ಬೈಕ್ ಕಳ್ಳತನವಾದರೆ 'ಲಾಸ್ಟ್ ಆಂಡ್‌ ಫೌಂಡ್' ಆಪ್‌ನಲ್ಲಿ ದೂರು ದಾಖಲಿಸಬಹುದೆ? ಇಲ್ಲಿದೆ ಉತ್ತರ!!

ಬೆಂಗಳೂರು ನಗರದಲ್ಲಿ ಪ್ರತಿವರ್ಷ ಕಳ್ಳತನವಾಗುವ ವಾಹನ ಸಂಖ್ಯೆ ಎಷ್ಟು?

|

ಬೈಕ್ ಸೇರಿದಂತೆ ಕಳ್ಳತನಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಕಂಪ್ಲೇಂಟ್ ಸಲ್ಲಿಸಬಹುದಾದ ರಾಜ್ಯ ಸರ್ಕಾರದ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.! ಹೌದು, ವಾಹನ ಸವಾರರು ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.!!

ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲೆಗಳು ಸೇರಿದಂತೆ ಇನ್ನಿತರ ದಾಖಲೆಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ನೀಡಲು ಯಶಸ್ವಿಯಾಗಿದ್ದ 'ಲಾಸ್ಟ್ ಆಂಡ್‌ ಫೌಂಡ್' ವ್ಯವಸ್ಥೆಗೆ ಬೈಕ್ ಮತ್ತು ವಾಹನ ಕಳವನ್ನು ಸೇರಿಸುವ ನಿರ್ಧಾರವನ್ನು ಸರ್ಕಾರ ಈ ಮೊದಲು ತೆಗೆದುಕೊಂಡಿದ್ದು, ಇದೀಗ ಈ ಯೋಜನೆ ಕೈಬಿಡಲಾಗಿದೆ.!!

ಹಾಗಾದರೆ, ಬೆಂಗಳೂರು ನಗರದಲ್ಲಿ ಪ್ರತಿವರ್ಷ ಕಳ್ಳತನವಾಗುವ ವಾಹನ ಸಂಖ್ಯೆ ಎಷ್ಟು? ವಾಹನ ಕಳುವು ದೂರನ್ನು ವೆಬ್‌ಸೈಟ್‌ ಹಾಗೂ ಆಪ್‌ ಮೂಲಕ ದಾಖಲಿಸುವ ಯೋಜನೆ ಹೇಗೆ ದುರುಪಯೋಗವಾಗುತ್ತಿತ್ತು? ಇದರಿಂದ ಆಗಬಹುದಾದ ಅನಾನುಕೂಲಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಾಹನಗಳಿಗೆ ಮಾತ್ರ ನೇರ ದೂರು!!

ವಾಹನಗಳಿಗೆ ಮಾತ್ರ ನೇರ ದೂರು!!

ಪೊಲೀಸ್ ಇಲಾಖೆ ಅಳವಡಿಸಿಕೊಂಡಿರುವ ಲಾಸ್ಟ್ ಆಂಡ್‌ ಫೌಂಡ್' ವ್ಯವಸ್ಥೆಗೆ ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲೆ ದೂರುಗಳನ್ನು ಮಾತ್ರ ಸಲ್ಲಿಸಬಹುದು .ಆದರೆ, ವಾಹನ ಕಳ್ಳತನದ ಕೇಸ್‌ ದಾಖಲಿಸಲು ಠಾಣೆಗೆ ತೆರಳಬೇಕಿದ್ದು, ಹೊಸ ಆನ್‌ಲೈನ್ ವ್ಯವಸ್ಥೆಮೂಲಕ ವಾಹನ ಕಳ್ಳತನದ ದೂರು ದಾಖಲಿಸಲು ಸಾಧ್ಯವಿಲ್ಲ.!!

ಐದೂವರೆ ಸಾವಿರ ಬೈಕ್ ಕಳ್ಳತನ!!

ಐದೂವರೆ ಸಾವಿರ ಬೈಕ್ ಕಳ್ಳತನ!!

ಪೊಲೀಸ್ ಇಲಾಖೆ ಮಾಹಿತಿಯಂತೆ ನಗರದಲ್ಲಿ ಪ್ರತಿ ವರ್ಷ ಐದೂವರೆ ಸಾವಿರಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗುತ್ತಿವೆ ಎಂದು ತಿಳಿದುಬಂದಿದೆ. ವರ್ಷದಿಂದ ವರ್ಷಕ್ಕೆ ವಾಹನ ಕಳವು ಹೆಚ್ಚಾಗುತ್ತಲಿದ್ದು, 2014ರಲ್ಲಿ 5,059 ವಾಹನಗಳು, 2015ರಲ್ಲಿ 5,345 ವಾಹನಗಳು ಕಳ್ಳತನವಾಗಿದ್ದರೆ, 2016ರಲ್ಲಿ 5,843 ವಾಹನಗಳು ಕಳ್ಳತನವಾಗಿವೆ ಎಂದು ತಿಳಿದುಬಂದಿದೆ.!!

