ್ ಮಾಡುವುದು ಹೇಗೆ ಗೊತ್ತಾ?

ಈ ಸೌಲಭ್ಯ ಅಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಇದು ಸಿಹಿಸುದ್ದಿಯಾಗಿದೆ. ಹಾಗಾದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಟ್ರೂ ಕಾಲರ್ ಆಪ್ ಮೂಲಕ ಕರೆ ರೆಕಾರ್ಡ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಮುಂದಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗಾಗಿ ನೀಡಲಾಗಿದೆ.

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 1

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 1

ಮೊಬೈಲ್‌ನಲ್ಲಿ ಟ್ರೂ ಕಾಲರ್ ಆಪ್ ಓಪನ್ ಮಾಡಿ. ಆಪ್‌ನ ಎಡಭಾಗದಲ್ಲಿರುವ ಮೆನು ಕ್ಲಿಕ್ ಮಾಡಿ..ಕಾಲ್ ರೆಕಾರ್ಡಿಂಗ್ಸ್ ಆಪ್ಶನ್ ಕ್ಲಿಕ್ ಮಾಡಿ.

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 2

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 2

Try for 14 days for free ಎಂಬ ಸಂದೇಶ ಕಾಣಿಸುತ್ತದೆ. ಅದರ ಬಳಿ ಇರುವ Start ಬಟನ್ ಕ್ಲಿಕ್ಕಿಸಿ. Start Free Trial ಕ್ಲಿಕ್ ಮಾಡಿದರೆ 14 ದಿನಗಳವರೆಗೆ ಕರೆ ರೆಕಾರ್ಡಿಂಗ್ ಸೌಲಭ್ಯ ಬಳಸಬಹುದು.

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 3

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 3

ಯಾವ ಕರೆಗಳನ್ನು ನಾವು ರೆಕಾರ್ಡ್ ಮಾಡಬೇಕು ಎಂಬುದನ್ನು ನಾವೇ ನಿರ್ಧರಿಸಬಹುದು. ನಮಗೆ ಬರುವ ಮತ್ತು ನಾವು ಕರೆ ಮಾಡುವ ಎಲ್ಲ ಸಂಭಾಷಣೆಗಳು ರೆಕಾರ್ಡ್ ಆಗಬೇಕಿಂದಿದ್ದರೆ Auto ಎಂಬ ಅಪ್ಶನ್ ಸೆಲೆಕ್ಟ್ ಮಾಡಿದರೆ ಸಾಕು. ನಾವು ಆಯ್ಕೆ ಮಾಡುವ ಕರೆಗಳನ್ನು ಮಾತ್ರ ರೆಕಾರ್ಡ್ ಮಾಡಬೇಕೆಂದಿದ್ದರೆ Manual ಎಂಬ ಆಪ್ಶನ್ ಕ್ಲಿಕ್ ಮಾಡಬೇಕು.

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 4

ಕರೆ ರೆಕಾರ್ಡ್ ಎನೇಬಲ್ ಮಾಡುವುದು ಹೇಗೆ? ಸ್ಟೆಪ್ 4

ಈ ಕಾಲಾವಧಿ ಮುಗಿದ ನಂತರ ಈ ಸೌಲಭ್ಯ ಬಳಸಬೇಕಾದರೆ ಪ್ರೀಮಿಯಮ್ ಬಳಕೆದಾರರಾಗಿ ಅಪ್‍ಡೇಟ್ ಆಗಬೇಕಿದೆ. ಪ್ರೀಮಿಯಮ್ ಬಳಕೆದಾರರಾಗಬೇಕಿದ್ದರೆ ತಿಂಗಳಿಗೆ 49ರೂ. ಅಥವಾ ವರ್ಷಕ್ಕೆ 449ರೂ. ಪಾವತಿಸಬೇಕು.

ಪ್ರೊಫೈಲ್ ವೀಕ್ಷಣೆಯನ್ನು ಸಹ ತಿಳಿಯಬಹುದು!

ಪ್ರೊಫೈಲ್ ವೀಕ್ಷಣೆಯನ್ನು ಸಹ ತಿಳಿಯಬಹುದು!

ಇನ್ನು ನೀವು ಇದಕ್ಕೆ ಪ್ರೀಮಿಯಮ್ ಬಳಕೆದಾರರಾದರೆ ಕರೆ ರೆಕಾರ್ಡಿಂಗ್ ಸೌಲಭ್ಯ ಮಾತ್ರವಲ್ಲದೆ ಯಾರೆಲ್ಲಾ ನಮ್ಮ ಪ್ರೊಫೈಲ್‌ ಅನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿಯೂ ಸಿಗುತ್ತದೆ.

ಭಾರತೀಯರಿಂದ ಚೀನಾ ಮೊಬೈಲ್ ಕಂಪೆನಿಗಳು ದೋಚಿದ ಹಣವೆಷ್ಟು ಗೊತ್ತಾ?..ಶಾಕ್ ಆಗ್ತೀರಾ!!

