ಸ್ಮಾರ್ಟ್‌ಫೋನ್‌ನ್ನೆ ಟಿವಿ ರಿಮೋಟ್ ಆಗಿ ಬಳಸಿ..! ಹೇಗೆ ಗೊತ್ತಾ?!

By GizBot Bureau
|

ನೀವು ಯಾವಾಗಲೂ ನಿಮ್ಮ ಸ್ಮಾರ್ಟ್ ಟಿವಿಯ ರಿಮೋಟ್ ಎಲ್ಲಿ ಇಟ್ಟು ಬಿಟ್ಟಿದ್ದೀರಿ ಎಂದು ಮರೆತು ಬಿಡುತ್ತೀರಾ? ಮತ್ತು ಅದಕ್ಕಾಗಿ ನೀವು ಮತ್ತೊಂದು ಎಕ್ಸ್ಟ್ರಾ ರಿಮೋಟ್ ಇರಬೇಕಿತ್ತು ಎಂದು ಬಯಸುತ್ತಿದ್ದೀರಾ? ಆ ಅವಕಾಶ ಖಂಡಿತ ಇದೆ.

ಹೌದು ನೀವೀಗ ನಿಮ್ಮ ಸ್ಮಾರ್ಟ್ ಫೋನ್ ನ್ನು ಸ್ಮಾರ್ಟ್ ಟಿವಿ, ಆಂಡ್ರಾಯ್ಡ್ ಟಿವಿ ಬಾಕ್ಸ್, ಫೈಯರ್ ಟಿವಿ ಸ್ಟಿಕ್, ರೋಕು ಟಿವಿ ರಿಮೋಟ್ ಆಗಿ ಬಳಕೆ ಮಾಡಬಹುದು. ಇಲ್ಲಿ ನಾವು ನಿಮಗೆ ನಿಮ್ಮ ಸ್ಮಾರ್ಟ್ ಫೋನನ್ನು ಹೇಗೆ ಟಿವಿ ರಿಮೋಟ್ ಆಗಿ ಬಳಕೆ ಮಾಡಬಹುದು ಎಂಬುದನ್ನು ತಿಳಿಸಿಕೊಡಲಿದ್ದೇವೆ.. ಮುಂದೆ ಓದಿ.

ಸ್ಮಾರ್ಟ್‌ಫೋನ್‌ನ್ನೆ ಟಿವಿ ರಿಮೋಟ್ ಆಗಿ ಬಳಸಿ..! ಹೇಗೆ ಗೊತ್ತಾ?!

ಪೂರ್ವ ಅಪೇಕ್ಷಿತಗಳು ಅರ್ಥಾತ್ ಇವುಗಳಿದ್ದರೆ ಮಾತ್ರ ನಿಮ್ಮ ಟಿವಿ ರಿಮೋಟ್ ನ್ನು ಸ್ಮಾರ್ಟ್ ಫೋನಿನಲ್ಲೂ ಬಳಸಬಹುದು.

• ನಿಮ್ಮ ಸ್ಮಾರ್ಟ್ ಟಿವಿಗೆ ವಯರ್ ಲೆಸ್ ಕನೆಕ್ಟಿವಿಟಿ ಇದಿಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ

• ನಿಮ್ಮ ಸ್ಮಾರ್ಟ್ ಟಿವಿ ಮತ್ತು ಫೋನ್ ಎರಡೂ ಕೂಡ ಒಂದೇ ವೈ-ಫೈ ನೆಟ್ ವರ್ಕ್ ನಲ್ಲಿ ಇರಬೇಕು

• ನಿಮ್ಮ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 4.4 ಅಥವಾ ಅದಕ್ಕೂ ಮುಂದಿನ ವರ್ಷನ್ ನಲ್ಲಿ ರನ್ ಆಗುತ್ತಿರಬೇಕು

• ನಿಮ್ಮ ಸ್ಮಾರ್ಟ್ ಟಿವಿ ಅಥವಾ ಬಾಕ್ಸ್ .APK ಫೈಲ್ ಗಳನ್ನು ಬೆಂಬಲಿಸಬೇಕು.