ದುರುಪಯೋಗ ಸಾಧ್ಯತೆ ಇತ್ತು.!!

ದುರುಪಯೋಗ ಸಾಧ್ಯತೆ ಇತ್ತು.!!

ವಾಹನ ಕಳವಾಗಿ 60 ದಿನಗಳ ಒಳಗಾಗಿ ವಾಹನ ಪತ್ತೆಯಾಗದೇ ಇದ್ದರೆ, ಠಾಣೆಗೆ ತೆರಳಿ ಕೇಸ್‌ ಮುಕ್ತಾಯವಾದ 'ಸಿ ರಿಪೋರ್ಟ್' ಆಧಾರದ ಮೇಲೆ ವಿಮೆ ಕ್ಲೇಮ್ ಮಾಡಿಕೊಳ್ಳಬಹುದು .ಹೀಗಾಗಿ ದುರುದ್ದೇಶಪೂರ್ಕವಾಗಿ ವಾಹನಗಳನ್ನು ಗುಜರಿಗೋ ಅಥವಾ ಬೇರೆ ಊರುಗಳಿಗೆ ಸಾಗಿಸಿ ಸುಳ್ಳು ದೂರು ನೀಡಿ ವಿಮೆ ಕ್ಲೇಮ್‌ ಮಾಡಿಕೊಳ್ಳುವ ಸಾಧ್ಯತೆ ಇತ್ತು.!!

ತಂತ್ರಾಂಶ ಅಭಿವೃದ್ಧಿಯಲ್ಲಿ ಸ್ಪಷ್ಟತೆ ಇಲ್ಲ.!!

ತಂತ್ರಾಂಶ ಅಭಿವೃದ್ಧಿಯಲ್ಲಿ ಸ್ಪಷ್ಟತೆ ಇಲ್ಲ.!!

ವೆಬ್‌ ಹಾಗೂ ಆಪ್‌ ಆಧರಿತ ಕೇಸ್‌ ದಾಖಲಿಸುವ ತಂತ್ರಾಂಶ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದ್ದು, ದುರುಪಯೋಗ, ಸುಳ್ಳು ದೂರು ನಿಗಾ, ದಾಖಲೆಗಳ ಅಸಲಿಯತ್ತು ಪರಿಶೀಲನೆ, ಚಾಲನಾ ಪರವಾನಗಿ, ವಿಮೆ ಮತ್ತಿತರ ದಾಖಲೆಗಳ ನೈಜತೆ ಪರಿಶೀಲಿಸುವ ಕುರಿತು ಯಾವ ಕಂಪನಿಗಳು ಸ್ಪಷ್ಟತೆಯ ಉತ್ತರ ನೀಡಿಲ್ಲ.!!

ದಿಲ್ಲಿಯಲ್ಲಿ ಆನ್‌ಲೈನ್‌ ಸೇವೆ!!

ದಿಲ್ಲಿಯಲ್ಲಿ ಆನ್‌ಲೈನ್‌ ಸೇವೆ!!

ಆನ್‌ಲೈನ್‌ ಮೂಲಕವೇ ವಾಹನ ಕಳವು ಕೇಸ್‌ ದಾಖಲಿಸುವ ವ್ಯವಸ್ಥೆಯನ್ನು ದಿಲ್ಲಿ ಪೊಲೀಸ್‌ ಕಮೀಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ. ಆದರೆ, ರಾಜ್ಯ ಪೊಲೀಸರು ವಾಹನ ಕಳವಿನ ಆನ್‌ಲೈನ್ ಯೋಜನೆಯಿಂದ ಆಗುವ ಆಗಬಹುದಾದ ಲಾಭಕ್ಕಿಂತ ಅದರಿಂದ ಆಗುತ್ತಿದ್ದ ದುರುಪಯೋಗವನ್ನು ಹುಡುಕಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.!!

ಮೊಬೈಲ್ ಖರೀದಿಸಲು ಸ್ವಲ್ಪ ಕಾಯಿರಿ!..ಬಿಡುಗಡೆಗೆ ಸಿದ್ದವಾಗಿದೆ 'ರೆಡ್‌ಮಿ ನೋಟ್ 5'!!ಮೊಬೈಲ್ ಖರೀದಿಸಲು ಸ್ವಲ್ಪ ಕಾಯಿರಿ!..ಬಿಡುಗಡೆಗೆ ಸಿದ್ದವಾಗಿದೆ 'ರೆಡ್‌ಮಿ ನೋಟ್ 5'!!

Best Mobiles in India

Read more about:
English summary
There is usually a feeling that registering a complaint is a tedious process or the police will not be cooperative.to know more visi tto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X