Whatsapp ಗ್ರೂಪ್‌ನಲ್ಲಿ ಪ್ರೈವೇಟ್ ಆಗಿ ಮೆಸೇಜ್ ಮಾಡುವುದು ಹೇಗೆ?
ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹಲವು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸುವ ಮೂಲಕ ಜನಪ್ರಿಯ ಇನ್ಸಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಇನ್ನು ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಆಪ್ಡೇಟ್‌ಗಳನ್ನು ನೀಡುತ್ತಲೇ ಬಂದಿರುವ ವಾಟ್ಸಾಪ್ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತಿದೆ. ಇನ್ನು ವಟ್ಸಾಪ್ ಗ್ರೂಪ್‌ನಲ್ಲಿ ಇತ್ತೀಚೆಗೆ ಬಳಕೆದಾರರು ಗ್ರೂಪ್‌ನಲ್ಲಿ ಚಾಟ್‌ಗೆ ಖಾಸಗಿಯಾಗಿ ಪ್ರತಿಕ್ರಿಯಿಸಲು ಒಂದು ಮಾರ್ಗವನ್ನು ಸೇರಿಸಿದೆ.

ಹೌದು, ವಾಟ್ಸಾಪ್ ಬಳಕೆದಾರರಿಗೆ ಇತ್ತೀಚೆಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಖಾಸಗಿಯಾಗಿ ಪ್ರತಿಕ್ರಿಯಿಸುವ ಫೀಚರ್ಸ್ ಅನ್ನು ಪರಿಚಯಿಸಿದೆ. ಇನ್ನು ಈ ಫೀಚರ್ಸ್ ಗ್ರೂಪ್ ಸದಸ್ಯರನ್ನು ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಸಂಪರ್ಕಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ನೀವು ವಾಟ್ಸಾಪ್ ಗ್ರೂಪ್‌ನಲ್ಲಿ ಗ್ರೂಪ್ ಮೆಸೇಜ್‌ಗೆ ಖಾಸಗಿಯಾಗಿ ಉತ್ತರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

Android ನಲ್ಲಿ Whatsapp ಗ್ರೂಪ್ ಮೆಸೇಜ್‌ಗೆ ಪ್ರೈವೇಟ್ ಆಗಿ ಮೆಸೇಜ್ ಮಾಡುವುದು ಹೇಗೆ?
ಹಂತ:1 ಮೊದಲು, ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ, ತದನಂತರ ಗುಂಪು ಚಾಟ್ ತೆರೆಯಿರಿ
ಹಂತ:2 ನಂತರ ನೀವು ಖಾಸಗಿಯಾಗಿ ಪ್ರತಿಕ್ರಿಯಿಸಲು ಬಯಸುವ ಗ್ರೂಪ್ ಮೆಸೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ
ಹಂತ:3 ನಂತರ ಬಲಗಡೆಯ ಮೂರು ಚುಕ್ಕೆಗಳಿಗೆ ಹೋಗಬೇಕಾಗುತ್ತದೆ
ಹಂತ:4 ಇದರಲ್ಲಿ ಮೆನುವಿನಿಂದ Reply Privately ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ:5 ನೀವು ರಿಪ್ಲೇ ಮಾಡುವ ಮೆಸೇಜ್ ಆ ಸಂಪರ್ಕದ ವಿಂಡೋದಲ್ಲಿ ಕಾಣಿಸುತ್ತದೆ
ಹಂತ:6 ನೀವು ನಂತರ ಸಂದೇಶವನ್ನು ಟೈಪ್ ಮಾಡಿ ಸೆಂಡ್ ಮಾಡಿ.

ಐಫೋನ್ ನಲ್ಲಿ Whatsapp ಗ್ರೂಪ್‌ನಲ್ಲಿ ಪ್ರೈವೇಟ್ ಆಗಿ ಮೆಸೇಜ್ ಮಾಡುವುದು ಹೇಗೆ?
ಹಂತ:1 ಮೊದಲು, ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ, ತದನಂತರ ಗುಂಪು ಚಾಟ್ ತೆರೆಯಿರಿ
ಹಂತ:2 ನಂತರ ಸಂದೇಶವನ್ನು ಟ್ಯಾಪ್ ಮಾಡಿ ಮತ್ತು ಹೊಲ್ಡ್ ಮಾಡಿ
ಹಂತ:3 ನಂತರ ರೈಟ್ ಸೈಡ್ ಮೋರ್ ಕ್ಲಿಕ್ ಮಾಡಿ
ಹಂತ:4 ನಂತರ ನೀವು Reply Privately ಆಯ್ಕೆ ಮಾಡುತ್ತೀರಿ
ಹಂತ:5 ನೀವು ಗುಂಪಿನ ಹೆಸರಿನೊಂದಿಗೆ ನೀವು ಪ್ರತ್ಯುತ್ತರಿಸುತ್ತಿರುವ ಸಂದೇಶದೊಂದಿಗೆ ಸಂಪರ್ಕದ ವಿಂಡೋ ತೆರೆಯುತ್ತದೆ
ಹಂತ:6 ನೀವು ಕಳುಹಿಸಲು ಬಯಸುವ ಸಂದೇಶವನ್ನು ಟೈಪ್ ಮಾಡಿ ನಂತರ ಸೆಂಡ್ ಮಾಡಿರಿ.


Click it and Unblock the Notifications








