Home
ಟೆಕ್ ನೌಕರಿ

ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ಬಳಸಬಹುದು...ಇಲ್ಲಿದೇ ಟ್ರಿಕ್ಸ್..!

By Gizbot Bureau

ಯಾರ ಬಳಿಯಾದ್ರೂ ನಿಮಗೆ ಒಂದು ಅರ್ಧ ದಿನ ವಾಟ್ಸ್ ಆಪ್ ಇಲ್ಲದೇ ಇರೋಕೆ ಸಾಧ್ಯವಿದ್ಯಾ ಎಂದು ಕೇಳಿದರೆ, ಹೆಚ್ಚಿನವರು ಇಲ್ಲ ಎಂದೇ ಹೇಳಬಹುದು. ಅಷ್ಟು ಫೇಮಸ್ ಮೆಸೇಜಿಂಗ್ ಆಪ್ ಆಗಿದೆ ವಾಟ್ಸ್ ಆಪ್.. ಪ್ರಪಂಚದಾದ್ಯಂತ ಮಿಲಿಯನ್ ಗೂ ಅಧಿಕ ಮಂದಿ ವಾಟ್ಸ್ ಆಪ್ ಬಳಸುತ್ತಿದ್ದಾರೆ. ನಿಮ್ಮ ಫೋಟೋ, ವೀಡಿಯೋ, ಫೈಲ್ ಗಳು, ಇತ್ಯಾದಿ ಯಾವುದೇ ವಿಚಾರವನ್ನು ನಿಮ್ಮ ಕಾಂಟ್ಯಾಕ್ಟ್ ನಲ್ಲಿನ ಯಾವುದೇ ಸದಸ್ಯರ ಜೊತೆ( ಅವರೂ ಕೂಡ ವಾಟ್ಸ್ ಆಪ್ ನಲ್ಲಿ ಇದ್ದರೆ) ಹಂಚಿಕೊಳ್ಳಲು ವಾಟ್ಸ್ ಆಪ್ ಒಂದು ಸುಲಭದ ಮಾರ್ಗವಾಗಿದೆ.

ಫೇಸ್ ಬುಕ್ ವಾಟ್ಸ್ ಆಪ್ ನ್ನು ಕೊಂಡುಕೊಂಡ ನಂತರವೂ ಕೂಡ ವಾಟ್ಸ್ ಆಪ್ ನಲ್ಲಿ ಹಲವು ವಿಧಧ ಅಪ್ ಡೇಟ್ ಗಳಾದವು ಮತ್ತು ಅವು ಬಳಕೆದಾರ ಸ್ನೇಹಿಯಾಗೇ ಇದ್ದವು. ಇಷ್ಟು ದಿನ ವಾಟ್ಸ್ ಆಪ್ ಕೇವಲ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇನ್ನು ಮುಂದೆ ಹಾಗಿಲ್ಲ. ದೊಡ್ಡ ದೊಡ್ಡ ಮೆಸೇಜ್ ಗಳನ್ನು ಟೈಪ್ ಮಾಡಿ ಕಳಿಸಬೇಕು ಎಂದರೆ ಸ್ಮಾರ್ಟ್ ಫೋನ್ ನ ವಾಟ್ಸ್ ಆಪ್ ನಲ್ಲಿ ಕಠಿಣವಾಗುತ್ತಿತ್ತು. ಆದರೆ ಇನ್ನು ಮುಂದೆ ವಾಟ್ಸ್ ಆಪ್ ನ ಡೆಸ್ಕ್ ಟಾಪ್ ವರ್ಷನ್ ಕೂಡ ಬಳಕೆಗೆ ಬರಲಿದೆ.

ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ಬಳಸಬಹುದು...ಇಲ್ಲಿದೇ ಟ್ರಿಕ್ಸ್..!

ಹೌದು, ನಿಮ್ಮ ವಾಟ್ಸ್ ಆಪ್ ನ್ನು ನೀವು ನಿಮ್ಮ ವಿಂಡೋಸ್ ಪಿಸಿ/Macನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ಡೆಸ್ಕ್ ಟಾಪ್ ನಲ್ಲಿ ವಾಟ್ಸ್ ಆಪ್ ಇನ್ಸ್ಟಾಲ್ ಮಾಡುವುದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ವಾದರೆ ಅದರ ಹಂತಗಳನ್ನು ನಾವಿಲ್ಲಿ ವಿವರಿಸಿದ್ದೀವಿ. ಮುಂದೆ ಓದಿ..

• Windows ಪಿಸಿಯಲ್ಲಿ ವಾಟ್ಸ್ ಆಪ್..

ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ಬಳಸಬಹುದು...ಇಲ್ಲಿದೇ ಟ್ರಿಕ್ಸ್..!