ಭಾರತೀಯರಿಂದ ಚೀನಾ ಮೊಬೈಲ್ ಕಂಪೆನಿಗಳು ದೋಚಿದ ಹಣವೆಷ್ಟು ಗೊತ್ತಾ?..ಶಾಕ್ ಆಗ್ತೀರಾ!!

ಚೀನಾ ಕಂಪೆನಿಗಳ ಮೊಬೈಲ್‌ಗಳನ್ನು ಯಾವುದೇ ಕಾರಣಕ್ಕೂ ಖರೀದಿಸುವುದಿಲ್ಲ ಎನ್ನುವವರ ಸಂಖ್ಯೆ ಕಡಿಮೆಯಿಲ್ಲ. ಆದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿರುವ ಚೀನಾ ಮೊಬೈಲ್ ಕಂಪೆನಿಗಳಿಗೆ ಮನಸೋತ ಭಾರತೀಯರು, ಒಂದೇ ವರ್ಷದಲ್ಲಿ ಸಾವಿರಾರು ಕೋಟಿ ಹಣವನ್ನು ಅವುಗಳ ಬಾಯಿಗೆ ಸುರಿದಿದ್ದಾರೆ.

ಹೌದು, ವಿಶ್ವದ ಮೊಬೈಲ್ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್ ಪಾಯಿಂಟ್ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ಇಂತಹ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತೀಯರು ಚೀನಾದ ಕಂಪನಿಗಳ ಮೊಬೈಲ್‌ಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಿದೆ.

ದೇಶದ ನಂ.1 ಮೊಬೈಲ್ ಕಂಪೆನಿ ಶಿಯೋಮಿ ಸೇರಿದಂತೆ ಒನ್ಪ್ಲಸ್, ಹುವಾವೆ, ಹಾನರ್, ವಿವೋ, ಒಪ್ಪೋ, ಲೆನೊವೊ, ಮತ್ತು ಮೊಟೊ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ ಎಂದು ತಿಳಿದುಬಂದಿದೆ. ಹಾಗಾದರೆ, ಭಾರತೀಯರು ಯಾವ ಯಾವ ಚೀನಾ ಕಂಪೆನಿಗಳಿಗೆ ಎಷ್ಟು ಹಣ ಸುರಿದಿದ್ದಾರೆ ಎಂಬುದನ್ನು ಮುಂದೆ ಓದಿರಿ.

ಚೀನೀ ಕಂಪೆನಿಗಳ ಪ್ರಾಬಲ್ಯ!

ಚೀನೀ ಕಂಪೆನಿಗಳ ಪ್ರಾಬಲ್ಯ!

ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಪ್ರಾಬಲ್ಯ ಮೆರೆದಿವೆ. ಅಂದಾಜು 1 ಲಕ್ಷ ಕೋಟಿ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ ಕಂಪೆನಿಗಳು ಬಹುಪಾಲು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಪ್ರಾಬಲ್ಯ 10 ರಿಂದ 11 ಪರ್ಸೆಂಟ್ ಏರಿಕೆಯಾಗುತ್ತಿದೆ.

ಮಾರುಕಟ್ಟೆಯಲ್ಲಿ 50% ಕ್ಕಿಂತ ಹೆಚ್ಚು!

ಮಾರುಕಟ್ಟೆಯಲ್ಲಿ 50% ಕ್ಕಿಂತ ಹೆಚ್ಚು!

ಚೀನಾದ ನಾಲ್ಕು ಪ್ರಮುಖ ಕಂಪೆನಿಗಳಾದ ಶಿಯೋಮಿ, ಒಪ್ಪೊ, ವಿವೊ ಮತ್ತು ಹಾನರ್ ಕಂಪೆನಿಗಳು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ 50,000 ಕೋಟಿ ವ್ಯವಹಾರ ನಡೆಸಿವೆ. ಇನ್ನು ಒನ್‌ಪ್ಲಸ್, ಮೊಟೊನಂತಹ ಚೀನಾ ಮೊಬೈಲ್‌ ಕಂಪೆನಿಗಳು ಸಹ ಸೇರಿದರೆ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ.50% ಪರ್ಸೆಂಟ್ ಪಾಲನ್ನು ಚೀನಾ ಕಂಪೆನಿಗಳೇ ಹೊಂದಿವೆ.

ವರ್ಷದಲ್ಲೇ 2 ಪಟ್ಟು ಹೆಚ್ಚಾಯ್ತು!

ವರ್ಷದಲ್ಲೇ 2 ಪಟ್ಟು ಹೆಚ್ಚಾಯ್ತು!

2016-17ರ ಆರ್ಥಿಕ ವರ್ಷದಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು 26,262.4 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಆದರೆ, ಈ2017-18ರ ಅವಧಿಯಲ್ಲಿ ಒಟ್ಟು 51,722.1 ಕೋಟಿ ರೂಪಾಯಿ ವಹಿವಾಟು ನಡೆಸುವ ಮೂಲಕ, ಚೀನಾ ಮೊಬೈಲ್ ಕಂಪೆನಿಗಳು ಒಂದೇ ವರ್ಷದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ದ್ವಿಗುಣಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.

