Just In
- just now
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 1 hr ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- 1 hr ago
ಹೊಸ ಚಾರ್ಜರ್ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್ ಚಾರ್ಜ್ ಸಾಧ್ಯ!
- 1 hr ago
ವೀಡಿಯೋ ಲೈಕ್ ಮಾಡಿ ಹಣ ಗಳಿಸಿ! ಲಿಂಕ್ ಕ್ಲಿಕ್ ಮಾಡುವ ಮುನ್ನ ಇರಲಿ ಎಚ್ಚರ!
Don't Miss
- News
ಗಣರಾಜ್ಯೋತ್ಸವ, ವಾರಾಂತ್ಯದ ರಜೆ: ಬೆಂಗಳೂರಿನಿಂದ ತೆರಳುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಶಾಕ್
- Sports
Ind vs NZ 3rd ODI: ರೋಹಿತ್-ಗಿಲ್ ಶತಕದ ಆರ್ಭಟ: ನ್ಯೂಜಿಲೆಂಡ್ಗೆ ಗೆಲ್ಲಲು 386 ರನ್ ಗುರಿ
- Movies
ಕನ್ನಡಕ್ಕಾಗಿ ದ್ವೇಷ ಮರೆತ ಅಪ್ಪು, ಕಿಚ್ಚ, ಯಶ್ ಫ್ಯಾನ್ಸ್: ಸ್ಯಾಂಡಲ್ವುಡ್ನಲ್ಲಿ ಹೀಗೊಂದು 'ಕ್ರಾಂತಿ'!
- Automobiles
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಪ್ಯೂಟರ್‌ನಲ್ಲಿ ಫೇಸ್‌ಬುಕ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?
ಫೇಸ್‌ಬುಕ್‌ನಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ತುಂಬಾ ಕುತೂಹಲಕಾರಿ ವೈಶಿಷ್ಟ್ಯವೆಂದರೆ, ಆನ್‌ಲೈನ್‌ಲ್ಲಿರುವ ಕುತೂಹಲಕಾರಿ ಫೋಟೋಗಳು, ವೀಡಿಯೋಗಳು ಮತ್ತು ಸಂದೇಶಗಳು ಕಾಣಿಸುವುದು.! ಹೀಗೆ ಕಾಣಿಸುವ ಫೋಟೋಗಳನ್ನು ಡೌನ್ ಲೋಡ್ ಮಾಡುವುದು ತುಂಬಾ ಸುಲಭ. ಆದರೆ, ಫೇಸ್‌ಬುಕ್ ವಿಡಿಯೋಗಳನ್ನು ಡೌನ್ ಲೋಡ್ ಮಾಡುವುದು ಸ್ವಲ್ಪ ಮಟ್ಟಿಗೆ ಪ್ರಯಾಸದಾಯಕವಾಗಿರುತ್ತದೆ ಎಂದು ಹೇಳಬಹುದು.

ಹಾಗಾಗಿ, ಒಂದು ವೇಳೆ ನೀವು ಯಾವುದಾದರೂ ವೀಡಿಯೋವನ್ನು ಕುತೂಹಲಕಾರಿ ಎಂದು ಪರಿಗಣಿಸಿದರೆ ಮತ್ತು ಅದನ್ನು ಡೌನ್ ಲೋಡ್ ಮಾಡಲು ಪ್ರಯತ್ನಿಸಿದಾಗ ಆಗದೇ ಇದ್ದರೆ, ಇಂದಿನ ಲೇಖನದಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗೆ ನಾವು ಸೂಚಿಸುವ ಹಂತಗಳನ್ನು ಅನುಸರಿಸಿ ಮತ್ತು ಫೇಸ್ ಬುಕ್ ವೀಡಿಯೋಗಳನ್ನು ಸುಲಭದಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

ಹಂತ 1
ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಟೇಬಲ್ ಇಂಟರ್ ನೆಟ್ ಕನೆಕ್ಷನ್ ಇರಬೇಕು ಮತ್ತು ಕ್ರೋಮ್ ಇನ್ಸ್ಟಾಲ್ ಆಗಿರಬೇಕು. ನಂತರ ನಿಮ್ಮ ಗೂಗಲ್ ಕ್ರೋಮ್ ಓಪನ್ ಮಾಡಿ ಮತ್ತು ಆಪ್ ಸ್ಟೋರ್‌ಗೆ ತೆರಳಿ. ನಂತರ ಇಲ್ಲಿ ನೀವು Facebook Video Downloader ಅನ್ನು ಹುಡುಕಾಡಬೇಕು ಮತ್ತು Add to Chrome ಬಟನ್ ಒತ್ತಿ ಎಕ್ಸ್ಟೆನ್ಶನ್ನಿನೊಂದಿಗೆ ಅನ್ನು ನಿಮ್ಮ ಕ್ರೋಮ್‌ಗೆ ಇನ್ಸ್ಟಾಲ್ ಮಾಡಿ.