1. whatsapp.com/download ಇಲ್ಲಿ ವಾಟ್ಸ್ ಆಪ್ ನ ವಿಂಡೋಸ್ ವರ್ಷನ್ ನ್ನು ನಿಮ್ಮ ಸಿಸ್ಮಮ್ ಗೆ ಡೌಲ್ ಲೋಡ್ ಮಾಡಿ.

2. ಡೌನ್ ಲೋಡ್ ಆಗಿರುವ ಫೈಲ್ ನ್ನು ಓಪನ್ ಮಾಡಿ ಮತ್ತು .exe ಫೈಲ್ ನ್ನು ರನ್ ಮಾಡಿ, ಆಗ ಇನ್ಸ್ಟಾಲೇಷನ್ ಪ್ರೊಸೆಸ್ ಆಗುತ್ತೆ.

3. ಇನ್ಸ್ಟಾಲೇಷನ್ ಮುಗಿದ ನಂತರ, ಪಿಸಿಯಲ್ಲಿ ನಿಮ್ಮ ಪ್ರೋಗ್ರಾಮ್ ಓಪನ್ ಮಾಡಿ

4. ನೀವು ಒಂದು QR ಕೋಡನ್ನು ಗಮನಿಸುತ್ತೀರಿ. ಈ QR ಕೋಡನ್ನು ನೀವು ನಿಮ್ಮ ಮೊಬೈಲ್ ವರ್ಷನ್ ನ ವಾಟ್ಸ್ ಆಪ್ ಮೂಲಕ ಸ್ಕ್ಯಾನ್ ಮಾಡಬೇಕು.

5. ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ ಆಪ್ ಓಪನ್ ಮಾಡಿ ಮತ್ತು ಸೆಟ್ಟಿಂಗ್ ಮೆನು( ಮೂರು ಲಂಬಾಕೃತಿಯಲ್ಲಿರುವ ಚುಕ್ಕಿಗಳನ್ನು ಒತ್ತಿ) ವನ್ನು ತೆರೆಯಿರಿ. ಇಲ್ಲಿ ನೀವು ವಾಟ್ಸ್ ಆಪ್ ವೆಬ್ ಆಪ್ಷನ್ ನ್ನು ನೋಡಲು ಸಾಧ್ಯವಿದೆ.

6. ಇದು QR ಕೋನ್ ಸ್ಕ್ಯಾನರ್ ನ್ನು ತೆರೆಯುತ್ತೆ. ಈ ಸ್ಕ್ಯಾನರ್ ಬಳಸಿ ನಿಮ್ಮ ಡೆಸ್ಕ್ ಟಾಪ್ ನ QR ಕೋಡನ್ನು ಸ್ಕ್ಯಾನ್ ಮಾಡಿ..

7. ಇನ್ನು ಕೆಲವೇ ಕ್ಷಣದಲ್ಲಿ , ನಿಮ್ಮ ಎಲ್ಲಾ ವಾಟ್ಸ್ ಆಪ್ ಮಾತುಕತೆಗಳನ್ನು ಡೆಸ್ಕ್ ಟಾಪ್ ನಲ್ಲಿ ನೋಡಲು ಸಾಧ್ಯವಿದೆ. ನಂತರ ನೀವು ಮೆಸೇಜ್ ಕಳಿಸುವುದು ಮತ್ತು ರಿಸೀವ್ ಮಾಡುವುದನ್ನು ಡೆಸ್ಕ್ ಟಾಪ್ ನಲ್ಲೇ ಮಾಡಬಹುದು.

8. ಆದರೆ ಒಂದು ನೆನಪಿರಲಿ, ನೀವು ವಾಟ್ಸ್ ಆಪ್ ನ್ನು ಡೆಸ್ಕ್ ಟಾಪ್ ನಲ್ಲಿ ಬಳಸುವಾಗ ನಿಮ್ಮ ಫೋನಿನ ಮತ್ತು ಕಂಪ್ಯೂಟರ್ ನ ಎರಡರ ಇಂಟರ್ ನೆಟ್ ಕನೆಕ್ಷನ್ ಕೂಡ ಲಭ್ಯವಿರಬೇಕು. ಇಲ್ಲದೇ ಇದ್ದರೆ ನೀವು ಮೆಸೇಜ್ ಗಳನ್ನು ಕಳುಹಿಸಲು ಮತ್ತು ಪಡೆಯಲು ಸಾಧ್ಯವಿಲ್ಲ.

• Mac ನಲ್ಲಿ ವಾಟ್ಸ್ ಬಳಕೆ ಮಾಡುವುದು ಹೇಗೆ?

ಕಂಪ್ಯೂಟರ್ ನಲ್ಲಿ ವಾಟ್ಸ್ ಆಪ್ ಬಳಸಬಹುದು...ಇಲ್ಲಿದೇ ಟ್ರಿಕ್ಸ್..!

1. ವಾಟ್ಸ್ ಆಪ್ ನ Mac ವರ್ಷನ್ ನ್ನು ನಿಮ್ಮ ಸಿಸ್ಟಮ್ ನಲ್ಲಿ whatsapp.com/download ಈ ಲಿಂಕ್ ಬಳಸಿ ಡೌನ್ ಲೋಡ್ ಮಾಡಿ..

2. ಡೌನ್ ಲೋಡ್ ಆಗಿರುವ ಫೈಲ್ ನ್ನು ಅನ್ ಝಿಪ್ ಮಾಡಿ ಮತ್ತು ವಾಟ್ಸ್ ಆಪ್ ನ್ನು ಅಪ್ಲಿಕೇಷನ್ ಫೋಲ್ಡರ್ ಗೆ ಚಲಿಸಿ.

3. ನೀವು QR ಕೋಡನ್ನು ಗಮನಿಸುತ್ತೀರಿ. ಅದನ್ನು ಐಫೋನಿನ ಮೊಬೈಲ್ ವರ್ಷನ್ ವಾಟ್ಸ್ ಆಪ್ ಬಳಸಿ ಸ್ಕ್ಯಾನ್ ಮಾಡಿ

4. ನಿಮ್ಮ ಐಫೋನಿನಲ್ಲಿ ವಾಟ್ಸ್ ಆಪ್ ತೆರೆಯಿರಿ. ಮತ್ತು ಸೆಟ್ಟಿಂಗ್ಸ್ ಮೆನುವಿಗೆ ತೆರಳಿ. ಅಲ್ಲಿ ನೀವು ವಾಟ್ಸ್ ಆಪ್ ವೆಟ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು

5. ಈಗ ನಿಮ್ಮ ಡೆಸ್ಕ್ ಟಾಪ್ ನಲ್ಲಿರುವ QR ಕೋಡನ್ನು ಸ್ಕ್ಯಾನ್ ಮಾಡಿ. ಐಫೋನ್ ವಾಟ್ಸ್ ಆಪ್ ನಲ್ಲಿರುವ QR ಕೋಡ್ ಸ್ಕ್ಯಾನರ್ ನ್ನು ಬಳಸಿ.

6. ಕೆಲವೇ ಕ್ಷಣದಲ್ಲಿ ನೀವು ವಾಟ್ಸ್ ಆಪ್ ಎಲ್ಲ ಮಾತುಕತೆಗಳನ್ನುನಿಮ್ಮಸ್ಕ್ರೀನ್ ನಲ್ಲಿ ಕಾಣಬಹುದು ಮತ್ತು ಮೆಸೇಜ್ ಕಳಿಸುವುದು, ಪಡೆಯುವುದು ಕೆಲಸಗಳನ್ನು ಡೆಸ್ಕ್ ಟಾಪ್ ನಲ್ಲಿ ಮಾಡಬಹುದು.

7. ನೀವು Mac ನಲ್ಲಿ ವಾಟ್ಸ್ ಆಪ್ ಬಳಸುವಾಗ ಒಂದು ಅಂಶ ಚೆನ್ನಾಗಿ ನೆನಪಿರಲಿ. ನಿಮ್ಮ ಐಫೋನ್ ಮತ್ತು ನಿಮ್ಮ MAC ಎರಡರಲ್ಲೂ ಕೂಡ ಅಂತರ್ಜಾಲ ಸೇವೆ ಲಭ್ಯವಿರಬೇಕು, ಇಲ್ಲದಿದ್ದರೆ ವಾಟ್ಸ್ ಆಪ್ ಬಳಸಲು ಅಸಾಧ್ಯ.

ಡೆಸ್ಕ್ ಟಾಪ್ ನಲ್ಲಿ ವಾಟ್ಸ್ ಆಪ್ ಬಳಸುವುದು, ತುಂಬಾ ಉದ್ದದ ಮೆಸೇಜ್ ಕಳಿಸುವ ಬಳಕೆದಾರರಿಗೆ ಬಹಳ ಅನುಕೂಲಕರವಾಗಿದೆ. ಈ ರೀತಿ ಮಾಡುವುದರಿಂದ ಒಂದು ಗಂಟೆ ತೆಗೆದುಕೊಳ್ಳುವ ಕೆಲಸವನ್ನು ಅರ್ಧ ಗಂಟೆಯಲ್ಲೇ ಮಾಡಿ ಮುಗಿಸಬಹುದಾಗಿದೆ.

Best Mobiles in India

English summary
How to use WhatsApp on PC. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+