ಪ್ರಾಥಮಿಕ ಸಿದ್ಧತೆಗಳು:

• ನಿಮ್ಮ ಸ್ಮಾರ್ಟ್ ಟಿವಿ ಡಿವೈಸ್ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ CetusPlay ಆಪ್ ನ್ನು ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ..

• ಈ ಕೆಳಗಿನ ಲಿಂಕ್ ನ್ನು ಬಳಸಿ ಮತ್ತು ಸರಿಯಾದ ಎಪಿಕೆ ಫೈಲನ್ನು ನಿಮ್ಮ ಡಿವೈಸ್ ಗೆ ಡೌನ್ ಲೋಡ್ ಮಾಡಿ ( Android | iOS | TV ).

• ಹೆಚ್ಚಿನ ಸಂದರ್ಬದಲ್ಲಿ ಸ್ಮಾರ್ಟ್ ಫೋನ್ ಆಪ್ ಗಳು ಅಟೋಮ್ಯಾಟಿಕಲಿ ಟಿವಿ ಕಂಪೆನಿಯನ್ ಅಪ್ ಗಳನ್ನು ಡೌನ್ ಲೋಡ್ ಮಾಡುತ್ತವೆ. ನೀವು ಮ್ಯಾನುವಲಿ ಬೇಕಿದ್ದರೆ ನಿಮ್ಮ ಪೆನ್ ಡ್ರೈವ್ ಬಳಸಿ ಇನ್ಸ್ಟಾಲ್ ಮಾಡಬಹುದು.

ಸ್ಮಾರ್ಟ್‌ಫೋನ್‌ನ್ನೆ ಟಿವಿ ರಿಮೋಟ್ ಆಗಿ ಬಳಸಿ..! ಹೇಗೆ ಗೊತ್ತಾ?!

ಈ ಹಂತಗಳನ್ನು ಅನುಸರಿಸಿ

1. ಫೋನಿನಲ್ಲಿ ಆಪ್ ನ್ನು ಓಪನ್ ಮಾಡಿ ಮತ್ತು ನಿಮ್ಮ ಸ್ಮಾರ್ಟ್ ಟಿವಿ ಡಿವೈಸ್ ನ್ನು ನಿಮ್ಮ ಫೋನ್ ತೋರಿಸುವವರೆಗೆ ಕಾಯಿರಿ

2. ಅಗತ್ಯ ಪರ್ಮಿಷನ್ ಗಳನ್ನು ನಿಮ್ಮ ಟಿವಿ ಮತ್ತು ಸ್ಮಾರ್ಟ್ ಫೋನ್ ಗಳಿಗೆ ನೀಡಿ

3. ಆಪ್ ಕನೆಕ್ಟ್ ಆಗುವವರೆಗೆ ಕಾಯಿರಿ

4. ಈಗ ಈ ಕೆಳಗಿನ ರಿಮೋಟ್ ಟೈಪ್ ನ್ನು ನೀವು ಆಯ್ಕೆ ಮಾಡಬೇಕು

• ಡಿಪ್ಯಾಡ್ ಮೋಡ್:- a clicky remote with haptic feedback.