ಹಂತ 2
ಎಕ್ಸ್ಟೆನ್ಶನ್ನಿನೊಂದಿಗೆ ಕ್ರೋಮ್ ಇನ್ಸ್ಟಾಲ್ ಆದ ನಂತ ನೀವು ಒಂದು ಪ್ರಾಂಪ್ಟ್ ಅನ್ನು ಪಡೆಯುತ್ತೀರಿ. ಅದು ನೀವು ಇನ್ಸ್ಟಾಲೇಷನ್ ಅನ್ನು ಕನ್ಫರ್ಟ್ ಮಾಡಲು ಕೇಳುತ್ತದೆ. ಅಲ್ಲಿರುವ ADD ಬಟನ್ ಅನ್ನು ಒತ್ತಿ. ಹೀಗೆ ಒಮ್ಮೆ ಇನ್ಸ್ಟಾಲೇಷನ್ ಮುಗಿದರೆ, ನೀವು ಫೇಸ್ ಬುಕ್ ಐಕಾನ್ ಅನ್ನು ನಿಮ್ಮ ಬ್ರೌಸರ್ ಸ್ಕ್ರೀನಿನ ಮೇಲ್ಬಾಗದ ಬಲಬದಿಯಲ್ಲಿ ಕಾಣಲು ಸಾಧ್ಯವಾಗುತ್ತದೆ.

ಹಂತ 3
ಇದಾದ ನಂತರ ಈಗ ನೀವು ನಿಮ್ಮ ಫೇಸ್ ಬುಕ್ ಅಕೌಂಟಿಗೆ ಲಾಗ್ ಆನ್ ಆಗಿ ಮತ್ತು ನೀವು ಡೌನ್ ಲೋಡ್ ಮಾಡಬೇಕೆಂದಿರುವ ವಿಡಿಯೋವನ್ನು ಹುಡುಕಾಡಿ. ಹಾಗೆ ಹುಡುಕಿ ವಿಡಿಯೋವನ್ನು ಪ್ಲೇ ಮಾಡಿ ಮತ್ತು ಅದು ಪ್ಲೇ ಆಗುತ್ತಿರುವಾಗ ನಿಮ್ಮ ಬ್ರೌಸರ್ ನಲ್ಲಿರುವ ಫೇಸ್ ಬುಕ್ ಐಕಾನನ್ನು ಕ್ಲಿಕ್ಕಿಸಿ.ಇದು ಒಂದು ಚಿಕ್ಕ ಪರದೆಯನ್ನು ತೆರೆಯುತ್ತದೆ.

ಹಂತ 4
ತೆರೆದ ಚಿಕ್ಕ ಪರದೆಯಲ್ಲಿ ನೀವು ವೀಡಿಯೋ ಕ್ವಾಲಿಟಿಯನ್ನು ಆಯ್ಕೆ ಮಾಡಬೇಕು. SD ಅಥವಾ HD ಯಾಗಿ ಡೌನ್ ಲೋಡ್ ಮಾಡಬಹುದು ಮತ್ತು ನೀವು ಡೌನ್ ಲೋಡ್ ಆದ ಫೈಲನ್ನು ನಿಮ್ಮ ಸಿಸ್ಟಮ್ ನಲ್ಲಿ ಎಲ್ಲಿ ಸೇವ್ ಮಾಡಬೇಕು ಅಂದುಕೊಂಡಿದ್ದೀರಿ ಎಂಬ ಸ್ಥಳವನ್ನು ಆಯ್ಕೆ ಮಾಡಿ. ನಂತರ ಅದನ್ನು ಡೌನ್‌ಲೋಡ್ ಮಾಡಿ ಆಫ್‌ಲೈನಿನಲ್ಲಿ ನೋಡಿ ಎಂಜಾಯ್ ಮಾಡಿ.

ಲಾಕ್ ಐಕಾನ್ ಇದ್ದರೆ?
ಒಂದು ವೇಳೆ ಆ ವೀಡಿಯೋ ಡೌನ್ ಲೋಡ್ ಗೆ ಮಾಲೀಕ ಪರ್ಮಿಷನ್ ಕೊಟ್ಟಿದ್ದರೆ, ನೀವು ಒಂದು ಗ್ಲೋಬ್ ಐಕಾನ್ ಅನ್ನು ಪೇಜಿನ ಮೇಲ್ಬಾಗದಲ್ಲಿ ಗಮನಿಸುತ್ತೀರಿ. ಒಂದು ವೇಳೆ ಪರ್ಮಿಷನ್ ಇಲ್ಲದೇ ಇದ್ದರೆ "ಲಾಕ್" ಐಕಾನ್ ಇರುತ್ತದೆ. ಇಂತಹ ವೀಡಿಯೋಗಳನ್ನು ನೀವು ಡೌನ್ ಲೋಡ್ ಮಾಡಲು ಅವಕಾಶವಿರುವುದಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470