ಯಾವ ಕಂಪೆನಿ ಎಷ್ಟು ಆದಾಯ ಗಳಿಸಿದೆ?

ಯಾವ ಕಂಪೆನಿ ಎಷ್ಟು ಆದಾಯ ಗಳಿಸಿದೆ?

ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿ ದೇಶದಲ್ಲಿ 22,947.3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಪ್ರಥಮ ಸ್ಥಾನಗಳಿಸಿದೆ. ಎರಡನೇ ಸ್ಥಾನದಲ್ಲಿ ಒಪ್ಪೋ ಕಂಪನಿಯು 11,994.3 ಕೋಟಿ ರೂ. ವಹಿವಾಟು ನಡೆಸಿದೆ. ವಿವೋ 11,179.3 ಕೋಟಿ ರೂ. ವ್ಯಾಪಾರ ನಡೆಸಿದ್ದರೆ, ಪ್ರಖ್ಯಾತ ಬ್ರ್ಯಾಂಡ್ ಹುವಾವೆ ಕಂಪೆನಿ 5,601.3 ಕೋಟಿ ರೂ. ವಹಿವಾಟು ನಡೆಸಿದೆ.

ಬಜೆಟ್ ಫೋನ್‌ಗಳ ಮೇಲೆ ಹಿಡಿತ!

ಬಜೆಟ್ ಫೋನ್‌ಗಳ ಮೇಲೆ ಹಿಡಿತ!

ಶಿಯೋಮಿ ಕಂಪೆನಿ .6,000-13,000 ಬೆಲೆಯ ಮೊಬೈಲ್‌ಗಳ ಮೇಲೆ ಹಿಡಿತ ಸಾಧಿಸಿದರೆ, ಒಪ್ಪೊ ಮತ್ತು ವಿವೊ ಕ್ರಮವಾಗಿ 10,000-22,000 ರೂ. ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಮಾರಾಟ ಮಾಡಿವೆ. ಹಾನರ್ ಕಂಪೆನಿ ಕೂಡ 8,000-12,000 ವಿಭಾಗದಲ್ಲಿ ಹೆಚ್ಚು ಪಾಲನ್ನು ಪಡೆದಿದೆ. ಇವುಗಳ ಮಧ್ಯೆ ಕೊರಿಯಾದ ಸ್ಯಾಮ್‌ಸಂಗ್ ಮಾತ್ರ ಹೆಚ್ಚು ಹೋರಾಟ ಮಾಡಿದೆ.

ಪ್ರೀಮಿಯಮ್‌ನಲ್ಲಿ ಒನ್‌ಪ್ಲಸ್!

ಪ್ರೀಮಿಯಮ್‌ನಲ್ಲಿ ಒನ್‌ಪ್ಲಸ್!

ಮಧ್ಯಮ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಇವುಗಳ ಪಾಲು ಹೆಚ್ಚಿದ್ದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಒನ್‌ಪ್ಲಸ್ ಕಂಪೆನಿ ಮಿಂಚುತ್ತಿದೆ. ಈ ವರ್ಷ ಸತತ ಎರಡು ತ್ರೈಮಾಸಿಕಗಳಿದಲೂ ರೂ 30,000-ಪ್ಲಸ್ ವಿಭಾಗದಲ್ಲಿ ನಾಯಕತ್ವವನ್ನು ಉಳಿಸಿಕೊಳ್ಳುವಲ್ಲಿ ಒನ್‌ಪ್ಲಸ್ ಯಶಸ್ವಿಯಾಗಿದೆ. ಭಾರತ ಈ ಬ್ರಾಂಡ್‌ಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

ಸ್ಯಾಮ್‌ಸಂಗ್ ಕಥೆ ಗೊತ್ತಿಲ್ಲ!

ಸ್ಯಾಮ್‌ಸಂಗ್ ಕಥೆ ಗೊತ್ತಿಲ್ಲ!

ಕೊರಿಯಾದ ಸ್ಯಾಮ್‌ಸಂಗ್ 2016-17ರ ಸಾಲಿನಲ್ಲಿ 34,261 ಕೋಟಿ ರೂ.ವ್ಯವಹಾರ ನಡೆಸಿದೆ. ಆದರೆ, 2018ರ ಆರ್ಥಿಕ ಸಾಲಿನ ಸ್ಯಾಮ್‍ಸಂಗ್ ಹಾಗೂ ಲೆನೆವೊ ಕಂಪನಿಗಳ ಮಾಹಿತಿಗಳು ಲಭ್ಯವಾಗಿಲ್ಲ. ಇನ್ನು 2018ನೇ ಆರ್ಥಿಕ ಸಾಲಿನಲ್ಲಿ ಆಪಲ್ 13,097 ಕೋಟಿ ರೂ. ವಹಿವಾಟನ್ನು ಭಾರತದ ಮಾರುಕಟ್ಟೆಯಲ್ಲಿ ನಡೆಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Best Mobiles in India

English summary
Truecaller on Monday introduced a new feature for its premium users on Android.Truecaller users can now record their calls and conversations. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X