• ಟಚ್ ಪ್ಯಾಡ್ ಮೋಡ್:- ಇದು ಟಚ್ ಸ್ಕ್ರೀನ್ ರಿಮೋಟ್ ನಂತೆ ಕೆಲಸ ಮಾಡುತ್ತೆ

• ಮೌಸ್ ಮೋಡ್:- ಸ್ಥಳೀಯವಲ್ಲದ ಅಪ್ಲಿಕೇಶನ್ಗಳನ್ನು ಬಳಸುವಾಗ ಸಹಾಯಕವಾಗುವ ಮೋಡ್

• ಗೇಮ್ ಪ್ಯಾಡ್ ಮೋಡ್ (Beta):- ನೀವು ಇದನ್ನು ಆಟವಾಡುವಾಗ ಬಳಸಬಹುದು

5. ಸ್ಮಾರ್ಟ್ ಟಿವಿ ರಿಮೋಟ್ ನಂತೆ ವರ್ತಿಸುವುದೂ ಅಲ್ಲದೆ, ಈ ಆಪ್ ನಲ್ಲಿ ಹಲವು ಇತರೆ ವೈಶಿಷ್ಟ್ಯಗಳೂ ಇವೆ.

ಸ್ಮಾರ್ಟ್‌ಫೋನ್‌ನ್ನೆ ಟಿವಿ ರಿಮೋಟ್ ಆಗಿ ಬಳಸಿ..! ಹೇಗೆ ಗೊತ್ತಾ?!

6.ಪ್ಲೇ ಆನ್ ಟಿವಿ: ಇದು ನಿಮಗೆ ಅಂತರ್ ರ್ನಿರ್ಮಿತ ಮಿರಾಕಾಸ್ಟ್ ಬಳಸಿಕೊಂಡು ನೇರವಾಗಿ ನಿಮ್ಮ ಫೋನಿನ ವಿಷಯವನ್ನು ಪ್ರಸಾರ ಮಾಡಲು ನಿಮಗೆ ಅನುಮತಿ ನೀಡುತ್ತದೆ

. ಈ ವೈಶಿಷ್ಟ್ಯ ಬಳಸಿಕೊಂಡು ನೀವು ಆಪ್ ಗಳನ್ನೂ ಇನ್ಸ್ಟಾಲ್ ಮಾಡಬಹುದು.

7. ಬಿಲ್ಟ್ ಇನ್ ಆಪ್ ಸೆಂಟರ್: ಇದು ನಿಮ್ಮ ಸ್ಮಾರ್ಟ್ ಟಿವಿಗಾಗಿ ಹಲವು ಅಪ್ಲಿಕೇಷನ್ ಗಳನ್ನು ಸಂಗ್ರಹಿಸಿರುತ್ತದೆ.

8. ಸ್ಕ್ರೀನ್ ಕ್ಯಾಪ್ಚರ್:- ಇದು ನಿಮಗೆ ಟಿವಿಯ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತದೆ

ಒಂದು ವೇಳೆ ನೀವು ಸ್ಯಾಮ್ ಸಂಗ್ ಅಥವಾ ಎಲ್ ಜಿ ಸ್ಮಾರ್ಟ್ ಟಿವಿ ಹೊಂದಿದ್ದರೆ ಅವುಗಳು ತಮ್ಮದೇ ಸ್ವಾಮ್ಯದ os ನಿಂದ ರನ್ ಆಗುತ್ತದೆ. ಆಗ ಅವುಗಳ ನಿರ್ಧಿಷ್ಟ ರಿಮೋಟ್ ಆಪ್ ಗಳನ್ನು ಡೌನ್ ಲೋಡ್ ಮಾಡಿ ಮತ್ತು ಕೆಳಗಿನ ಹಂತಗಳನ್ನು ಫಾಲೋ ಮಾಡಿ

ಸ್ಮಾರ್ಟ್ ಟಿವಿ ಮತ್ತು ಫೋನ್ ಎರಡೂ ಒಂದೇ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಮತ್ತು ಎಲ್ ಜಿ/ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಆಪ್ ನ್ನು ಡೌನ್ ಲೋಡ್ ಮಾಡಿ.

• LG TV Plus ( Android | iOS)

• Samsung SmartThings ( Android | iOS)

ಸೆಟಪ್ ಪೂರ್ಣಗೊಳಿಸಲು ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.

Best Mobiles in India

English summary
How to use your smartphone as a TV remote. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X