ಮೊಬೈಲ್‌ನಲ್ಲಿಯೇ ಆಧಾರ್- ಬ್ಯಾಂಕ್ ಖಾತೆ ಲಿಂಕ್ ಬಗ್ಗೆ ಪರೀಕ್ಷಿಸುವುದು ಹೇಗೆ?

Written By:

ನಿಮ್ಮ ಬ್ಯಾಂಕ್ ಅಕೌಂಟ್‌ಗೆ ನೀವು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದೀರಾ?..ಮಾಡಿಲ್ಲವೆಂದರೆ ಕೂಡಲೇ ಲಿಂಕ್ ಮಾಡಿ.! ಭಾರತ ಸರ್ಕಾರದ ಆದೇಶದಂತೆ ಆಧಾರ್ ಲಿಂಕ್ ಆಗಿಲ್ಲದ ಬ್ಯಾಂಕ್ ಅಕೌಂಟ್ ಡಿಸೆಂಬರ್ 31, 2017 ರ ನಂತರ ನಿಷೇಧವಾಗಲಿದ್ದು, ನಿಮ್ಮ ಅಕೌಂಟ್ ಸುರಕ್ಷಿತವಾಗಿಲು ಈ ಕಾರ್ಯ ಬಹಳ ಮುಖ್ಯ!!

ಇನ್ನು ನೀವು ಆಧಾರ್ ಅನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡಿದ್ದರೂ ಕೂಡ, ಆ ಕಾರ್ಯ ಸರಿಯಾಗಿ ಆಗಿದೆಯೇ ಎಂಬುದನ್ನು ತಿಳಿಯುವುದು ಸಹ ಅಷ್ಟೇ ಮುಖ್ಯ.!! ಏಕೆಂದರೆ, ನಿಮ್ಮ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಆಧಾರ್ ವಿವರಗಳನ್ನು ನೀವು ಸಲ್ಲಿಸಿದ್ದರೂ, ಬ್ಯಾಂಕಿನಿಂದ ಸರಿಯಾಗಿ ಕಾರ್ಯ ಆಗದೇ ಇರಬಹುದು.!!

ಹಾಗಾಗಿ, ಇಂದಿನ ಲೇಖನದಲ್ಲಿ ಮೂಲಕ ನಿಮ್ಮ ಆಧಾರ್ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿದೆಯೇ ಎಂಬುದನ್ನು ಆನ್‌ಲೈನ್‌ ಮತ್ತು ಮೊಬೈಲ್‌ನಲ್ಲಿಯೇ ಪರೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ..!! ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದ್ದು, ನಿಮ್ಮ ಅಕೌಂಟ್ ಚೆಕ್ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್ ವೆಬ್ಸೈಟ್ ತೆರೆಯಿರಿ!!

ಆಧಾರ್ ವೆಬ್ಸೈಟ್ ತೆರೆಯಿರಿ!!

ನಿಮ್ಮ ಆಧಾರ್ ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿದೆಯೇ ಎಂಬುದನ್ನು ತಿಳಿಯಲು ಆಧಾರ್‌ನ ಅಫಿಷಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ. www.uidai.gov.in ಲಿಂಕ್ ಕ್ಲಿಕ್ ಮಾಡಿದರೆ ಆಧಾರ್ ಅಫಿಷಿಯಲ್ ವೆಬ್‌ಸೈಟ್ ತೆರೆಯುತ್ತದೆ.

'ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿ' ಕ್ಲಿಕ್ ಮಾಡಿ!!

'ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿ' ಕ್ಲಿಕ್ ಮಾಡಿ!!

ಆಧಾರ್ ಅಫಿಷಿಯಲ್ ವೆಬ್‌ಸೈಟ್ ತೆರೆದ ನಂತರ ಆಧಾರ್ ಸರ್ವಿಸ್ ಕಾಲಂ‌ನಲ್ಲಿ ಕಾಣಿಸುವ ಕೊನೆಯ ಆಯ್ಕೆ 'ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿ ಚೆಕ್ ಮಾಡಿ'( Check Aadhaar & Bank Account Linking Status) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.!!

ಆಧಾರ್ ಸಂಖ್ಯೆ ನಮೂದಿಸಿ!!

ಆಧಾರ್ ಸಂಖ್ಯೆ ನಮೂದಿಸಿ!!

'ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಸ್ಥಿತಿ ಕ್ಲಿಕ್ ಮಾಡಿದ ನಂತರ ತೆರೆಯುವ ಪೇಜ್‌ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ. ಸಲ್ಲಿಸಿದ ನಂತರ, ಆಧಾರ್ ಡೇಟಾಬೇಸ್ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸಲಾಗುತ್ತದೆ.

ಒಟಿಪಿ ನೀಡಿ ಸ್ಟೇಟಸ್ ಚೆಕ್ ಮಾಡಿ!!

ಒಟಿಪಿ ನೀಡಿ ಸ್ಟೇಟಸ್ ಚೆಕ್ ಮಾಡಿ!!

ಆಧಾರ್‌ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡ್‌ ಅನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಒಂದು ಸಲ ಬಳಕೆಯ ಪಾಸ್‌ವರ್ಡ್‌(ಒಟಿಪಿ) ಬರುತ್ತದೆ. OTP ಅನ್ನು ನಮೂದಿಸಿ ಮತ್ತು 'ಲಾಗಿನ್' ಮೇಲೆ ಕ್ಲಿಕ್ ಮಾಡಿ. . ಯಶಸ್ವಿ ಲಾಗಿನ್ ಆದರೆ ಬ್ಯಾಂಕ್ ಅಕೌಂಟ್ ನಿಮ್ಮ ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ತೋರಿಸುತ್ತದೆ.!!

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಮೊಬೈಲ್‌ನಲ್ಲಿ ಪರೀಕ್ಷಿಸುವುದು ಹೇಗೆ?

ಮೊಬೈಲ್‌ನಲ್ಲಿ ಪರೀಕ್ಷಿಸುವುದು ಹೇಗೆ?

*99*99*1# ಸಂಖ್ಯೆಗೆ ಡಯಲ್ ಮಾಡಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.! ನೀವು ನಮೂದಿಸಿದ ಅಂಕೆಗಳು ಸರಿಯಾಗಿದೆಯೇ ಎಂದು ದೃಢೀಕರಿಸಿ. ದೃಢೀಕರಿಸಿದ ನಂತರ ಆಧಾರ್ ಜೊತೆ ಸಂಪರ್ಕ ಹೊಂದಿರುವ ಬ್ಯಾಂಕ್ ಖಾತೆಯನ್ನು ನಿಮಗೆ ತೋರಿಸುತ್ತದೆ.!!

ಓದಿರಿ:₹ 14,999ಕ್ಕೆ ಐಫೋನ್ 8ಗೂ ಸೆಡ್ಡು ಹೊಡೆಯಲಿದೆ 'ಶಿಯೋಮಿ MI A1'!!.ಏಕೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The government of India has made it mandatory for financial institutions like banks.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot